ಆವೃತ್ತಿಗಳು
Kannada

ಯಾರು ಏನು ಬೇಕಾದ್ರೂ ಅಂದುಕೊಳ್ಳಲಿ.. ನಾನಿರೋದೇ ಹೀಗೆ..!

ಟೀಮ್​ ವೈ.ಎಸ್​​.

YourStory Kannada
22nd Oct 2015
Add to
Shares
7
Comments
Share This
Add to
Shares
7
Comments
Share

ಜೀವನದಲ್ಲಿ ಎಲ್ಲರಿಗೂ ಒಂದು ಘಳಿಗೆ ಬರುತ್ತದೆ. ಅದು ಅವರ ಜೀವನವನ್ನು ಸಂಪೂರ್ಣ ಬದಲಾಯಿಸಿ ಬಿಡುತ್ತದೆ. ಅಥವಾ ಆ ಘಟನೆ ನಮ್ಮ ಬದುಕನ್ನೇ ಕೊನೆಗೊಳಿಸುತ್ತದೆ. ಬಹಳಷ್ಟು ಸಂಕಷ್ಟಗಳು ಎದುರಾದರೂ ಈಕೆ ಹೆದರಲಿಲ್ಲ. ಎಲ್ಲೂ ಕೂಡ ಸೋಲಲಿಲ್ಲ. ಈಕೆ ಸ್ಪೂರ್ತಿಯ ಸೆಲೆ. ಈಕೆ ಪ್ರೇರಕ ಶಕ್ತಿ. ಈಕೆಯೇ ಹೆಸರೇ ಪ್ರಜ್ಞಾ ಸಿಂಗ್​​​.

ನಾವುಜೀವನದಲ್ಲಿ ಬಹಳ ಮಂದಿಯನ್ನು ನೋಡಿದ್ದೇನೆ ಕೆಲವರು ಭಯಾನಕ ಕಾಯಿಲೆ ನಡುವೆ ಉತ್ತಮ ಜೀವನ ಸಾಗಿಸುತ್ತಿರುತ್ತಾರೆ. ಅವರನ್ನು ನಾವು ಪ್ರಶಂಸಿಸುತ್ತೇವೆ. ಯಾವಾಗ ನಾವು ಪ್ರೀತಿಯನ್ನು ಕಳೆದು ಕೊಳ್ಳುತ್ತೇವೆಯೋ ಅವಾಗ ಸಂಪೂರ್ಣವಾಗಿ ಕುಗ್ಗಿಹೋಗುತ್ತೇವೆ. ನಾನು ಎರಡನ್ನೂ ಗೌರವಿಸುತ್ತೇನೆ. ಜೀವನದಲ್ಲಿ ಸಂಭವಿಸುವ ಘಟನೆಗಳಲ್ಲಿ ಅದು ದೊಡ್ಡದು, ಇದು ಸಣ್ಣದೆಂಬುದಿಲ್ಲ. ಅದರ ಪ್ರಾಮುಖ್ಯತೆ ಅರಿಯುವುದು ವ್ಯಕ್ತಿಯೇ ಹೊರತು ಸಮಾಜವಲ್ಲ.ನೀವೀಗ ಆಶ್ಚರ್ಯದ ಕಂಗಳಿಂದ ನೋಡುತ್ತಿರಬಹುದು. ಯಾರು ಈ ತತ್ವಜ್ಞಾನಿ, ಏನು ಈಕೆಯ ಸ್ಟೋರಿ ಎಂದು..?

image


ಹೌದು, ಪ್ರಜ್ಞಾ ಎಂಬ ಮಹಿಳೆಯ ಕಥೆಯೇ ವಿಭಿನ್ನವಾದದ್ದು. ಆಕೆಯ ಮಾತಿನಲ್ಲೇ ಹೇಳುವುದಾದರೆ, ನನ್ನ ಕಥೆ ಸಂಪೂರ್ಣ ವಿಭಿನ್ನವಾದುದು. ನನ್ನ ಜೀವನದಲ್ಲಿ ಅನೇಕ ಘಟನೆಗಳು ನಡೆದಿದೆ ಆದ್ರೆ ನಿಜವಾಗಿಯೂ ಸವಾಲು ಏನೆಂಬುದು ಅರಿವಿಗೆ ಬಂದಿದ್ದು ಇಂಥದ್ದೊಂದು ಭೀಕರ ಘಟನೆ ಸಂಭವಿಸಿದಾಗಲೇ. ಹದಿಹರೆಯದ ವಯಸ್ಸಿನಲ್ಲಿ ನಾನು ರೈಲಿನಲ್ಲಿ ತೆರಳುತ್ತಿರುವಾಗ ಕಲ್ಲೊಂದು ಮೂಗಿಗೆ ಹೊಡೆದು ನನಗೆ ಗಂಭೀರ ಗಾಯವಾಯ್ತು. ಇದು ನನ್ನ ಜೀವನವನ್ನೇ ಬದಲಾಯಿಸಬೇಕಿತ್ತು ಅಥವಾ ನನ್ನ ವೃತ್ತಿ ಜೀವನದಲ್ಲಿ ನಾಕಂಡ ಅದ್ಭುತ ವ್ಯಕ್ತಿ ನನ್ನ ಮದುವೆಯಾಗುವುದು ನನ್ನನ್ನು ಬದಲಾಯಿಸುವ ಅತ್ಯಮೂಲ್ಯ ಕ್ಷಣಗಳಾಗಿದ್ದವು.

