ಆವೃತ್ತಿಗಳು
Kannada

ಅಭಿವೃದ್ಧಿ ಮಂತ್ರಕ್ಕೆ ಟೂರಿಸಂನ ಮಾಂತ್ರಿಕ ಸ್ಪರ್ಶ

ಟೀಮ್​ ವೈ.ಎಸ್​.ಕನ್ನಡ

3rd Apr 2017
Add to
Shares
12
Comments
Share This
Add to
Shares
12
Comments
Share

ಪ್ರವಾಸಿಗರ ಪಾಲಿಗೆ ಭಾರತ ಫೆವರೀಟ್ ತಾಣ. ವಿವಿಧತೆಯಲ್ಲಿ ಏಕತೆಯಲ್ಲಿ ಹೊಂದಿರುವ ದೇಶದಲ್ಲಿ ಪ್ರವಾಸಿ ಚಟುವಟಿಕೆಗಳು ಹೆಚ್ಚುತ್ತಿವೆ. ವಿದೇಶಿಗರಿಗಂತೂ ಭಾರತ ಅದ್ಭುತ ಡಿಸ್ಟಿನೇಷನ್ ಆಗಿ ಬೆಳೆಯುತ್ತಿದೆ. ಟೂರಿಸಂನ ಅಭಿವೃದ್ಧಿ ದೇಶದ ಜಿಡಿಪಿ ಹೆಚ್ಚಳಕ್ಕೂ ಕೊಡುಗೆ ನೀಡಿದೆ. ಸರಿಸುಮಾರು ಶೇಕಡಾ 6.9ರಷ್ಟು ಜಿಡಿಪಿಗೆ ಟೂರಿಸಂ ಕೊಡುಗೆ ನೀಡಿದ್ರೆ, ಟೂರಿಸಂ ಎಂಪ್ಲಾಯಿಮೆಂಟ್ ಶೇಕಡಾ 8.7ರಷ್ಟು ಕೊಡುಗೆ ನೀಡಿದೆ. ಮುಂದಿನ ದಿನಗಳಲ್ಲು ಟೂರಿಸಂ ದೇಶದ ಭವಿಷ್ಯವನ್ನೇ ಬರೆಯಲಿದೆ. ಒಂದು ಅಂದಾಜಿನ ಪ್ರಕಾರ 2015ರ ಹೊತ್ತಿಗೆ ಟೂರಿಸಂ ದೇಶದ ಜಿಡಿಪಿಗೆ ಸುಮಾರು ಶೇಕಡಾ 7.5ರಷ್ಟು ಕೊಡುಗೆಯನ್ನು ನೀಡಲಾಗುತ್ತದೆ ಎನ್ನಲಾಗುತ್ತಿದೆ.

image


ಟೂರಿಸಂ ಅಭಿವೃದ್ಧಿಯಾಗುತ್ತಾ ಇರುವಂತೆ ದೇಶದಲ್ಲಿ ಅವಕಾಶಗಳು ಹೆಚ್ಚುತ್ತಿವೆ. ಉದ್ಯೋಗಾವಕಾಶಗಳು ವಿಸ್ತೃತವಾಗುತ್ತಿದೆ. ಹೊಟೇಲ್ ಮ್ಯಾನೇಜ್​ಮೆಂಟ್ ಅನ್ನುವುದು ಕೇವಲ ಹೊಟೇಲ್ ಗೆ ಮಾತ್ರ ಸೀಮಿತವಾವಾಗಿಲ್ಲ. ಇವತ್ತು ಹೊಟೇಲ್ ಮ್ಯಾನೇಜ್​ಮೆಂಟ್ ಕ್ಷೇತ್ರ ಸಾಕಷ್ಟು ಬೆಳವಣಿಗೆ ಹೊಂದಿದೆ. ಇವತ್ತು ಹೊಟೇಲ್ ಮ್ಯಾನೇಜ್​ಮೆಂಟ್ ಕ್ಲಬ್​ಗಳಲ್ಲಿ ಅಡುಗೆ, ರೆಸಾರ್ಟ್, ಕ್ರೂಸ್ ಮತ್ತು ಕೂಲ್ ಡ್ರಿಂಕ್ಸ್ ಇಂಡಸ್ಟ್ರಿ ತನಕವೂ ಬೆಳೆದು ನಿಂತಿದೆ. ಇವತ್ತು ಟೂರಿಸಂ ವಲಯದ ದೊಡ್ಡದಾಗುತ್ತಿದೆ. ಇಲ್ಲಿ ಹೂಡಿಕೆಗಳು ಹೆಚ್ಚುತ್ತಿವೆ. ಸರಕಾರ ಕೂಡ ಟೂರಿಸಂ ಅಭಿವೃದ್ಧಿಗೆ ಸಾಕಷ್ಟು ಪ್ರೋತ್ಸಾಹಗಳನ್ನು ನೀಡುತ್ತಿದೆ.

