ಆವೃತ್ತಿಗಳು
Kannada

ಒಂದೇ ಕ್ಲಿಕ್​ನಲ್ಲಿ ದೊಡ್ಡ ಮನೆಯ ದೊಡ್ಡ ಮಾಹಿತಿ..!

ಆರಾಭಿ ಭಟ್ಟಾಚಾರ್ಯ

12th May 2016
Add to
Shares
0
Comments
Share This
Add to
Shares
0
Comments
Share

ಕನ್ನಡ ಚಿತ್ರರಂಗ ಅಂದ ತಕ್ಷಣ ಸಾಕಷ್ಟು ವಿಚಾರಗಳು ಮತ್ತು ಸಾಧಕರ ಮುಖಗಳು ಒಮ್ಮೆಲೆ ಕಣ್ಣಮುಂದೆ ಬರುತ್ತದೆ. ಅಂತಹ ಮಹಾನ್ ವ್ಯಕ್ತಿಗಳಲ್ಲಿ ಮೊದಲಿಗೆ ನೆನಪಾಗೋದು ಡಾ.ರಾಜ್‍ಕುಮಾರ್ ಮತ್ತು ಅವ್ರ ಪ್ರೊಡಕ್ಷನ್ ಕಂಪನಿ. ಶ್ರೀ ವಜ್ರೇಶ್ವರಿ ಕಂಬೈನ್ಸ್ ಇಷ್ಟು ದಿನ ಸಿನಿಮಾ ಅಭಿಮಾನಿಗಳಿಗೆ ಮತ್ತು ಆಸಕ್ತರಿಗೆ ದೂರದ ಊರಿನಂತಿದ್ದ ವಜ್ರೇಶ್ವರಿಕಂಬೈನ್ಸ್​​ ಜನರ ಬೆರಳ ತುದಿಯಲ್ಲೇ ಸಿಗುವಂತಾಗಿದೆ. ಡಾ.ರಾಜ್‍ಕುಮಾರ್‍ ಅವ್ರ ಕಿರಿಯ ಮೊಮ್ಮಗ ಗುರು ರಾಘವೇಂದ್ರ ರಾಜ್‍ಕುಮಾರ್‍ ತಮ್ಮಅಜ್ಜಿಕಟ್ಟಿ ಬೆಳೆಸಿರೋ ಶ್ರೀ ವಜ್ರೇಶ್ವರಿಕಂಬೈನ್ಸ್ ಬಗ್ಗೆ ಜನರಿಗೆ ಸುಲಭವಾಗಿ ಮಾಹಿತಿ ನೀಡುವಂತಹ ಕೆಲಸವನ್ನ ಮಾಡಿದ್ದಾರೆ. ಶ್ರೀ ವಜ್ರೇಶ್ವರಿ ಅನ್ನೋ ವೆಬ್ ಸೈಟ್ ಲಾಂಚ್ ಮಾಡಿ ಜನರಿಗೆ ಡಾ.ರಾಜ್‍ಕುಮಾರ್‍ ಅವ್ರ ಸಂಸ್ಥೆ ಬಗ್ಗೆ ಮತ್ತಷ್ಟು ಮಾಹಿತಿ ಸಿಗುವಂತೆ ಮಾಡಿದ್ದಾರೆ.

image


ವೆಬ್​ಸೈಟ್​​ನಲ್ಲಿ ಏನಿದೆ..?