ಆದ್ರೆ ದುರದೃಷ್ಟವಶಾತ್ ಈ ಎರಡೂ ಉತ್ತಮ ಕ್ಷಣಗಳು ಸಂಭವಿಸಲೇ ಇಲ್ಲ. ಬದಲಾಗಿ ನನಗೆ ಗೊತ್ತಿರದ ಓರ್ವ ವ್ಯಕ್ತಿ ನನ್ನ ಮೇಲೆ ಆಸಿಡ್ ದಾಳಿ ಮಾಡಿದ. ಇದರಿಂದ ನಾನು ಅನುಭವಿಸಿದ್ದು ನೋವು ಸಂಕಟ ಮತ್ತು ಹಲವು ಸರ್ಜರಿ. ನಾನು ಇದರಿಂದಾಗಿ ಧೈರ್ಯ, ಶಾಂತಿ, ಉಳಿವಿಗಾಗಿ ಎಲ್ಲವನ್ನೂ ಸ್ವೀಕರಿಸುವ ಗುಣ ಕಲಿಯುತ್ತೇನೆ ಎಂದುಕೊಂಡಿದ್ದೆ. ಆದ್ರೆ ನನಗೆ ಹಾಗಾಗಲಿಲ್ಲ. ನನಗೆ ಎಲ್ಲ ಸ್ವೀಕರಿಸುವ ಗುಣ ಬಂದಿದ್ದು ದೇವರು ನನಗೆ ಎರಡು ಮುದ್ದಾದ ಹೆಣ್ಣು ಮಕ್ಕಳನ್ನು ಕರುಣಿಸಿದಾಗ. ಹೌದು ತಾಯಿಯ ಹೊಸ ಪಾತ್ರ ನನ್ನ ಜೀವನದಲ್ಲಿ ತಂದ ಸಂತೋಷ, ನನ್ನನ್ನು ಶಾಶ್ವತವಾಗಿ ಬದಲಾಯಿಸಿತು.

ನನ್ನ ಕನಸಲ್ಲಿ ನಾನು ಕನ್ನಡಿಯಲ್ಲಿ ನನ್ನ ಹಳೆಯ ಮುಖ ನೋಡ್ತಾ ಇದ್ದ ದಿನಗಳು ಕಾಣಿಸುತ್ತೆ. ಆಗನಾನು ಮುಖದಲ್ಲಿ ಎದ್ದ ಮೊಡವೆಗಳು ಹಾಗೂ ಸನ್ ಬರ್ನ್‌ಗೆ ಫೇಷಿಯಲ್ ಕ್ರೀಮ್ ಸೌಂದರ್ಯ ವರ್ಧಕವನ್ನು ದಿನಕ್ಕೊಂದರಂತೆ ಬಳಸುತ್ತಿದ್ದೆ. ಬ್ಯೂಟಿ ಕ್ರೀಮ್‌ಗಳೊಂದಿಗೆ ಮೊಡವೆ ಹೊಗಲಾಡಿಸಲು ಹೆಣಗಾಡ್ತಿದ್ದೆ. ಆದ್ರೆ ಈಗ ನಾನು ಸೌಂದರ್ಯ ವರ್ಧಕದ ಜೊತೆ ಗುದ್ದಾಡಲು ಆಗುವುದಿಲ್ಲ. ಏಕಂದ್ರೆ ನಾನು ಸಾಮಾನ್ಯರಂತೆ ಕಾಣಲು ಈಗ ಹೋರಾಡ ಬೇಕಿದೆ. ಕಾರಣ ತಲೆಯಲ್ಲಿ ಕೂಡಲಿಲ್ಲ ಮುಖದಲ್ಲಿ ಹುಬ್ಬೂ ಇಲ್ಲ..

