ಆವೃತ್ತಿಗಳು
Kannada

ಎಲ್ಲರಿಗೂ ಮಾದರಿ, ಭಾರತದಲ್ಲಿರುವ ಮೆಕ್ಸಿಕೋ ರಾಯಭಾರಿ!

ಟೀಮ್​ ವೈ.ಎಸ್​. ಕನ್ನಡ

2nd Oct 2016
Add to
Shares
4
Comments
Share This
Add to
Shares
4
Comments
Share

ಒಂದು ದೇಶದ ರಾಯಭಾರಿಯಾಗಿ ಮತ್ತೊಂದು ದೇಶಕ್ಕೆ ಬರುವ ಹಿರಿಯ ಉನ್ನತಾಧಿಕಾರಿಗಳಿಗೆ ಸಾಮಾನ್ಯವಾಗಿ ಐಶಾರಾಮಿ ಕಾರು, ಅದಕ್ಕೆ ಡ್ರೈವರ್ ಹಾಗೂ ಅವಶ್ಯಕತೆಯಿದ್ದಲ್ಲಿ ಕೆಲ ಬಾಡಿಗಾರ್ಡ್​ಗಳನ್ನು ಸರ್ಕಾರದ ವತಿಯಿಂದಲೇ ನೀಡಲಾಗಿರುತ್ತದೆ. ಆದರೆ ಭಾರತದಲ್ಲಿರುವ ಮೆಕ್ಸಿಕೋ ದೇಶದ ರಾಯಭಾರಿ ಮೆಲ್ಬಾ ಪ್ರಿಯಾ ಅದಕ್ಕೆ ವಿರುದ್ಧ. ಯಾಕೆಂದರೆ ನವದೆಹಲಿಯಲ್ಲಿರುವ ಅವರು ತಮ್ಮ ರಾಯಭಾರ ಕಛೇರಿಗೆ ಓಡಾಡಲು ಕಾರನ್ನು ಬಳಸುವುದಿಲ್ಲ. ಬದಲಾಗಿ ಎಲ್ಲಿಗೆ ಓಡಾಡಬೇಕೆಂದರೂ ಅವರು ಆಟೋದಲ್ಲೇ ಪ್ರಯಾಣಿಸುತ್ತಾರೆ.

image


ಕಾರು ಹೋಯ್ತು, ಆಟೋ ಬಂತು

ಕೆಲ ವರ್ಷಗಳ ಹಿಂದಿನವರೆಗೂ ಮೆಕ್ಸಿಕೋ ಅತಿಯಾದ ವಾಯು ಮಾಲಿನ್ಯದಿಂದ ಬಳಲುತ್ತಿತ್ತು. ಆದರೆ ಸರ್ಕಾರ ವಾಹನಗಳ ಮೇಲೆ ನಿರ್ಬಂಧ ಹೇರಿತು. ಇದರಿಂದಾಗಿ ವಾಯು ಪ್ರದೂಷಣೆಗೆ ಕೊಂಚ ಮಟ್ಟಿಗೆ ಕಡಿವಾಣ ಬಿತ್ತು. ಈಗ ಭಾರತದ ರಾಜಧಾನಿ ನವದೆಹಲಿ ಕೂಡ ವಾಯುಮಾಲಿನ್ಯಕ್ಕೆ ತುತ್ತಾಗಿದೆ. ಸಿಎನ್‍ಜಿ ವಾಹನಗಳ ಬಳಕೆ, ಆಡ್ – ಈವನ್ (Odd-Even) ಎಕ್ಸ್​ಪೆರಿಮೆಂಟ್‍ಗಳು ನಡೆದರೂ ವಾಯುಮಾಲಿನ್ಯವನ್ನು ಹದ್ದುಬಸ್ತಿನಲ್ಲಿಡಲು ಸಾಧ್ಯವಾಗಿಲ್ಲ. ಹೀಗಾಗಿಯೇ ಮೆಕ್ಸಿಕೋ ರಾಯಭಾರಿ ಮೆಲ್ಬಾ ಪ್ರಿಯಾ ಒಂದು ಐಡಿಯಾ ಮಾಡಿದರು. ಅದೇ ಕಾರುಗಳ ಬದಲಾಗಿ ಆಟೋ ರಿಕ್ಷಾದಲ್ಲಿ ಓಡಾಡುವುದು. ಅವರ ಪ್ರಕಾರ ಸಿಎನ್‍ಜಿ ಬಳಸಿದ ಆಟೋ ರಿಕ್ಷಾಗಳಿಂದ ಹೆಚ್ಚು ವಾಯುಮಾಲಿನ್ಯ ಆಗುವುದಿಲ್ಲವಂತೆ.

image


ಹಾಗಂತ ದೇಶವೊಂದರ ರಾಯಭಾರಿಯೊಬ್ಬರು ಹೀಗೆ ಸರ್ಕಾರ ಒದಗಿಸುವ ಐಶಾರಾಮಿ ಕಾರನ್ನು ತ್ಯಜಿಸಿ, ಆಟೋ ಏರುವುದು ಕಷ್ಟ. ಯಾಕೆಂದರೆ ಅದಕ್ಕೆ ಸರ್ಕಾರದಿಂದ ಪರ್ಮಿಶನ್ ಪಡೆಯಬೇಕು. ಜತೆಗಿದು ಅವರ ರಕ್ಷಣೆಯ ವಿಷಯವೂ ಹೌದು. ಹೀಗಾಗಿಯೇ ಮೆಕ್ಸಿಕೋದ ಹಿರಿಯ ಅಧಿಕಾರಿಗಳು ಹಾಗೂ ಭಾರತದ ಅಧಿಕಾರಿಗಳಿಂದ ಮೆಲ್ಬಾ ಆಟೋ ಏರಲು ಗ್ರೀನ್ ಸಿಗ್ನಲ್‍ಗಾಗಿ ಹಲವು ದಿನಗಳ ಕಾಲ ಕಾಯಬೇಕಾಯ್ತು. ಆದರೂ ಅವರು ದೃಢ ನಿರ್ಧಾರ ಮಾಡಿದ್ದರು.

ಇದನ್ನು ಓದಿ: ಟೋಲ್​ಗಳಲ್ಲಿ ಇನ್ನುಮುಂದೆ ಪೇಟಿಎಂ ಹವಾ..!

ಆಟೋಗೆ ವಿಶೇಷ ನಂಬರ್, ಹಾಗೂ ರಾಷ್ಟ್ರಧ್ವಜ

ಹೌದು, ಒಮ್ಮೆ ಆಟೋವನ್ನೆ ಅಫಿಶಿಯಲ್ ವಾಹನವನ್ನಾಗಿ ಬಳಸಲು ಸಮ್ಮತಿ ಸಿಗುತ್ತಲೇ ಮೆಲ್ಬಾ ಪ್ರಿಯಾ ಅವರು ಹೊಸ ಆಟೋ ಖರೀದಿಸಿದರು. ಇದೇ ಫೆಬ್ರವರಿಯಲ್ಲಿ ದೆಹಲಿ ಸ್ಟ್ರೀಟ್ ಆರ್ಟ್ ಫೆಸ್ಟಿವಲ್‍ನಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದ ಮೆಕ್ಸಿಕೋ ಮೂಲದ ಕಲಾವಿದ ಸೆಂಕೋ ಅವರಿಂದ ಅದಕ್ಕೆ ಬಣ್ಣ ಬಳಸಿ, ಕ್ರಿಯಾತ್ಮಕವಾಗಿ ಅಲಂಕಾರ ಮಾಡಿಸಿದರು. ಜತೆಗೆ ಕೆಲವೇ ದಿನಗಳಲ್ಲಿ ರಾಯಭಾರ ಕಚೇರಿ ಅಧಿಕಾರಿಗಳ ಕಚೇರಿಗೆ ನೀಡಲಾಗುವ ವಿಶೇಷ ನಂಬರ್‍ನಂತೆ ಈ ಆಟೋಗೂ ನಂಬರ್ ದೊರೆಯಿತು. ಜತೆಗೆ ಭಾರತ ಹಾಗೂ ಮೆಕ್ಸಿಕೋ ದೇಶಗಳ ಫ್ಲ್ಯಾಗ್‍ಗಳನ್ನೂ ಹಾಕಲಾಯ್ತು. ಹೀಗೆ ಕಳೆದ 5 ತಿಂಗಳಿನಿಂದ ಮೆಲ್ಬಾ ಪ್ರಿಯಾ ರಾಯಭಾರ ಕಛೇರಿಯ ಸರ್ಕಾರಿ ಆಟೋದಲ್ಲೇ ಓಡಾಡುತ್ತಿದ್ದಾರೆ. ಅಂದ್ಹಾಗೆ ಈ ಆಟೋಗೆ ‘ಮೆಕ್ಸಿಕೋ – ಇಂಡಿಯಾ ಆಟೋರಿಕ್ಷಾ’ ಎಂದೂ ನಾಮಕರಣ ಮಾಡಲಾಗಿದೆ.

