ಆವೃತ್ತಿಗಳು
Kannada

ಕರ್ನಾಟಕದ ಚಿತ್ರಣ ಬದಲಾಯಿಸಲಿವೆ ವಿನೂತನ ಯೋಜನೆಗಳು - ಇದು ದೇಶಕ್ಕೆ ಮಾದರಿ

ಟೀಮ್​ ವೈ.ಎಸ್​.ಕನ್ನಡ

3rd Feb 2016
Add to
Shares
0
Comments
Share This
Add to
Shares
0
Comments
Share

ನಮ್ಮ ರಾಜ್ಯ ಕರ್ನಾಟಕ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ದೇಶದಲ್ಲೇ ಹೆಸರುವಾಸಿಯಾಗಿದೆ. ಅದರಲ್ಲೂ ಮಾಹಿತಿ ತಂತ್ರಜ್ಞಾನ ಅಂದರೆ ಅದು ಪ್ರತಿಷ್ಠಿತ ಇಲಾಖೆ. ಇಡೀ ದೇಶದ ಗಮನ, ಈ ಕ್ಷೇತ್ರದ ಮೇಲೆ ನೆಟ್ಟಿರುತ್ತದೆ. ಪ್ರಸಕ್ತ ರಾಜ್ಯ ಸರ್ಕಾರದ ಮಾಹಿತಿ- ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಯಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ ಐಎಎಸ್ ಅಧಿಕಾರಿ ಮಂಜುಳಾ. 1987ನೇ ಸಾಲಿನ ಐಎಎಸ್ ಅಧಿಕಾರಿಯಾಗಿರುವ ಮಂಜುಳಾ ಈಗಾಗಲೇ ತಮ್ಮ ಛಾಪನ್ನು ಮೂಡಿಸಿದ್ದಾರೆ.

image


ಮಂಜುಳಾ ಅವರ ಕಿರು ಪರಿಚಯ

1987ನೇ ಸಾಲಿನ ಐಎಎಸ್ ಅಧಿಕಾರಿಯಾಗಿರುವ ಮಂಜುಳಾ ರಾಜ್ಯ ಸರ್ಕಾರದ ಮಹತ್ವಪೂರ್ಣ ಇಲಾಖೆಯನ್ನು ನಿರ್ವಹಿಸುತ್ತಿದ್ದಾರೆ. ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ ಪ್ರತಿಯೊಂದು ಬೆಳವಣಿಗೆಗೆ ಅವರು ವಿಶೇಷ ಗಮನ ಹರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಕಟಿಸಿದ ಹೊಸ ತಲೆಮಾರಿನ ವಿನೂತನ ಯೋಜನೆ ನೀತಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಯುವರ್ ಸ್ಟೋರಿ ಜೊತೆ ಮನ ಬಿಚ್ಚಿ ಮಾತನಾಡಿದ ಮಂಜುಳಾ ತಮ್ಮ ಕನಸುಗಳನ್ನು ಹಂಚಿಕೊಂಡಿದ್ದಾರೆ. ಮುಂದಿನ ಯೋಜನೆಗಳನ್ನು ಅನಾವರಣಗೊಳಿಸಿದ್ದಾರೆ. ಹೊಸ ತಲೆಮಾರಿನ ಯೋಜನೆಗಳು ಯಶಸ್ವಿಯಾಗಬೇಕಿದ್ದರೆ ಅದಕ್ಕೆ ಮಾರ್ಗದರ್ಶಕರ ಅಗತ್ಯ ಇದೆ. ಅದೇ ರೀತಿ ಅಗತ್ಯವಿರುವ ವಾತಾವರಣ ನಿರ್ಮಿಸಬೇಕಿದೆ. ಇದು ಮಂಜುಳಾ ಅವರ ಸ್ಪಷ್ಟ ಮಾತು.

