ಆವೃತ್ತಿಗಳು
Kannada

ಮಹಿಳಾ ಸಬಲೀಕರಣಕ್ಕೆ ಪಣ - ಸರ್ಕಾರದ ಜೊತೆ ಖಾಸಗಿ ಸಂಸ್ಥೆಗಳ ಪರಿಶ್ರಮ

ಟೀಮ್​ ವೈ.ಎಸ್​. ಕನ್ನಡ

24th Mar 2016
Add to
Shares
6
Comments
Share This
Add to
Shares
6
Comments
Share

ಉತ್ತಮ ಜಗತ್ತಿನ ನಿರ್ಮಾಣದಲ್ಲಿ ಮಹಿಳೆಯರ ಕೊಡುಗೆ ಅಪಾರ. ಅವರ ಸೇವೆ ಮತ್ತು ತ್ಯಾಗ ಮನೋಭಾವವನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಸ್ತ್ರೀಶಕ್ತಿಯನ್ನು ಕೊಂಡಾಡುತ್ತಿದೆ. India Incಕೂಡ ಮಹಿಳಾ ಸಬಲೀಕರಣಕ್ಕೆ ಪಣ ತೊಟ್ಟಿದ್ದು, ಈ ಪ್ರಯತ್ನಕ್ಕೆ ಸಕಲ ರೀತಿಯ ಬೆಂಬಲವನ್ನೂ ನೀಡುತ್ತಿದೆ. ಇದಕ್ಕಾಗಿಯೇ ಮಹಿಳಾ ಬ್ಯಾಂಕ್ ಶಾಖೆಗಳನ್ನು ತೆರೆಯುವುದಾಗಿ ಘೋಷಿಸಿದೆ. ಮಹಿಳಾ ಉದ್ಯೋಗಿಗಳಿಗಾಗಿ ಮನೆಯಿಂದಲೇ ಕೆಲಸ ಮಾಡುವಂತಹ ಯೋಜನೆಯನ್ನು ಜಾರಿ ಮಾಡುತ್ತಿದೆ. ಉದ್ಯೋಗಿಗಳ ಮಧ್ಯೆ ಲಿಂಗ ಸಮಾನತೆಯನ್ನು ಕಾಪಾಡಲು ಕೂಡ ಬದ್ಧವಾಗಿದೆ.

ಇದನ್ನು ಓದಿ: ಸಿನಿಮಾ ಮೂಲಕ ಮಹಿಳೆಯರ ಸಮಸ್ಯೆಗೆ ಧ್ವನಿಯಾದ, ಸಾಮಾಜಿಕ ಕಳಕಳಿ ಮೆರೆದ 10 ದಿಗ್ಗಜರು..!

