ಆವೃತ್ತಿಗಳು
Kannada

ಆನ್​​ಲೈನ್ ಶಾಪಿಂಗ್ ತಾಣ ಮಹಿಳೆಯರ ಆಪ್ತ ಸಂಗಾತಿ..!

ಟೀಮ್​ ವೈ.ಎಸ್​​. ಕನ್ನಡ

20th Nov 2015
Add to
Shares
2
Comments
Share This
Add to
Shares
2
Comments
Share

ಕಾಲ ಅದೆಷ್ಟು ಬದಲಾಗ್ತಿದೆಯೆಂದ್ರೆ ಭವಿಷ್ಯದ ಮಾರುಕಟ್ಟೆಯನ್ನು ಆನ್​​ಲೈನ್ ಶಾಪಿಂಗ್ ಆಳ್ತಿದೆ. ಮಾಲ್, ಶೋರೂಂಗಳೆಲ್ಲವೂ ಕೇವಲ ವಿಂಡೋ ಶಾಪಿಂಗ್​​ಗಷ್ಟೇ ಮೀಸಲಾಗಿಬಿಟ್ಟಿದೆ. ಹಿಂದೆಲ್ಲಾ ಬಟ್ಟೆ ಅಂಗಡಿಗಳ ಎದುರು ಡಿಸ್ಪ್ಲೇಯಲ್ಲಿ ಹಾಕಿರುವ ಡ್ರೆಸ್​​ಗಳನ್ನು ಕಂಡ ಹೆಂಗಳೆಯರು ಅವುಗಳ ಖರೀದಿಗೆ ಮುಂದಾಗ್ತಿದ್ದರು. ಆದ್ರೆ ಈಗೇನಿದ್ರೂ ಅಂಗೈಯೊಳಗೆ ನಿಲ್ಲುವ ಆನ್​​​ಲೈನ್ ಪ್ರಪಂಚ ಶಾಪಿಂಗ್​​ನ್ನು ಇನ್ನಷ್ಟು ಸುಲಭಗೊಳಿಸಿದೆ.

image


ಆನ್​​​ಲೈನ್ ಶಾಪಿಂಗ್ ತಾಣಗಳು ಮಹಿಳೆಯರ ಅಚ್ಚುಮೆಚ್ಚಿನ ತಾಣಗಳಾಗಿ ಬದಲಾಗಿವೆ. ಮಹಿಳೆಯರ ವೈವಿಧ್ಯಮಯ ಆಯ್ಕೆ, ಅಭಿರುಚಿಗೆ ತಕ್ಕಂತೆ ಇಲ್ಲಿ ವೈವಿಧ್ಯಮಯ ವಸ್ತುಗಳ ಸಂಗ್ರಹ ಇರುವುದರಿಂದ ಮಹಿಳೆಯರು ಈ ಆನ್​​ಲೈನ್ ಶಾಪಿಂಗ್​ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ನಿಮ್ಮ ಅಳತೆಗೆ ತಕ್ಕಂತೆ,ಕಾಟನ್, ಸಿಲ್ಕ್, ಸಿಂಥೆಟಿಕ್ ಹೀಗೆ ಯಾವುದೇ ಮಾದರಿಯ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳಲು ಇಲ್ಲಿ ಅವಕಾಶವಿದೆ.

ಮಹಿಳೆಯರಿಗಾಗಿ ಭಾರತದಲ್ಲಿ ಕೆಲವು ವಿಶೇಷ ಆನ್​​ಲೈನ್ ಶಾಪಿಂಗ್​​ ತಾಣಗಳಿವೆ. ವೂಪ್ಲರ್, ರೋಪ್ಸೋ,ವೋನಿಕ್, ರೆಡ್ಪೋಲ್ಕಾ ಮತ್ತಿತರ ಶಾಪಿಂಗ್ ತಾಣಗಳು ಮಹಿಳೆಯರನ್ನು ಕೇಂದ್ರೀಕರಿಸಿಕೊಂಡೇ ಸಿದ್ಧಗೊಂಡಿವೆ

