ಆವೃತ್ತಿಗಳು
Kannada

ಕೇರಳದ ಲಾಜಿಸ್ಟಿಕ್ಸ್ ಸರ್ವೀಸ್ ನ ನವತಾರೆ ಡಿ4ಡೆಲಿವರಿ..

ಟೀಮ್​​ ವೈ.ಎಸ್​. ಕನ್ನಡ

YourStory Kannada
13th Dec 2015
Add to
Shares
0
Comments
Share This
Add to
Shares
0
Comments
Share

ಏನಾದರೂ ಹೊಸ ಉದ್ದಿಮೆ ಶುರುಮಾಡಬೇಕು ಅಂತ ಲೆಕ್ಕಾಚಾರಗಳನ್ನ ಹಾಕಿಕೊಂಡರೂ ಅದೆಷ್ಟೋ ಜನರಿಗೆ ಅದು ಕೈಗೂಡುವುದೇ ಇಲ್ಲ. ಬಹಳಷ್ಟು ಜನರ ಯೋಜನೆಗಳು ಅರ್ಧರದಲ್ಲೇ ಕೈಕೊಡುತ್ತವೆ. ಆದ್ರೆ ನಮ್ಮ ಉದ್ದೇಶಗಳಿಗೆ ಆತ್ಮೀಯ ಗೆಳೆಯರ ಕೈ ಒಂದಾದರೆ, ಕೆಲಸ ಸಲೀಸಾಗುತ್ತದೆ. ನಾವು ಅಂದುಕೊಂಡ ಉದ್ಯಮವನ್ನು ಸುಲಭವಾಗಿ ಶುರುಮಾಡಿ ಗಟ್ಟಿಯಾಗಿ ತಳವೂರಬಹುದು. ಇದಕ್ಕೊಂದು ಉದಾಹರಣೆ ಕೇರಳದ ಡಿ4ಡೆಲಿವರಿ ಲಾಜಿಸ್ಟಿಕ್ಸ್. ಒಂದು ಗೆಳೆಯರ ತಂಡ ಯೋಜಿಸಿ ಶುರುಮಾಡಿರೋ ಈ ಲಾಜಿಸ್ಟಿಕ್ಸ್ ಸರ್ವೀಸ್ ಇದೀಗ ಕೇರಳದ ಪ್ರಮುಖ ನಗರಗಳಲ್ಲಿ ಮನೆಮಾತಾಗಿದೆ. ಉತ್ಪಾದಕರು ಹಾಗೂ ಬಳಕೆದಾರರ ನಡುವೆ ಕೊಂಡಿಯಂತೆ ಬೆಳೆದಿರುವ ಡಿ4ಡೆಲಿವರಿ ಇದೀಗ ಗ್ರಾಹಕರು ಹಾಗೂ ಉದ್ದಿಮೆದಾರರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಈ ಡಿ4ಡೆಲಿವರಿ ಲಾಜಿಸ್ಟಿಕ್ಸ್ ಯಶಸ್ಸಿನ ರೂವಾರಿಗಳು ಪರಸ್ಪರ ಗೆಳೆಯರಾದ ಅಭಿರಾಮ್ ಸುರೇಶ್, ಐಶ್ವರ್ಯ ರಾಘವನ್ ಹಾಗೂ ಮ್ರಿನಾಲ್ ಮೋಹನ್ ದಾಸ್. ಈ ಫ್ರೆಂಡ್ಸ್ ಗ್ರೂಪ್ ತಮ್ಮದೇ ಸ್ವಂತದೊಂದು ಬ್ಯುಸಿನೆಸ್ ಮಾಡಬೇಕು ಅಂತ ಯೋಚಿಸುತ್ತಿದ್ದಾಗ ಈ ಲಾಜಿಸ್ಟಿಕ್ಸ್ ಪಾರ್ಸೆಲ್ ಸರ್ವೀಸ್ ನ ಐಡಿಯಾ ಹೊಳೆಯಿತು. ಈ ಪ್ಲಾನ್ ಕೊಟ್ಟಿದ್ದು ಅಭಿರಾಮ್ ಸುರೇಶ್..

ಆರಂಭಿಕ ಪ್ರಯೋಗಗಳು..

