ಆವೃತ್ತಿಗಳು
Kannada

ಹೈಪರ್​​​ಲೋಕಲ್​​​ ಆಹಾರೋತ್ಪನ್ನಗಳ ಡೆಲಿವರಿಯಲ್ಲಿ ಕ್ರಾಂತಿ ಮಾಡಿತ್ತು "ಡೆಲಿವರ್" ಸಂಸ್ಥೆ

ಟೀಮ್​​ ವೈ.ಎಸ್​​.ಕನ್ನಡ

25th Nov 2015
Add to
Shares
17
Comments
Share This
Add to
Shares
17
Comments
Share

5 ವರ್ಷದ ಹಿಂದೆ ಆರಂಭವಾದ ಬೆಂಗಳೂರು ಮೂಲದ ಹೈಪರ್​​ಲೋಕಲ್​​ ಸಂಸ್ಥೆ ಡೆಲಿವರ್ ಅನ್ನು ಇತ್ತೀಚೆಗಷ್ಟೇ ಬಿಗ್​​ಬಾಸ್ಕೆಟ್ ವಿಲೀನಗೊಳಿಸಿಕೊಂಡಿತು. ಡೆಲಿವರ್ ಹೈಪರ್​ಲೋಕಲ್ ಕೇವಲ ಎರಡಂತಸ್ತಿನ ಕಚೇರಿಯನ್ನು ಹೊಂದಿತ್ತು. ಇಲ್ಲಿಯೇ ಎ4 ಸೈಜ್​​ನ ಪೋಸ್ಟರ್​​ಗಳನ್ನು ಅಂಟಿಸಿ ವಹಿವಾಟು ನಡೆಸುತ್ತಿತ್ತು.

ಮಾರುಕಟ್ಟೆಯ ವಿಭಿನ್ನ ಸಂಶೋಧನೆಗಳನ್ನು ಹಾಗೂ ಹೊಸ ಬಗೆಯ ವ್ಯಾವಹಾರಿಕ ಮಾದರಿಗಳನ್ನು ಪೋಸ್ಟರ್​​ಗಳ ಮೂಲಕ ಮೊತ್ತ ಮೊದಲ ಬಾರಿಗೆ ಪ್ರಚುರಪಡಿಸಿದ ಕೀರ್ತಿ ಡೆಲಿವರ್ ಸಂಸ್ಥೆಗೆ ಸಲ್ಲಬೇಕು. ಬೇಡಿಕೆಯ ಮಾರಾಟದ ಹಾಗೂ ಮನೆಗೆ ತಲುಪಿಸುವ ಭಾರತದ ಮೊದಲ ಹೈಪರ್​​ಲೋಕಲ್ ಸೂಪರ್ ಮಾಲ್ ಸಂಸ್ಥೆ, ಮನೆಯಲ್ಲಿ ತಯಾರಿಸಿದ ಆಹಾರೋತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಸಂಸ್ಥೆ, ಗೃಹಬಳಕೆಯ ಹಾಗೂ ಇನ್ನಿತರೆ ಕಡಿಮೆಮೌಲ್ಯದ ಉತ್ಪನ್ನಗಳನ್ನು ಗ್ರಾಹಕರ ಮನೆ ತಲುಪಿಸುವ ಸಂಸ್ಥೆಗಳ ಮುಂತಾದ ಪೋಸ್ಟರ್​​ಗಳನ್ನು ಸಿದ್ಧಪಡಿಸಿದ್ದು ಇದೇ ಡೆಲಿವರ್ ಸಂಸ್ಥೆ.