ಬೆಂಗಳೂರು ನಿವಾಸಿಯಾಗಿರುವ 25 ವರ್ಷದ ನೀನಾ ಕುಮಾರ್ ಆನ್​​ಲೈನ್ ಶಾಪಿಂಗ್ ತಾಣಗಳಲ್ಲಿ ಹೆಚ್ಚು ಖರೀದಿಸಲು ಇಷ್ಟಪಡುತ್ತಾರೆ. ಅವರೇ ಹೇಳುವಂತೆ ‘ಆನ್​​ಲೈನ್ ಶಾಪಿಂಗ್ ತಾಣಗಳು ಫ್ಯಾಶನ್ ಬದಲಾದಂತೆ ಹೆಚ್ಚು ನಾವೀನ್ಯತೆಯ ಸಂಗ್ರಹವನ್ನು ಒದಗಿಸಿಕೊಡುತ್ತವೆ.

‘ಇಂದಿನ ಮಹಿಳೆಯರು ಆಫೀಸು, ಮನೆ ಅಂತ ದಿನವಿಡೀ ಬಿಝಿಯಾಗಿರುವ ಕಾರಣ ಶಾಪಿಂಗ್ ಅಂತ ಹೊರಗಡೆ ಹೋಗೋಕೆ ಟೈಮ್ ಹೊಂದಿಸೋದು ಕಷ್ಟ..ಶಾಪಿಂಗ್​​ಗೆ ಅಂತ ಹೊರಗಡೆ ಹೋದರೂ ಬಟ್ಟೆ ಅಂಗಡಿಗಳಲ್ಲಿ ಹೆಚ್ಚು ಸಮಯವನ್ನು ವ್ಯರ್ಥ ಮಾಡಲು ಇಷ್ಟಪಡುವುದಿಲ್ಲ. ಇಂತಹಾ ಮಹಿಳೆಯರಿಗೆ ಆನ್​​​ಲೈನ್ ಶಾಪಿಂಗ್ ತಾಣಗಳು ಅನುಕೂಲಕಾರಿಯಾಗಿವೆ ಪರಿಣಮಿಸಿವೆ’ ಅಂತಾರೆ ನೀನಾ.

ಆನ್​​ಲೈನ್​​ನಲ್ಲಿ ಒಂದೇ ಸೂರಿನಡಿ ಹೊಸ ಟ್ರೆಂಡ್​​ನ ವೈವಿಧ್ಯಮಯ ಬಟ್ಟೆಗಳು ದೊರಕುತ್ತವೆ. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಬಟ್ಟೆಗಳನ್ನು ಇಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಬೆಲೆ, ಬಟ್ಟೆಯ ವಿಧ ಎಲ್ಲದರ ಬಗ್ಗೆಯೂ ಸವಿಸ್ತಾರವಾಗಿ ವಿವರಗಳು ಕೂಡಾ ಇಲ್ಲಿ ಲಭ್ಯವಿರುತ್ತದೆ. ಅಷ್ಟೇ ಅಲ್ಲ ಇಲ್ಲಿ ಬಟ್ಟೆಯನ್ನು ಖರೀದಿಸುವ ವ್ಯಕ್ತಿಗೆ ಆಯ್ಕೆ ಮಾಡಲು ಕೂಡಾ ಆನ್​​ಲೈನ್ ಶಾಪಿಂಗ್ ತಾಣ ಸಹಕರಿಸುತ್ತದೆ.

ಇ-ಕಾಮರ್ಸ್ ಅನ್ನೋ ಪರಿಕಲ್ಪನೆ ವಿವಿಧ ಪ್ರದೇಶದ ವ್ಯಾಪಾರಿಗಳನ್ನು ಆನ್​​ಲೈನ್ ಮಾರಾಟ ಮಳಿಗೆಯ ಒಂದೇ ಸೂರಿನಡಿ ತಂದು ಅವಕಾಶ ನೀಡಿದೆ. ಇಂತಹಾ ವ್ಯವಸ್ಥೆ ಜನರಿಗೆ ಆಯ್ಕೆಗೆ ಹೆಚ್ಚು ಅವಕಾಶವನ್ನು ಒದಗಿಸಿಕೊಟ್ಟಿದೆ. 2016ರಲ್ಲಿ ಆನ್​ಲೈನ್ ಶಾಪಿಂಗ್ ತಾಣ ಉಪಯೋಗಿಸುವವರಲ್ಲಿ 100 ಮಿಲಿಯನ್ ಜನರಲ್ಲಿ 60 ಮಿಲಯನ್​ನಷ್ಟು ಜನರು ಮಹಿಳೆಯರಾಗಿರುತ್ತಾರೆ. 2014ರಲ್ಲಿ ಗೂಗಲ್ ಸಿದ್ಧಪಡಿಸಿರುವ ವರದಿ ಈ ಅಂಶವನ್ನು ಬಹಿರಂಗಪಡಿಸಿದೆ.

ಆನ್​ಲೈನ್ ವೈಯುಕ್ತಿಕ ವಿನ್ಯಾಸಕರು

ಮಹಿಳೆಯರು ಹೆಚ್ಚು ಆನ್​ಲೈನ್​​ನಲ್ಲಿ ಖರೀದಿಗೆ ಇಷ್ಟಪಡುವ ಕಾರಣ ವಸ್ತುಗಳ ಆಯ್ಕೆಗೆ ಆನ್​ಲೈನ್ ಸಂಸ್ಥೆಗಳು ಹೆಚ್ಚು ಮುತುವರ್ಜಿ ವಹಿಸುತ್ತೇವೆ. ನಾವು 17 ಜನರ ತಂಡವೊಂದನ್ನು ಸಿದ್ಧಪಡಿಸಿದ್ದು, ಈ ತಂಡ ಮಾಡರ್ನ್, ಟ್ರೆಂಡೀ ಫ್ಯಾಶನ್ ಬಟ್ಟೆಗಳ ಬಗ್ಗೆ ಹೆಚ್ಚು ಗಮನಹರಿಸಿ ದಿನಾವೂ ಹೊಸ ಸಂಗ್ರಹವನ್ನು ಜನರ ಮುಂದಿಡುವ ಕೆಲಸ ಮಾಡುತ್ತಿವೆ ಅಂತಾರೆ ವೂಪ್ಲರ್ ಸಹ ಸಂಸ್ಥಾಪಕ ಪ್ರವೀಣ್ ರಾಜರತ್ನಂ.

image


ಇ-ಕಾರ್ಮಸ್ ಕ್ಷೇತ್ರದಲ್ಲಿ ಹಲವು ಆನ್​ಲೈನ್ ಶಾಪಿಂಗ್ ತಾಣಗಳು ವೈವಿಧ್ಯಮಯ ಆಫರ್​​ಗಳೊಂದಿಗೆ ಜನರ ಮುಂದೆ ಬರುತ್ತಿವೆ. ಯಾವುದರ ಗುಣಮಟ್ಟ ಹೇಗೆ, ಏನು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗದೆ ವಸ್ತುಗಳ ಖರೀದಿಗೆ ಜನರು ಗೊಂದಲ ಪಡುವಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ. ವ್ಯಕ್ತಿಯ ವ್ಯಕ್ತಿತ್ವ, ಅಭಿರುಚಿಗೆ ತಕ್ಕಂತೆ ನಾವು ಉತ್ಪನ್ನಗಳನ್ನು ಶಾರ್ಟ್​ಲಿಸ್ಟ್​​ ಮಾಡುತ್ತೇವೆ. ಇದು ನಮ್ಮ ವೆಬ್​ಸೈಟ್​​ನ್ನು ಮತ್ತಷ್ಟು ಗ್ರಾಹಕ ಸ್ನೇಹಿಯಾಗಿಸುತ್ತಿದೆ ಅಂತಾರೆ ರೋಪ್ಸೋ ಸಹ ಸಂಸ್ಥಾಪಕಿ ಮಾಯಾಂಕಾ ಬಂಗಾಡಿಯಾ.

ಫ್ಯಾಶನ್ ಅನ್ನೋದು ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ. ಮಹಿಳೆಯರ ಆಯ್ಕೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಾವು ಎಲ್ಲಾ ರೀತಿಯ ಮಾದರಿಯ ಉತ್ಪನ್ನಗಳನ್ನು ಗ್ರಾಹಕರ ಮುಂದಿಡುತ್ತೇವೆ. ಗ್ರಾಹಕರು ಆಯ್ಕೆ ಮಾಡಿಕೊಳ್ಳುವ ಉತ್ಪನ್ನಕ್ಕೆ ಹೋಲಿಕೆಯಾಗುವ ವಸ್ತುಗಳನ್ನು ಅವರಿಗಾಗಿಯೇ ವಿನ್ಯಾಸಗೊಳಿಸಿ ಗ್ರಾಹಕರನ್ನು ತಲುಪಿಸುತ್ತೇವೆ ಅಂತಾರೆ ರೆಡ್ಪೋಲ್ಕಾ ಸ್ಥಾಪಕಿ ವಿಶಾಖಾ ಸಿಂಗ್.

ಆನ್ಲೈನ್ ಶಾಪಿಂಗ್ ತಾಣಗಳಲ್ಲಿ ನೀವು ಬಟ್ಟೆಗಳನ್ನು ಆಯ್ಕೆ ಮಾಡಿಕೊಂಡಾಗ ಅದೇ ಮಾದರಿಯ ಇತರ ಬಟ್ಟೆಗಳನ್ನು ಕೂಡಾ ನೋಡುವಂತೆ ಕೂಡಾ ವೆಬ್​ಸೈಟ್​​​ ಸಲಹೆ ನೀಡುವುದರಿಂದ ಆಯ್ಕೆಗೆ ಇನ್ನಷ್ಟು ಸುಲಭವಾಗುತ್ತದೆ. ಅಲ್ಲದೆ ವಿದ್ಯಾರ್ಥಿಗಳು, ಉದ್ಯೋಗಿಗಳು, ಗೃಹಿಣಿಯರು ಎಲ್ಲರೂ ಈ ಆನ್​​ಲೈನ್ ಶಾಪಿಂಗ್ ತಾಣ ಬಳಸುವ ಕಾರಣ ಎಲ್ಲರ ಆಸಕ್ತಿಗೆ ತಕ್ಕಂತೆ ಇಲ್ಲಿ ಉತ್ಪನ್ನಗಳ ಸಂಗ್ರಹವಿರುತ್ತದೆ.

‘ನಾವು ಗೂಗಲ್ ಒಂದು ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಶಾಪಿಂಗ್ ತಾಣದಲ್ಲಿ ಗ್ರಾಹರಿಕೆಗ ಉತ್ಪನ್ನದ ಬಗ್ಗೆ ಅಗತ್ಯವಾದ ಎಲ್ಲಾ ಮಾಹಿತಿಯನ್ನು ನೀಡುತ್ತೇವೆ’ ಅಂತಾರೆ ರೂಪ್ಸೋದ ಸಹ ಸಂಸ್ಥಾಪಕಿ ಮಾಯಾಂಕಾ..

ಆನ್​ಲೈನ್ ಶಾಪಿಂಗ್ ತಾಣದಲ್ಲಿ ವ್ಯವಹಾರದ ವಿಧಾನಗಳು

ಇವತ್ತಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್​ಗೆ ಜನರು ಹೆಚ್ಚು ಪ್ರಾಮುಖ್ಯತೆ ಮಾಡುತ್ತಿರುವ ಕಾರಣ ಶಾಪಿಂಗ್ ತಾಣಗಳು ಕೂಡಾ ಜನರನ್ನು ಆಕರ್ಷಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಇತರ ಶಾಪಿಂಗ್ ತಾಣಗಳಿಗಿಂತಲೂ ನಮ್ಮ ವೆಬ್​ಸೈಟ್ ಉತ್ತಮ ಎಂಬುದನ್ನು ನಿರೂಪಿಸಲು ಪ್ರಯತ್ನಿಸುತ್ತಿವೆ.

ಮೈ ಸ್ಮಾರ್ಟ್ ಪ್ರೈಸ್. ಇದು ವಿವಿಧ ಆನ್​​ಲೈನ್ ಶಾಪಿಂಗ್​​ ತಾಣಗಳಲ್ಲಿ ಬೆಲೆಯನ್ನು ಹೋಲಿಕೆ ಮಾಡಿ ಜನರಿಗೆ ಮಾಹಿತಿ ನೀಡುತ್ತದೆ. ಯಾವ ಶಾಪಿಂಗ್​​ ತಾಣದಲ್ಲಿ ಯಾವ ಉತ್ಪನಕ್ಕೆ ಕಡಿಮೆ ಬೆಲೆಯನ್ನು ನಿಗದಿಪಡಿಸಲಾಗಿದೆ. ಮತ್ತು ಈ ಬೆಲೆ ಇತರ ಶಾಪಿಂಗ್ ತಾಣಗಳಿಂದ ಎಷ್ಟು ಕಡಿಮೆಯಾಗಿದೆ ಅನ್ನೋ ಮಾಹಿತಿಯನ್ನು ಜನರಿಗೆ ಕೊಡುತ್ತದೆ. ಹೈದಾರಾಬಾದ್ನಲ್ಲಿರುವ ಈ ಸಂಸ್ಥೆಗೆ ಹಲವು ಆನ್​ಲೈನ್ ತಾಣಗಳು ಕೈ ಜೋಡಿಸಿವೆ.

ಇದೇ ರೀತಿಯ ಇನ್ನೊಂದು ಆನ್​ಲೈನ್ ಸಂಸ್ಥೆ ಶಾಪ್ ಸಿಟಿ. ಇದು ವ್ಯಾಪಾರಿಗಳಿಂದ ಖರೀದಿಸಿದ ಉತ್ಪನ್ನವನ್ನು ಜನರಿಗೆ ಸುಲಭವಾಗಿ ತಲುಪಿಸುವ ವ್ಯವಸ್ಥೆ ಮಾಡುತ್ತಿದೆ. ಈ ರೀತಿಯ ಸಂಸ್ಥೆಗಳು ಜನರ ಆಯ್ಕೆಯನ್ನು ಇನ್ನಷ್ಟು ಸುಲಭಗೊಳಿಸುತ್ತದೆ ಅಂತಾರೆ ಸ್ಟಾಕ್ ಬೈ ಲವ್ ಫ್ಯಾಶನ್ ಸಹಸಂಸ್ಥಾಪಕ ತುಷಾರ್ ಅಹ್ಲುವಾಲಾ.

ರೂಪ್ಸೋ, ವೋನಿಕ್ ನಂತಹಾ ಶಾಪಿಂಗ್ ತಾಣಗಳು ಕಡಿಮೆ ಸಮಯದ ಅವಧಿಯಲ್ಲಿ ಜನರಿಗೆ ಉತ್ತಮ ಗುಣಮಟ್ಟದ, ಕಡಿಮೆ ಬೆಲೆಯ ಉತ್ಪನ್ನಗಳನ್ನು ಒಂದೇ ಸೂರಿನಡಿ ಆಯ್ಕೆ ಮಾಡಲು ಅನುಕೂಲ ಮಾಡಿಕೊಟ್ಟಿದೆ. ಅಷ್ಟೇ ಅಲ್ಲ ಅವುಗಳನ್ನು ಸುಲಭವಾಗಿ ಅವರ ಕೈ ಸೇರುವಂತೆ ಮಾಡುತ್ತಿದೆ ಅನ್ನೋದು ಅವ್ರ ಅಭಿಪ್ರಾಯ..

ಆನ್​ಲೈನ್ ಶಾಪಿಂಗ್ ತಾಣದಲ್ಲಿ ಸವಾಲುಗಳು

ಈ ಆನ್​ಲೈನ್ ಶಾಪಿಂಗ್ ತಾಣಗಳಲ್ಲಿ ಉತ್ತಮ ಲಾಭ ಇರುವುದರ ಜತೆಗೆ ಹಲವು ಸವಾಲುಗಳನ್ನೂ ಎದುರಿಸಬೇಕಾಗುತ್ತದೆ. ವಿವಿಧೆಡೆಯಲ್ಲಿರುವ ವ್ಯಾಪಾರಿಗಳನ್ನು ಅವರ ಬೇಡಿಕೆಗೆ ತಕ್ಕಂತೆ ಒಪ್ಪಿಸಿ ಒಂದೇ ಸೂರಿನಡಿ ತರುವುದು ನಿಜಕ್ಕೂ ಕಷ್ಟದ ಕೆಲಸ.

image


ಅಲ್ಲದೆ ವಿವಿಧ ಹಿನ್ನೆಲೆಯಿಂದ ಬಂದಿರುವ ವ್ಯಾಪಾರಿಗಳಿಗೆ ಆನ್​​ಲೈನ್ ಶಾಪಿಂಗ್ ತಾಣಗಳ ಸ್ಪಷ್ಟ ಚಿತ್ರಣವನ್ನು ಮಾಡಿಕೊಡಬೇಕಾಗುತ್ತದೆ. ಆನ್​ಲೈನ್ ಕೆಟಲಾಗ್​ನ್ನು ದಿನವೂ ಅಪಡೇಟ್ ಮಾಡಿಕೊಳ್ಳುವ ಬಗ್ಗೆ, ಗ್ರಾಹಕರನ್ನು ಸೆಳೆಯುವ ಕುರಿತು ತಿಳಿಸಿಕೊಡಬೇಕಾಗುತ್ತದೆ. ‘ಯಾರು ಆನ್​ಲೈನ್ ಶಾಪಿಂಗ್ ತಾಣಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತಾರೋ ಅವರಿಗೆ ಲಾಭ ದೊರಕುವುದರ ಜತೆ ಇನ್ನಷ್ಟು ಅವಕಾಶಗಳು ಲಭ್ಯವಾಗುತ್ತವೆ’ ಅಂತಾರೆ ಹಿಲಿಯನ್ ವೆಂಚರ್ ಪಾರ್ಟನರ್ ತಾಣದ ರಾಹುಲ್ ಚೌಧರಿ..

‘ಆನ್​ಲೈನ್ ಶಾಪಿಂಗ್ ತಾಣ ಎಂದರೆ ಇದೊಂದು ಸಂಪೂರ್ಣ ಅಸಂಘಟಿತವಾಗಿದ್ದು, ನೀವಿಲ್ಲಿ ಎಲ್ಲಾ ವ್ಯಾಪಾರಿಗಳನ್ನು ಸಂಘಟಿಸಿ ಗ್ರಾಹಕರಿಗೆ ಅನುಕೂಲಕರವಾದ ವೇದಿಕೆ ನಿರ್ಮಿಸಿಕೊಡಬೇಕಾಗುತ್ತದೆ’ ಅಂತಾರೆ ಶಾಪ್ ಸಿಟಿ ಸ್ಥಾಪಕ ಧಾನಿಶ್ ಅಹ್ಮದ್.

ಆನ್​ಲೈನ್ ಶಾಪಿಂಗ್​ ತಾಣಗಳಲ್ಲಿ ಸ್ವಾಧೀನ ಪ್ರಕ್ರಿಯೆ

ಆದ್ರೆ ಈ ಶಾಪಿಂಗ್ ತಾಣಗಳಿಗೂ ಒಂದು ಮಿತಿಯಿದೆ. ಅವುಗಳು ಬಿಲಿಯನ್ ಡಾಲರ್ ಕಂಪೆನಿಗಳಾಗಿ ಬೆಳದು ನಿಲ್ಲಲು ಸಾಧ್ಯವಿಲ್ಲ. ಫ್ಲಿಫ್​​ಕಾರ್ಟ್, ಸ್ನಾಪ್​ಡೀಲ್​​ನಂತಹ ಆನ್​ಲೈನ್ ದಿಗ್ಗಜರು ಈ ಶಾಪಿಂಗ್ ತಾಣಗಳನ್ನು ಸ್ವಾಧೀನಕ್ಕೆ ಒಳಪಡಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ.

