ಆವೃತ್ತಿಗಳು
Kannada

ಬಟ್ಟೆ ತೆಗೋಬೇಕಾ.. ಡೋಂಟ್​ವರಿ, ಟೆರ್ರಾ ಇದೆಯಲ್ಲಾ..!

ನೀಲಾ ಶಾಲು

AARADHYA
21st Dec 2015
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
image


ಬಟ್ಟೆಗಳನ್ನು ಕೊಳ್ಳುವ ಆ್ಯಪ್ ಬಂತು. ಬಸ್ಸುಗಳನ್ನು ಬುಕ್ ಮಾಡೋ ಆ್ಯಪ್ ಬಂತು .. ಎಲೆಕ್ಟ್ರಾನಿಕ್ ವಸ್ತುಗಳು ಕೊಳ್ಳುವ ಆ್ಯಪ್ ಬಂತು. ಗಿಫ್ಟ್ ಕೊಡೋ ಆ್ಯಪ್​​ಗಳೂ ಬಂದವು. ಇದೀಗ ಸರದಿಯಲ್ಲಿರೋದು ದಿನಸಿ ವಸ್ತುಗಳನ್ನು ಕೊಳ್ಳುವ ಆ್ಯಪ್​​ಗಳು. ಲೇಟೆಸ್ಟಾಗಿ ಸಿಲಿಕಾನ್ ಸಿಟಿಗೆ ದಿನಸಿ ವಸ್ತುಗಳನ್ನು ಕೊಳ್ಳಲು ಹೊಸ ಆ್ಯಪ್ ಬಿಡುಗಡೆಯಾಗಿದೆ. ಅದರ ಹೆಸರು ಟೆರ್ರಾ.

image


ಏನಿದು ಟೆರ್ರಾ ?

ನಿಮ್ಮ ಮನೆಗೆ ದಿನಸಿ ಬೇಕಾಗಿದ್ಯಾ. ಆದ್ರೆ ಮನೆಯಿಂದ ಆಚೆ ಹೋಗಲು ಸಾಧ್ಯವಾಗುತ್ತಿಲ್ವಾ. ಮನೆಗೆನೇ ಯಾರಾದರೂ ತಂದುಕೊಟ್ಟರೆ ಒಳ್ಳೆಯದಿತ್ತು, ಅಂತ ಯೋಚನೆ ಮಾಡ್ತಾ ಇದ್ದೀರಾ. ಹಾಗಾದ್ರೆ ನಿಮಗೆ ಅಂತನೇ ಇಲ್ಲಿ ಟೆರ್ರಾ ಎಂಬ ಹೊಸ ಆ್ಯಪ್ ಬಂದಿದೆ.. ಈ ಆ್ಯಪ್ ಗೆ ಹೋಗಿ ನಿಮಗೆ ಬೇಕಾದ ದಿನಸಿ ಆರಿಸಿ, ಬುಕ್ ಮಾಡಿದ್ರೆ ಸಾಕು.. ಕೆಲವೇ ಗಂಟೆಯಲ್ಲಿ ನಿಮ್ಮ ವಸ್ತುಗಳು, ನಿಮ್ಮ ಮನೆ ಬಾಗಿಲಿಗೆ ಬಂದು ಬಿಡುತ್ತದೆ..

image


ಮೂಲತಃ ಬೆಂಗಳೂರು ಮೂಲಕ ಟೆರ್ರಾ ಕಂಪನಿ, ಇತ್ತೀಚೆಗಷ್ಟೇ ಪ್ರಾರಂಭವಾಗಿದೆ. ಜೆಸ್ಟ್ ಆ್ಯಪ್ ಗೆ ವಿಸಿಟ್ ಕೊಟ್ಟು ಬೇಕಾದ ಸಾಮಾಗ್ರಿ ಬೆಲೆ ಜೊತೆಗೆ ಅವುಗಳ ಮೇಲಿನ ರಿಯಾಯಿತಿ ಈ ಎಲ್ಲಾವುಗಳನ್ನು ಮನೆಯಲ್ಲಿಯೇ ಕುಳಿತು ಕೆಲವೇ ಲಕ್ಷದಲ್ಲಿ ತಮ್ಮ ಮೊಬೈಲ್ ಮೂಲಕ ತಿಳಿಯಬಹುದು. ಅಂಗಡಿ ಹೋಗಬೇಕು ಎಂಬ ಗೋಜಿಲ್ಲ.. ಸರದಿಯಲ್ಲಿ ನಿಲ್ಲಬೇಕು ಎಂಬ ತಲೆನೋವು ಇಲ್ಲ. ಮನೆಯಲ್ಲಿ ಟಿವಿ ಮುಂದೆ ಕುಳಿತು ಆರಾಮಾಗೆ ದಿನಸಿಯನ್ನು ಖರೀದಿಸಬಹುದು…

image


ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಮಹಿಳೆಯರು ಹೆಚ್ಚು ಕೆಲಸದ ಒತ್ತಡದಲ್ಲಿ ಇರ್ತಾರೆ. ಆ ಮಧ್ಯೆ ಮನೆ ಕೆಲಸ, ಅಡುಗೆ ಇವುಗಳ ಬಗ್ಗೆ ಯೋಚನೆ ಮಾಡೋದಕ್ಕೂ ಕೂಡ ಸಮಯ ಇರುವುದಿಲ್ಲ. ಇನ್ನು ಹೋರಗಡೆ ಹೋಗಿ ದಿನಸಿ ತರುವುದಕ್ಕೆ ಸಮಯ ಎಲ್ಲಿಂದ ಬರಬೇಕು ಹೇಳಿ. ಅಂತಹವರಿಗೆ ಈ ಟೆರ್ರಾ ಆ್ಯಪ್ ಬಹಳ ಉಪಯೋಗಕಾರಿ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಜೆಟ್ ಇಂಟರ್ ನೆಟ್ ಇದ್ರೆ ಸಾಕು ಕೆಲವೇ ನಿಮಿಷದಲ್ಲಿ ನಮಗೆ ಬೇಕಾದ ದಿನಸಿಯನ್ನ ಮನೆಯಲ್ಲೇ ಕುಳಿತು ಬುಕ್ ಮಾಡಿ ಪಡೆಯಬಹುದು…

image


ಇನ್ನು ಅರ್ಜೆಂಟಾಗಿ ದಿನಸಿ ಬೇಕು ಆದ್ರೆ ನಿಮ್ಮ ಮೊಬೈಲ್ ನಲ್ಲಿ ಇಂಟರ್ ನೆಟ್ ಕನೆಕ್ಷನ್ ಇಲ್ಲ ಯೋಚನೆ ಮಾಡೋ ಬದಲು, ತಕ್ಷಣ ಫ್ರೆಂಡ್​ಗೆ ಫೋನ್ ಮಾಡಿ. ನಿಮ್ಮ ಫ್ರೆಂಡು ನಿಮಗಾಗಿ ಆ್ಯಪ್​​ನಲ್ಲಿ ನಿಮಗೆ ದಿನಸಿ ವಸ್ತುಗಳನ್ನು ಆರ್ಡರ್ ಮಾಡಬಹುದು. ಏನೇ ಆದರೂ ನಿಮಗೆ ಬೇಕಾದ ದಿನಸಿ ವಸ್ತುಗಳು ನಿಮ್ಮ ಮನೆ ಬಾಗಿಲಿಗೆ ಬರುತ್ತವೆ.

image • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags