ಆವೃತ್ತಿಗಳು
Kannada

ಅಭಿವೃದ್ಧಿಯ ಕನಸಿಗೆ ಅಡ್ಡಿಯಾಗುತ್ತಿದೆ ಬಡತನ

ಟೀಮ್​ ವೈ.ಎಸ್​​. ಕನ್ನಡ

9th Jun 2017
Add to
Shares
6
Comments
Share This
Add to
Shares
6
Comments
Share

ಭಾರತದಲ್ಲಿ ಬಡತನ ದೊಡ್ಡ ಸಮಸ್ಯೆ ಆಗಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಜಗತ್ತಿನ ವಿವಿಧ ಬಡ ದೇಶಗಳಿಗಿಂತ ಕೊಂಚ ಉತ್ತಮ ಸ್ಥಿತಿಯಲ್ಲಿತ್ತು. ಆದ್ರೆ ಬಡ ಮಕ್ಕಳ ಸಂಖ್ಯೆಯಲ್ಲಿ ಇನ್ನೂ ಕೂಡ ಅಂದುಕೊಂಡಷ್ಟು ಕಡಿಮೆ ಆಗಿಲ್ಲ. ವಿಶ್ವದ ಬಡಮಕ್ಕಳದ ಸಂಖ್ಯೆಯಲ್ಲಿ ಶೆಕಡಾ 30 ಪ್ರತಿಶತ ಬಡ ಮಕ್ಕಳು ಇರುವುದು ಭಾರತದಲ್ಲೇ ಅನ್ನೋದು ಅಚ್ಚರಿ ಆದ್ರೂ ಸುಳ್ಳಲ್ಲ. ಭಾರತದಲ್ಲಿ ಸುಮಾರು 385 ಮಿಲಿಯನ್ ಮಕ್ಕಳು ಕಡುಡತನದಲ್ಲಿ ಜೀವನ ಕಳೆಯುತ್ತಿದ್ದಾರೆ. ಇದು ದಕ್ಷಿಣ ಏಷ್ಯಾ ರಾಷ್ಟ್ರಗಳ ಪೈಕಿ ಅತೀ ಹೆಚ್ಚಿನದ್ದು ಅನ್ನೋದು ಮತ್ತೊಂದು ಅವಮಾನಕರ ಸಂಗತಿ. ವಿಶ್ವಬ್ಯಾಂಕ್ ಗ್ರೂಪ್ ಮತ್ತು ಯೂನಿಸೆಫ್ ನೀಡಿರುವ ವರದಿ “ಎಂಡಿಂಗ್ ಎಕ್ಸ್ಟ್ರೀಮ್ ಪವರ್ಟಿ: ಎ ಫೋಕಸ್ ಆನ್ ಚಿಲ್ಡ್ರನ್ ” ನಲ್ಲಿ ಬಹಿರಂಗವಾಗಿದೆ. ಬಡತನದಲ್ಲಿ ವಯಸ್ಕರು ಬಳಲುತ್ತಿರುವುದಕ್ಕಿಂತ ಎರಡು ಪಟ್ಟು ಹೆಚ್ಚು ಮಕ್ಕಳು ಕಡು ಬಡತನದಲ್ಲಿದ್ದಾರೆ ಅನ್ನೋದು ಮತ್ತೊಂದು ಶಾಕಿಂಗ್ ನ್ಯೂಸ್.

image


ಅಚ್ಚರಿ ಅಂದ್ರೆ ಸಬ್ ಸಹಾರಾ ಆಫ್ರಿಕಾ ರಾಷ್ಟ್ರಗಳು ಅತೀ ಹೆಚ್ಚು ಕಡು ಬಡತನದಲ್ಲಿರುವ ಮಕ್ಕಳ ಸಂಖ್ಯೆಯನ್ನು ಹೊಂದಿದೆ. ಈ ರಾಷ್ಟ್ರಗಳಲ್ಲಿ ಶೆಕಡಾ 50ರಷ್ಟು ಮಕ್ಕಳು ಕಡು ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ.

“ ಸೌತ್ ಏಷ್ಯಾ ಅತೀ ಹೆಚ್ಚು ಕಡುಬಡತನದಲ್ಲಿರುವ ಮಕ್ಕಳ ಪೈಕಿ ಶೆಕಡಾ 36ರಷ್ಟನ್ನು ಹೊಂದಿದೆ. ಇಡೀ ವಿಶ್ವದಲ್ಲೇ ಸೌತ್ ಏಷ್ಯಾಕ್ಕೆ ಎರಡನೇ ಸ್ಥಾನವಿದೆ. ಭಾರತದಲ್ಲೇ ಶೆಕಡಾ 30ರಷ್ಟು ಮಕ್ಕಳು ಕಡುಬಡತನದಲ್ಲಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸರಾಸರಿ 5 ಮಕ್ಕಳ ಪೈಕಿ ನಾಲ್ವರು ಬಡತನದಲ್ಲಿ ಬಳಲಿರುತ್ತಾರೆ ”
- ಅಂಥೋನಿ ಲೇಕ್, ಯೂನಿಸೆಫ್ ನಿರ್ದೇಶಕ

