ಆವೃತ್ತಿಗಳು
Kannada

ವಿಶ್ವದ 6 ಸ್ತ್ರೀಸಮಾನತಾವಾದಿಗಳು...!

ಟೀಮ್​ ವೈ.ಎಸ್​. ಕನ್ನಡ

9th Apr 2016
Add to
Shares
3
Comments
Share This
Add to
Shares
3
Comments
Share

"ಮಹಿಳೆಯರ ಹಕ್ಕುಗಳು ಮಾನವ ಹಕ್ಕುಗಳು'' - 1995ರಲ್ಲಿ ನಡೆದ ಐತಿಹಾಸಿಕ ಮಹಿಳಾ ಚಳವಳಿಯೊಂದರಲ್ಲಿ ಹಿಲರಿ ಕ್ಲಿಂಟನ್ ಮಾಡಿದ ಘೋಷಣೆ ಇದು. ಸ್ತ್ರೀವಾದಿ ಹೋರಾಟವನ್ನು ಅಪ್ಪಿಕೊಳ್ಳದೆ ಸಾರ್ವತ್ರಿಕ ಗೌರವ ಮತ್ತು ಭಟ್ಟಂಗಿತನ ಗಳಿಸಿದವರಿಲ್ಲ. ವಿಶ್ವದ ಮಹಾನ್ ನಾಯಕರೆಂದು ಗುರುತಿಸಿಕೊಂಡಿರುವ ಕೆಲವರು ಕೂಡ ಇದರಿಂದ ಹೊರತಾಗಿಲ್ಲ. ಸರ್ವತೋಮುಖ ಪ್ರತಿಗೆ ಪಣತೊಟ್ಟ, ಸ್ತ್ರೀವಾದಿಗಳೆಂದು ಕರೆದುಕೊಂಡಿರುವ ಆರು ಮಂದಿ ದಾರ್ಶನಿಕ ಪುರುಷರ ಬಗ್ಗೆ ತಿಳಿದುಕೊಳ್ಳೋಣ.

image


1. ಜಸ್ಟಿನ್ ಟ್ರುಡೆಯೊ

ಜಸ್ಟಿನ್ ಟ್ರುಡೆಯೊ ಕೆನಡಾದ ನೂತನ ಪ್ರಧಾನಿ, ಇಡೀ ಬ್ರಹ್ಮಾಂಡದ ಹಾರ್ಟ್‍ಥ್ರೋಬ್. ಇಡೀ ಜಗತ್ತಿಗೇ ಪ್ರಧಾನಿಯಾಗಲಿ ಎಂದು ಬಯಸುವಂತಹ ಅದ್ಭುತ ವ್ಯಕ್ತಿ. ತಮ್ಮ ಗುರುತಿನ ಹಿಂದೆ ಮೀಸಲಾತಿಯನ್ನು ಜಸ್ಟಿನ್ ಟ್ರುಡೆಯೊ ಅಳವಡಿಸಿಲ್ಲ. ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಅವರು `ವಿಶ್ವ ಆರ್ಥಿಕ ವೇದಿಕೆ'ಯಲ್ಲಿ ಭಾಷಣ ಮಾಡಿದ್ರು. ಅತ್ಯಂತ ನೀರಸವಾಗಿ ತಾವೊಬ್ಬ ಸ್ತ್ರೀಸಮಾನತಾವಾದಿ ಎಂದ ಜಸ್ಟಿನ್, ಅದನ್ನು ಒಪ್ಪಿಕೊಳ್ಳಲು ಲಾಬಿ ಕೂಡ ಮಾಡಿದ್ದಾರೆ. ``ಸ್ತ್ರೀವಾದಿ ಎಂಬ ಪದವನ್ನು ಕೇಳಿ ನೀವು ಹೆದರಬೇಕಿಲ್ಲ, ಎಲ್ಲಾ ಪುರುಷರು ಮತ್ತು ಮಹಿಳೆಯರು ತಮ್ಮ ಬಗ್ಗೆ ವಿವರಿಸಲು ಇದನ್ನು ಬಳಸಬೇಕು'' ಎನ್ನುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದರು. ರಾಜಕೀಯ ಇತಿಹಾಸದಲ್ಲೇ ಅತ್ಯಂತ ವೈವಿದ್ಯಮಯ ಕ್ಯಾಬಿನೆಟ್ ರಚಿಸಿದ ಹೆಗ್ಗಳಿಕೆ ಜಸ್ಟಿನ್ ಟ್ರುಡೆಯೊ ಅವರಿಗೆ ಸಲ್ಲುತ್ತೆ, ಯಾಕಂದ್ರೆ ಅವರ ಮಂತ್ರಿ ಮಂಡಲದಲ್ಲಿ ಶೇ.50 ರಷ್ಟು ಮಹಿಳಾಮಣಿಗಳಿದ್ದಾರೆ.