ಮಹಿಳಾ ಉದ್ಯೋಗಿಗಳಿಗೆ ಸುದೀರ್ಘ ಅವಧಿಯವರೆಗೆ ಒಂದು ವರ್ಷ ಮನೆಯಿಂದಲೇ ಕೆಲಸ ಮಾಡುವಂತಹ ಸೌಲಭ್ಯವನ್ನು ಐಸಿಐಸಿಐ ಬ್ಯಾಂಕ್ ಒದಗಿಸಿಕೊಟ್ಟಿದೆ. ಮೂರು ವರ್ಷದೊಳಗಿನ ಮಗು ಇದ್ದು, ಕೆಲಸಕ್ಕಾಗಿ ನಗರದಿಂದ ಹೊರಕ್ಕೆ ಪ್ರಯಾಣ ಮಾಡುವ ಅನಿವಾರ್ಯತೆಯಿದ್ದಲ್ಲಿ ಅಂತಹ ಮಹಿಳೆಯರಿಗೆ ಪ್ರಯಾಣ ವೆಚ್ಚ ಹಾಗೂ ಮಗುವಿನ ಲಾಲನೆ ಪಾಲನೆ ವೆಚ್ಚವನ್ನು ಕೂಡ ಭರಿಸುವುದಾಗಿ ಐಸಿಐಸಿಐ ಬ್ಯಾಂಕ್ ಘೋಷಿಸಿದೆ. ಇನ್ನು ಯೆಸ್ ಬ್ಯಾಂಕ್ ಕೂಡ ಮಹಿಳೆಯರನ್ನು ಪ್ರೋತ್ಸಾಹಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಇದಕ್ಕಾಗಿ ಹೊಸ ಯೋಜನೆಯೊಂದನ್ನು ಜಾರಿ ಮಾಡಿದೆ. ವಿಲೆ ಪಾರ್ಲೆಯ ವಾಯುವ್ಯ ಭಾಗದಲ್ಲಿರೋ ಉಪನಗರದಲ್ಲಿ, ಪ್ರತ್ಯೇಕವಾಗಿ ಮಹಿಳೆಯರೇ ಕಾರ್ಯನಿರ್ವಹಿಸುವ ಬ್ಯಾಂಕ್ ಶಾಖೆಯೊಂದನ್ನು ತೆರೆಯಲು ಯೆಸ್ ಬ್ಯಾಂಕ್ ಮುಂದಾಗಿದೆ.

ಕೆನಾನ್ ಕಂಪನಿ ಕೂಡ ಮಹಿಳೆಯರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ. 2018ರ ವೇಳೆಗೆ ಸಂಸ್ಥೆಯಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ಸದ್ಯ ಕೆನಾನ್ ಕಂಪನಿಯಲ್ಲಿ ಶೇ.12ರಷ್ಟು ಮಹಿಳಾ ಉದ್ಯೋಗಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದೇಶದ ಅತಿ ದೊಡ್ಡ ಬ್ಯಾಂಕ್ `ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ' ಮಹಿಳೆಯರಿಗಾಗಿ 100 ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡಿದೆ. ಈ ಶಿಬಿರಗಳು ಅನಾಥ ಮಹಿಳೆಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ನೆರವಾಗಲಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆರೋಗ್ಯ ಶಿಬಿರಗಳಲ್ಲಿ ಉಚಿತ ಕಣ್ಣಿನ ತಪಾಸಣೆ, ಕ್ಯಾನ್ಸರ್ ಪತ್ತೆ, ಸಂತಾನೋತ್ಪತ್ತಿ ಆರೋಗ್ಯ ಪರಿಶೀಲನೆ ಮತ್ತು ಮಧುಮೇಹ ಚೆಕ್‍ಅಪ್ ಮಾಡಲಾಗುತ್ತದೆ.

image


ಮಹಿಳಾ ಸಬಲೀಕರಣಕ್ಕಾಗಿ ತಮ್ಮ ಬ್ಯಾಂಕ್ ಕೈಗೊಂಡಿರುವ ಕ್ರಮಗಳ ಬಗ್ಗೆ ಐಸಿಐಸಿಐ ಬ್ಯಾಂಕ್‍ನ ಮುಖ್ಯಸ್ಥೆ ಚಂದಾ ಕೊಚ್ಚರ್ ವಿವರಿಸಿದ್ದಾರೆ. ``ಮಾತೃತ್ವ, ಮಗುವಿನ ಆರೈಕೆ ಮುಂತಾದ ಕಾರಣಗಳಿಗಾಗಿ ಮಹಿಳೆಯರು ಉದ್ಯೋಗ ತ್ಯಜಿಸಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆ ಸಮಯದಲ್ಲಿ ಅದೇ ಕೆಲಸವನ್ನು ಮನೆಯಿಂದ ಮಾಡುವಂತಹ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ತಮ್ಮ ಸಾಮಥ್ರ್ಯವನ್ನು ಬಳಸಿಕೊಂಡು ಮನೆಯಿಂದಲೇ ಕೆಲಸ ಮಾಡುವ ಮೂಲಕ ಮಹಿಳೆಯರು ಸಂಸ್ಥೆಗೆ ಅತ್ಯುತ್ತಮ ಕೊಡುಗೆಗಳನ್ನು ಕೊಡಬಹುದು. ಮಹಿಳಾ ಉದ್ಯೋಗಿಗಳು ಅವರ ಅಗತ್ಯಕ್ಕೆ ತಕ್ಕಂತೆ ಸುದೀರ್ಘ ಅವಧಿಯ ವರೆಗೆ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು'' ಎನ್ನುತ್ತಾರೆ ಚಂದಾ ಕೊಚ್ಚರ್. ಎಲ್ಲಾ ಕೆಲಸಗಳನ್ನು ಕೂಡ ಮನೆಯಿಂದಲೇ ಮಾಡಬಹುದು, ಐಐಟಿ-ದೆಹಲಿ ನೆರವಿನೊಂದಿಗೆ ಐಸಿಐಸಿಐ ಬ್ಯಾಂಕ್ ಸುರಕ್ಷಿತ ವ್ಯವಸ್ಥೆಯೊಂದನ್ನು ಕಲ್ಪಿಸಿದೆ. ಸಾಲ ಮಂಜೂರಾತಿಗಾಗಿ ದಾಖಲೆಗಳ ಪರಿಶೀಲನೆ, ಚೆಕ್ ಕ್ಲಿಯರೆನ್ಸ್ ಹೀಗೆ ಎಲ್ಲ ಕೆಲಸಗಳನ್ನೂ ಮನೆಯಲ್ಲಿ ಕುಳಿತೇ ಸುಲಲಿತವಾಗಿ ಮಾಡಿ ಮುಗಿಸಬಹುದು.

ಬೆಂಗಳೂರು ಮೂಲದ ಹೆಲ್ತ್‍ಕೇರ್ ಸ್ಟಾರ್ಟಪ್ `ಡೊಕ್ಸ್​​ಆ್ಯಪ್' ಸಹ ಮಹಿಳೆಯರಿಗಾಗಿ ವಿಶೇಷ ಸವಲತ್ತು ನೀಡುತ್ತಿದೆ. ಈ ಆ್ಯಪ್ ಮೂಲಕ ಮಹಿಳೆಯರು ಯಾವುದೇ ತಜ್ಞ ವೈದ್ಯರನ್ನು ಭೇಟಿಯಾಗಬಹುದು. 8 ದಿನಗಳಿಗೆ ಕೇವಲ 8 ರೂಪಾಯಿ ಪಾವತಿಸಬೇಕು. ಅಂತರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ `ಡೊಕ್ಸ್‍ಆ್ಯಪ್' ಈ ವಿಶಿಷ್ಟ ಕೊಡುಗೆಯನ್ನು ನೀಡಿದೆ. 

ಇದನ್ನು ಓದಿ: 

1. ಮೂರು ಬಾರಿ ಸಾಕ್ಷಾತ್ಕಾರವಾದ್ರೆ ಏನು ಮಾಡಬೇಕು? ಹ್ಯಾಟ್ರಿಕ್ ಉದ್ಯಮಿ ಪೂರ್ಣಿಮಾ ಶೆಣೈ ಅವರ ಅನುಭವದ ಕಹಾನಿ

2. ಬರುತ್ತಿದೆ ಹೋಳಿ ಹಬ್ಬದ ಸಂಭ್ರಮ : ಆಚರಣೆಗಿರಲಿ ನೈಸರ್ಗಿಕ ಬಣ್ಣಗಳ ರಂಗು...

3. ಜನರಲ್ Knowledge ಅಲ್ಲ, ಜನರ Knoledge ಇಂಪಾರ್ಟೆಂಟ್.! - ಆದರ್ಶ್ ಬಸವರಾಜ್

Add to
Shares
6
Comments
Share This
Add to
Shares
6
Comments
Share
Report an issue
Authors

Related Tags