image


ಉದ್ಯಮದ ಕಥೆ ಹೇಳುವ ಪೋಸ್ಟರ್ಸ್ ಅನ್ನುವ ವಿಭಿನ್ನ ಆಯಾಮದ ಸಂಸ್ಥೆ ಡೆಲಿವರ್ ಅನ್ನು ಸಂಸ್ಥಾಪಿಸಿದವರು ಅಫ್ಸಲ್ ಸಾಲು, ಪ್ರಫುಲ್ ಥಚೇರಿ, ರೀಬು ವರ್ಗೀಸ್. ಜೊತೆಗೆ ಇವರು ತಮ್ಮ ಸಂಸ್ಥೆಯ ವಾಲಂಟಿಯರ್ಸ್ ಆಗಿಯೂ ಕೆಲಸ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆಯೇ ಇಂದಿನ ಬಹು ಪ್ರಸಿದ್ಧ ಹೈಪರ್​ಲೋಕಲ್ ಕಾಮರ್ಸ್, ಫುಡ್ ಟೆಕ್, ಆನ್ ಡಿಮ್ಯಾಂಡ್ ಫುಡ್ ಡೆಲಿವರಿ ಮುಂತಾದ ಕ್ಷೇತ್ರಗಳನ್ನು ಈ ಸಂಸ್ಥೆ ಸಂಶೋಧಿಸಿತ್ತು. ಭಾರತದ ಮಾರುಕಟ್ಟೆಯ ಪಾಲಿಗೆ ಇಂತಹ ವಿಭಿನ್ನ ಕ್ಷೇತ್ರಗಳ ಆರ್ಥಿಕ ಆಯಾಮವನ್ನು ಪರಿಚಯಿಸಿದ್ದೇ ಈ ಸಂಸ್ಥೆ.

ರೆಸ್ಟೋರೆಂಟ್​​ಗಳಲ್ಲಿ ಸಿದ್ಧಪಡಿಸಿದ ಆಹಾರ ತಿನಿಸುಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸುವ ವಿಧಾನವನ್ನು ಹೈಪರ್​ಲೋಕಲ್ ಆಯಾಮದಲ್ಲಿ ಕಾರ್ಯಗತಗೊಳಿಸುವ ಉದ್ದೇಶ ಡೆಲಿವರ್​​ಗಿತ್ತು. ಮೊದಮೊದಲು ಸಂಸ್ಥೆ ಹೂಡಿಕೆದಾರರ ಮನವೊಲಿಸಲು ದೊಡ್ಡ ಸಂಘರ್ಷವನ್ನೇ ನಡೆಸಬೇಕಾಯ್ತು. ಆದರೆ ಸಂಸ್ಥೆಯ ವಿಭಿನ್ನ ಯೋಜನೆ ಮಾತ್ರ ಕೆಲವು ಅಮೇರಿಕನ್ ವಿವಿಗಳಲ್ಲಿ ಅಧ್ಯಯನಗೊಳಪಟ್ಟಿತ್ತು. ಡೆಲಿವರ್ನಲ್ಲಿ ಇಂತಹ ಹತ್ತು ಹಲವು ಸೃಜನಾತ್ಮಕ ಸಂಶೋಧನೆಗಳನ್ನು ನಡೆಸುವ ಮೂಲಕ ಇವರು ಫುಡ್ ಟೆಕ್​​ನ ಭಾಗವಾಗಿ ಗುರುತಿಸಿಕೊಂಡರು.

2011ರಲ್ಲಿ ಮನೆಯಲ್ಲಿತಯಾರಿಸಿದ ಆಹಾರೋತ್ಪನ್ನಗಳ ಪ್ಯಾಕೇಜಿಂಗ್ ಮಾರಾಟಕ್ಕೆ ಮಾರುಕಟ್ಟೆ ಅಷ್ಟೇನು ಸುಗಮವಾಗಿರಲಿಲ್ಲ. ಜೊತೆಗೆ ಆಹಾರವನ್ನು ಕೆಡದಂತೆ ಪ್ಯಾಕೇಜಿಂಗ್ ವ್ಯವಸ್ಥೆ ಕಲ್ಪಿಸುವುದು ದೊಡ್ಡ ಸವಾಲಾಗಿತ್ತು. ಆಗ ಡೆಲಿವರ್ ಸಂಸ್ಥೆಯ ಆಧಾರಸ್ತಂಭಗಳಾದ ಈ ತ್ರಿವಳಿ ಉದ್ಯಮಿಗಳು ಕುಳಿತು ಫುಡ್ ಕಂಟೇನರ್ ಹಾಗೂ ಪ್ಯಾಕೇಜಿಂಗ್ ಕವರ್ಗಳನ್ನು ಪ್ರತ್ಯೇಕವಾಗಿ ವಿನ್ಯಾಸಗೊಳಿಸಿದರು. ಬಳಿಕ ಇದೇ ಕೆಲಸಕ್ಕೆ ಪ್ರತ್ಯೇಕ ತಯಾರಕರನ್ನು ಹುಡುಕಿದರು. ಇಂದು ಅವರ ಪ್ಯಾಕೇಜಿಂಗ್ ಕಂಟೇನರ್ಗಳ ಉತ್ಪಾದಕ ಹತ್ತು ಹಲವು ಬೇರೆ ವಿನ್ಯಾಸಗಳ ಕಂಟೇನರ್ಗಳನ್ನು ಸಂಶೋಧಿಸಿದ್ದಾರೆ. ಜೊತೆಗೆ ಅವರು ಡೆಲಿವರ್ನ ಬೇರೆ ಪ್ರತಿಸ್ಫರ್ಧಿಗಳಿಗೂ ಇವುಗಳನ್ನು ವಿತರಿಸುತ್ತಿದ್ದಾರೆ.

ಡೆಲಿವರ್ ಪ್ರಾರಂಭ

ಡೆಲಿವರಿ ಪ್ರಾರಂಭವಾಗಿದ್ದು 2010ರಲ್ಲಿ.ಇದನ್ನು ಸಂಸ್ಥಾಪಿಸಿದ ಮೂವರು ಗೆಳೆಯರು ಲಕ್ನೋದ ಐಐಎಂನಲ್ಲಿ ಕಲಿತವರು. 6 ವರ್ಷಗಳ ಕಾಲ ಕಾರ್ಪೋರೇಟ್ ಸಂಸ್ಥೆಗಳಲ್ಲಿ ದುಡಿದು ಉಳಿತಾಯ ಮಾಡಿದ್ದ ಹಣವೇ ಅವರ ಮೂಲ ಬಂಡವಾಳವಾಗಿತ್ತು. ಮೊದಲು ಈ ತಂಡ ಬೆಂಗಳೂರಿನ ವೈಟ್​ಫೀಲ್ಡ್​​ನ ರೆಸ್ಟೋರೆಂಟ್ ಒಂದಕ್ಕೆ ಡೆಲಿವರಿ ಸೇವೆ ಮಾಡುತ್ತಿತ್ತು. ನಿಧಾನವಾಗಿ ಇವರ ಡೆಲಿವರಿ ಸೇವೆಗಳು ಅಕ್ಕಪಕ್ಕದ ಕೆಲವು ಪ್ರದೇಶಗಳಿಗೂ ವಿಸ್ತರಿಸಿತು.

ಮೊದಮೊದಲು ರೆಸ್ಟೋರೆಂಟ್ ಮಾಲೀಕರ ಜೊತೆ ಸರಳ ವಿಧಾನದ ಮೂಲಕ ಮನವೊಲಿಸಿದ ಇವರು, ತಮ್ಮ ಯೋಜನೆಗಳನ್ನು ವಿವರಿಸಿದರು. ಗ್ರಾಹಕರ ಮನೆಗಳಿಗೆ ನೇರವಾಗಿ ತಲುಪಿಸುವ ಡೆಲಿವರಿ ಯೋಜನೆ ರೆಸ್ಟೋರೆಂಟ್ ಮಾಲೀಕರನ್ನು ಆಕರ್ಷಿಸಿತ್ತು. ಅವರ ಶುಲ್ಕ ಕಮಿಷನ್ ಆಧಾರದಲ್ಲಿತ್ತು. ಅವರ ಈ ಯೋಜನೆಯಲ್ಲಿ ರೆಸ್ಟೋರೆಂಟ್ ಮಾಲಿಕರು ಹೆಚ್ಚಿನ ರಿಸ್ಕ್ ಇಲ್ಲದಿರೋದನ್ನು ಗಮನಿಸಿದ್ದರು. ಇದೇ ಅವರ ಯೋಜನೆಯ ಪ್ರಗತಿಯ ಸೂಚಕವಾಗಿತ್ತು. ಡೆಲಿವರ್ ಮೂಲಕ ಗ್ರಾಹಕರನ್ನು ಸಂಪರ್ಕಿಸುವುದು ವಿಭಿನ್ನ ಬಗೆಯ ಕಾರ್ಯಾಚರಣೆಯಾಗಿತ್ತು. ಆಗಿನ ಸಂದರ್ಭದಲ್ಲಿ ಬಹುತೇಕ ಗ್ರಾಹಕರು ಮನೆಗೆ ಸೇವೆ ಒದಗಿಸುವ ಸೇವೆಗಳ ಬಗ್ಗೆ ಕೇಳಿರಲಿಲ್ಲ. ಹಾಗಾಗಿ ಬಹುಬೇಗನೇ ಡೆಲಿವರ್ ಗ್ರಾಹಕರ ನಂಬಿಕೆ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಬಿಲೋ ದ ಲೈನ್ ಅಥವಾ ಕೆಳ ವರ್ಗದ ಗ್ರಾಹಕರನ್ನು ಸೆಳೆಯುವುದು ಡೆಲಿವರ್ನ ಆರಂಭಿಕ ಮಾರ್ಕೆಂಟಿಂಗ್ ಸ್ಟ್ರಾಟೆಜಿಯಾಗಿತ್ತು. ನಂತರದ ದಿನಗಳಲ್ಲಿ ಡೆಲಿವರಿ ಬುಕ್ ರೆಸ್ಟೋರೆಂಟ್ಗಳ ಜೊತೆ, ಬೇಕರಿ, ಗ್ರಾಸರಿ ಶಾಪ್ಸ್, ಮೀನು ಮತ್ತು ಮಾಂಸಾಹಾರದ ಉತ್ಪನ್ನಗಳನ್ನು ಡೆಲಿವರಿ ನೀಡುವ ಸೇವೆಗಳನ್ನು ಆರಂಭಿಸಿತು. ಡೆಲಿವರಿಗೆ ಹೆಚ್ಚಿನ ಪ್ರಚಾರ ತಂದುಕೊಟ್ಟಿದ್ದು ಗ್ರಾಹರು ಮಾಡಿದ ಬಾಯಿಯಿಂದ ಬಾಯಿಯ ಪ್ರಚಾರ.

ಐಟಿ ಸವಾಲುಗಳು:

ಇವರ ತಂಡಕ್ಕೆ ಮಾಹಿತಿ ತಂತ್ರಜ್ಞಾನದ ಹಕ್ಕುಗಳನ್ನು ಪಡೆದುಕೊಳ್ಳುವುದೂ ದೊಡ್ಡ ಸಂಘರ್ಷವಾಗಿತ್ತು. ಇದಕ್ಕೆ ಸಹಕರಿಸಿದ್ದು ಅವರ ತಂಡದಲ್ಲಿದ್ದ ಎಂಜಿನಿಯರ್ಗಳು. ಅದೃಷ್ಟವಶಾತ್ ಅವರಿಗೆ ಌಂಡ್ರಾಯ್ಡ್ ಸೌಕರ್ಯ ಕೂಡಲೆ ಲಭಿಸಿತು. ಆದರೂ ಪ್ರಾರಂಭಿಕ ಹಂತದಲ್ಲಿ ಮೊಬೈಲ್ ಌಪ್ ಮಾರ್ಕೆಟಿಂಗ್ ಹಾಗೂ ವೆಬ್ ಪ್ರಚಾರದಲ್ಲಿಗ್ರಾಹಕರನ್ನು ಸೆಳೆಯುವಲ್ಲಿ ಡೆಲಿವರ್ ಕೊಂಚ ಹಿನ್ನಡೆ ಅನುಭವಿಸಿತ್ತು. ಕ್ರಮೇಣ ರೆಸ್ಟೋರೆಂಟ್ಗಳೊಂದಿಗೆ ಮೈತ್ರಿ ಸೌಲಭ್ಯವನ್ನು ಌಪ್ನಲ್ಲಿ ಅಳವಡಿಸಿಕೊಳ್ಳಲಾಯಿತು. ಜಿಪಿಆರ್ಎಸ್ ಪ್ರಿಂಟರ್ ಮುಖೇನ ಡೆಲಿವರಿ ಹುಡುಗರಿಗೆ ಸಹಕಾರಿಯಾಗುವ ಸೌಲಭ್ಯ ಸೃಷ್ಟಿಸಲಾಯಿತು. ಇಂದು ತಮ್ಮ ಶೇ.60-70 ವ್ಯವಹಾರ ಮೊಬೈಲ್ ಌಪ್ ಮೂಲಕವೇ ನಡೆಯುತ್ತಿದೆ ಅಂತಾರೆ ರೀಬು.

ಅವರ ತಂಡ

ಡೆಲಿವರಿ ಉದ್ಯೋಗಿಗಳ ದೃಷ್ಟಿಯಲ್ಲಿ ದೀರ್ಘಕಾಲದ ವ್ಯಾವಹಾರಿಕ ಯೋಜನೆಯಿದೆ. ನಮ್ಮ ಮೂಲ ತಂಡ ಈಗಲೂ ಇದರತ್ತವೇ ಗಮನಹರಿಸಿ ಕಾರ್ಯನಿರವಾಗಿದೆ ಅಂತ ಪ್ರಫುಲ್ ಹೇಳಿದ್ದಾರೆ. ಜೊತೆಗೆ ಅವರ ಮೊದಲ ಅವಧಿಯ ಉದ್ಯೋಗಿಗಳು ಸಂಸ್ಥೆಯ ಜೊತೆಯೇ ವೈಯಕ್ತಿಕವಾಗಿಯೂ ಪ್ರಗತಿ ಸಾಧಿಸಿದ್ದಾರೆ. ಪ್ರಾರಂಭಿಕ ದಿನಗಳಲ್ಲಿ ಸಂಸ್ಥೆಯ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡಿದವರು ಸಧ್ಯ ನಗರ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಮೂವರಿಂದ ಶುರುವಾದ ಸಂಸ್ಥೆ 300ಕ್ಕೂ ಅಧಿಕ ಡೆಲಿವರಿ ಹುಡುಗರ ಸಹಿತ ಉದ್ಯೋಗಿಗಳನ್ನು ಹೊಂದಿದೆ.

ಹೂಡಿಕೆ:

ಡೆಲಿವರ್ ಪ್ರಾರಂಭವಾಗಿದ್ದು 30ಲಕ್ಷ ರೂಪಾಯಿ ಮೊತ್ತದ ಸಂಸ್ಥಾಪಕರ ಉಳಿತಾಯದ ಹಣದ ಸಹಾಯದಿಂದ. 2 ವರ್ಷದ ತರುವಾಯ 2012ರಲ್ಲಿ ಈ ತಂಡ ಉದ್ಯಮಿಗಳಾದ ಮೀನಾ ಹಾಗೂ ಕೃಷ್ಣನ್ ಗಣೇಶ್ರಿಂದ 1.4 ಕೋಟಿ ಹೆಚ್ಚುವರಿ ಹೂಡಿಕೆ ಮಾಡಿತು.2014ರಲ್ಲಿ ಡೆಲಿವರ್ ಕಂಪೆನಿ 1 ಮಿಲಿಯನ್ ಡಾಲರ್ ಹಣವನ್ನು ಅಗ್ನೀಸ್ ಕ್ಯಾಪಿಟಲ್ ಖಾಸಗಿ ಹೂಡಿಕೆದಾರರಿಂದ ಹೂಡಿಕೆ ಮಾಡಿತು. ಈ ಹೂಡಿಕೆಯ ಸಹಾಯದಿಂದ ಬೆಂಗಳೂರಿನ ಸಂಸ್ಥೆಯ ಪ್ರಗತಿಗೆ ಅಗತ್ಯವಿರುವ ತಂತ್ರಜ್ಞಾನ ಹಾಗೂ ವೆಬ್ಸೈಟ್, ಌಪ್ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಭವಿಷ್ಯದ ಯೋಜನೆಗಳು:

ಈ ವರ್ಷದ ಜೂನ್ನಲ್ಲಿ ಆನ್ಲೈನ್ ದಿನಸಿ ಸಾಮಗ್ರಿಗಳ ಮಾರಾಟ ಸಂಸ್ಥೆ ಬಿಗ್ ಬಾಸ್ಕೆಟ್ ಡೆಲಿವರ್ ಅನ್ನು ಖರೀದಿಸಿದೆ. ಡೆಲಿವರ್ನ ಡೋರ್ ಡೆಲಿವರಿ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿರುವ ಬಿಗ್ ಬಾಸ್ಕೆಟ್ ಸಂಸ್ಥೆ ಹೈಪರ್ಲೋಕಲ್ ಉದ್ಯಮವನ್ನು ಮತ್ತಷ್ಟು ಸರಳೀಕರಿಸಲು ಚಿಂತನೆ ನಡೆಸಿದೆ. 1 ಗಂಟೆಯಲ್ಲಿ ಗ್ರಾಹಕರಿಗೆ ಉತ್ಪನ್ನಗಳ ಡೆಲಿವರಿ ಭರವಸೆ ಈಡೇರಿಸಲು ಇದು ಮುಂದಾಗಿದೆ. ಹೈಪರ್ ಲೋಕಲ್ ಹಾಗೂ ಇ-ಕಾಮರ್ಸ್ ಉದ್ಯಮಗಳಲ್ಲಿಹೊಸ ಪ್ರಯೋಗ ನಡೆಸಲು ಇದು ಯೋಜನೆ ರೂಪಿಸಿದೆ. ಭಾರತದಾದ್ಯಂತ 8 ಮುಖ್ಯ ನಗರಗಳಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸಲು ಡೆಲಿವರಿ ಹಾಗೂ ಬಿಗ್ ಬಾಸ್ಕೆಟ್ ಜಂಟಿಯಾಗಿ ಯೋಜಿಸುತ್ತಿವೆ.

ಆದ್ಯ ಸಂಗತಿ:

ಡೆಲಿವರ್ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಸಾಕಷ್ಟು ಔದ್ಯಮಿಕ ಪಾಠಗಳನ್ನು ಕಲಿತಿರುವುದಾಗಿ ಇವರು ಹೇಳುತ್ತಾರೆ. ಮೊದಲ ನಾಲ್ಕು ವರ್ಷ ನಾವು ನಮ್ಮ ವ್ಯವಹಾರವನ್ನುಮಾಪನ ಮಾಡಲಿಲ್ಲ. ಹಾಗಾಗಿ ನಮಗೆ ಸುಲಭವಾಗಿ ಸಂಸ್ಥೆಯನ್ನು ಕಟ್ಟಿ ಬೆಳೆಸಲು ಸಾಧ್ಯವಾಗಲಿಲ್ಲ. ಈ ಉದ್ಯಮದಲ್ಲಿ ವೇಗವಾದ ಪ್ರತಿಕ್ರಿಯೆ ಹಾಗೂ ಅತ್ಯುತ್ತಮ ಪ್ರತಿಭಾವಂತರ ತಂಡದ ನೆರವು ಬೇಕು.ಆದರೆ ಎರಡಕ್ಕೂ ಸಾಕಷ್ಟು ಹಣದ ಹೂಡಿಕೆ ಬೇಕು. ಆದರೆ ಈ ಐದು ವರ್ಷಗಳ ನಮ್ಮ ಉದ್ಯಮಕ್ಷೇತ್ರದ ಪಯಣದಲ್ಲಿ ನಮ್ಮ ಗ್ರಾಹಕರು, ಉದ್ಯೋಗಿಗಳು, ಹೂಡಿಕೆದಾರರ ಸಂಬಂಧ ವೃದ್ಧಿಸಿಕೊಂಡಿದ್ದೇವೆ ಅಂತ ಪ್ರಫುಲ್ ಹೆಮ್ಮೆಯಿಂದ ಹೇಳುತ್ತಾರೆ.

image


ಭವಿಷ್ಯದಲ್ಲಿ ಭಾರತದ ಪ್ರಮುಖ ಹೈಪರ್ಲೋಕಲ್ ಉದ್ಯಮದ ಸುಳಿವು

ಈ ಕ್ಷೇತ್ರದಲ್ಲಿಕಳೆದ ಕೆಲವು ವರ್ಷಗಳಲ್ಲಿ ಸಾಕಷ್ಟು ಪೈಪೋಟಿದಾರರು ಹುಟ್ಟಿಕೊಂಡಿದ್ದಾರೆ. ಚಿಕ್ಕ ಪುಟ್ಟ ಸಂಸ್ಥೆಗಳಿಂದ ಬೃಹತ್ ಉದ್ದಿಮೆದಾರರು ಸ್ಫರ್ಧೆ ನೀಡತೊಡಗಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಅವಕಾಶಗಳಿವೆ ಅನ್ನುವುದನ್ನು ಮೊದಲು ತೋರಿಸಿಕೊಟ್ಟ ಹೆಮ್ಮೆ ಡೆಲಿವರ್ ಸಂಸ್ಥೆಗಿದೆ. ಮುಂಬರುವ ದಿನಗಳಲ್ಲಿ ದ್ವಿಚಕ್ರವಾಹನಗಳಲ್ಲಿ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸಬಲ್ಲ ಡೆಲಿವರ್ ಸಂಸ್ಥೆ ಇನ್ನೊಂದು ಹೊಸ ಆಯಾಮದೊಂದಿಗೆ ತೆರೆದುಕೊಳ್ಳಲಿದೆ ಅನ್ನುವುದು ಪ್ರಫುಲ್​​ರ ವಿಶ್ವಾಸ.

ಲೇಖಕರು: ನಿಶಾ ನಾರಾಯಣ್​​

ಅನುವಾದಕರು: ವಿಶ್ವಾಸ್​​​

Add to
Shares
17
Comments
Share This
Add to
Shares
17
Comments
Share
Report an issue
Authors

Related Tags