ಸಮಾಜ ನನ್ನನ್ನು ವಿಚಿತ್ರವಾಗಿ ನೋಡುತ್ತೆ. ನನ್ನ ನೋಡಿ ಮಕ್ಕಳು ಭಯದಿಂದ ಕೂಗಾಡ್ತಾರೆ. ಇನ್ನು ಕೆಲ ಮಕ್ಕಳು ತಮ್ಮ ಮಗುವಿನಂಥಾ ಮನಸ್ಸಿನಿಂದ, ತಮ್ಮ ತಾಯಿಯ ಬಳಿ ಆಕೆಗೇನಾಗಿದೆ ಎಂದು ಕೇಳ್ತಾರೆ. ಇನ್ನು ಕೆಲವರು ಕತೂಹಲದಿಂದ ನನ್ನ ಹಿಂಬಾಲಿಸುತ್ತಾರೆ. ಇನ್ನು ಕೆಲವರು ನನ್ನ ಕಂಡು ಅಡಗಿ ಕೊಳ್ತಾರೆ. ಅದ್ರಲ್ಲೂ ನನ್ನ ನೆರೆಯ ಮನೆಯ ಮಗುವೊಂದು ನನ್ನನ್ನು ದ್ವೇಷಿಸುತ್ತದೆ. ಆ ಮಗು ನನ್ನ ಕಂಡು ನಿನ್ನ ಮುಖ, ಕಣ್ಣು, ತುಟಿ, ನಿನ್ನ ಕೈಗಳನ್ನು ನೋಡಿದ್ರೆ ನನಗೆ ಹೆದರಿಕೆ ಆಗುತ್ತೆ ಛೀ ಅಂತ ಹೇಳುತ್ತೆ...!

ನನ್ನ ಜೀವನದ ಅವಿಸ್ಮರಣೀಯ ದಿನ ಯಾವುದು ಎಂದು ಕೇಳಿದರೆ ಈ ಮೇಲಿನದ್ದಾವುದೂ ಅಲ್ಲ. ಇಷ್ಟೆಲ್ಲಾ ಆದ್ರೂ ನಾನಿನ್ನೂ ಜೀವನದ ಬಗ್ಗೆ ಕನಸನ್ನು ಹೊಂದಿದ್ದೇನೆ. ಬಂದಿದನ್ನು ಎದುರಿಸುತ್ತೇನೆ ಎಂಬ ಕಠಿಣ ನಿರ್ಧಾರ ತೆಗೆದು ಕೊಂಡಿರುವುದೇ ನನಗೆ ಹೆಮ್ಮೆಯ ವಿಷಯವಾಗಿದೆ. ಈ ನಿರ್ಧಾರ ತೆಗೆದುಕೊಂಡ ಕ್ಷಣವೇ ನನ್ನ ಜೀವನದ ಅತ್ಯುತ್ತಮ ಘಳಿಗೆ. ಇದರಿಂದ ನಾನು ಸಾಕಷ್ಟು ಆತ್ಮ ವಿಶ್ವಾಸ ಕಂಡುಕೊಂಡಿದ್ದು ನಾನು ಊಹಿಸದೇ ನನ್ನ ಜೀವನದಲ್ಲಿ ಯಾವುದೇ ಘಟನೆ ನಡೆದರೂ ಅದು ನನ್ನ ಆತ್ಮಸ್ಥೈರ್ಯಕ್ಕೆ ಕಿಂಚಿತ್ತೂ ಪೆಟ್ಟು ನೀಡಲಾರದು. ನನ್ನ ಗುರಿ ಕಹಿ ಘಟನೆ ಮರೆತು ಹೊಸ ಚಿಗುರಿನೊಂದಿಗೆ ಮುಂದೆ ಸಾಗುವುದೇ ಆಗಿದೆ.

ಆ್ಯಸಿಡ್ ದಾಳಿ ನನ್ನ ಮುಖಕ್ಕೆ ಗಟ್ಟಿತನ ನೀಡಿತು.. ಅಲ್ಲದೇ ಜೀವನದಲ್ಲಿ ನೋವು ಕೊಟ್ಟಿತು. ಹೌದು.. ನಾನು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನ ಎದುರಿಸಿದ್ದೇನೆ, ನನ್ನ ಜೀವನದಲ್ಲಿ ಇಂತಹ ಘಟನೆಗಳು ಯಾಕಾದವು ಎಂಬುದಕ್ಕೆ ಯಾವುದೇ ಉತ್ತರವಿಲ್ಲ. ನನ್ನ ಮೇಲಾದ ಆಸಿಡ್ ದಾಳಿಯಾಗಲಿ, ಅದರ ನಂತರದ ನನ್ನ ಜೀವನದ ಬಗ್ಗೆಯಾಗಲಿ ನನ್ನ ಕೈಲಿ ಏನೂ ಉಳಿದಿಲ್ಲ. ಆದರೂ ನಾನ್ಯಾವತ್ತೂ ಧೃತಿಗೆಟ್ಟಿಲ್ಲ, ಧೃತಿಗೆಡೆದೂ ಇಲ್ಲ. ನಾನು ನನ್ನ ಜೀವನದಲ್ಲಿ ತೆಗೆದುಕೊಳ್ಳುವ ಪ್ರತಿ ನಿರ್ಧಾರವೂ ಕಠಿಣವಾಗಿರಲಿದ್ದು ಆದ್ರೆ ನಾನು ಅದನ್ನು ಎದುರಿಸುವಷ್ಟು ಆತ್ಮಸ್ಥೈರ್ಯ ಹೊಂದಿದ್ದೇನೆ.

