ಆವೃತ್ತಿಗಳು
Kannada

ಯಶಸ್ವಿ ಉದ್ಯಮಕ್ಕೆ ಸರಳ ಸೂತ್ರ : ಬ್ಯುಸಿನೆಸ್ ಇಟ್ಸ್ ಈಸಿ..!

ಟೀಮ್ ವೈ.ಎಸ್.

YourStory Kannada
8th Oct 2015
Add to
Shares
1
Comments
Share This
Add to
Shares
1
Comments
Share

ಉದ್ಯಮ ಅನ್ನೋದು ದೊಡ್ಡ ಸರೋವರವಿದ್ದಂತೆ. ಅದರಲ್ಲಿ ಈಜಿ ಜಯಿಸೋದು ಹೇಗೆ ಅನ್ನೋದನ್ನು ಎಲ್ಲರೂ ತಿಳಿದುಕೊಳ್ಳಲೇಬೇಕು. ಸ್ವಂತ ಉದ್ದಿಮೆಯ ಈ ಪಯಣ ಕಠಿಣವಾಗದೇ ಯಶಸ್ಸಿನ ಮೂಲವಾಗುವುದಕ್ಕೆ ಸರಳ ಸೂತ್ರಗಳಿವೆ. 

image


ಕರಾರು ಪತ್ರ ಅಂದರೇನು..?

ಬಂಡವಾಳದಿಂದ ಆರಂಭವಾಗುವ ನಿಮ್ಮ ಬ್ಯುಸಿನೆಸ್ ಜರ್ನಿ ಅಂತ್ಯವಾಗೋದು ಲಾಭ ಹಾಗೂ ಜನಪ್ರಿಯತೆಯಲ್ಲಿ. ಇದಕ್ಕೆ ಪೂರಕವಾಗಿ ಟರ್ಮ್ ಶೀಟ್‍ನಿಂದ ಹಿಡಿದು ಶೇರ್ ಹೋಲ್ಡಿಂಗ್ ಒಪ್ಪಂದದವರೆಗಿನ ಪಯಣವಂತೂ ನಿಶ್ಚಿತಾರ್ಥದಿಂದ ಮದುವೆವರೆಗಿನದ್ದಿದ್ದಂತೆ. ವ್ಯವಹಾರ ಒಪ್ಪಂದಕ್ಕೆ ಸಹಿ ಬೀಳುವ ಮುನ್ನ ಅಗ್ರಿಮೆಂಟ್‍ನ ಕರಾರು ಮತ್ತು ಷರತ್ತುಗಳಲ್ಲಿ ಹತ್ತಾರು ಬದಲಾವಣೆಗಳನ್ನು ಮಾಡಲಾಗುತ್ತದೆ. ಇಂಥ ಸಂದರ್ಭದಲ್ಲಿ ಹಣ ತೊಡಗಿಸಲು ಮುಂದಾಗಿರುವವರು ಗೊಂದಲಕ್ಕೆ ಬೀಳುವ ಸಾಧ್ಯತೆಗಳಿರುತ್ತವೆ. ಆಗ ಅವರ ನೆರವಿಗೆ ಬರುವುದೇ ಟರ್ಮ್ ಶೀಟ್ ಅರ್ಥಾತ್ ಕರಾರು ಪತ್ರ. ಟರ್ಮ್ ಶೀಟ್ ಅನ್ನೇ ಹೂಡಿಕೆದಾರರು ಅಂತಿಮವಾಗಿ ಪರಿಗಣಿಸುತ್ತಾರೆ. ಷರತ್ತು ಹಾಗೂ ಕರಾರುಗಳಲ್ಲಿನ ತಪ್ಪು ತಿಳುವಳಿಕೆಯಿಂದಲೇ ಅದೆಷ್ಟೋ ವ್ಯಾಪಾರ ಒಪ್ಪಂದಗಳು ಮುರಿದು ಬೀಳುತ್ತವೆ. ಆದರೆ ಕರಾರು ಪತ್ರದ ವಿವರ ಇದಕ್ಕೆಲ್ಲ ಫುಲ್ ಸ್ಟಾಪ್ ಹಾಕಲಿದೆ.

ಶೇರ್ ಹೋಲ್ಡಿಂಗ್ ಅಗ್ರಿಮೆಂಟ್..