image


‘ಆಟೋಗೆ ಕಲರ್ ಡಿಸೈನ್ ಹಾಗೂ ಮಜವಾದ ವಿನ್ಯಾಸ ಮೊದಲು ನೋಡುತ್ತಲೇ ಎಲ್ಲರನ್ನು ಸೆಳೆಯುತ್ತದೆ. ಇದರಲ್ಲಿ ಮೆಕ್ಸಿಕೋ ದೇಶವನ್ನು ಕಾಣಬಹುದು. ಕೆಲವೊಮ್ಮೆ ಬೇರೆ ರಿಕ್ಷಾ ಚಾಲಕರು ನಮ್ಮ ಆಟೋ ನೋಡಿ ನಗುತ್ತಾರೆ’ ಮೆಲ್ಬಾ. ವಿಶೇಷ ಅಂದರೆ ರಾಯಭಾರ ಕಛೇರಿ ಸಿಬ್ಬಂದಿ ರಾಜೇಂದ್ರ ಕುಮಾರ್, ಮೆಕ್ಸಿಕೋ ರಾಯಭಾರಿ ಮೆಲ್ಬಾ ಪ್ರಿಯಾ ಅವರ ಈ ಆಟೋ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೆಲವೊಮ್ಮೆ ಆಟೋದಲ್ಲೆ ಕಚೇರಿ ಕೆಲಸವನ್ನು ಮಾಡುತ್ತಾರೆ. ಆದರೆ ಒಂದೇ ಸಮಸ್ಯೆ, ಅದು ಅವರ ಸೆಕ್ಯುರಿಟಿ. ಆ ಕುರಿತು ಮೆಲ್ಬಾ ತಲೆ ಕೆಡಿಸಿಕೊಳ್ಳುವುದಿಲ್ಲ. 

" ಭಾರತದಲ್ಲಿ ಲಕ್ಷಾಂತರ ಆಟೋಗಳಿವೆ, ಪ್ರತಿದಿನ ಕೋಟ್ಯಂತರ ಮಂದಿ ಆ ಆಟೋಗಳಲ್ಲಿ ಪ್ರಯಾಣಿಸುತ್ತಾರೆ. ಅವರಗಿಂತ ನಾನೇನೂ ಭಿನ್ನಳಲ್ಲ. ದೆಹಲಿ ಜನರಿಗು ಆಟೋಗಳಿಗೂ ಅವಿನಾಭಾವ ಸಂಬಂಧ. ಮಾಲಿನ್ಯದ ವಿಚಾರದಲ್ಲಿ ಕಾರುಗಳಿಗೆ ಹೋಲಿಸಿದರೆ, ಆಟೋರಿಕ್ಷಾಗಳೇ ಪರವಾಗಿಲ್ಲ" 
- ಮೆಲ್ಬಾ ಪ್ರಿಯಾ, ಮೆಕ್ಸಿಕೋ ರಾಯಭಾರಿ