ಶ್ರೀ ವಜ್ರೇಶ್ವರಿ ವೆಬ್ ಸೈಟ್‍ ಓಪನ್ ಮಾಡಿದ ತಕ್ಷಣ ವಜ್ರೇಶ್ವರಿ ಕಂಬೈನ್ಸ್​​ನಡಿಯಲ್ಲಿ ಹೊರಹೊಮ್ಮಿರೋ ಚಿತ್ರಗಳ ಬಗ್ಗೆ ಸಂರ್ಪೂಣ ಮಾಹಿತಿ, ಹಿಟ್‍ ಆಗಿರೋ ಚಿತ್ರಗಳ ಪೋಸ್ಟರ್ ಮತ್ತು ವಿಡಿಯೋಗಳನ್ನ ಕಾಣಬಹುದು. ಈಗಾಗ್ಲೆ ಬಂದಿರೋ ಸಿನಿಮಾಗಳು ಮತ್ತು ವಜ್ರೇಶ್ವರಿ ಕಂಪನಿಯಿಂದ ಮುಂದಿನ ದಿನಗಳಲ್ಲಿ ಬರೋ ಚಿತ್ರಗಳ ಬಗೆಗಿನ ಮಾಹಿತಿ ಇಲ್ಲಿದೆ. ವಜ್ರೇಶ್ವರಿ ಕಂಪನಿ ಪ್ರಾರಂಭ ಹೇಗಾಯ್ತು ? ಆರಂಭದಲ್ಲಿ ಪಾರ್ವತಮ್ಮರಾಜ್‍ಕುಮಾರ್‍ ಕಂಪನಿಯನ್ನ ಇಷ್ಟು ಎತ್ತರಕ್ಕೆ ತರಲು ಎಷ್ಟೆಲ್ಲಾ ಕಷ್ಟ ಪಟ್ಟಿದ್ದಾರೆ..? ಸಾಧನೆಯ ಮಧ್ಯೆಯಲ್ಲಿ ಎದುರಾದ ತೊಡಕುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಇಲ್ಲಿ ಪಡೆಯಬಹುದಾಗಿದೆ. ಇದಾದ ನಂತ್ರ ದೊಡ್ಡ ಮನೆಯಲ್ಲಿರೋ ಐದು ರಾಜಕುಮಾರರ ಬಗ್ಗೆ ಮಾಹಿತಿ ಮತ್ತು ಅವರುಗಳು ಅಭಿನಯಿಸಿರೋ ಸಿನಿಮಾಗಳ ಬಗ್ಗೆ ಮಾಹಿತಿಯನ್ನೂ ಇಲ್ಲಿ ಪಡೆಯಬಹುದಾಗಿದೆ. ವಜ್ರೇಶ್ವರಿ ಕಂಬೈನ್ಸ್ ನಲ್ಲಿರೋ ಔಟ್‍ಡೋರ್‍ ಯೂನಿಟ್‍ ಅನ್ನ ಬಾಡಿಗೆ ಪಡೆಯಬೇಕು ಅನ್ನೋಉದ್ದೇಶ ನಿಮಗಿದ್ರೆ ಅದನ್ನೂಕೂಡ ಈ ವೆಬ್ ಸೈಟ್ ನಿಂದಲೇ ಬುಕ್ ಮಾಡಿಕೊಳ್ಳಬಹುದು..

ಇದನ್ನು ಓದಿ: ಗೋಧಿ ಬ್ಯಾಂಕ್​ನಿಂದ ಬದಲಾಯಿತು ಜೀವನದ ಕಥೆ...

ಹೊಸ ಪ್ರತಿಭೆಗಳಿಗೊಂದು ಸೂಪರ್ ವೇದಿಕೆ

ಚಿತ್ರರಂಗದಲ್ಲಿ ಸಾಧನೆ ಮಾಡ್ಬೇಕು..ನಿರ್ದೇಶಕರಾಗಿ ,ನಾಯಕ,ನಾಯಕಿಯಾಗಿ ಗುರುತಿಸಿಕೊಳ್ಳಬೇಕು ಅಂತ ಸಾಕಷ್ಟು ಜನರು ಕಾದಿರುತ್ತಾರೆ..ಅಂತಹವ್ರಿಗೆ ವಜ್ರೇಶ್ವರಿ ವೆಬ್​ಸೈಟ್ ವೇದಿಕೆಯಾಗಲಿದೆ. ನೀವು ಟಾಲೆಂಟೆಡ್‍ ಆಗಿದ್ರೆ ನಿಮ್ಮ ಕಂಪ್ಲೀಟ್ ವಿವರವನ್ನ ವಜ್ರೇಶ್ವರಿ ವೆಬ್ ನಲ್ಲಿಅಪ್ಡೇಟ್ ಮಾಡಿದ್ರೆ ಅದು ಡೈರೆಕ್ಟ್ ಆಗಿ ಗುರು ರಾಘವೇಂದ್ರ ರಾಜ್‍ಕುಮಾರ್‍ ಅವ್ರಿಗೆ ತಲುಪುತ್ತದೆ. ನಿಮ್ಮಟ್ಯಾಲೆಂಟ್‍ ಅವ್ರಿಗೆ ಇಷ್ಟವಾದ್ರೆ ನಿಮಗೊಂದು ಅವಕಾಶ ಪಕ್ಕಾ ಆಗುತ್ತದೆ.

