ಆವೃತ್ತಿಗಳು
Kannada

ಇಲ್ಲಿ ನಮಗೆ ನಾವೇ ಬಾಸ್​..!ಉದ್ಯಮಿ ಆಗುವುದರ ಹಿಂದಿದೆ ನೂರಾರು ಕನಸು..!

ಟೀಮ್​ ವೈ.ಎಸ್​. ಕನ್ನಡ

14th Dec 2016
Add to
Shares
23
Comments
Share This
Add to
Shares
23
Comments
Share

ನಮಗೆ ನಾವೇ ಬಾಸ್​ ಆಗಬೇಕು.. ಇನ್ನೊಬ್ಬರು ಬಾಸ್​ ಇದ್ರೆ ಮನಸ್ಸಿಗೆ ಕಿರಿಕಿರಿ ಹೆಚ್ಚು. ಸವಾಲೆನಿಸುವ ಟಾರ್ಗೆಟ್​ಗಳು ಮತ್ತೊಬ್ಬ ಬಾಸ್​ ಕೆಳಗೆ ಕೆಲಸ ಮಾಡುವಾಗ ಸಾಮಾನ್ಯ. ಆದ್ರೆ ನಮಗೆ ನಾವೇ ಬಾಸ್​ ಆಗಬೇಕಾದ್ರೆ, ನಮ್ಮದೇ ಉದ್ಯಮ ಇರಬೇಕು. ನಾವು ಕೂಡ ಕೆಲವರಿಗೆ ಕೆಲಸ ಕೊಡಬೇಕು. ಸ್ಟಾರ್ಟ್​ಅಪ್​ ಯುಗದಲ್ಲಿ ಬಾಸ್​ ಆಗಬೇಕು ಅನ್ನೋ ಕನಸು ಬೇಗನೆ ನನಸಾಗಬಹುದು. ಯಾಕಂದ್ರೆ ಉದ್ಯಮ ಯಾರಪ್ಪನ ಆಸ್ತಿಯೂ ಅಲ್ಲ. ಮನಸ್ಸು ಮಾಡಿದ್ರೆ ಎಲ್ಲರೂ ಉದ್ಯಮಿಯಾಗಬಹುದು. "ಉದ್ಯಮಿ ಆಗು ಉದ್ಯೋಗ ನೀಡು" ಅನ್ನೋದನ್ನ ಚಾಚು ತಪ್ಪದೆ ಪಾಲಿಸಬಹುದು.

image


ತಿಂಗಳ ಸಂಬಳಕ್ಕೆ ತುಡಿಯುವ ಕೆಲಸ ಸಾಕಾಯ್ತು. ಪ್ರತಿ ನಿತ್ಯವೂ ತಲೆನೋವು ತರುವ ಕೆಲಸಗಳನ್ನ ನಿಭಾಯಿಸುತ್ತಾ ತಿಂಗಳಾಂತ್ಯದ ಸಂಬಳಕ್ಕಾಗಿ ಕಾದು ಕೂರುವುದು ಅದೆಷ್ಟೋ ಜನರಿಗೆ ಬೇಸರ ತರಿಸಿ ಬಿಡುತ್ತದೆ. ಯಾರದ್ದೋ ಕೈಕೆಳಗೆ ದುಡಿಯುವುದಕ್ಕಿಂತ ನಮಗೆ ನಾವೇ ಬಾಸ್ ಆಗುವುದು ಉತ್ತಮ ಎನ್ನುವುದು ಹಲವರ ಅಭಿಪ್ರಾಯ. ಇದು ನಿಜ ಕೂಡ. ಆದರೆ, ಎಲ್ಲರಿಗೂ ಸ್ವಂತ ಉದ್ಯೋಗ ಎಲ್ಲರ ಕೈಯಲ್ಲಿ ಆಗುವ ಮಾತಲ್ಲ. ಇದು ಒಂದಷ್ಟು ತ್ಯಾಗಗಳನ್ನು ಬೇಡುತ್ತದೆ. ಇದು ಒಂದಷ್ಟು ಸಮಸ್ಯೆಗಳನ್ನೂ ಸೃಷ್ಟಿಸುತ್ತದೆ. ಕೆಲಸ ತ್ಯಜಿಸಿ ಸ್ವಂತ ಉದ್ಯೋಗ ಆರಂಭಿಸಿದಾಗ ಬಹುತೇಕರ ಪಾಲಿಗೆ ಅವರ ಬ್ಯುಸಿನೆಸ್ಸೇ ಬದುಕಾಗಿ ಬಿಡುತ್ತದೆ ಯಾವುದಾದರೂ ಕೆಲಸದಲ್ಲಿದ್ದಾಗ ಗೃಹ ಸಾಲ, ಕಾರು ಸಾಲ, ವೈಯಕ್ತಿಕ ಸಾಲ ಪಡೆಯುವುದು ಸುಲಭವಾಗಿರುತ್ತೆ . ಒಂದಷ್ಟು ದಾಖಲೆಗಳನ್ನು ಪ್ರದರ್ಶಿಸಿದರೆ ಸಾಕು. ಸುಲಭವಾಗಿ ಸಾಲ ಪಡೆಯಬಹುದು. ಆದರೆ, ಸ್ವಂತ ಉದ್ಯೋಗ ಮಾಡುವುದಾದರೆ ಬೇರೆ ರೀತಿಯ ತಲೆನೋವುಗಳು ಸೃಷ್ಠಿಯಾಗುತ್ತವೆ. ಹೀಗಾಗಿ ಹೊಸ ಸ್ವಂತ ಉದ್ಯೋಗವನ್ನ ಶುರುಮಾಡುವ ಮೊದಲು ಭಾರೀ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಲ್ಲದೆ ಕೆಲವು ಸಿದ್ಧ ಸೂತ್ರಗಳನ್ನ ಪಾಲಿಸುವುದು ಅನಿವಾರ್ಯ.

ಹೊಸ ಬದುಕು ತಾತ್ಕಾಲಿಕ ಅನ್ನೋದು ನೆನಪಿರಲಿ

ಹೊಸ ಉದ್ಯಮ ಆರಂಭಿಸುವವರು ಮೊದಲು ವಾಸ್ತವವನ್ನ ಅರಿತುಕೊಳ್ಳಬೇಕು. ಅದ್ರಲ್ಲೂ ಆರಂಭಿಸುವ ಉದ್ಯಮ ಅಥವಾ ಅಲ್ಲಿ ಬರುವ ಆದಾಯ ಕೇವಲ ತಾತ್ಕಲಿಕ ಅನ್ನೋ ಅರಿವು ನಮಗೆ ಸ್ಪಷ್ಟವಾಗಿದ್ದರೆ ಉತ್ತಮ. ಅಲ್ಲದೆ ನಿಮ್ಮ ಕನಸು ನೀವು ಸಾಗುವ ಹಾದಿಯಲ್ಲಿ ನಿರೀಕ್ಷೆಯನ್ನೂ ಮಾಡಲಾಗದ ಸಮಸ್ಯೆಗಳು ಶುರುವಾಗ್ತವೆ ಅನ್ನೋದು ನೆನಪಿಡಿ.

ವಿನಾ ಕಾರಣ ಜವಾಬ್ದಾರಿಗಳನ್ನ ಹೊರಬೇಡಿ

ಹೊಸ ಸಾಹಸಕ್ಕೆ ಕೈ ಹಾಕುವ ಮುನ್ನ ನೀವು ನಿಮ್ಮ ಮಿತಿಗಳನ್ನ ಅರಿತುಕೊಂಡಿದ್ರೆ ಒಳ್ಳೆಯದು. ಅಲ್ಲದೆ ಹೊಸ ಶುರುವಿನ ಹಾದಿಯಲ್ಲಿ ಕಾರಣವಿಲ್ಲದೆ ಹೊಸ ಹೊಣೆಗಾರಿಕೆಗಳಿಂದ ದೂರವಿರುವುದು ಹೆಚ್ಚು ಸೂಕ್ತ. ಅಂದ್ರೆ ಹೊಸ ಕಾರು ಕೊಳ್ಳುವುದು, ಮನೆಗೆ ಲೋನ್ ಮಾಡಿಸುವುದು ಇಂತಹ ರಿಸ್ಕ್ ಗಳಿಂದ ದೂರವುಳಿದ್ರೆ ಮಾತ್ರ ನಿಮ್ಮ ಉದ್ದೇಶ ಈಡೇರಬಹುದು. ಅಲ್ಲದೆ ನೀವು ನಿಮ್ಮ ಉದ್ಯೋಗ ತೊರೆಯುವ ಮುನ್ನ ಇ ಎಮ್ ಇ ಗಳನ್ನ ಹಾಗೂ ಇತರೆ ಸಾಲಗಳನ್ನ ಮುಗಿಸಿಕೊಂಡೇ ಹೊಸ ಉದ್ಯೋಗದತ್ತ ಕಾಲಿವುದು ಸೂಕ್ತ.

ಬದುಕುವ ಕಲೆ ಅರ್ಥ ಮಾಡಿಕೊಳ್ಳಿ

ಸದ್ಯ ಮಾಡುತ್ತಿರುವ ಕೆಲಸವನ್ನ ಬಿಟ್ಟು ಹೊಸ ಸ್ವಂತ ಉದ್ಯೋಗದ ಕಡೆ ನೀವು ಗಮನ ನೀಡುವುದಾದರೆ ಆದಾಯದ ವಿವಿಧ ಮೂಲಗಳನ್ನ ಮೊದಲೇ ಆಯ್ಕೆ ಮಾಡಿಕೊಳ್ಳಿ. ವ್ಯಾಪಾರ ಆರಂಭಿಸಿದ ಕೂಡಲೇ ಲಾಭ ಬರುತ್ತದೆ ಎಂದು ಹೇಳುವಂತಿಲ್ಲ. ಕೆಲವೊಮ್ಮೆ ನೀವು ಆರಂಭದ ಕೆಲವು ತಿಂಗಳಲ್ಲಿ ನಷ್ಟ ಅನುಭವಿಸಬೇಕಾಗಬಹುದು. ನಿಮ್ಮ ಕ್ಲೈಂಟ್ಗಳು ಸಮಯಕ್ಕೆ ಸರಿಯಾಗಿ ಚೆಕ್ ಕಳುಹಿಸದಿರಬಹುದು. ಈ ಸಮಸ್ಯೆಗಳೆಲ್ಲ ನಿಮ್ಮ ಮಾಮೂಲಿ ಖರ್ಚುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಸಾಮರ್ಥ್ಯ ನಿಮಗಿರಬೇಕು. ತಿಂಗಳ ಸಂಬಳವನ್ನೇ ನಂಬಿ ಕೂರುವವರಂತಿರಬಾರದು ಸ್ವಂತ ಉದ್ಯೋಗಕ್ಕಿಳಿಯುವವರ ಬದುಕು. ಅಲ್ಲದೆ ನಿಮ್ಮ ಆರಂಭಿಕ ಬ್ಯಾಂಕ್ ನಲ್ಲಿ ಒಂದಿಷ್ಟು ಉಳಿತಾಯಗಳಿದ್ರೆ ಕಷ್ಟ ಕಾಲದಲ್ಲಿ ಅದು ನೆರವಿಗೆ ನಿಲ್ಲಬಹುದು. ಅದು ನಿಮ್ಮ ಬಜೆಟ್ ಗೆ ಒಂದಿಷ್ಟು ನೆರವು ನೀಡಬಹುದು. ಹೀಗಾದ್ರೆ ಮಾತ್ರ ಹೊಸ ಉದ್ಯೋಗದ ಆರಂಭದಲ್ಲೂ ನೀವು ಬದುಕಲು ಸಾಧ್ಯವಾಗುತ್ತದೆ.

