ಆವೃತ್ತಿಗಳು
Kannada

ತಮಿಳುನಾಡಿನ ಈ ಗ್ರಾಮ ವಿದ್ಯುತ್ ಸಂಪರ್ಕದಿಂದ ಬದಲಾಗಲಿದೆ..!

ಟೀಮ್​ ವೈ.ಎಸ್​. ಕನ್ನಡ

YourStory Kannada
2nd Jul 2017
Add to
Shares
2
Comments
Share This
Add to
Shares
2
Comments
Share

ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿವೆ. ಆದ್ರೆ ನಮ್ಮ ದೇಶದಲ್ಲಿ ಶೇಕಡಾ 100ರಷ್ಟು ವಿದ್ಯುತ್ ಸಂಪರ್ಕ ಸಾಧ್ಯವಾಗಿಲ್ಲ. ಕೆಲವು ರಾಜ್ಯಗಳು ಶೇಕಡಾ 100 ರಷ್ಟು ವಿದ್ಯುತ್ ಸಂಪರ್ಕ ಸಾಧ್ಯವಾಗಿದೆ ಅಂತ ಘೋಷಿಸಿಕೊಂಡರೂ ಅದನ್ನು ನಂಬಲು ಸಾಧ್ಯವಿಲ್ಲ. ಹಲವು ಜನರು ಇವತ್ತಿಗೂ ವಿದ್ಯುತ್ ನಿಂದ ವಂಚಿತರಾಗಿದ್ದಾರೆ ಅನ್ನುವುದು ಕಟುಸತ್ಯ. ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಸೆಂಬುಕರೈ ಇದಕ್ಕೊಂದು ಉತ್ತಮ ಉದಾಹರಣೆ. ಇತ್ತೀಚೆಗೆ ಹಲವು ಕಸರತ್ತುಗಳನ್ನು ನಡೆಸಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದೆ.

image


ಕಳೆದ ಕೆಲ ವರ್ಷಗಳ ಹಿಂದೆ ಎನ್ ಜಿಒ ಒಂದು, ಈ ಗ್ರಾಮದ ಕೆಲವು ಮನೆಗಳಿಗೆ ಕೆಲವು ಗಂಟೆಗಳ ವಿದ್ಯುತ್ ಒದಗಿಸುವ ಕೆಲಸ ಮಾಡಿತ್ತು. ಇದನ್ನು ಬಿಟ್ಟರೆ ಈ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಸಾಧ್ಯವಾಗಿಲ್ಲ.

“ ಇವತ್ತಿನ ತನಕ ಈ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಸಾಧ್ಯವಾಗಿಲ್ಲ. ಕರುಣಾನಿಧಿ ಟಿವಿ ಸೆಟ್ ಗಳನ್ನು ಕೊಟ್ಟರೂ ಅದನ್ನು ವಿದ್ಯುತ್ ಮೂಲಕ ನೋಡುವ ಸೌಭಾಗ್ಯ ನಮಗಿಲ್ಲ. ಟಿವಿ ನೋಡಲು ನಾನು 3000 ರೂಪಾಯಿಗಳನ್ನು ಖರ್ಚು ಮಾಡಿ ಬ್ಯಾಟರಿಗಳನ್ನು ಖರೀದಿ ಮಾಡಿದ್ದೇನೆ. ಜಯಲಲಿತಾ ಸರಕಾರ ಕೊಟ್ಟಿದ್ದ ಮಿಕ್ಸರ್ ಗ್ರೈಂಡರ್ ಗಳು ನಮ್ಮ ಬಳಿ ಉಪಯೋಗವಿಲ್ಲದೆ ಬಿದ್ದಿವೆ. ”
- ಪಳನಿಸ್ವಾಮಿ, ಗ್ರಾಮಸ್ಥರು

ಅಚ್ಚರಿ ಅಂದರೆ ಡಿಎಂಕೆ ಮತ್ತು ಎಐಡಿಎಂಕೆ ಸರಕಾರಗಳು ಇಲ್ಲಿನ ಕುಟುಂಬಗಳಿಗೆ ಮಿಕ್ಸರ್ ಗ್ರೈಂಡರ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ನೀಡಿದ್ದವು. ಆದರೆ ವಿದ್ಯುತ್ ಸಂಪರ್ಕವನ್ನು ಮಾತ್ರ ನೀಡಿರಲಿಲ್ಲ. ಹೀಗಾಗಿ ಈ ವಸ್ತುಗಳು ಉಪಯೋಗವಿಲ್ಲದಂತಾಗಿವೆ.

ಇದನ್ನು ಓದಿ: ಮಳೆಯಲಿ ಹೊಸ ಪರಿಚಿತರ ಜೊತೆಯಲ್ಲಿ..! 