ಪ್ರಶ್ನೆ- ಕರ್ನಾಟಕ ಹೊಸ ತಲೆಮಾರಿನ ನವೋದ್ಯಮದಲ್ಲಿ ಹಿಂದಿನಿಂದಲೂ ಮುಂಚೂಣಿಯಲ್ಲಿದೆ. ಹೊಸ ನೀತಿಯನ್ನು ಮತ್ತೆ ಸಿದ್ಧಪಡಿಸಬೇಕಾದ ಅಗತ್ಯ ಇದೆಯಾ..?

ಹೌದು, ಖಂಡಿತವಾಗಿಯೂ ಕರ್ನಾಟಕ ನವೋದ್ಯಮದಲ್ಲಿ ಮುಂಚೂಣಿಯಲ್ಲಿದೆ. ಇದೇ ಸಂದರ್ಭದಲ್ಲಿ ಪ್ರಸಕ್ತ ಪರಿಸ್ಥಿತಿಯನ್ನು ಅವಲೋಕಿಸಬೇಕಿದೆ. 1998ರ ಬಳಿಕ ಪರಿಸ್ಥಿತಿಯಲ್ಲಿ ಹಲವು ಬದಲಾವಣೆಯಾಗಿದೆ. ಬೆಂಗಳೂರಿನಲ್ಲಿ ಮಾತ್ರ 2000ಕ್ಕಿಂತ ಹೆಚ್ಚು ನವೋದ್ಯಮಗಳಿವೆ. ಪ್ರತಿ ದಿನ ಹೊಸ ಹೊಸ ನವೋದ್ಯಮಗಳು ತಲೆ ಎತ್ತುತ್ತಿವೆ. ವೈವಿಧ್ಯಮಯ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿವೆ. ಜೊತೆಗೆ ಸ್ಪರ್ಧೆ ಕೂಡ ಹೆಚ್ಚಾಗಿದೆ. ತಂತ್ರಜ್ಞಾನ ಆವಿಷ್ಕಾರ ಬೆಳೆಸಬೇಕು. ಇದು ನವೋದ್ಯಮದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಪ್ರಶ್ನೆ- ಪ್ರಸಕ್ತ ಇರುವ ಶಿಕ್ಷಣ ವ್ಯವಸ್ಥೆ ನವೋದ್ಯಮದ ಸವಾಲು ಎದುರಿಸಲು ಸೂಕ್ತವಾಗಿದೆಯೇ..?

ನಮ್ಮ ಶಿಕ್ಷಣ ವ್ಯವಸ್ಥೆ ಉದ್ಯಮ ಶೀಲತೆಯನ್ನು ಪ್ರೋತ್ಸಾಹಿಸಬೇಕಾಗಿದೆ. ರಾಜ್ಯದ 9 ಕಾಲೇಜುಗಳು ಈಗಾಗಲೇ ಇದಕ್ಕೆ ಬೆಂಬಲ ಸೂಚಿಸಿವೆ. ಜಿಲ್ಲಾ ಮಟ್ಟದಲ್ಲಿ ಈ ಕಾರ್ಯಕ್ರಮವನ್ನು ವಿಸ್ತರಿಸುವ ಚಿಂತನೆ ನಡೆಸಲಾಗಿದೆ. ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ನಮ್ಮ ಶಿಕ್ಷಣ ವ್ಯವಸ್ಥೆ ಕೆಲಸದ ಸೃಷ್ಟಿಕರ್ತರನ್ನು ಸಿದ್ಧಪಡಿಸುತ್ತಿದೆ. ಪ್ರತಿಭಾವಂತರು ಐಟಿ ವಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿರುವುದರಲ್ಲಿ ಅಚ್ಚರಿ ಕೂಡ ಇಲ್ಲ.

ಪ್ರಶ್ನೆ- ಈ ಹೊಸ ನೀತಿ ಯಾವ ಗುರಿ ಹೊಂದಿದೆ..?