2. ಮುಸ್ತಫಾ ಕೆಮಾಲ್ ಅಟಟುರಕ್-ಆಧುನಿಕ ಟರ್ಕಿಯ ಸಂಸ್ಥಾಪಕ

ಸ್ತ್ರೀವಾದಿಗಳ ಬಗ್ಗೆ ಎಲ್ಲೆಡೆ ಗುಣಗಾನ ಸಹಜ. ``ಆಶಾರಹಿತ ತಾಣದಲ್ಲಿ ನಾವು ಪ್ರೀತಿ ಕಂಡೆವು'' ಎನ್ನುತ್ತಾರೆ ಎಲ್ಲರೂ. ಇದಕ್ಕೆ ಕಾರಣ ಮುಸ್ತಫಾ ಕೆಮಾಲ್. 19ನೇ ಶತಮಾನದಲ್ಲೇ ಟರ್ಕಿಯಲ್ಲಿ ಮಹಿಳಾ ಹಕ್ಕುಗಳಿಗಾಗಿ ಹೋರಾಟ ಮಾಡಿದ ಮಹಾನ್ ವ್ಯಕ್ತಿ. `ಬೌರ್ಜಿಯಸ್ ಮಹಿಳಾ ಕ್ರಾಂತಿ' ಮೂಲಕ ಸ್ತ್ರೀವಾದದ ಬೀಜ ಬಿತ್ತಿದ್ದರು. ``ಮನುಕುಲ ಎರಡು ಲಿಂಗಗಳಿಂದ ಮಾಡಲ್ಪಟ್ಟಿದೆ, ಮಹಿಳೆ ಮತ್ತು ಪುರುಷರು. ಕೇವಲ ಒಂದು ಭಾಗದಲ್ಲಿ ಸುಧಾರಣೆಯಾಗಿ ಇನ್ನೊಂದು ಭಾಗವನ್ನು ನಿರ್ಲಕ್ಷಿಸಿದರೆ ಮನುಕುಲದ ಅಭಿವೃದ್ಧಿ ಅಸಾಧ್ಯ. ಜನರ ಒಟ್ಟು ಭಾರದಲ್ಲಿ ಅರ್ಧದಷ್ಟನ್ನು ಸರಪಳಿಯಿಂದ ಭೂಮಿಗೆ ಕಟ್ಟಿದರೆ, ಉಳಿದರ್ಧ ಆಗಸವನ್ನು ಮುಟ್ಟಲು ಸಾಧ್ಯವೇ?'' ಅನ್ನೋದು ಅವರ ಪ್ರಶ್ನೆ.

3. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ

ಮಹಿಳೆಯರಿಗೂ ಸಮಾನ ವೇತನ ಯೋಜನೆ ಒಬಾಮಾ ಅಧಿಕಾರಾವಧಿಯಲ್ಲಿ ಅತ್ಯಂತ ಜನಪ್ರಿಯವಾಗಿದೆ. ಇದನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದ ಹೆಗ್ಗಳಿಗೆ ಒಬಾಮಾ ಅವರಿಗೆ ಸಲ್ಲುತ್ತೆ. 2009ರ ಜನವರಿ 29ರಂದು ಫೇರ್ ಪೇ ರೆಸ್ಟೋರೇಶನ್ ಆ್ಯಕ್ಟನ್ನು ಕಾನೂನಾಗಿ ಜಾರಿ ಮಾಡಲಾಯ್ತು. ತಮ್ಮ ಕೊನೆಯ ಸಂಬಳದ ಚೆಕ್ ಪಡೆದ ನಂತರ 6 ತಿಂಗಳವರೆಗೆ ಸಮಾನ ವೇತನಕ್ಕಾಗಿ ಮಹಿಳೆಯರು ತಮ್ಮ ಮಾಲೀಕರ ವಿರುದ್ಧ ಮೊಕದ್ದಮೆ ಹೂಡಲು ಅವಕಾಶ ಕಲ್ಪಿಸಲಾಗಿದೆ. ``ಸಾಮಾನ್ಯವಾಗಿ ಮಹಿಳೆಯರಿಗೆ ಮಾಹಿತಿ ಲಭ್ಯವಾಗುವುದಿಲ್ಲ, ವೇತನ ತಾರತಮ್ಯದ ವಿರುದ್ಧ ಅವರು ಹೋರಾಟ ಮಾಡಬೇಕಾಗುತ್ತೆ. ಸಮಾನ ವೇತನಕ್ಕಾಗಿ ಮಹಿಳೆಯರು ಕಾಯಲು ಸಾಧ್ಯವಿಲ್ಲ. ಈ ಅಸಮಾನತೆ ಹೋಗಲಾಡಿಸಲು ಹೋರಾಟ ನಿರಂತರ''.