ಟರ್ಮ್ ಶೀಟ್ ಹಾಗೂ ಶೇರ್ ಹೋಲ್ಡಿಂಗ್ ಅಗ್ರಿಮೆಂಟ್ ಇವೆರಡೂ ವಿಭಿನ್ನ ದಾಖಲೆಗಳು. ಟರ್ಮ್ ಶೀಟ್ ಯಾವುದೇ ರೀತಿಯ ಕಟ್ಟುಪಾಡುಗಳಿಲ್ಲದ ಒಪ್ಪಂದ. ಬಂಡವಾಳ ಹೂಡಿಕೆ ಮಾಡಲು ಅಗತ್ಯವಾಗಿರುವ ಪ್ರಾಥಮಿಕ ಕರಾರು ಮತ್ತು ಷರತ್ತುಗಳನ್ನು ಟರ್ಮ್ ಶೀಟ್ ಒಳಗೊಂಡಿರುತ್ತದೆ. ಒಪ್ಪಂದಕ್ಕಾಗಿ ನಡೆಯುವ ವಿಚಾರ ವಿನಿಮಯಕ್ಕಾಗಿ ವಿಸ್ತ್ರತ ಕಾನೂನು ದಾಖಲೆಗಳನ್ನು ಒದಗಿಸುವ ಮೂಲ ಈ ಟರ್ಮ್ ಶೀಟ್. ಕೆಲ ಷರತ್ತುಗಳೊಂದಿಗೆ ಬಂಡವಾಳ ಹೂಡಲು ನೀಡುವ ಪ್ರಸ್ತಾಪವಿದ್ದಂತೆ. ಷೇರ್ ಹೋಲ್ಡಿಂಗ್ ಅಗ್ರಿಮೆಂಟ್ ಅಂತಿಮ ದಾಖಲೆ. ಈ ದಾಖಲೆಯೇ ನಿರ್ಣಯಾತ್ಮಕವಾಗಿರುತ್ತದೆ. ಸಂಸ್ಥೆಯ ಷೇರುದಾರರ ನಡುವಣ ಲಿಖಿತ ಒಪ್ಪಂದ ಇದು. ಕಂಪನಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬ ವಿವರ ಷೇರ್ ಹೋಲ್ಡಿಂಗ್ ಒಪ್ಪಂದದಲ್ಲಿರುತ್ತದೆ. ಷೇರುದಾರರ ಹಕ್ಕುಗಳು ಮತ್ತು ಕರಾರುಗಳನ್ನು ಈ ಒಪ್ಪಂದ ಸ್ಪಷ್ಟಪಡಿಸುತ್ತದೆ. ಟರ್ಮ್ ಶೀಟ್‍ನಲ್ಲಿರುವ ವಿವರಗಳನ್ನು ಷೇರ್ ಹೋಲ್ಡಿಂಗ್ ಅಗ್ರಿಮೆಂಟ್ ಪ್ರಮಾಣೀಕರಿಸುತ್ತದೆ. ಒಮ್ಮೊಮ್ಮೆ ಇವೆರಡರ ಮಧ್ಯೆ ಭಿನ್ನತೆ ಕೂಡ ಇರುತ್ತದೆ.

ಹೂಡಿಕೆದಾರರ ಜೊತೆ ಮಾತುಕತೆ

ಒಪ್ಪಂದಕ್ಕೆ ಸಹಿ ಹಾಕುತ್ತಿದ್ದಂತೆ ಹೂಡಿಕೆದಾರರು ಕಾರ್ಯಾರಂಭ ಮಾಡುತ್ತಾರೆ. ಹೂಡಿಕೆದಾರರೊಂದಿಗಿನ ವಿಚಾರ ವಿನಿಮಯ ನಿಜಕ್ಕೂ ಅಗ್ನಿಪರೀಕ್ಷೆಯಿದ್ದಂತೆ. ಒಮ್ಮೊಮ್ಮೆ ವಾಸ್ತವಕ್ಕೂ, ಚರ್ಚೆ ನಡೆಸಿದ್ದಕ್ಕೂ ಅಜಗಜಾಂತರ ವ್ಯತ್ಯಾಸ ಬರುವ ಸಾಧ್ಯತೆಯಿರುತ್ತದೆ. ಅಂತಹ ಸಂದರ್ಭಗಳಲ್ಲೆಲ್ಲ ಅಂತಿಮ ಒಪ್ಪಂದದಲ್ಲಿ ಬದಲಾವಣೆ ಮಾಡುವುದು ಅನಿವಾರ್ಯ. ವಿಶೇಷ ಅಂದರೆ ಈ ಎಲ್ಲ ಪ್ರಕ್ರಿಯೆಯನ್ನು ಆಳುತ್ತಿರುವವರು, ನಡೆಸುತ್ತಿರುವವರು ಹಣಕಾಸು ವ್ಯವಹಾರದ ಗಂಧಗಾಳಿಯೇ ಇಲ್ಲದವರು. ಒಮ್ಮೊಮ್ಮೆ ಸಂಸ್ಥೆ ತೆಗೆದುಕೊಳ್ಳಬೇಕಾದ ಕಾನೂನು ಕ್ರಮಗಳ ಬಗ್ಗೆಯೂ ಅವರಿಗೆ ಅರಿವಿರುವುದಿಲ್ಲ.

