ಆವೃತ್ತಿಗಳು
Kannada

ಆಕಾಶದಲ್ಲಿ ಹಾರಾಡೋದಿಕ್ಕೊಂದು ಅವಕಾಶ !

ಅಗಸ್ತ್ಯ

AGASTYA
20th Dec 2015
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
image


ಇತ್ತೀಚಿನ ದಿನಗಳಲ್ಲಿ ಫೇಸ್‍ಬುಕ್‍ನಲ್ಲಿ ಲವ್ ಆಗುತ್ತೆ, ಎಸ್‍ಎಂಎಸ್, ವಾಟ್ಸ್​ಅಪ್‍ನಲ್ಲಿ ಪ್ರಪೋಸ್ ಮಾಡೋ ಪರಿಪಾಠ ಹೆಚ್ಚಾಗುತ್ತಿದೆ. ಇನ್ನು ಕೆಲವರು ಇನ್ನೋವೇಟಿವ್ ಆಗಿ ಪ್ರಪೋಸ್ ಮಾಡಿ ಪ್ರೇಮ ನಿವೇದನ ಮಾಡ್ತಾರೆ. ಆದರೆ, ನೀವೇನಾದರೂ ಇನ್ನೂ ಡಿಫರೆಂಟಾಗಿ ಪ್ರೇಮ ನಿವೇದನೆ ಮಾಡಬೇಕು ಅನ್ನೋ ಮನಸ್ಸಿದ್ದರೆ, ಅದಕ್ಕೊಂದು ಸೂಪರ್ ಅವಕಾಶವಿದೆ. ಅದು ಗಾಳಿಯಲ್ಲಿ ತೇಲಾಡ್ತಾ, ಆಕಾಶದಲ್ಲಿ ನಿಂತುಕೊಂಡು ನಿಮ್ಮ ಮನದನ್ನೆ ಅಥವಾ ಮನದನ್ನನಿಗೆ ಪ್ರಪೋಸ್ ಮಾಡಬಹುದು. ಒಂದು ವೇಳೆ ನೀವೇನಾದರೂ ಸಂಸಾರಸ್ಥರಾಗಿದ್ದರೆ ಮನೆಯವರೊಂದಿಗೆ ಆಕಾಶದಲ್ಲಿ ಹಾಗೆ ಒಂದು ಸುತ್ತು ಹಾಕಬಹುದು. ಆದರೆ, ಈ ಅವಕಾಶ ನೀಡುತ್ತಿರುವುದು ಏರೋ ಅಡ್ವೆಂಚರಸ್ ಸಂಸ್ಥೆ. ಆದರೆ ಅದಕ್ಕೆ ನೀವು ಹಣ ಕೊಡಬೇಕು ಅಷ್ಟೇ.

image


ಏರ್ ಬಲೂನ್‍ನಲ್ಲಿ ಹಾರಾಟ:

