ಆವೃತ್ತಿಗಳು
Kannada

ಸಿಗರೇಟ್ ತ್ಯಾಜ್ಯಕ್ಕೂ ಕೊಡ್ತಾರೆ ಹಣ : ವೇಸ್ಟ್ ರಿಸೈಕಲ್ ಮಾಡಿ ಉಳಿಸ್ತಿದ್ದಾರೆ ಪರಿಸರ

ಟೀಂ ವೈ.ಎಸ್.ಕನ್ನಡ 

16th Jan 2017
Add to
Shares
11
Comments
Share This
Add to
Shares
11
Comments
Share

ಸಿಗರೇಟ್ ಆರೋಗ್ಯಕ್ಕೆ ಹಾನಿಕರ. ಮಾತ್ರವಲ್ಲ ಸೇದಿ ಎಸೆದ ಮೇಲೆ ಪರಿಸರಕ್ಕೂ ಅದು ಮಾರಕ. ಜಗತ್ತಿನಾದ್ಯಂತ ಅಪಾರ ಪ್ರಮಾಣದಲ್ಲಿ ಸಿಗರೇಟ್ ಬಳಕೆಯಾಗ್ತಿದೆ, ದಿನೇ ದಿನೇ ಧೂಮಪಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗಾಗಿ ಸಿಗರೇಟ್ ಉರಿಸಿದ ಬಳಿಕ ರಾಶಿ ರಾಶಿ ಬೂದಿ, ಬಳಸಿ ಬಿಸಾಡಿದ ಸಿಗರೇಟ್ ತುಂಡುಗಳ ರಾಶಿ ಎಲ್ಲಾ ಕಡೆ ಬಿದ್ದಿರುತ್ತೆ. ಪ್ರತಿದಿನ ಉತ್ಪತ್ತಿಯಾಗುತ್ತಿರುವ ಟನ್ ಗಟ್ಟಲೆ ಸಿಗರೇಟ್ ಬೂದಿ ಹಾಗೂ ಸಿಗರೇಟಿನ ಅವಶೇಷದಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಈ ಸಿಗರೇಟ್ ತುಂಡುಗಳನ್ನು ಸೆಲ್ಯುಲೋಸ್ ಆಸಿಟೋಸ್ ಎಂಬ ಸಿಂಥೆಟಿಕ್ ಪಾಲಿಮರ್​ನಿಂದ ನಿಂದ ತಯಾರಿಸಲಾಗಿದೆ. ಇದು ಪೂರ್ತಿಯಾಗಿ ಕೊಳೆತು ಗೊಬ್ಬರವಾಗಲು 18 ತಿಂಗಳುಗಳಿಂದ 10 ವರ್ಷ ಸಮಯ ಬೇಕು. ಸೆಲ್ಯುಲೋಸ್ ಆಸಿಟೇಟ್ ಜೈವಿಕವಲ್ಲದ ಒಂದು ಪ್ಲಾಸ್ಟಿಕ್ ಫಿಲ್ಟರ್ ಆಗಿದ್ದು, ಪರಿಸರಕ್ಕೆ ಮಾರಕವಾಗುತ್ತಿದೆ.

image


ಇಂತಹ ಸಿಗರೇಟ್ ತ್ಯಾಜ್ಯಗಳಿಂದ ಪರಿಸರವನ್ನು ಉಳಿಸಲು ಗುರ್ಗಾಂವ್ ನ ಇಬ್ಬರು ಯುವಕರು ಶ್ರಮಿಸುತ್ತಿದ್ದಾರೆ. ವಿಶಾಲ್ ಕಾಂತ್ ಹಾಗೂ ನಮನ್ ಗುಪ್ತಾ ‘ಕೋಡ್’ ಎಂಬ ಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿದ್ದು, ಸಿಗರೇಟ್ ತ್ಯಾಜ್ಯಗಳನ್ನು ರಿಸೈಕಲ್ ಮಾಡುತ್ತಿದ್ದಾರೆ. ವಿಶಾಲ್ ಹಾಗೂ ನಮನ್ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದಾಗ ಬಂದ ಐಡಿಯಾ ಇದು. ಇಡೀ ಪಾರ್ಟಿ ಹಾಲ್ ತುಂಬಾ ಸಿಗರೇಟಿನ ತುಂಡುಗಳು ಬಿದ್ದಿತ್ತು. ಅದನ್ನು ನೋಡಿ ಇಬ್ಬರಿಗೂ ಶಾಕ್ ಆಗಿತ್ತು, ಜೊತೆಯಾಗಿ ಏನನ್ನಾದ್ರೂ ಮಾಡಲೇಬೇಕು ಎನಿಸಿತ್ತು. ‘ನಾವು ಪಾರ್ಟಿ ಮಾಡ್ತಾ ಇದ್ದಿದ್ದು ಪಕ್ಕಾ ಬ್ಯಾಚ್ಯುಲರ್ ಗಳ ಮನೆಯಲ್ಲಿ. ಸ್ನೇಹಿತರೆಲ್ಲ ಬರ್ತಾ ಇದ್ರು, ಸಿಗರೇಟ್ ಸೇದಿ ಅಲ್ಲಲ್ಲೇ ಬಿಸಾಡುತ್ತಿದ್ರು. ಅದನ್ನು ನೋಡಿದಾಗ ಸಿಗರೇಟ್ ತುಂಡುಗಳನ್ನು ಮರುಬಳಕೆ ಮಾಡಿ ಏನನ್ನಾದ್ರೂ ಮಾಡಬೇಕು ಎನಿಸಿತ್ತು’ ಅಂತಾ ವಿಶಾಲ್ ಹಾಗೂ ನಮನ್ ತಿಳಿಸಿದ್ದಾರೆ.