ಇದನ್ನು ಓದಿ: ದೂರದರ್ಶನ ಚಾನಲ್ ಈಗ ಮೊಬೈಲ್​​ನಲ್ಲಿ...!

4. ಪ್ರಿನ್ಸ್ ಹ್ಯಾರಿ

31ರ ಹರೆಯದ ಯುವರಾಜ. ಕೆಲ ದಿನಗಳ ಹಿಂದಷ್ಟೆ ನೇಪಾಳಕ್ಕೆ ತೆರಳಿದ್ದ ಪ್ರಿನ್ಸ್ ಹ್ಯಾರಿ ಎಲ್ಲೆಡೆ ಸುದ್ದಿಯಲ್ಲಿದ್ರು. ಮಾನವೀಯತೆಯ ಪ್ರಗತಿಗೆ ತೊಂದರೆಯುಂಟು ಮಾಡುವ ವಿಷಯಗಳ ಬಗ್ಗೆ ಮೊಟ್ಟ ಮೊದಲ ಬಾರಿಗೆ ಮಾತನಾಡಿದ್ರು. ``ಯುವತಿಯರು ಮತ್ತು ಅವರಿಗೆ ದಕ್ಕಬೇಕಾದ ಅವಕಾಶಗಳ ಮಧ್ಯೆ ಹಲವು ಅಡ್ಡಿಗಳಿವೆ. ಹುಡುಗರಿಗೆ ಸರಿಸಮನಾಗಿ ಹುಡುಗಿಯರಿಗೂ ಅವಕಾಶಗಳನ್ನು ಒದಗಿಸಲು ಅದೆಷ್ಟೋ ರಾಷ್ಟ್ರಗಳು ಹಾಗೂ ಸಂಸ್ಕøತಿಗಳು ವಿಫಲವಾಗಿವೆ. ಪ್ರತಿ ಕುಟುಂಬ ಹಾಗೂ ಸಮುದಾಯದ ಮನಸ್ಥಿತಿಯಲ್ಲಿ ಬದಲಾವಣೆ ತರದೇ ಇದ್ದಲ್ಲಿ ಯುವತಿಯರಿಗೆ ಅವಕಾಶ ದಕ್ಕಿಸಿಕೊಡಲು ಸಾಧ್ಯವಿಲ್ಲ. ಇದನ್ನು ಸಾಧಿಸಲು, ಹುಡುಗಿಯರ ಹಕ್ಕುಗಳ ಬಗ್ಗೆ ಮಾತನಾಡುವ ಮಹಿಳೆ ಸಾಕಾಗುವುದಿಲ್ಲ'' ಎಂದು ಹ್ಯಾರಿ ಅಭಿಪ್ರಾಯಪಟ್ಟಿದ್ದರು.