ಹೊಸ ನೀತಿ, ಬೆಳವಣಿಗೆಗೆ ಪೂರಕವಾದ ವ್ಯವಸ್ಥೆ ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಅಂತರ್ಗತ ನೆಟ್ ವರ್ಕ್ ಪರಿಕಲ್ಪನೆ ಬಯಸಿದ್ದೇವೆ. ಸಂಶೋಧನಾ ಕ್ಷೇತ್ರಕ್ಕೆ ಪ್ರೋತ್ಸಾಹ. ಈ ಮೂಲಕ ಸಾಮಾಜಿಕ ಪರಿಣಾಮಕ್ಕೆ ಅವಕಾಶ ಮಾಡಿಕೊಡಲು ಆಲೋಚನೆಗಳ ವಾಣಿಜ್ಯೀಕರಣದ ಗುರಿ ಹೊಂದಿದ್ದೇವೆ.

ಪ್ರಶ್ನೆ- ಹೊಸ ನೀತಿಯನ್ನು ಹೇಗೆ ಜಾರಿಗೊಳಿಸುತ್ತೀರಿ..?

ಮುಖ್ಯಮಂತ್ರಿ ಮತ್ತು ಇತರ ಹಿರಿಯ ಸಚಿವರ ನೇತೃತ್ವದಲ್ಲಿ ನವೋದ್ಯಮ ಮಂಡಳಿ ರಚಿಸಲಾಗುವುದು. ಪರಿಣಿತರ ಸೇವೆ ಕೂಡ ಬಳಸಿಕೊಳ್ಳಲಾಗುವುದು. ಹತ್ತು ಮಂದಿ ಸದಸ್ಯರ ಪರಿಣಿತಿ ತಂಡ ಇದರ ಭಾಗವಾಗಲಿದೆ. ಅನಿಮೇಶನ್, ಕೃಷಿ- ಬಯೋ ತಂತ್ರಜ್ಞಾನ. ಆರೋಗ್ಯ ಮತ್ತು ಉತ್ಪಾದನಾ ವಲಯಕ್ಕೆ ಆದ್ಯತೆ ನೀಡಲಾಗುವುದು. ಸಮಿತಿ ಸಭೆ ಸೇರಿ, ನೀತಿ ನಿರೂಪಣೆ ಹಾಗೂ ಅನುಷ್ಠಾನದಲ್ಲಿನ ಪ್ರಗತಿ ಪರಾಮರ್ಶೆ ನಡೆಸಲಿದೆ.

ಪ್ರಶ್ನೆ- ಹೊಸ ನೀತಿಯಲ್ಲಿ ನವೋದ್ಯಮದ ಬೆಳವಣಿಗೆಗೆ ಪೂರಕವಾಗಿರುವ ಹಲವು ಅಂಶಗಳಿವೆ. ಅದರಲ್ಲಿ ನಿಮ್ಮ ಅಚ್ಚುಮೆಚ್ಚಿನ ವಿಷಯ ಯಾವುದು..?

‘ಇನ್ ಕ್ಯೂಬೇಷನ್ ನೆಟ್ ವರ್ಕ್’ ನನ್ನ ಅತ್ಯಂತ ಪ್ರೀತಿಯ ವಿಷಯ. ಇದು ನಿಜವಾಗಿಯೂ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಲಿದೆ. ಇಡೀ ರಾಜ್ಯದಲ್ಲಿ ಈ ನೆಟ್ ವರ್ಕ್ ವಿಸ್ತರಿಸುವ ಮಹದಾಸೆ ಹೊಂದಿದ್ದೇನೆ. ಈ ನಿಟ್ಟಿನಲ್ಲಿ ಕಾರ್ಯತಂತ್ರ ಸಿದ್ದಪಡಿಸಿದ್ದೇನೆ. ನವೋದ್ಯಮ ಕ್ಷೇತ್ರದಲ್ಲಿ ರಾಜ್ಯದ ಭವಿಷ್ಯ ಉಜ್ವಲವಾಗಿದೆ.

Add to
Shares
0
Comments
Share This
Add to
Shares
0
Comments
Share
Report an issue
Authors

Related Tags