image


ಸಾಮಾಜಿಕ ಒಳಿತಿಗಾಗಿ ವಜ್ರೇಶ್ವರಿ

ಇಷ್ಟೆ ಅಲ್ಲದೆ ಸಾಕಷ್ಟು ವರ್ಷಗಳಿಂದ ವಜ್ರೇಶ್ವರಿ ಕಂಬೈನ್ಸ್ ಹೆಸರಿನಲ್ಲಿ ಮತ್ತು ಡಾ. ರಾಜ್‍ಕುಮಾರ್‍ ಅವ್ರ ಹೆಸರಿನಲ್ಲಿ ನಡೆದುಕೊಂಡು ಬರ್ತಿರೋ ಸಮಾಜಕ್ಕೆಉಪಯೋಗವಾಗುವ ಕೆಲಸಗಳ ಬಗ್ಗೆಯೂ ಮಾಹಿತಿ ಇಲ್ಲಿದೆ. ಇನ್ನೂ ಸಾಕಷ್ಟು ಜನರಿಗೆ ಇಷ್ಟೆಲ್ಲಾ ಸಂಪಾದನೆ ಮಾಡಿರೋ ರಾಜ್ ಫ್ಯಾಮಿಲಿ ಜನರಿಗೇನು ಮಾಡಿದೆ ಅನ್ನೋ ಪ್ರಶ್ನೆಗೆ ಉತ್ತರವೂ ಈ ವೆಬ್ ನಲ್ಲೇ ಸಿಗಲಿದೆ. ಮೈಸೂರು ಮೂಲದ ಆರ್ಕೇನ್‍ ಅನ್ನೋ ಸಾಫ್ಟ್​​ವೇರ್ ಕಂಪನಿ ಈ ವೆಬ್‍ ಅನ್ನಡಿಸೈನ್ ಮಾಡಿದ್ದುಉತ್ತಮ ಮಾಹಿತಿಯಂತೆ ಒಳ್ಳೆಯ ಡಿಸೈನ್ ಮತ್ತು ಸುಂದರವಾಗಿ ಕಾಣೋ ಲೈಟ್‍ ಕಲರ್ಸ್‍ ಅನ್ನ ಇಲ್ಲಿ ಉಪಯೋಗಿಸಲಾಗಿದೆ. ಡಾ. ರಾಜ್‍ಕುಮಾರ್‍ ಅವ್ರಂತೆ ಸರಳವಾಗಿ ಕಾಣಿಸಿಕೊಳ್ಳೋ ಈ ವೆಬ್​ಸೈಟ್ ಸಿಂಪ್ಲೀ ಸೂಪರ್..!

ಇದನ್ನು ಓದಿ:

1. ಮಹಿಳಾ ಕ್ರಿಕೆಟ್ ನ ಮಿರಾಕಲ್ ಮಿಥಾಲಿ ರಾಜ್

2. ಓದಿದ್ದು ಒಂಭತ್ತನೇ ಕ್ಲಾಸ್..ಆಗಿದ್ದು ಎಂಜಿನಿಯರ್​​ಗಳಿಗೇ ಟೀಚರ್....

3. ವಿ"ಶ್ವಾಸ"ವೇ "ವಿಶ್ವಾಸ್"

Add to
Shares
0
Comments
Share This
Add to
Shares
0
Comments
Share
Report an issue
Authors

Related Tags