5. ನೆಲ್ಸನ್ ಮಂಡೇಲಾ

ವರ್ಣಭೇದ ಮತ್ತು ಸಾಮ್ರಾಜ್ಯಶಾಹಿ ನೀತಿ ವಿರುದ್ಧ ಸಮರ ಸಾರಿದವರು ನೆಲ್ಸನ್ ಮಂಡೇಲಾ. ಅವರು ಮಹಿಳಾ ಸಬಲೀಕರಣಕ್ಕಾಗಿ ಧ್ವನಿಯೆತ್ತಿದ ಚಾಂಪಿಯನ್ ಅನ್ನೋದು ಬಹುತೇಕರಿಗೆ ತಿಳಿದಿಲ್ಲ. 1994ರಲ್ಲಿ ಮೊದಲ ಬಾರಿ ಸಂಸತ್ ಕಾರ್ಯಾರಂಭ ಮಾಡಿದಾಗ ``ಮಹಿಳೆಯರು ದಬ್ಬಾಳಿಕೆಯ ಎಲ್ಲ ಸ್ವರೂಪಗಳಿಂದ ವಿಮುಕ್ತರಾಗದ ಹೊರತು ಸ್ವಾತಂತ್ರ್ಯ ದಕ್ಕಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಪ್ರಯತ್ನ ಮಹಿಳಾ ವಿಮೋಚನೆಯೆಡೆಗೆ ಇರಬೇಕು. ಮನುಷ್ಯದ ವಿಮೋಚನೆ ಮತ್ತು ಮಕ್ಕಳ ಸ್ವಾತಂತ್ರ್ಯ ಅದರಲ್ಲಿದೆ'' ಎಂದು ಘೋಷಣೆ ಮಾಡಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ವೀರ ಮಹಿಳೆಯರಿಗೆ ಈ ಮೂಲಕ ಗೌರವ ಸಮರ್ಪಿಸಿದ್ದರು. ಜನಾಂಗ, ಲಿಂಗ, ಲೈಂಗಿಕ, ಗರ್ಭಧಾರಣೆ, ವಿವಾಹ, ಜನಾಂಗೀಯತೆ ಅಥವಾ ಸಾಮಾಜಿಕ ಮೂಲ, ಬಣ್ಣ, ಲೈಂಗಿಕ ದೃಷ್ಟಿಕೋನ, ವಯಸ್ಸು, ಅಂಗವೈಕಲ್ಯ, ಧರ್ಮ, ಆತ್ಮಸಾಕ್ಷಿ, ನಂಬಿಕೆ, ಸಂಸ್ಕøತಿ, ಭಾಷೆ ಮತ್ತು ಜನ್ಮ ಹೀಗೆ ವಿವಿಧ ವಿಚಾರಗಳಲ್ಲಿ ಆಫ್ರಿಕಾದಲ್ಲಿ ಅಸಂವಿಧಾನಿಕ ತಾರತಮ್ಯವಿದೆ. ಆದ್ರೆ ಬಳಿಕ ಕ್ಯಾಬಿನೆಟ್‍ನಲ್ಲಿ ಶೇ.27ರಷ್ಟು ಮಹಿಳೆಯರಿಗೆ ಸ್ಥಾನ ನೀಡುವ ಮೂಲಕ ಆಫ್ರಿಕಾ ಇತಿಹಾಸ ಸೃಷ್ಟಿಸಿತ್ತು.

6. ದಲೈ ಲಾಮಾ

ನ್ಯಾಶನಲ್ ಸಿವಿಲ್ ರೈಟ್ಸ್ ಮ್ಯೂಸಿಯಂನಲ್ಲಿ 2009ರ ನವೆಂಬರ್‍ನಲ್ಲಿ ದಲೈ ಲಾಮಾ ಭಾಷಣ ಮಾಡಿದ್ರು. ``ನಾನು ನನ್ನನ್ನು ಸ್ತ್ರೀಸಮಾನತಾವಾದಿಯೆಂದು ಕರೆಯುತ್ತೇನೆ. ಇದು ಮಹಿಳಾ ಹಕ್ಕುಗಳಿಗಾಗಿ ಹೋರಾಡುವವರನ್ನು ಕರೆದಂತಲ್ಲವೇ? ಈ ಚಳವಳಿಯಲ್ಲಿ ಪುರುಷರು ತುರ್ತಾಗಿ ಕೈಜೋಡಿಸಬೇಕು ಎಂದಿದ್ದರು ದಲೈ ಲಾಮಾ. 2014ರ ಸಪ್ಟೆಂಬರ್‍ನಲ್ಲಿ ಎಮ್ಮಾ ವ್ಯಾಟ್ಸನ್ ಕೂಡ ಮಹಿಳಾ ಚಳವಳಿ ಮಾನವೀಯತೆಯ ಕಳಕಳಿ ಎಂದಿದ್ದರು. ಇದು ತಮ್ಮದೇ ಹೋರಾಟ ಎಂದು ಭಾವಿಸಿ ಪುರುಷರು ಉದಾಹರಣೆಗಳನ್ನು ಅನುಸರಿಸಿ ಔಪಚಾರಿಕ ಆಹ್ವಾನವನ್ನು ಸ್ವೀಕರಿಸಬೇಕು.

ಲೇಖಕರು: ಬಿಂಜಲ್ ಶಾ

ಅನುವಾದಕರು: ಭಾರತಿ ಭಟ್ 

ಇದನ್ನು ಓದಿ

1. ರಾಸಾಯನಿಕ ಐಟಂಗಳಿಗಿಂತ- ಹ್ಯಾಂಡ್‍ಮೇಡ್ ಐಟಂಗಳಿಗೆ ಭಾರೀ ಡಿಮ್ಯಾಂಡ್​​..!

2. ಆಟೋ ರಿಕ್ಷಾ ಜಾಹೀರಾತು ಸ್ಟಾರ್ಟ್ ಅಪ್ ನಲ್ಲಿ 1 ಕೋಟಿ ಮೊತ್ತದ ಬಂಡವಾಳ ಸೃಷ್ಠಿ.. !

3. ರೈಲು ಪ್ರಯಾಣಕ್ಕೆ ವೇಗ ನೀಡಿದ ಗತಿಮಾನ್..!

Add to
Shares
3
Comments
Share This
Add to
Shares
3
Comments
Share
Report an issue
Authors

Related Tags