ತಜ್ಞರು ಹೇಳುವ ಪ್ರಕಾರ ಈ ಸ್ವಾಧೀನ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಉತ್ಪನ್ನಗಳ ಸಂಗ್ರಹ, ಬೆಲೆ ನಿಗದಿ, ಬೆಲೆಯ ಹೋಲಿಕೆ ಇವೆಲ್ಲವೂ ಶಾಪಿಂಗ್ ತಾಣಗಳ ಗೆಲುವನ್ನು ನಿರ್ಧರಿಸುತ್ತದೆ ಅಂತಾರೆ ಇ-ಕಾಮರ್ಸ್​ನ ನುರಿತ ಉದ್ಯಮಿ ಪ್ರಥಮ್ ನಾಯ್ಕ್. ಆದ್ರೆ ಯಾವಾಗ ಲಾಭ ಅನ್ನೋದು ಕಡಿಮೆಯಾಗುತ್ತೋ ಆಗ ಶಾಪಿಂಗ್ ತಾಣಗಳು ಬೃಹತ್ ಆನ್​​​ಲೈನ್ ತಾಣಗಳೊಂದಿಗೆ ಸೇರಿಕೊಳ್ಳಬೇಕಾಗುತ್ತದೆ ಅನ್ನೋದು ಅವರ ಅಭಿಪ್ರಾಯ.

ಸ್ವಾಧೀನ ಪ್ರಕ್ರಿಯೆ ಎಂಬುದು ಈಗಾಗಲೇ ಆನ್​ಲೈನ್ ತಾಣಗಳನ್ನು ವ್ಯಾಪಕವಾಗಿ ಆವರಿಸಿಕೊಂಡಿದೆ. ಸ್ನಾಪ್​ಡೀಲ್ ಶಾಪಿಂಗ್ ತಾಣ ಫ್ಯಾಶನ್ ಶಾಪಿಂಗ್ ತಾಣವಾದ ‘ಡೂಜ್ಟನ್’ನ್ನು 2013ರಲ್ಲಿಯೇ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಬ್ರೆಝಿಲ್​​ನ ‘ಬಸ್ಕೆಪೆ‘, ‘ಶೋಪ್ಸಿಕ್’ ಅನ್ನೋ ತಾಣವನ್ನು 2012ರಲ್ಲಿ ವಶಪಡಿಸಿಕೊಂಡಿದೆ. 2014ರಲ್ಲಿ ಇಂಗ್ಲೆಂಡ್​​ನ ವಾನಿಲ್ಲೋ, ಶಾಫಿಫೈ ಜತೆ ಕಂಬೈನ್ ಆಗಿದೆ. ಹೆಸರಾಂತ ಅಂತರ್ಜಾಲ ವೆಬ್​ಸೈಟ್ ‘ಯಾಹೂ’ ಅಮೆರೀಕಾದ ಫ್ಯಾಶನ್ ಆಪ್ ಪೋಲಿವಾರ್ ಜತೆ ಕೈ ಜೋಡಿಸಿದೆ.

ಆನ್​ಲೈನ್ ಕ್ಷೇತ್ರದಲ್ಲಿ ಹಲವು ಸವಾಲುಗಳಿದ್ದರೂ ಇವೆಲ್ಲವನ್ನೂ ಎದುರಿಸಿ ಉದ್ಯಮವನ್ನು ಸ್ವತಂತ್ರವಾಗಿ ಕಾರ್ಯಾಚರಿಸುವ ಮಟ್ಟಿಗೆ ಕೂಡಾ ಹಲವು ಶಾಪಿಂಗ್ ತಾಣಗಳು ಬೆಳೆದುನಿಂತಿವೆ. ವೈವಿಧ್ಯಮಯ ಕೊಡುಗೆ, ಉತ್ಪನ್ನಗಳನ್ನು ಜನರ ಮುಂದಿಡುವ ಮೂಲಕ ಗ್ರಾಹಕ ಸ್ನೇಹಿಯಾಗಿ ಪರಿಣಮಿಸಿದೆ.

Add to
Shares
2
Comments
Share This
Add to
Shares
2
Comments
Share
Report an issue
Authors

Related Tags