ಆವೃತ್ತಿಗಳು
Kannada

ವಯಸ್ಸಾದರೂ ಛಲ ಬಿಡದ ಸಾಹಸಿ

ವಿಶಾಂತ್​

9th Apr 2016
Add to
Shares
7
Comments
Share This
Add to
Shares
7
Comments
Share

ಸಾವಿರಾರು ಕಿಲೋಮೀಟರ್ ಒಬ್ಬಂಟಿಯಾಗಿ ಸಮುದ್ರದಲ್ಲಿ ರೋಯಿಂಗ್ ಮಾಡಬೇಕು ಅಂದರೆ ಅದಕ್ಕೆ ಧೈರ್ಯ ಬೇಕು, ಎರಡಲ್ಲ ಮೂರು ಗುಂಡಿಗೆಗಳೇ ಬೇಕು. ತುಂಬಾ ಸಿದ್ಧತೆಗಳನ್ನು ಮಾಡಿಕೊಂಡಿರಬೇಕು, ಸಮುದ್ರದಲ್ಲೇಳುವ ಹತ್ತಾರು ಅಡಿಗಳ ಅಲೆಯ ಮೇಲೆ ಸವಾರಿ ಮಾಡುವಷ್ಟು ಧೈರ್ಯ, ಛಲ ಬೇಕು. ಹಲವು ದಿನಗಳ ಕಾಲ ಸಮುದ್ರದಲೆಗಳ ನಡುವೆ ಒಚಿಟಿ ಜೀವನ. ಅಲೆಗಳ ಆಟದ ನಡುವೆ ಎಷ್ಟು ದಿನಗಳ ಒಳಗೆ ಗುರಿ ಮುಟ್ಟುತ್ತೀವೋ ಅದರ ನಂಬಿಕೆಯೂ ಇರುವುದಿಲ್ಲ. ಹೀಗಾಗಿಯೇ ಮಿತವಾಗಿ ಆಹಾರ ಹಾಗೂ ನೀರಿನ ಸೇವನೆ ಅತಿಮುಖ್ಯ. ಆಹಾರ ಶೇಖರಣೆ ಅತ್ಯಗತ್ಯ. ಎಲ್ಲಕಿಂತ ಹೆಚ್ಚಾಗಿ ಇಂತಹ ಸಾಹಸಗಳನ್ನು ಕೈಗೊಳ್ಳುವ ಮಂದಿ ವಯಸ್ಸು 20ರಿಂದ 40 ಇದ್ದರೆ ಒಳ್ಳೆಯದು. ಯಾಕೆಂದರೆ ವಯಸ್ಸು ಕಡಿಮೆಯಿದ್ದವರಿಗೆ ಅನುಭವ ಕಡಿಮೆ. ಹೆಚ್ಚಾದವರಿಗೆ ಸಮುದ್ರದಲ್ಲಿ ಸಾವಿರಾರು ಕಿಲೋಮೀಟರ್‍ಗಳಷ್ಟು ರೋಯಿಂಗ್ ಮಾಡುವಷ್ಟು ಶಕ್ತಿಯಿರುವುದಿಲ್ಲ. ಆಗಾಗ ಆರೋಗ್ಯ ಸಮಸ್ಯೆಯೂ ಕಾಡಬಹುದು. ವಯಸ್ಸು ಎಷ್ಟಾದರೇನಂತೆ ಎಲ್ಲಕ್ಕೂ ಹೆಚ್ಚಾಗಿ ಈ ಹುಚ್ಚು ಸಾಹಸಕ್ಕೆ ಕೈ ಹಾಕುವುದು ಸಾವಿನ ಬಾಗಿಲು ತಟ್ಟುವುದು ಎರಡೂ ಒಂದೇ. ಹೀಗಾಗಿಯೇ ಇಂತಹ ಹುಚ್ಚು ಸಾಹಸಗಳಿಗೆ ಯಾರೂ ಮುಂದಾಗುವುದಿಲ್ಲ.

image


ಆದರೆ ಕೆನಡಾ ಮೂಲದ ಶೆಫೀಲ್ಡ್​​ನ ಜಾನ್ ಬೀಡನ್ ಅಪ್ರತಿಮ ಸಾಹಸಿಗ, ಅವರಿಗೆ ಇದ್ಯಾವುದೂ ಲೆಕ್ಕಕ್ಕಿಲ್ಲ. ಯಾಕೆಂದರೆ 2015ರ ಡಿಸೆಂಬರ್ 27ರ ಭಾನುವಾರ ಜಾನ್ ಬೀಡನ್ ಅದ್ಭುತ ಸಾಧನೆಯೊಂದನ್ನು ಮಾಡಿದ್ರು. ದಕ್ಷಿಣ ಅಮೆರಿಕಾದಿಂದ, ಆಸ್ಟ್ರೇಲಿಯಾವರೆಗೂ ನಾನ್‍ಸ್ಟಾಪ್ ರೋಯಿಂಗ್ ಮಾಡುತ್ತಾ ಪೆಸಿಫಿಕ್ ಸಾಗರವನ್ನು ದಾಟಿದ್ದಾರೆ. ಈ ಮೂಲಕ ಇಂತಹ ಒಂದು ಅದ್ಭುತ ಸಾಧನೆ ಮಾಡಿದ ಮೊದಲ ವ್ಯಕ್ತಿ ಎಂಬ ದಾಖಲೆಗೆ ಭಾಜನರಾಗಿದ್ದಾರೆ.