ವಿಶ್ವಬ್ಯಾಂಕ್ ಮತ್ತು ಯೂನಿಸೆಫ್​ ವರದಿ ಪ್ರಕಾರ ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಕ್ಕಳೇ ಇರುತ್ತಾರೆ. ಇದ್ರಲ್ಲಿ ಶೆಕಡಾ 30 ರಷ್ಟು ಮಕ್ಕಳು ಬಡತನದಲ್ಲಿರುವುದು, ಅವ್ರ ಶೈಕ್ಷಣಿಕ ಜೀವನಕ್ಕೆ ಸಾಕಷ್ಟು ತೊಂದರೆ ಉಂಟು ಮಾಡುತ್ತದೆ. ವರದಿಯಲ್ಲಿ ಉಲ್ಲೇಖಿಸಿರುವಂತೆ ಕುಟುಂಬದ ಮಕ್ಕಳ ಪೈಕಿ ಹಿರಿಯ ಮಕ್ಕಳೇ ಹೆಚ್ಚು ಬಡತನದ ಅನುಭವ ಹೊಂದಿರುತ್ತಾರೆ ಅನ್ನೋದು ಮತ್ತೊಂದು ಆಘಾತಕಾರಿ ಅಂಶವೂ ಆಗಿದೆ.

“ ಮಕ್ಕಳು ಬಡತನದಲ್ಲಿರುವುದು ಕೇವಲ ಅವರ ಜೀನದ ಮೇಲೆ ಪರಿಣಾಮ ಬೀರುತ್ತಿಲ್ಲ. ಬದಲಾಗಿ ಅವರ ಭವಿಷ್ಯ ಕೂಡ ಉಜ್ವಲವಾಗಿರುವುದಿಲ್ಲ. ಅದ್ರಲ್ಲೂ ಕುಟುಂಬದ ಹಿರಿಯ ಮಕ್ಕಳು ಇದರಿಂದ ಸಾಕಷ್ಟು ತೊಂದರೆಯನ್ನು ಅನುಭವಿಸಿರುತ್ತಾರೆ. ಅಂತಹ ಮಕ್ಕಳು ಮಾನಸಿಕವಾಗಿ ಮತ್ತು ದೈಹಿಕವಾಗಿಯೂ ಸವಾಲುಗಳನ್ನು ಎದುರಿಸುವಲ್ಲಿ ಎಡವುತ್ತಾರೆ. ”
- ಅಂಥೋನಿ ಲೇಕ್, ಯೂನಿಸೆಫ್ ನಿರ್ದೇಶಕ

ಬಡತನದ ಬೇಗೆ ಒಂದು ಕಡೆಯಾದ್ರೆ ಮತ್ತೊಂದು ಕಡೆ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲೂ ಬಡ ಮಕ್ಕಳು ಭಾಗಿ ಆಗುತ್ತಿದ್ದಾರೆ. ಇದು ಸಾಮಾಜಿಕ ಸ್ವಾಸ್ಥ್ಯಕ್ಕೂ ಅಡ್ಡಿಯಾಗಿದೆ. ಒಟ್ಟಿನಲ್ಲಿ ಭಾರತ ನಿಧಾನವಾಗಿ ಅಭಿವೃದ್ಧಿಯತ್ತ ಮುಖ ಮಾಡಿದೆ. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುತ್ತದೆ ಅನ್ನೋ ವಿಶ್ವಾಸ ಎಲ್ಲರಿಗೂ ಇದೆ. ಯೋಜನೆ ಮತ್ತು ದೂರದೃಷ್ಟಿಯಿಂದ ಅಭಿವೃದ್ಧಿ ಸಾಧಿಸಬಹುದು.

ಇದನ್ನು ಓದಿ: 

1. ಸ್ವಚ್ಛಭಾರತ ಯೋಜನೆಗೆ ಹೈ-ಫೈ ಟಚ್- ಜೋಧಪುರದಲ್ಲಿ ಕಾರು, ಬೈಕ್​ಗಳಲ್ಲಿ ಡಸ್ಟ್​ಬಿನ್

2. ಅರುಣಾಚಲ ಪ್ರದೇಶದ ಬಿದಿರು- ಅಸ್ಸಾಂನಲ್ಲಿ ತಯಾರಾಗುತ್ತದೆ ಜೈವಿಕ ಇಂಧನ..!

3. ಆರೇ ತಿಂಗಳಲ್ಲಿ ಮುಗಿದು ಹೋಯಿತು ಸೇತುವೆ ನಿರ್ಮಾಣ..!


Add to
Shares
6
Comments
Share This
Add to
Shares
6
Comments
Share
Report an issue
Authors

Related Tags