ನಾನು ತುಂಬಾ ಧೈರ್ಯವಂತಳು ಎಂದು ಕರೆಯಬೇಡಿ. ಕೆಲವೊಂದು ಕ್ರೂರ ವ್ಯಕ್ತಿತ್ವ ನನ್ನ ನಾಶಕ್ಕಾಗಿ ಯತ್ನಿಸಿದವು. ನನಗೆ ಸಹಾನು ಭೂತಿಯ ಅಗತ್ಯವಿಲ್ಲ. ನನಗೆ ಅಗತ್ಯವಿರುವುದು ಬೆಂಬಲ. ನನ್ನ ಕೆಲವೊಂದು ಅಮೂಲ್ಯವಾದ ಸಮಯವನ್ನು ನಾನು ಕಳೆದುಕೊಂಡಿದ್ದೇನೆ. ನನ್ನ ಆರೋಗ್ಯ ಕೂಡಾ ಕೈಕೊಟ್ಟಿತ್ತು ಇಷ್ಟಾದ್ರೂ ನನ್ನತನ ಹಾಗೂ ನನ್ನ ಕನಸನ್ನು ಕಳೆದುಕೊಂಡಿಲ್ಲ. ನನ್ನಲ್ಲಿರುವ ಹುಮ್ಮಸ್ಸೂ ಹಾಗೇ ಇದೆ, ನನ್ನವರ ಮೇಲಿನ ಪ್ರೀತಿಯೂ ಹಾಗೇ ಇದೆ.

ಇವತ್ತು ನಾನು ಇರುವ ಸ್ಥಾನದ ಬಗ್ಗೆ ನನಗೆ ಹೆಮ್ಮೆ ಇದೆ. ಅತಿಜೀವನ್ ಫೌಂಡೇಶನ್‌ಗೆ ನಾನು ಕೊಡುತ್ತಿರೋ ಕೊಡುಗೆ ಬಗ್ಗೆ ಹೆಮ್ಮೆ ಪಡುತ್ತೇನೆ. ನನ್ನ ಮನಸ್ಸಿನಲ್ಲಿರುವುದೊಂದೇ, ನಾನು ಸಂತ್ರಸ್ಥೆ ಅಲ್ಲ ನಾನು ಸ್ಪೂರ್ತಿಯ ರಾಯಭಾರಿ. ನಾನು ನನ್ನ ತರಹವೇ ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುತ್ತೇನೆ.

ಜಗತ್ತಿನಲ್ಲಿ ಎರಡು ಬಗೆಯ ಜನರಿರುತ್ತಾರೆ. ಕೆಲವರು ಹಳೆಯನ್ನು ನೆನೆದು ಕೊರಗುತ್ತಾ ಸಾಗ್ತಾರೆ. ಇನ್ನು ಕೆಲವರೂ ಅವೆಲ್ಲವನ್ನೂ ಮೆಟ್ಟಿನಿಂತು ತಮ್ಮ ಜೀವನದ ಸಂಕಷ್ಟದ ಕೂಪದಿಂದ ಹೊರಬಂದು ಆತ್ಮ ವಿಶ್ವಾಸದ ಜೀವನನಡೆಸಲು ಪ್ರಯತ್ನಿಸುತ್ತಾರೆ.

ನನ್ನದು ಎರಡನೇ ವರ್ಗಕ್ಕೆ ಸೇರಿದ ವ್ಯಕ್ತಿತ್ವ. ಹಿಂದಿನದನ್ನು ನೆನೆಯುತ್ತಾ ಕಾಲ ಕಳೆಯುವ ಜಾಯಮಾನ ನನ್ನದಲ್ಲ. ನನಗೆ, ನನ್ನ ಮುಖಕ್ಕೆ ಏನಾಗಿದೆ ಎಬುದರ ಬಗ್ಗೆ ಚಿಂತಿಸೋದು ಬಿಟ್ಟು ಜೀವನವನ್ನು ಸಂತೋಷದಾಯಕವಾಗಿ ಕಳೆಯೋದೇ ನನ್ನ ಗುರಿ ಮತ್ತು ಆಶಯ ಎನ್ನುತ್ತಾರೆ ಧೀರ ವನಿತೆ ಪ್ರಜ್ಞಾ.

Add to
Shares
7
Comments
Share This
Add to
Shares
7
Comments
Share
Report an issue
Authors

Related Tags