1952ರಲ್ಲಿ ತಮಿಳುನಾಡಿನಲ್ಲಿ ಮೊತ್ತ ಮೊದಲ ಚುನಾವಣೆ ನಡೆದಿತ್ತು. ಆದ್ರೆ ಈ ಗ್ರಾಮದಲ್ಲಿ ಪೂಲಿಂಗ್ ಬೂತ್ ಆರಂಭವಾಗಿದ್ದು ಕಳೆದ ಚುನಾವಣೆಯ ವೇಳೆಯಲ್ಲಿ ಅನ್ನುವುದು ಮತ್ತೊಂದು ಅಚ್ಚರಿ. ಈ ಗ್ರಾಮಗಳಲ್ಲಿ ಹಲವು ಜನರು ಮತದಾನ ಮಾಡುತ್ತಿದ್ದಾರೆ. ಈ ಮೂಲಕ ಗೆಲುವು ಕೂಡ ದಾಖಲಿಸಿದ್ದಾರೆ. ಆದ್ರೆ ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆಗೆ ಕಳೆದ ಜನವರಿಯಲ್ಲಿ ಚಾಲನೆ ನೀಡಲಾಗಿದೆ ಅನ್ನುವುದು ಕಟುಸತ್ಯ.

ವಿದ್ಯುತ್ ಸಂಪರ್ಕ ಪಡೆಯುತ್ತಿರುವ ಗ್ರಾಮಸ್ಥರು ಸದ್ಯಕ್ಕೆ ಖುಷಿಯಿಂದ ತೇಲಾಡುತ್ತಿದ್ದಾರೆ. ಸರಕಾರ ಕೊಟ್ಟಿರುವ ಮಿಕ್ಸರ್ ಗ್ರೈಂಡರ್ ಗಳು ಮತ್ತು ಟಿವಿಗಳನ್ನು ಬಳಕೆ ಮಾಡುವ ಕನಸು ಕಾಣುತ್ತಿದ್ದಾರೆ. ವಿದ್ಯುತ್ ಸಂಪರ್ಕವಿಲ್ಲದೆ ಈ ಗ್ರಾಮ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿತ್ತು. ಈಗ ಅದಕ್ಕೆಲ್ಲಾ ಪರಿಹಾರ ಸಿಗುತ್ತದೆ ಅನ್ನುವ ನಂಬಿಕೆ ಇದೆ. ವಿದ್ಯುತ್ ಇಲ್ಲದೇ ಇದ್ದ ಕಾರಣದಿಂದ ವಿದ್ಯಾರ್ಥಿಗಳನ್ನು ವ್ಯಾಸಂಗಕ್ಕಾಗಿ ಹಾಸ್ಟೆಲ್ ಗೆ ಸೇರಿಸಲಾಗಿತ್ತು. ಆದರೆ ಈಗ ಮಕ್ಕಳು ಮನೆಗೆ ಹತ್ತಿರವಾಗುವ ಕಾಲ ಬಂದಿದೆ. ನೀರಿಗಾಗಿ ಬೋರ್ ವೆಲ್ ಗಳನ್ನು ಕೊರೆಸುವ ಬಗ್ಗೆ ಗ್ರಾಮಸ್ಥರು ಯೋಚನೆ ಮಾಡುತ್ತಿದ್ದಾರೆ. ಗ್ರಾಮಕ್ಕೆ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ವಿದ್ಯುತ್ ಬೇಲಿ ಮೂಲಕ ಅವುಗಳಿಗೆ ಪಾಠ ಕಲಿಸುವ ಯೋಚನೆ ಕೂಡ ನಡೆಯುತ್ತಿದೆ. ಒಟ್ಟಿನಲ್ಲಿ ವಿದ್ಯುತ್ ಸಂಪರ್ಕ ಬದಲಾವಣೆಗೆ ನಾಂದಿ ಹಾಡುವುದು ಗ್ಯಾರೆಂಟಿ.

ಇದನ್ನು ಓದಿ:

1. ವ್ಯವಹಾರ ಕುದುರಿಸಿಕೊಳ್ಳುವುದು ಸುಲಭದ ಮಾತಲ್ಲ..! ಅದಕ್ಕೂ ಬೇಕು ಸಖತ್​​ ಐಡಿಯಾ..!

2. ಟ್ರಿಪ್​​ ಹೋಗಲು ಟಿಪ್ಸ್​​ ಹೇಳುವ ಎಕ್ಸ್​ಪರ್ಟ್​ ಇವರು..!

3. ಬಿಸಿಲಾದರೇನು..? ಮಳೆಯಾದರೇನು..? ಉಡುಪು ಸೂಪರ್​ ಆಗಿರಬೇಕು..!

Add to
Shares
2
Comments
Share This
Add to
Shares
2
Comments
Share
Report an issue
Authors

Related Tags