ಇದನ್ನು ಓದಿ: ಪೇವರ್ಲ್ಡ್​ ಎಂಪೋಸ್: ಸಣ್ಣ ವ್ಯಾಪಾರಿಗಳಿಗೆ ಅನುಕೂಲಕರ ಸಾಧನ

ಆರಂಭಕ್ಕಾಗಿ ಸೂಕ್ತ ಸಮಯದವರೆಗೂ ಕಾಯಿರಿ

ನೀವು ಸಂಕಷ್ಟದ ಕಾಲದಲ್ಲಿ ಯಾರನ್ನೋ ಯಾವಾಗಲಾದ್ರೂ ಭೇಟಿಯಾಗುತ್ತೀರಿ. ಆ ವೇಳೆ ಅವರಿಂದ ಒಂದು ಉತ್ತಮ ಸಲಹೆ ಅಥವಾ ಬ್ಯುಸಿನೆಸ್ ಹಾದಿಯ ಬಗ್ಗೆ ತಿಳಿಯಬಹುದು. ಆದ್ರೆ ಆದ್ರೆ ಅದನ್ನ ಉದ್ವೇಗದಲ್ಲಿ ಆರಂಭಿಸುವುದು ಅಷ್ಟು ಸೂಕ್ತವಲ್ಲ. ಅದಕ್ಕಾಗಿ ಸೂಕ್ತ ಸಂದರ್ಭಕ್ಕಾಗಿ ನೀವು ಕಾಯುವುದು ಉತ್ತಮ ನಿರ್ಧಾರ. ಒಂದೊಮ್ಮೆ ನೀವೇ ನಿಮ್ಮ ಬಗ್ಗೆ ನಂಬಿಕೆ ಹಾಗೂ ನಿಮ್ಮ ನಿರ್ಧಾರದ ಬಗ್ಗೆ ಖಚಿತತೆ ಇದ್ದರೆ ಅದಕ್ಕ ಸೂಕ್ತ ತಯಾರಿಗಳನ್ನ ನಡೆಸಿ ಪ್ರಯೋಗಗಳಿಗೆ ಮುಂದಾಗುವುದು ಹೊಂದಾಣಿಕೆಯಾಗುತ್ತದೆ.

ಆಗುತ್ತಿರುವ ಅನುಭವವನ್ನ ಅರ್ಥೈಸಿಕೊಳ್ಳಿ- ನಿಮ್ಮ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನ ತಿಳಿದುಕೊಳ್ಳಿ

ಹೊಸ ಉದ್ಯಮಕ್ಕೆ ಕಾಲಿಟ್ಟ ಅದೆಷ್ಟೋ ಮಂದಿ ತಮಗಾದ ಹೊಸ ಅನುಭವಗಳನ್ನ ಅವಲೋಕಿಸಲು ಮುಂದಾಗುವುದೇ ಇಲ್ಲ. ಇದರಿಂದಾಗಿ ಇರುವ ಸಮಸ್ಯೆಗಳು ಅರಿವಿಗೆ ಬರುವುದಿಲ್ಲ. ಇದು ಇನ್ನಷ್ಟು ಕಷ್ಟ ನಷ್ಟಗಳಿಗೆ ಕಾರಣವಾಗುವ ಸಾಧ್ಯತೆಗಳೂ ಇದೆ. ಹೀಗಾಗಿ ನಿಮ್ಮ ಹೊಸ ಕಂಪನಿ ಸಾಗುತ್ತಿರುವ ಗತಿಯನ್ನ ಅರ್ಥ ಮಾಡಿಕೊಳ್ಳದೇ ಹೋದ್ರೆ ಅದು ಅಪಾಯಕ್ಕೆ ಎಡೆಮಾಡಿಕೊಡುತ್ತದೆ. ಇನ್ನು ನೀವು ನಿಮ್ಮ ಸಾಮರ್ಥ್ಯದ ಬಗ್ಗೆ ಹಾಗೂ ಇರುವ ದೌರ್ಬಲ್ಯಗಳ ಬಗ್ಗೆ ಅರಿವುದು ಹೊಂದಿದ್ರೆ ಅದು ನಿಮ್ಮ ಸ್ವಂತ ಉದ್ಯೋಗಕ್ಕೆ ಹೆಚ್ಚು ಪೂರಕವಾಗಿರುತ್ತದೆ. ದೈನಂದಿನ ಬದುಕು ಹಾಗೂ ಉದ್ದೇಶಗಳಲ್ಲಿ ನೀವು ವ್ಯವಹಿಸುವ ರೀತಿ ನೀತಿಗಳು ಅರಿವಿಗೆ ಬಂದಿರುತ್ತದೆ. ಇದ್ರಲ್ಲೇ ನೀವು ಯಾವ ಗುಣಗಳನ್ನ ಹಾಗೂ ನಿರ್ಧಾರಗಳನ್ನ ಬದಲಾಯಿಸಿಕೊಳ್ಳಬೇಕು ಅನ್ನೋದು ಅರ್ಥವಾಗುತ್ತದೆ.