2016ರ ಜುಲೈನಲ್ಲಿ ವಿಶಾಲ್ ಹಾಗೂ ನಮನ್ ‘ಕೋಡ್’ ಅನ್ನು ಲಾಂಚ್ ಮಾಡಿದ್ದಾರೆ. ಎಲ್ಲಾ ಬಗೆಯ ಮರುಬಳಕೆ ಪ್ರಕ್ರಿಯೆಗೆ ಇಲ್ಲಿ ಪರಿಹಾರ ಸಿಗುತ್ತದೆ. ಸಿಗರೇಟ್ ಸೇದಿದ ಮೇಲೆ ಉಳಿದ ಎಲ್ಲಾ ಬಗೆಯ ತ್ಯಾಜ್ಯಗಳನ್ನೂ ಕೋಡ್ ನಲ್ಲಿ ರಿಸೈಕಲ್ ಮಾಡಲಾಗುತ್ತದೆ. ಇಂಟ್ರೆಸ್ಟಿಂಗ್ ವಿಷಯ ಅಂದ್ರೆ ಜನರು ತಮ್ಮ ಸಿಗರೇಟ್ ತ್ಯಾಜಗಳನ್ನು ಅವರಿಗೆ ಫ್ರೀಯಾಗಿ ಕೊಡಬೇಕಿಲ್ಲ, ಅದಕ್ಕೂ ಅವರು ಹಣ ಕೊಡ್ತಾರೆ. ಒಂದು ಕೆಜಿ ಸಿಗರೇಟ್ ತ್ಯಾಜ್ಯಕ್ಕೆ 700 ರೂಪಾಯಿ ಹಾಗೂ 100 ಗ್ರಾಂ ಸಿಗರೇಟ್ ವೇಸ್ಟ್ ಗೆ ಇವರು 80 ರೂಪಾಯಿ ಕೊಡ್ತಾರೆ. ಗ್ರಾಹಕರು ಹಾಗೂ ಸಿಗರೇಟ್ ಮಾರುವವರು ಕೂಡ ತ್ಯಾಜ್ಯವನ್ನು ಕೋಡ್ ಸಂಸ್ಥೆಗೆ ಕೊಡಬಹುದು.

ಮರುಬಳಕೆ ಸಂಸರ್ಭದಲ್ಲಿ ಶೇ.99.9ರಷ್ಟು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲಾಗುತ್ತದೆ, ಅದಕ್ಕೆ ಬೇಕಾದ ರಾಸಾಯನಿಕಗಳನ್ನು ಬಳಸಲಾಗುತ್ತದೆ. ತಯಾರಾದ ಉಪ ಉತ್ಪನ್ನಗಳನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕಳೆದ ಮೂರು ತಿಂಗಳಲ್ಲಿ ವಿಶಾಲ್ ಹಾಗೂ ನಮನ್ 10 ಕೆಜಿಯಷ್ಟು ಸಿಗರೇಟ್ ಬೂದಿ, ತುಂಡುಗಳು, ಫಿಲ್ಟರ್, ಪೇಪರ್ ಗಳನ್ನು ಸಂಗ್ರಹಿಸಿದ್ದಾರೆ. ದೇಶಾದ್ಯಂತ ಇದನ್ನೊಂದು ಅಭಿಯಾನದ ರೀತಿಯಲ್ಲಿ ಪರಿಚಯಿಸುವುದು ಅವರ ಉದ್ದೇಶ. ಕೋಡ್ ಈಗಾಗ್ಲೇ 70ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ, ಅವರಲ್ಲಿ 50 ಮಂದಿ ವೆಂಡರ್ ಗಳು. ಎಲ್ಲಾ ಕಡೆಗಳಲ್ಲಿ ಅವರು ಸಿಗರೇಟ್ ವೇಸ್ಟ್ ಸಂಗ್ರಹಿಸಲು ವಿಬಿನ್ ಗಳನ್ನು ವಿತರಿಸ್ತಾರೆ. ಪ್ರತಿ 15 ದಿನಗಳಿಗೊಮ್ಮೆ ಅದನ್ನು ಕಲೆಕ್ಟ್ ಮಾಡಿಕೊಂಡು ಬರ್ತಾರೆ. 25ರ ಹರೆಯದ ವಿಶಾಲ್ ವೃತ್ತಿಯಲ್ಲಿ ಎಂಜಿನಿಯರ್. ನಮನ್ ಕೂಡ ದೆಹಲಿ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿದ್ದಾರೆ.