ಇದನ್ನು ಓದಿ: ಸಿನಿಮಾರಂಗದಲ್ಲಿ ಮೂವರು ಸಹೋದರರ ಸಾಹಸ- ಇದು ಖಾಸನೀಸ್​ ಕುಟುಂಬದ ಖಾಸ್​ಬಾತ್​​

ಹೊಟೇಲ್ ಮ್ಯಾನೇಜ್​ಮೆಂಟ್ ಕೋರ್ಸ್ ಆಯ್ದುಕೊಳ್ಳುವವರು ನೋಡಲು ಸುಂದರವಾಗಿರುತ್ತಾರೆ. ಇವತ್ತು ಹೊಟೇಲ್ ಮ್ಯಾನೇಜ್​ಮೆಂಟ್ ಪದವಿ ಪಡೆದವರು ಉತ್ತಮಸ ಸಂಭಾವನೆಯನ್ನು ಪಡೆಯುವುದರ ಜೊತೆಗೆ ಅವಕಾಶಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ವೃತ್ತಿಪರರಾಗಿ ಬೆಳೆದು ಸಮಾಜದಲ್ಲಿ ದೊಡ್ಡ ಗೌರವವನ್ನು ಪಡೆದುಕೊಳ್ಳುತ್ತಿದ್ದಾರೆ. ಹೌಸ್ ಕೀಪಿಂಗ್ ಡಿಪಾರ್ಟ್ ಮೆಂಟ್​ನಿಂದ ಹಿಡಿದು, ಹಾಸ್ಪಿಟಾಲಿಟಿ, ಫ್ರಂಟ್ ಆಫೀಸ್ ಆಪರೇಷನ್ಸ್, ಮಾರ್ಕೆಟಿಂಗ್, ಸೇಲ್ಸ್ ಮತ್ತು ಅಕೌಂಟ್ಸ್ ಸೇರಿದಂತೆ ಎಲ್ಲಾ ಕಡೆಯೂ ಹೊಟೇಲ್ ಮ್ಯಾನೇಜ್​ಮೆಂಟ್ ಬೇಕೇ ಬೇಕು ಅನ್ನುವಂತಾಗಿದೆ.

ಇವತ್ತಿನ ದಿನಗಳಲ್ಲಿ ಹೊಟೇಲ್ ಮ್ಯಾನೇಜ್​ಮೆಂಟ್​ನಲ್ಲಿ ಡಿಗ್ರಿ, ಡಿಪ್ಲೋಮಾಗಳನ್ನು ಹಲವು ಶೈಕ್ಷಣಿಕ ಸಂಸ್ಥೆಗಳು ದೊಡ್ಡ ಕೋರ್ಸ್​ಗಳ ಲೆಕ್ಕಾಚಾರದಲ್ಲಿ ನೀಡುತ್ತಿವೆ. ಹೊಟೇಲ್ ಮ್ಯಾನೇಜ್​ಮೆಂಟ್​ಗೆ ವಿದ್ವಾಂಸರು ಬೇಕಾಗಿಲ್ಲ. ಬದಲಾಗಿ ಸ್ಮಾರ್ಟ್ ಆಗಿ ಕೆಲಸ ಮಾಡಬಲ್ಲ, ಸಂಹವನ ಶಕ್ತಿಯನ್ನು ಹೊಂದಿರುವ ವೃತ್ತಿಪರ ಅವಶ್ಯಕತೆ ಹೆಚ್ಚಿದೆ.

ಒಟ್ಟಿನಲ್ಲಿಸ ಭಾರತ ಪ್ರವಾಸಿ ಕೇಂದ್ರವಾಗಿ ಬೆಳೆಯುತ್ತಿದೆ. ಪ್ರವಾಸಿಗರರ ಮನ ತಣಿಸುವ ಜೊತೆಗೆ ಅಭಿವೃದ್ಧಿ ಮಂತ್ರಕ್ಕೆ ವಿವಿಧ ರೀತಿಯಲ್ಲಿ ನೆರವು ನೀಡುತ್ತಿದೆ. 

ಇದನ್ನು ಓದಿ:

1. ಪೆಟ್ರೋಲ್ ಬಂಕ್ ಕೆಲಸಗಾರನ ಸಾಮಾಜಿಕ ಕಳಕಳಿ- ಬುಲ್​ಟೆಂಪಲ್ ಬಳಿ ಇರುವ ಆಪತ್ಭಾಂಧವನ ಕಥೆ ಓದಿ

2. ಈ ಗ್ರಾಮದಲ್ಲಿ ಹೆಣ್ಣುಮಕ್ಕಳೇ ಮನೆ ಒಡತಿಯರು..!

3. ಇಳಿವಯಸ್ಸಿನಲ್ಲೂ ದೇಶ ಸುತ್ತುವ ಸಾಹಸಿ : ವಿಶ್ವಪರ್ಯಟನೆ ಮಾಡ್ತಿದ್ದಾರೆ 95ರ ಅಮ್ಮಾಚಿ 

Add to
Shares
12
Comments
Share This
Add to
Shares
12
Comments
Share
Report an issue
Authors

Related Tags