ಲಾಜಿಸ್ಟಿಕ್ಸ್ ಸರ್ವೀಸ್ ಹಾಗೂ ಡೆಲಿವರಿ ಯೋಜನೆ ಸಕ್ಸಸ್ ಆಗಬಹುದು ಅನ್ನೋ ವಿಶ್ವಾಸ ಈ ತ್ರಿಮೂರ್ತಿಗಳಿಗೆ ಮೂಡಿದ್ದರೂ ಆರಂಭದಲ್ಲೇ ಎದುರಿಸಬೇಕಾದ ಸವಾಲುಗಳ ಬಗ್ಗೆಯೂ ಅರಿವಿತ್ತು. ಕೊಂಚ ಎಡವಿದ್ರೂ ಇಡೀ ಯೋಜನೆ ಹಳ್ಳಹಿಡಿಯುವ ಸಾಧ್ಯತೆಗಳೇ ಹೆಚ್ಚಾಗಿದ್ದವು. ಹೀಗಾಗಿ ತಮ್ಮ ಬ್ಯುಸಿನೆಸ್ ಪ್ಲಾನನ್ನ ಸಣ್ಣಮಟ್ಟದಲ್ಲಿ ಪ್ರಯೋಗ ಮಾಡಲು ಮುಂದಾದ್ರು. ಅಲ್ಲದೆ ಇದೇ ರೀತಿಯ ಇತರೆ ಲೆಜಿಸ್ಟಿಕ್ಸ್ ಸರ್ವೀಸ್ ಗಳ ಬಗ್ಗೆ ರಿಸರ್ಚ್ ಗಳನ್ನ ಮಾಡಿದ್ರು. ಜೊತೆಗೆ ಟ್ರಿವೆಂಡ್ರಮ್ ನಲ್ಲಿ ಮೊದಲ ಹಂತವಾಗಿ ಮೂರು ಫುಡ್ ಔಟ್ ಲೆಟ್ಸ್ ಗಳನ್ನ ಶುರುಮಾಡುವ ಜೊತೆಗೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಆಹಾರ ವಸ್ತುಗಳನ್ನ ಸರಬರಾಜು ಮಾಡಿದ್ರು.

image


ಒಂದು ಹಂತದಲ್ಲಿ ಇನ್ನಷ್ಟು ಹೆಚ್ಚು ಪ್ರಯೋಗಳನ್ನ ನಡೆಯಲು ಈ ಬ್ಯುಸಿನೆಸ್ ಟೀಂ ಮನಸ್ಸು ಮಾಡಿತು. ಆರಂಭಿಕ ಹಂತದಲ್ಲಿ ಈ ತಂಡಗಳಿಸಿದ ಒಟ್ಟು ಲಾಭ, ಸಾಗಣಿಕ ವೆಚ್ಚ ಹಾಗೂ ಲೋಡಿಂಗ್ ಸಾಮರ್ಥ್ಯಗಳ ಬಗ್ಗೆ ಸೂಕ್ಷ್ಮ ಪರಿಶೀಲನೆ ನಡೆಸಿತು. ಅಲ್ಲದೆ ಸ್ಥಳೀಯರನ್ನ ಹೆಚ್ಚು ಕೇಂದ್ರೀಕರಿಸಿ ತಮ್ಮ ಸರ್ವೀಸ್ ನೀಡಲು ಯೋಜನೆ ರೂಪಿಸಿದ್ರು. ಕ್ರಮೇಣ ತಮ್ಮ ಸರ್ವೀಸ್ ನಲ್ಲಿ ಇನ್ನಷ್ಟು ವೆರೈಟಿಗಳನ್ನ ಅಳವಡಿಸಿಕೊಂಡ್ರು. ದಿನಸಿ, ಬೇಕರಿ ಹಾಗೂ ಸ್ಟೇಷನರಿ ವಸ್ತುಗಳನ್ನೂ ಡೆಲಿವರಿ ಮಾಡಲು ಶುರುಮಾಡಿದ್ರು. ಹೀಗೆ ಹಂತಹಂತವಾಗಿ ಗ್ರಾಹಕರನ್ನ ತಲುಪಿದ ಈ ತಂಡ 2014ರ ಜೂನ್ ನಲ್ಲಿ ಡಿ4ಡೆಲಿವರಿ ಕಂಪನಿಗೆ ಅಧಿಕೃತ ಚಾಲನೆ ನೀಡಿತು.

ಕಾರ್ಯವೈಖರಿ..

ಡಿ4ಡೆಲಿವರಿ ವಸ್ತುಗಳ ಸಾಗಣಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ವಾಹನಗಳನ್ನ ಹೊಂದಿದೆ. ಇದರಿಂದಾಗಿ ಗ್ರಾಹಕರು ಹಾಗೂ ಪೂರೈಕೆದಾರರ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಲು ಸಾಧ್ಯವಾಗುತ್ತಿದೆ.

“ಬಯಸಿದ ಯಾವುದೇ ವಸ್ತುಗಳನ್ನ ಅಗತ್ಯಕ್ಕೆ ತಕ್ಕಂತೆ ವಾಹನಗಳಲ್ಲಿ ಅವರವರ ಮನೆ ಬಾಗಿಲಿಗೇ ತಲುಪಿಸಲಾಗುತ್ತಿದೆ. ಈ ಮೂಲಕ ಗ್ರಾಹಕರು ಹಾಗೂ ಉದ್ದಿಮೆಗಳ ಮಾಲಿಕರ ಮೆಚ್ಚುಗೆಗೆ ಪಾತ್ರವಾಗಿದ್ದೇವೆ ”

- ಅಭಿರಾಮ್, ಡಿ4ಡೆಲಿವರಿ ಲಾಜೆಸ್ಟಿಕ್ಸ್ ನ ಸಹ ಮಾಲಿಕ

ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನ ಸುಲಭವಾಗಿ ಆರ್ಡರ್ ಮಾಡಲು ಡಿ4ಡೆಲಿವರಿ ಲಾಜೆಸ್ಟಿಕ್ಸ್ ವಿವಿಧ ಅವಕಾಶಗಳನ್ನ ಮಾಡಿಕೊಟ್ಟಿದೆ. ವೆಬ್ ಸೈಟ್ ಹಾಗೂ ಕಾಲ್ ಸೆಂಟರ್ ಗಳನ್ನ ಓಪನ್ ಮಾಡಿರೋ ಈ ಕಂಪನಿ ಬಹಳ ಬೇಗನೆ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ಮೊಬೈಲ್ ಆಪ್ ಗಳನ್ನೂ ಪರಿಚಯಿಸಲಾಗಿದ್ದು, ಇದರಿಂದ ಸುಲಭವಾಗಿ ಡೆಲಿವರಿ ಮಾಡಲು ಸಾಧ್ಯವಾಗಿದೆ. ಜೊತೆಗೆ ಆರ್ಡರ್ ಸ್ಟೇಟಸ್ ಗಳನ್ನೂ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಅದೆಷ್ಟೋ ಬ್ಯುಸಿನೆಸ್ ಪರ್ಸನ್ ಗಳು ಆಪ್ ಮೂಲಕವೇ ಸರ್ವೀಸ್ ಪಡೆಯುತ್ತಿರೋದು ವಿಶೇಷ.

ಆರಂಭದಲ್ಲಿ ಕಂಪನಿಯ ಸಂಸ್ಥಾಪಕರಾದ ಅಭಿರಾಮ್ ಸುರೇಶ್, ಐಶ್ವರ್ಯ ರಾಘವನ್ ಹಾಗೂ ಮ್ರಿನಾಲ್ ಮೋಹನ್ ದಾಸ್ ಅವರೇ ಡೆಲಿವರಿ ಬಾಯ್ ಗಳಾಗಿ ಕೆಲಸ ಮಾಡಿದ್ರು. ಮೂರು ತಿಂಗಳ ನಂತ್ರ ಡೆಲಿವರಿ ಕೆಲಸಗಳಿಗೆ ಬೇರೆ ವ್ಯಕ್ತಿಗಳನ್ನ ನಿಯೋಜಿಸಿಕೊಂಡ್ರು.

“ಅಗತ್ಯಕ್ಕೆ ತಕ್ಕಂತೆ ಕ್ವಿಕರ್ ಒಎಲ್ ಎಕ್ಸ್ ನಲ್ಲಿ ಕೆಲಸ ಖಾಲಿ ಇರುವ ಬಗ್ಗೆ ಜಾಹೀರಾತು ನೀಡಿದೆವು. ಕ್ರಮೇಣ ವ್ಯಾಪ್ತಿ ಬೆಳೆಸಿಕೊಂಡ ನಾವು 15 ತಿಂಗಳಲ್ಲಿನಲ್ಲಿ ಮತ್ತೊಂದು ನಗರವನ್ನ ತಲುಪಿದೆವು. ಇದೀಗ ನಮ್ಮ ಕೆಲಸದ ವೇಗ ಹೆಚ್ಚಾಗಿದ್ದು, ಕೊಚ್ಚಿ ಹಾಗೂ ತಿಶೂರ್ ನಲ್ಲಿ ಕಂಪನಿ ಬಲವಾಗಿ ಬೆಳೆದಿದೆ. ಸದ್ಯದಲ್ಲೇ ನಾವು ಬೆಂಗಳೂರಿನಲ್ಲೂ ಆರಂಭಿಸುವ ಲೆಕ್ಕಾಚಾರವಿದೆ” - ಅಭಿರಾಮ್, ಡಿ4ಡೆಲಿವರಿ ಲಾಜೆಸ್ಟಿಕ್ಸ್ ನ ಸಹ ಮಾಲಿಕ

ಫ್ಯೂಚರ್ ಫ್ಲಾನ್ಸ್...

ಪ್ರತೀ ತಿಂಗಳೂ ಅಂದಾಜು ಶೇಕಡಾ 15 ರಷ್ಟು ಬೆಳವಣಿಗೆಯ ಪ್ರಮಾಣ ಹೊಂದಿರುವ ಡಿ4ಡೆಲಿವರಿ ಲಾಜೆಸ್ಟಿಕ್ಸ್, ಆರಂಭದಲ್ಲಿ ಹೊಂದಿದ್ದ ತಿಂಗಳ ಲಾಭ ಸುಮಾರು 10 ಸಾವಿರ ರೂಪಾಯಿ. ಇದೀಗ ಆದಾಯದ ಪ್ರಮಾಣ ಐದೂವರೆ ಲಕ್ಷಕ್ಕೇರಿದೆ. ಪ್ರತೀ ದಿನ ಈ ಕಂಪೆನಿ 180 ರಿಂದ 220 ಆರ್ಡರ್ ಗಳನ್ನ ಪಡೆಯುತ್ತಿರುವುದು ವಿಶೇಷ. ಕೇವಲ ಸಿಟಿಯೊಳಗೆ ಮಾತ್ರ ಆಪರೇಟ್ ಮಾಡುತ್ತಿರುವ ಡಿ4ಡೆಲಿವರಿ ಲಾಜೆಸ್ಟಿಕ್ಸ್ ಸದ್ಯದಲ್ಲೇ ಇತರೆ ಸಿಟಿಗಳಿಗೂ ಅನ್ವಯವಾಗುವಂತೆ ಮೊಬೈಲ್ ಆಪನ್ನ ಪರಿಚಯಿಸಲಿದೆ. ಬೆಳೆಯುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಆಯಾಮದತ್ತ ಈ ಲಾಜೆಸ್ಟಿಕ್ ಕಂಪನಿ ಚಿಂತಿಸುತ್ತಿದೆ. ಈಗಾಗಲೇ ಭರ್ಜರಿ ಮಾರ್ಕೆಟ್ ವ್ಯಾಲ್ಯೂಹೊಂದಿರುವ ಡಿ4ಡೆಲಿವರಿ ಲಾಜೆಸ್ಟಿಕ್ಸ್ ಸದ್ಯದಲ್ಲೇ ಗ್ರಾಹಕರಿಗೆ ದೊಡ್ಡಮಟ್ಟದ ಉಡುಗೊರೆಯನ್ನೂ ನೀಡಲಿದೆಯಂತೆ..

ಲೇಖನ – ಸಿಂಧು ಕಶ್ಯಪ್

ಅನುವಾದ – ಬಿ ಆರ್ ಪಿ, ಉಜಿರೆ

Add to
Shares
0
Comments
Share This
Add to
Shares
0
Comments
Share
Report an issue
Authors

Related Tags