‘ದಿ ಪಯೋನಿಯರ್’ ವರದಿ ಪ್ರಕಾರ ಭಾರತವೊಂದರಲ್ಲೇ ಪ್ರತಿ ವರ್ಷ 100 ಬಿಲಿಯನ್ ಗೂ ಅಧಿಕ ಸಿಗರೇಟ್ ತುಂಡುಗಳ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಬೆಂಗಳೂರು ನಗರದಲ್ಲಿ ಪ್ರತಿದಿನ 31 ಲಕ್ಷ ಸಿಗರೇಟ್ ತುಂಡುಗಳು ಉತ್ಪಾದನೆಯಾಗುತ್ತವೆ.

‘ಸಿಗರೇಟ್ ತ್ಯಾಜ್ಯ ಪರಿಸರಕ್ಕೆ ಅತ್ಯಂತ ಹಾನಿ ಮಾಡುತ್ತದೆ. ಇವುಗಳಿಂದ ಕ್ಯಾನ್ಸರ್ ಬರುವ ಅಪಾಯವಿದೆ, ನೀರಿನಲ್ಲಿ ಮಿಶ್ರಣವಾದ್ರೆ ಅದನ್ನು ಕುಡಿದವರಿಗೆ ತೊಂದರೆ ತಪ್ಪಿದ್ದಲ್ಲ. ಹಕ್ಕಿಗಳು, ಮೀನುಗಳು ಮತ್ತು ಪ್ರಾಣಿಗಳು ಸಿಗರೇಟ್ ತುಂಡುಗಳನ್ನು ತಿನ್ನುತ್ತಿವೆ’ ಅಂತಾ ಎಚ್ ಸಿ ಜಿ ಕ್ಯಾನ್ಸರ್ ಸೆಂಟರ್ ನ ಡಾ.ವಿಶಾಲ್ ರಾವ್ ಹೇಳಿದ್ದಾರೆ. ಜಗತ್ತಿನಾದ್ಯಂತ ತಾಪಮಾನ ಏರಿಕೆ ಹಾಗೂ ಪರಿಸರ ಮಾಲಿನ್ಯದ ಬಗ್ಗೆ ಆತಂಕವಿದೆ, ಚರ್ಚೆಯಾಗ್ತಿದೆ. ಹಾಗಾಗಿ ಈ ಯುವಕರು ಸ್ವಯಂಪ್ರೇರಿತರಾಗಿ ಪರಿಸರ ಉಳಿಸಲು ಕೈಗೊಂಡಿರುವ ಕ್ರಮ ನಿಜಕ್ಕೂ ಶ್ಲಾಘನೀಯ. 

ಇದನ್ನೂ ಓದಿ.. 

ಒಲಿಂಪಿಕ್ಸ್ ಅಂಚೆ ಚೀಟಿಗಳ ಸಂಗ್ರಹಕ್ಕಾಗಿ ಕಂಚಿನ ಪದಕ ಗೆದ್ದಿರುವ ಬೆಂಗಳೂರಿನ ಉದ್ಯಮಿ

ಆರ್​ಬಿಐ ಮಾಜಿ ಗರ್ವರ್ನರ್​ ಪಾಲಿಗೆ ಪ್ರಾಧ್ಯಾಪಕ- ಬುಡಕಟ್ಟು ಜನರಿಗೆ ಅಭಿವೃದ್ಧಿ ಪಾಠ ಹೇಳುವ ಸಾಧಕ

Add to
Shares
11
Comments
Share This
Add to
Shares
11
Comments
Share
Report an issue
Authors

Related Tags