ಹಾಟ್ ಏರ್ ಬಲೂನ್ ಬಗ್ಗೆ ಕೇಳಿರ್ಬಹುದು. ಬಿಸಿಗಾಳಿ ಸಹಾಯದಿಂದ ಹಾರೋ ದೈತ್ಯ ಬೆಲೂನ್. ಇದರಲ್ಲಿ ಪೈಲೆಟ್ ಸಹಿತ ಮೂರು ಜನ ಕೂರಬಹುದು. ಮೊದ ಮೊದ್ಲಿಗೆ ಭಯ ಆದ್ರೂ, ಮೇಲೇರಿ ಹಾರುವಾಗ ಆಗುವ ಥ್ರಿಲ್ಲೇ ಬೇರೆ. ಗಾಳಿಯಲ್ಲಿ ಹಗುರಾಗಿ ತೇಲುವ ಹಂಗಿರತ್ತೆ ಅಂತಾರೆ ಇದ್ರಲ್ಲಿ ಪ್ರಯಾಣಿಸಿದವರು. ಬೆಂಗಳೂರಿನಲ್ಲಿ ಏರೋ ಅಡ್ವೆಂಚರಸ್ ಸಂಸ್ಥೆ ಏರ್ ಬಲೂನ್‍ನಲ್ಲಿ ಹಾರಾಡುವ ಅವಕಾಶ ನೀಡುತ್ತಿದ್ದಾರೆ. ರಿತು ಪಾಂಡೆ ಏರೋ ಅಡ್ವೆಂಚರಸ್ ಸಂಸ್ಥೆಯ ಹಾಟ್ ಏರ್ ಬಲೂನ್ ಹಾರಿಸೋ ಪೈಲೆಟ್. ಹೀಗೆ ಏರ್ ಬಲೂನ್ ಹಾರಿಸಲು ರಿತು ಲೈಸೆನ್ಸ್ ಪಡೆದಿದ್ದಾರೆ. ಹೀಗೆ ಲೈಸೆನ್ಸ್ ಪಡೆದಿರುವ ಏಷ್ಯಾದ ಏಕೈಕ ಪೈಲೆಟ್ ಈಕೆ. ಇಂಗ್ಲೆಂಡ್‍ನ ಸಿವಿಲ್ ಏವಿಯೇಷನ್‍ನಿಂದ ಈ ಲೈಸೆನ್ಸ್ ಪಡೆದಿರುವ ರಿತು, 14 ವರ್ಷಗಳಿಂದ ಬಿಸಿ ಗಾಳಿ ಬಲೂಸ್ ಚಲಾಯಿಸುತ್ತಿದ್ದಾರೆ.

1 ಗಂಟೆ ಆಕಾಶದಲ್ಲಿ ಹಾರಾಟ:

ಜಕ್ಕೂರು ಬಳಿಯ ಆರ್‍ಎಂವಿ ಎಕ್ಸ್​​ಟೆನ್ಶನ್‍ನಲ್ಲಿರುವ ಏರೋ ಅಡ್ವೆಂಚರ್ ಸಂಸ್ಥೆಯ ಕಚೇರಿಯಲ್ಲಿ ಭೇಟಿ ನೀಡಿ ಅಥವಾ 09342263017 ಸಂಖ್ಯೆಗೆ ಕರೆ ಮಾಡಿ ಮೊದಲು ಹಾಟ್ ಏರ್ ಬಲೂನ್‍ನಲ್ಲಿ ಹಾರಾಡಲು ನೋಂದಣಿ ಮಾಡಿಕೊಳ್ಳಬೇಕಿದೆ. ಆಕಾಶದಲ್ಲಿ ಹಾರಾಡುವ ಟ್ರಿಪ್‍ನ ಅವಧಿ 1 ಗಂಟೆಯದು. ಹಾಟ್ ಏರ್ ಬಲೂನ್ ರೈಡ್ ಮಾಡೋದು ಫ್ಲೈಟ್‍ನಲ್ಲಿ ಹೋಗುವ ಹಾಗೆ ಅಲ್ಲ. ಇಲ್ಲಿ ಗಾಳಿಯನ್ನ, ಮೋಡಗಳನ್ನ, ಕಾಲ ಕೆಳಗಿರೋ ವಿಶಾಲ ಜಗತ್ತನ್ನ ತೆರೆದ ಗಾಳಿಯಲ್ಲೇ ನೋಡಬಹುದು. ಆಗಸದಲ್ಲಿ ಬಲೂನ್‍ನೊಳಗೆ ನಿಂತು ತೇಲುತ್ತಿದ್ದರೆ ಒಂದು ಗಂಟೆ ಹೋಗುವುದೇ ಗೊತ್ತಾಗಲ್ಲ. ಬೆಂಗಳೂರಿನ ಹೊಸ ಹೊಸ ನೋಟಗಳು ದಕ್ಕುತ್ತಾ ಹೋಗುತ್ತವೆ. ಅಪರೂಪಕ್ಕೆ ಸಿಗೋ ಈ ಛಾನ್ಸ್​​ನಲ್ಲಿ ವೇಲೆಂಟೈನ್ ಡೇ ಸೆಲೆಬ್ರೇಟ್ ಮಾಡಿದ್ರೆ ಜೀವನವಿಡೀ ನೆನಪಲ್ಲಿರುತ್ತದೆ. ಇನ್ನು ಸಂಸಾರಸ್ಥರಾಗಿದ್ರೆ ಬಾಳ ಸಂಗಾತಿ ಜತೆ ಆಕಾಶದಲ್ಲಿ ಒಂದು ಸುತ್ತು ಹಾಕಿ ಬರಬಹುದು. ಜತೆಗೆ ನಿಮ್ಮ ಮಕ್ಕಳನ್ನು ಕೂಡ ಕರೆದುಕೊಂಡು ಹೋಗಬಹುದು.