image


2015ರ ಜೂನ್ 1ರಂದು 6 ಮೀಟರ್ ಉದ್ದದ ತಮ್ಮ ‘ಸಾಕ್ಸ್ 2’ ಎಂಬ ದೋಣಿಯನ್ನೇರಿ ಸ್ಯಾನ್ ಫ್ರಾನ್ಸಿಸ್ಕೋನಿಂದ ಸಾಹಸಯಾತ್ರೆ ಆರಂಭಿಸಿದರು 53 ವರ್ಷದ ಜಾನ್ ಬೀಡನ್. ಪ್ರತಿದಿನ 15 ತಾಸು ಎಂಬಂತೆ ಸುಮಾರು 7 ತಿಂಗಳಲ್ಲಿ 6100 ನಾಟಿಕಲ್ ಮೈಲ್ ಅರ್ಥಾತ್ 7400 ಮೈಲಿಗೂ ಹೆಚ್ಚು ದೂರ ಒಬ್ಬರೇ ಪೆಸಿಫಿಕ್ ಸಾಗರವನ್ನು ರೋಯಿಂಗ್ ಮಾಡಿದ್ದರು ಜಾನ್. ಇನ್ನು ಅವರು ಆಸ್ಟ್ರೇಲಿಯಾದ ಕ್ವೀನ್ಸ್​​ಲ್ಯಾಂಡ್‍ನ ಕೇರ್ನ್ಸ್​​ ಬಂದರು ಮುಟ್ಟುತ್ತಲೇ ಜಾನ್‍ರ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಜನರು ಅವರನ್ನು ಆದರದಿಂದ ಬರಮಾಡಿಕೊಂಡರು. 209 ದಿನಗಳ ಈ ಸಾಗರಯಾತ್ರೆ ಮುಗಿಸಿ ಬಂದ ಖುಷಿ ಜಾನ್ ಬೀಡನ್ ಮಾತ್ರವಲ್ಲ ಅಲ್ಲಿ ನೆರೆದಿದ್ದ ಎಲ್ಲರಲ್ಲೂ ಮನೆಮಾಡಿತ್ತು. ಯಾಕೆಂದರೆ ವಿಶ್ವದ ಯಾವೊಬ್ಬರೂ ಮಾಡಿರದ ಸಾಹಸವೊಂದನ್ನು ಮಾಡುವ ಮೂಲಕ 53ರ ಹರೆಯದ ಜಾನ್ ಬೀಡನ್ ದಾಖಲೆ ಸೃಷ್ಟಿಸಿದ್ದರು. ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದರು.

image


ಹೀಗೆ ಪೆಸಿಫಿಕ್ ಸಾಗರ ದಾಟುವ ಮುನ್ನ ಈ ಹಿಂದೆ ಜಾನ್ ಬೀಡನ್ ಅಟ್ಲಾಂಟಿಕ್ ಸಾಗರವನ್ನೂ ರೋಯಿಂಗ್ ಮೂಲಕವೇ ದಾಟಿದ್ದರು. ’10 ಸಾವಿರ ಕಿಲೋಮೀಟರ್‍ಗೂ ಹೆಚ್ಚು ದೂರವನ್ನು ಕೇವಲ ರೋಯಿಂಗ್ ಮೂಲಕ ಕ್ರಮಿಸೋದು ಅಂದ್ರೆ ಅದು ತುಂಬಾ ಕಷ್ಟ. ಜೀವನದಲ್ಲಿ ಒಮ್ಮೆ ಮಾತ್ರ ಅದನ್ನು ಮಾಡಲು ಸಾಧ್ಯ’ ಅಂತ ತಮ್ಮ ಸಾಧನೆ ಕುರಿತು ಹೇಳಿಕೊಳ್ಳುತ್ತಾರೆ ಜಾನ್. ಅವರು ನವೆಂಬರ್ ಮಧ್ಯದಲ್ಲೇ ಆಸ್ಟ್ರೇಲಿಯಾ ಮುಟ್ಟುವ ಯೋಜನೆ ಹಾಕಿಕೊಂಡಿದ್ದರು. ಆದ್ರೆ ಹವಾಮಾನ ಬದಲಾದ್ದರಿಂದ ಒಂದು ತಿಂಗಳು ಹೆಚ್ಚುವರಿ ಸಮಯ ಬೇಕಾಗಿತ್ತಂತೆ.

ಇದನ್ನು ಓದಿ: ಪೋಲಿಯೋ ಬಾಧಿತ ಈಗ ಟ್ರಾಫಿಕ್ ವಾರ್ಡನ್..!

‘ಕಷ್ಟ ಪಟ್ಟು ನೂರಾರು ಮೈಲಿ ಕ್ರಮಿಸಿದ ಬಳಿಕ, ಹವಾಮಾನದಿಂದಾಗಿ ನಾನು ಪದೇ ಪದೇ ಹಿಂದಕ್ಕೆ ತಳ್ಳಲ್ಪಡುತ್ತಿದ್ದೆ. ಇದರಿಂದ ಅದಾಗಲೇ ಕ್ರಮಿಸಿದ್ದ ನೂರಾರು ಕಿಲೋಮೀಟರ್ ದೂರವನ್ನು ಮತ್ತೆ ಮತ್ತೆ ಕ್ರಮಿಸಬೇಕಾಗಿತ್ತು’ ಅಂತ ಈ ಸಾಹಸಯಾತ್ರೆಯಲ್ಲಿ ತಮಗೆ ಎದುರಾದ ಸಮಸ್ಯೆಗಳ ಕುರಿತು ಹೇಳಿಕೊಳ್ಳುತ್ತಾರೆ ಜಾನ್. ಈ ಸಾಹಸಯಾತ್ರೆಯಲ್ಲಿ ಎಷ್ಟೇ ಕಷ್ಟ ಅನುಭವಿಸಿರಬಹುದು, ಆದ್ರೆ ಅದರಿಂದ ಜಾನ್ ಸುಮ್ಮನಾಗೋದಿಲ್ಲ ಎಂಬುದು ಅವರ ಪತ್ನಿ ಚೆರಿಲ್ ಬೀಡನ್ ಮಾತು. ಮುಂದಿನ ದಿನಗಳಲ್ಲಿ ಇನ್ನೂ ಕೆಲ ಸಾಹಸಯಾತ್ರೆಗಳನ್ನು ಕೈಗೊಳ್ಳುವ ಕುರಿತು ಸುಳಿವು ನೀಡ್ತಾರೆ. ಈ ಸಾಹಸದಿಂದಾಗಿ ಜಾನ್ ಬೀಡನ್ ಸುಮಾರು 5 ಕೆಜಿಯಷ್ಟು ತೂಕ ಇಳಿಸಿಕೊಂಡಿದ್ದರು.

ಹೀಗೆ ತೀರ್ಥಯಾತ್ರೆಗೆ ಹೋಗುವ ಸಮಯದಲ್ಲಿ ಸಾಹಸಯಾತ್ರೆಗೆ ಹೋಗಿ ಅದರಲ್ಲಿ ಯಶಸ್ಸು ಕೂಡ ಆದ ಜಾನ್ ಬೀಡನ್ ಅವರು ನಮಗೆ ವಯಸ್ಸಾಯಿತು, ರಿಟೈರ್‍ಮೆಂಟ್ ಸಮಯದಲ್ಲಿ ಎಲ್ಲಿಯ ಓಡಾಟ ಅಂತ ಮನೆಯಲ್ಲೇ ಕೂರುವ ಮಂದಿಗೆ ಮಾದರಿಯಾಗಿದ್ದಾರೆ. ಒಟ್ಟಾರೆ ಜಾನ್ ಬೀಡನ್ ಅವರ ಮುಂದಿನ ಸಾಹಸಗಳಿಗೆ ಶುಭವಾಗಲಿ.

ಇದನ್ನು ಓದಿ:

1. ಕಾರ್ಪೋರೇಟ್ ಗಿಫ್ಟ್ ಗಳಲ್ಲಿ ಹಸಿರಿನ ಜ್ಞಾನ : ಇದು ಪರಿಸರದ ಬಗ್ಗೆ ‘ಟ್ರಿ ಅಪ್ ’ಗಿರುವ ಪರಿಜ್ಞಾನ..!

2. ‘ಸಂತೃಪ್ತಿ’ಯಲ್ಲಿ ತೃಪ್ತಿಯಿಂದ ಉತ್ತರ ಕರ್ನಾಟಕದ ತಿನಿಸುಗಳನ್ನು ಸವಿಯಿರಿ....

3. ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಬಂದಿದೆ ಈಸಿ `ಡ್ರಿವನ್'

Add to
Shares
7
Comments
Share This
Add to
Shares
7
Comments
Share
Report an issue
Authors

Related Tags