ಸದನದಲ್ಲಿ ಆಟೋ ನಿರ್ಬಂಧ

ದೆಹಲಿಯಲ್ಲಿರುವ ಪಾರ್ಲಿಮೆಂಟ್, ಕೆಲ 5 ಸ್ಟಾರ್ ಹೋಟೆಲ್‍ಗಳು ಹಾಗೂ ಕೆಲ ಕಛೇರಿಗಳಿಗೆ ಆಟೋ ಎಂಟ್ರಿ ಇಲ್ಲ. ಹೀಗಾಗಿಯೇ ಗೇಟಿನ ಬಳಿಯೇ ಮೆಲ್ಬಾ ಪ್ರಿಯಾ ಅವರ ಈ ಮೆಕ್ಸಿಕೋ ರಾಯಭಾರ ಕಚೇರಿಯ ವಾಹನವಾದ ಆಟೋವನ್ನು ತಡೆಯುವ ಘಟನೆಯೂ ಹಲವು ಬಾರಿ ನಡೆದಿದೆಯಂತೆ. ಆದರೆ ಆ ಕುರಿತು ತಲೆ ಕೆಡಿಸಿಕೊಳ್ಳದ ಮೆಲ್ಬಾ, ಕೆಲವೊಮ್ಮೆ ಗೇಟಿನಿಂದ ಇಳಿದು ಕಛೇರಿಗೆ ನಡೆದುಕೊಂಡು ಹೋಗಿದ್ದಾರಂತೆ. ತಮ್ಮ ಅಧಿಕಾರನ್ನು ಸ್ಟೇಟಸ್‍ನಂತೆ ಬಳಸದೇ, ಖುದ್ದು ಸಮಸ್ಯೆ ಎದುರಿಸಿದರೂ ಪರಿಸರ ಸ್ನೇಹಿಯಾಗಿಯೇ ಮುಂದುವರಿದಿದ್ದಾರೆ ಮೆಲ್ಬಾ.

image


ಸೈಕಲ್ ಪ್ರೇಮಿ ಮೆಲ್ಬಾ

ಮೆಲ್ಬಾ ಪ್ರಿಯಾ ಸೈಕಲ್ ಪ್ರೇಮಿಯೂ ಹೌದು. ಯಾಕೆಂದರೆ ಅವರು ಪ್ರತಿದಿನ ಸೈಕ್ಲಿಂಗ್ ಮಾಡುತ್ತಾರೆ. ಅದರಿಂದ ಆರೋಗ್ಯಕ್ಕೂ ಒಳ್ಳೆಯದು ಹಾಗೂ ಮನೆ ಸಮೀಪವೇ ಓಡಾಡಲು ಕಾರು, ಆಟೋ ಬಳಸುವ ಪ್ರಮೇಯವೆ ಇರುವುದಿಲ್ಲ. ಇದರಿಂದ ನಮ್ಮಿಂದಾಗುವ ಪರಿಸರ ಮಾಲಿನ್ಯವನ್ನು ನಾವೇ ತಡೆಗಟ್ಟಬಹುದು ಎಂಬುದು ಅವರ ಅಭಿಪ್ರಾಯ. ಕೆಲವೊಮ್ಮೆ ಅವರು ದಿನವೊಂದಕ್ಕೆ ಬರೊಬ್ಬರಿ 50 ಕಿಲೋಮೀಟರ್ ಸೈಕಲ್ ತುಳಿದಿರುವುದೂ ಉಂಟಂತೆ. ಒಟ್ಟಿನಲ್ಲಿ ಮೆಲ್ಬಾಪ್ರಿಯಾ ದೇಶದ ಎಲ್ಲರಿಗೂ ಮಾದರಿ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಇದನ್ನು ಓದಿ:

1. ಆಲ್ಕೋಹಾಲ್​, ಸಿಗರೇಟ್​ನಿಂದ ಹುಟ್ಟಿದ ವ್ಯಥೆ- ರೋಚಕವಾಗಿದೆ "ಬುಕ್​ ಮೈ ಶೋ" ಕಥೆ..!

2. ಮನೆ ಕೆಲಸಗಳ ತಲೆನೋವಿಗೆ "ಐಡೋ" ರೋಬೋದ ಪರಿಹಾರ..!

3. ಸರಕು ಸಾಗಣಿಕೆಯ ಚಿಂತೆ ನಿಮಗೇಕೆ- ಪೋರ್ಟರ್​ ಆ್ಯಪ್​ನಲ್ಲಿ ಸಿಗುತ್ತೆ ಉತ್ತರ

Add to
Shares
4
Comments
Share This
Add to
Shares
4
Comments
Share
Report an issue
Authors

Related Tags