image


ಹವಾಮಾನ ಸರಿ ಇದ್ರೆ ಮಾತ್ರ

ಆಕಾಶದಲ್ಲಿನ ಓಡಾಟವನ್ನು ಯಾವಾಗ ಬೇಕಾದರೂ ಮಾಡುವ ಹಾಗಿಲ್ಲ. ಅದಕ್ಕೆ ಆಕಾಶದಲ್ಲಿನ ಹವಾಮಾನ ಅತ್ಯಗತ್ಯ. ಮೋಡ ಹೆಚ್ಚಾಗಿದ್ದರೆ, ಮಳೆ ಸುರಿಯುತ್ತಿದ್ದರೆ ಬಿಸಿಗಾಳಿ ಏರ್ ಬಲೂನ್ ಆಕಾಶದಲ್ಲಿ ಹಾರಾಡುವುದಿಲ್ಲ. ಹೀಗಾಗಿ ಬೇಸಿಗೆ ಮತ್ತು ಚಳಿಗಾಲದಲ್ಲಿ ಈ ಬಲೂನ್ ಕೆಲಸ ಮಾಡುತ್ತದೆ. ಆ ಸಂದರ್ಭದಲ್ಲೇ ನೀವು ಹೋದರೆ ಒಳ್ಳೆಯದು. ಒಂದು ವೇಳೆ ಮೊದಲೇ ಹಾರಾಟದ ಸಮಯ ನಿಗದಿಯಾಗಿ ಇದ್ದಕ್ಕಿದ್ದಂತೆ ಹವಾಮಾನದಲ್ಲಿ ವ್ಯತ್ಯಾಸವಾದರೆ ಮಾತ್ರ ಹಾರಾಟ ನಿಲ್ಲಿಸಲಾಗುತ್ತದೆ.

image


ಆಕಾಶದಲ್ಲಿ ಹಾರಾಡೋಕೆ ಹಣ ನೀಡಬೇಕು

ಹೀಗೆ ಆಕಾಶದಲ್ಲಿ ಹಾರಿ ನೆನಪಿನ ಬುತ್ತಿಗೆ ಮತ್ತೊಂದು ಘಟನೆ ಸೇರಿಸಿಕೊಳ್ಳಲು ಶುಲ್ಕ ನಿಗದಿ ಮಾಡಲಾಗಿದೆ. ದೊಡ್ಡವರಿಗೆ 1,600 ರೂ. ಪಡೆದರೆ, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ 1,200 ರೂ.ಗಳ ಶುಲ್ಕ ನಿಗದಿ ಮಾಡಲಾಗಿದೆ. ಅಷ್ಟು ಹಣ ಕೊಟ್ಟು ನೀವು ಆಕಾಶದಲ್ಲಿ ಹಾರಾಡಬಹುದು. ಆದರೆ, ಈ ಶುಲ್ಕದಲ್ಲಿ ವ್ಯತ್ಯಾಸವಾಗಬಹುದು.

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags