ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ಬೆಂಗಳೂರಿನಿಂದ ಚೆನ್ನೈ ತಲುಪಬಹುದು..!

ಟೀಮ್​ ವೈ.ಎಸ್.ಕನ್ನಡ

ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ಬೆಂಗಳೂರಿನಿಂದ ಚೆನ್ನೈ ತಲುಪಬಹುದು..!

Tuesday January 24, 2017,

2 min Read

ತಂತ್ರಜ್ಞಾನ ಮತ್ತು ಉದ್ಯಮ ಕ್ಷೇತ್ರದಲ್ಲಿ ಎಲೊನ್ ಮಸ್ಕ್ ಹೆಸರಿನ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಸ್ಪೇಸ್ X, ಪೇ ಪಾಲ್, ಟೆಸ್ಲ ಮೋಟಾರ್ಸ್ ಸೇರಿದಂತೆ ಹಲವು ಕಂಪನಿಗಳ ಸ್ಥಾಪಕ ಮತ್ತು ಅಧ್ಯಕ್ಷ. ಮ್ಯಾಗ್ನಮ್ ಓಪನ್ ಮತ್ತು ಹೈಪರ್ ಲೂಪ್ ಅನ್ನುವ ತಂತ್ರಜ್ಞಾನವನ್ನು ಪರಿಚಯಿಸಿದ ಕೀರ್ತಿಯೂ ಇವರಿಗಿದೆ. ಈಗ ಈ ಹೈಪರ್ ಲೂಪ್ ಭಾರತಕ್ಕೆ ಎಂಟ್ರಿ ಆಗಲು ಸಿದ್ಧತೆ ನಡೆಸಿಕೊಳ್ಳುತ್ತಿದೆ. ಕೇಂದ್ರ ಸರ್ಕಾರದ ಜೊತೆ ಮಾತುಕತೆಯನ್ನೂ ನಡೆಸಿದೆ.

ಹೈಪರ್ ಲೂಪ್ ಅಂದ್ರೆ ವಿಶೇಷ ವಾಹನ. ಇದು ಕಾಂಕ್ರಿಟ್ ಸುರಂಗಗಳ ಮೂಲಕ ಜನರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅತ್ಯಂತ ವೇಗವಾಗಿ ಹೊತ್ತಯ್ಯಬಲ್ಲ ಸಾಧನ. ಹೈಪರ್ ಲೂಪ್ ಗಂಟೆಗೆ ಸುಮಾರು 1200 ಕಿಲೋಮೀಟರ್ ವೇಗದಲ್ಲಿ ಚಲಿಸುವ ಶಕ್ತಿ ಹೊಂದಿದೆ. ಸೊಲಾರ್ ಶಕ್ತಿ ಮತ್ತು ಗಾಳಿಯ ಬಳಕೆ ಈ ತಂತ್ರಜ್ಞಾನದಲ್ಲಿ ಉಪಯೋಗಕ್ಕೆ ಬರುವುದರಿಂದ ಖರ್ಚುವೆಚ್ಚ ಕೂಡ ಕಡಿಮೆ ಆಗಲಿದೆ.

image


ಬೆಂಗಳೂರು ಮತ್ತು ಚೆನ್ನೈ ನಡುವೆ ಇದು ಮೊದಲಿಗೆ ಇಂಟರ್ಡ್ಯೂಸ್ ಆಗಲಿದೆ. ನಂತರದ ದಿನಗಳಲ್ಲಿ ಚೆನ್ನೈ - ಮುಂಬೈ, ಬೆಂಗಳೂರು- ತಿರುವನಂತರಪುರಂ ಮತ್ತು ದೆಹಲಿ ಮತ್ತು ಮುಂಬೈ ನಡುವೆ ಹೈಪರ್ ಲೂಪ್ ಬರಲಿದೆ.

ಹೈಪರ್ ಲೂಪ್ ಒಂದು ರೀತಿಯಲ್ಲಿ ರೈಲ್ವೇ ಟ್ರಾಕ್ ತರಹದಲ್ಲೇ ತರಲಿದೆ. ಇದರ ಮೊದಲ ಪರೀಕ್ಷೆ ದುಬೈ ಮತ್ತು ಅಬುಧಾಬಿಗಳ ನಡುವೆ ನಡೆಯಲಿದೆ. ಸದ್ಯ ದುಬೈ ಮತ್ತು ಅಬುಧಾನಿ ನಡುವೆ 90 ನಿಮಿಷಗಳ ಪ್ರಯಾಣವಿದೆ. ಆದ್ರೆ ಹೈಪರ್ ಲೂಪ್​ನಲ್ಲಿ ಈ ಎರಡು ನಗರಗಳ ನಡುವಿನ ಪ್ರಯಾಣ ಕೇವಲ 12 ನಿಮಿಷಕ್ಕೆ ಇಳಿಯಲಿದೆ. ಆದ್ರೆ ಭಾರತದ ಎಂಜಿನಿಯರ್​ಗಳು ಇದು ಕ್ಲಿಕ್ ಆಗುವ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ.

“ ಹೈ ಸ್ಪೀಡ್ ರೈಲ್ವೇ ಕನೆಕ್ಟಿವಿಟಿ ಬಗ್ಗೆ ಇರುವ ಯೋಜನೆಗಳೆಲ್ಲಾ ಉತ್ತಮ. ಆದ್ರೆ ಇದು ಆರಂಭವಾಗಬೇಕಾದರೆ ದಶಕಗಳೇ ಬೇಕು. ಸರ್ಕಾರದಿಂದ ಕ್ಲೀಯರೆನ್ಸ್ ಸಿಗಬೇಕು ಅಂದ್ರೆ ಅದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ.”

ಹೈಪರ್​ಲೂಪ್ ಟಿಕೆಟ್ ದರದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಸರ್ಕಾರ ಟಿಕೆಟ್ ರೇಟ್ ಕಡಿಮೆ ಇರಬೇಕು ಎಂದು ಬಯಸುತ್ತದೆ. ಸದ್ಯದ ಲೆಕ್ಕಾಚಾರದ ಪ್ರಕಾರ ಬೆಂಗಳೂರುನಿಂದ ಚೆನ್ನೈಗೆ ಪ್ರಯಾಣಿಸಲು ಸುಮಾರು 6000 ರೂಪಾಯಿ ಟಿಕೆಟ್ ದರ ಇರಲಿದೆ. ಹೀಗಾಗಿ ಹೈಪರ್ ಲೂಪ್ ಬಗ್ಗೆ ಸರ್ಕಾರ ಕೊಂಚ ಹಿಂದೆಮುಂದೆ ನೋಡುತ್ತಿದೆ.

ಇದನ್ನು ಓದಿ: ಹೊಸ ವರ್ಷದಲ್ಲಿ ಕಾಲ ಕಳೆಯೋದು ಹೇಗೆ..?- ಹಾಲಿಡೇ ಪ್ಲಾನ್ ಬಗ್ಗೆ ಯೋಚನೆ ಮಾಡಿ..!​

ಚೆನ್ನೈ ಮತ್ತು ಬೆಂಗಳೂರು ನಡುವಿನ ವಿಮಾನ ಪ್ರಯಾಣ ದರ ಸುಮಾರು 2000 ರೂಪಾಯಿಗಳಿಂದ 3000 ರೂಪಾಯಿಗಳ ತನಕ ಇದೆ. ಆದ್ರೆ ಹೈಪರ್ ಲೂಪ್ ದರ ಸುಮಾರು 6000 ರೂಪಾಯಿ ಇರುವ ಬಗ್ಗೆ ಅಂದಾಜಿಸಲಾಗಿದೆ. ಸದ್ಯಕ್ಕೆ ಇದು ಆರಂಭಿಕ ಹಂತದಲ್ಲಿದ್ದರೂ ಸರ್ಕಾರ ಟಿಕೆಟ್ ದರ ಕಡಿಮೆ ಮಾಡುವ ಬಗ್ಗೆ ಯೋಚನೆ ಮಾಡುತ್ತಿದೆ. ಕೇರಳದಲ್ಲಿರುವ ಹೈ-ಸ್ಪೀಡ್ ರೈಲ್ವೇ ಲೈನ್ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ತಿರುವನಂತರ ಪುರಂ ಮತ್ತು ಮಂಗಳೂರು ನಡುವೆ ಹೈ-ಸ್ಪೀಡ್ ರೈಲು ಯೋಜನೆ ಬಗ್ಗೆ ವರದಿ ಬಂದ ನಂತರ ಕೇರಳ ಟಿಕೆಟ್ ದರದ ಬಗ್ಗೆ ಯೋಚನೆ ಮಾಡಿ ಒಂದು ಹೆಜ್ಜೆ ಹಿಂದೆ ಇಟ್ಟಿತ್ತು.

ಈ ಮಧ್ಯೆ ಭಾರತದಲ್ಲಿ ಹೈಪರ್ ಲೂಪ್ ಯೋಜನೆ ಜಾರಿಗೆ ತರಲು, ಹಲವು ಕಷ್ಟಗಳು ಕೂಡ ಇರಲಿವೆ. ಅಬುಧಾಭಿ ಮತ್ತು ದುಬೈ ನಡುವೆ ಪ್ರಯೋಜನಕ್ಕೆ ಬಾರದೇ ಇರುವ ಹಲವು ಜಮೀನುಗಳಿವೆ. ಆದ್ರೆ ಭಾರತದಲ್ಲಿ ಇದಕ್ಕೆ ಕೊರತೆ ಕಾಡಲಿದೆ. ಇದೆಲ್ಲವನ್ನೂ ಹೊರತು ಪಡಿಸಿ ನೋಡಿದ್ರೆ ಖರ್ಚು ವೆಚ್ಚಗಳು ಸದ್ಯದ ಸ್ಥಿತಿಯಲ್ಲಿ ಭಾರತದ ಪ್ರಯಾಣಿಕರ ಪಾಲಿಗೆ ಹೊರಯಾಗಲಿದೆ. ಆದ್ರೆ ಯೋಜನೆ ಬಗ್ಗೆ ಭಾರತ ಕನಸಿಟ್ಟುಕೊಂಡಿರುವುದು, ನಿಜಕ್ಕೂ ಅಭಿವೃದ್ಧಿಯ ಸಂಕೇತ. 

ಇದನ್ನು ಓದಿ:

1. ಮಾನವನೊಂದಿಗೆ ಪೆಂಗ್ವಿನ್ ಸ್ನೇಹ...!

2. ಕಾಫಿ ಪುಡಿ, ಟೀ ಪೌಡರ್​ ಖಾಲಿ ಆದ್ರೆ ಚಿಂತೆ ಬೇಡ- ಹಾಲಿನ ಜೊತೆಗೆ ಅಗತ್ಯವಸ್ತುಗಳು ಕೂಡ ಬಂದೇ ಬರುತ್ತದೆ..!

3. ಕರ್ನಾಟಕದಲ್ಲೂ ಇದೆ ಕ್ಯಾಶ್​ಲೆಸ್​ ಗ್ರಾಮ- "ಬೆಳಪು" ಡಿಜಿಟಲ್​ ವ್ಯವಹಾರದ ಮೊದಲ ಬೆಳಕು..!