ಕರಾರು ಪತ್ರದ ಸಾಧಕ, ಬಾಧಕ ಮತ್ತು ಅಗತ್ಯತೆಗಳನ್ನು ನೋಡೋದಾದ್ರೆ, ಕಾರ್ಯದರ್ಶೀಯ ವ್ಯವಹಾರ ಪದ್ಧತಿ ಇರುವುದಿಲ್ಲ. ಶಾಸನಬದ್ಧ ರಿಜಿಸ್ಟರ್ಸ್ ಮತ್ತು ಅಜೆಂಡಾಗಳು ಸರಿಯಾಗಿ, ಸಕಾಲಿಕ ವಿಧಾನದಲ್ಲಿ ದಾಖಲಾಗಿರುವುದಿಲ್ಲ. ಬೌದ್ಧಿಕ ಆಸ್ತಿಯ ಒಡೆತನ ಕಂಪನಿಯ ಜೊತೆಗಿರುವುದಿಲ್ಲ. ನಿಗದಿತ ಪರವಾನಗಿಗಳನ್ನು ಪಡೆದಿರುವುದಿಲ್ಲ. ಷೇರುದಾರರು ಅಥವಾ ನಿರ್ದೇಶಕರ ನಡುವಿನ ಆಂತರಿಕ ಒಪ್ಪಂದದ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಸರ್ಕಾರಿ ಕಡತಗಳನ್ನು ದಾಖಲಿಸುವ ಸಂದರ್ಭದಲ್ಲಿ ಹೆಚ್ಚುವರಿ ಶುಲ್ಕ ಮತ್ತು ದಂಡವನ್ನು ವಿಧಿಸಲಾಗಿರುತ್ತದೆ. ವಾರ್ಷಿಕ ತೆರಿಗೆ ಮತ್ತು ಆರ್‍ಓಸಿ ಪಾವತಿಸಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಟರ್ಮ್ ಶೀಟ್ ನರೆವಿಗೆ ಬರುತ್ತದೆ. ಹೂಡಿಕೆದಾರರು ಇವನ್ನೆಲ್ಲ ಗಮನದಲ್ಲಿಟ್ಟುಕೊಳ್ಳಲೇಬೇಕು.

ವಿಶೇಷವಾಗಿ ಉದ್ದಿಮೆ ಬಂಡವಾಳದಾರರಿಂದ ಹಣ ಪಡೆಯುವುದು ಒಂದು ರೀತಿಯ ಚೌಕಾಸಿ ಕಸರತ್ತು. ಬಹುತೇಕ ಹೂಡಿಕೆದಾರರು ಕರಾರು ಪತ್ರವನ್ನು ಒಂದು ಸಿನಿಮಾದ ಟ್ರೇಲರ್ ಎಂಬಂತೆ ನೋಡುತ್ತಾರೆ. ಅವರ ಪಾಲಿಗೆ ಇದು ಕೇವಲ ಒಂದು ದಾಖಲೆಯಷ್ಟೆ. ಷೇರು ಒಪ್ಪಂದ ಅಂತಿಮ ದಾಖಲೆಯಾಗಿರುವುದರಿಂದ ಅದರೆಡೆಗೆ ಹೆಚ್ಚು ಗಮನ ಹರಿಸುತ್ತಾರೆ. ಅಂತಿಮ ಒಪ್ಪಂದಕ್ಕೆ ಬಂದು ತಲುಪುವಷ್ಟರಲ್ಲಿ ಅಧಿಕ ಸಮಯ ಹಿಡಿಯುವುದರ ಜೊತೆಗೆ ಭಾರೀ ವೆಚ್ಚವಾಗುವ ಸಾಧ್ಯತೆ ಇರುತ್ತದೆ. ಆ ಸಂದರ್ಭಗಳಲ್ಲಿ ಹೂಡಿಕೆದಾರರು ಒಪ್ಪಂದವನ್ನು ತಿರಸ್ಕರಿಸಬಹುದು. ಇದಕ್ಕೆ ಪರಿಹಾರ ಎಂದರೆ ಹೂಡಿಕೆದಾರರ ಹಿನ್ನೆಲೆಯನ್ನು ಸರಿಯಾಗಿ ವಿಚಾರಿಸಿಕೊಳ್ಳಬೇಕು. ಜೊತೆಗೆ ಹೂಡಿಕೆಗೆ ಸರಿಯಾದ ಸಮಯ ಸಂದರ್ಭವನ್ನು ಆಯ್ಕೆ ಮಾಡಿಕೊಳ್ಳಬೇಕು. ಅಕಾಲಿಕ ಹೂಡಿಕೆ ಮಾಡಿದಾಗ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಹೂಡಿಕೆಗೆ ಕಾಲಮಾನ ನಿರ್ಣಯ ಬಹುಮುಖ್ಯ. ಷೇರು ಒಪ್ಪಂದ ಅನ್ನೋದು ಹೂಡಿಕೆದಾರರು ಮತ್ತು ಉದ್ಯಮಿಗಳ ನಡುವಣ ಸಂಬಂಧಕ್ಕೆ ಅಡಿಪಾಯವಿದ್ದಂತೆ. ಹಾಗಾಗಿ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಎಚ್ಚರಿಕೆ ವಹಿಸಬೇಕು.

Add to
Shares
1
Comments
Share This
Add to
Shares
1
Comments
Share
Report an issue
Authors

Related Tags