ಕುಟುಂಬಕ್ಕೆ ಸಮಯ ಮೀಸಲಿಡಿ - ದುಡುಕಿನ ನಿರ್ಧಾರಕ್ಕಿಂತ ಯೋಜಿತ ಯೋಚನೆಗಳಿರಲಿ

ಕೆಲಸ ತ್ಯಜಿಸಿ ಸ್ವಂತ ಉದ್ಯೋಗ ಆರಂಭಿಸಿದಾಗ ಬಹುತೇಕರ ಪಾಲಿಗೆ ಅವರ ಬ್ಯುಸಿನೆಸ್ಸೇ ಬದುಕಾಗಿ ಬಿಡುತ್ತದೆ . ಕೆಲಸದಲ್ಲಿದ್ದಾಗ ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗಷ್ಟೇ ಡ್ಯೂಟಿ. ಆ ಬಳಿಕ ನೀವು ಸ್ವತಂತ್ರರು. ಶನಿವಾರ, ಭಾನುವಾರ ಇಡೀ ದಿನ ಬಿಡುವು ಮಾಡಿಕೊಂಡು ಎಲ್ಲಿಗಾದರೂ ಹೋಗಿಬರಬಹುದು. ಆದರೆ, ಒಮ್ಮೆ ಸ್ವಂತ ಉದ್ಯೋಗಕ್ಕೆ ನಿಂತುಬಿಟ್ಟರೆ ಇವೆಲ್ಲವನ್ನು ಮರೆತುಬಿಡಬೇಕು. ಇಲ್ಲಿ ಕೆಲವೊಮ್ಮೆ ದಿನವಿಡೀ ದುಡಿಯುವ ಅನಿವಾರ್ಯತೆಗೂ ನೀವು ಸಿಲುಕಬಹುದು. ಹೀಗಾಗಿ ನಿಮ್ಮ ಕುಟುಂಬಕ್ಕೆ ಸಮಯ ನೀಡಲು ಕೊಂಚ ಕಷ್ಟವಾಗಬಹುದು. ಹೀಗಾಗಿ ಇದ್ರ ಬಗ್ಗೆ ಸೂಕ್ತ ಲೆಕ್ಕಾಚಾರಗಳು ನಿಮಗಿರುವುದು ಒಳ್ಳೆಯದು.

ಇದ್ರ ಜೊತೆಗೆ ಆರಂಭದಲ್ಲಿ ಸಿಕ್ಕ ಕೆಲವು ಯಶಸ್ಸು ಇತರೆ ದುಡುಕಿನ ನಿರ್ಧಾರಗಳನ್ನ ಕೈಗೊಳ್ಳಲು ಕಾರಣವಾಗಬಹುದು. ಹೀಗಾಗಿ ಯೋಚಿಸಿ, ಸಕಾಲದಲ್ಲಿ ಚಿಂತನೆಗಳನ್ನ ಮಾಡಿದ್ರೆ ಯಶಸ್ಸು ಸಿದ್ಧ. ಹೀಗೆ ಉದ್ಯೋಗ ತೊರೆದು ಸ್ವಂತ ಉದ್ಯೋಗಳ ನಿರೀಕ್ಷೆಯಲ್ಲಿರುವವರು ಕೆಲವು ಸೂತ್ರಗಳನ್ನ ಪಾಲಿಸಿದ್ರೆ ಅದು ನಿಮ್ಮ ಹಾದಿಯನ್ನ ಸುಗಮಗೊಳಿಸಬಹುದು.

ಇದನ್ನು ಓದಿ:

1. ಅಡುಗೆ, ದಿನಸಿ ಪದಾರ್ಥಗಳಿಗೊಂದು ಆನ್​​ಲೈನ್ ಸೈಟ್..!

2. ಗ್ರಾಮೀಣ ಭಾರತದ ನಿರ್ಮಾಣಕ್ಕೊಂದು ರೂಬಲ್ ಯೋಜನೆ..!

3. ಇಳಿವಯಸ್ಸಿನ ಉತ್ಸಾಹಕ್ಕೆ ಉಡುಗೊರೆಯಾಯ್ತು Ask Chitvish

Add to
Shares
23
Comments
Share This
Add to
Shares
23
Comments
Share
Report an issue
Authors

Related Tags