ಜಗತ್ತನ್ನು ನೋಡುವ ದೃಷ್ಟಿ ಬದಲಿಸಲಿರುವ ಲೆನ್ಸ್..!

ಎನ್​ಎಸ್​ಆರ್​

ಜಗತ್ತನ್ನು ನೋಡುವ ದೃಷ್ಟಿ ಬದಲಿಸಲಿರುವ ಲೆನ್ಸ್..!

Saturday April 02, 2016,

2 min Read

ದಿನದಿಂದ ದಿನಕ್ಕೆ ಎಲ್ಲವೂ ಸ್ಮಾರ್ಟ್ ಮತ್ತು ಹೈ ಟೆಕ್ ಆಗುತ್ತ ಸಾಗುತ್ತಿದೆ. ತಂತ್ರಜ್ಞಾನ ಬೆಳೆದಂತೆಲ್ಲ, ಜನರ ಹಲವು ಸಮಸ್ಯೆಗಳಿಗೆ ಪರಿಹಾರ ಹುಡುಕಲಾಗುತ್ತಿದೆ. ಜಗತ್ತನ್ನು ನೋಡುವ ಬಗೆಯನ್ನು ಬದಲಿಸಲು ಹೊಸ ಲೆನ್ಸ್ ಮಾರುಕಟ್ಟಗೆ ಲಗ್ಗೆಯಿಡಲಿದೆ. ಈಗ ಕನ್ನಡಕ ಬಳಸುವವರಿಗೆ ಹೊಸ ಲೆನ್ಸ್ ಆ ಸ್ಥಾನವನ್ನು ತುಂಬಲು ಬರುತ್ತಿದೆ. ಕಲರ್-ಕಲರ್ ಡಿಸೈನ್, ವಿಚಿತ್ರ, ವಿಭಿನ್ನ ಶೇಪ್ ಮತ್ತು ಫ್ರೇಮ್ ಹಾಕಿಸಿಕೊಂಡು ಕನ್ನಡಕದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದವರಿಗೆ ಇನ್ಮುಂದೆ ದೃಷ್ಟಿ ದೋಷಕ್ಕೆ, ಎಂತಹ ಕನ್ನಡಕ ಸೆಲೆಕ್ಟ್ ಮಾಡಬೇಕು, ನಮ್ಮ ಮುಖಕ್ಕೆ ಹೊಂದುವ ಫ್ರೇಮ್ ಯಾವುದು ಎಂದು ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಕೇವಲ ಒಂದು ಲೆನ್ಸ್ ಹಾಕಿದ್ರೆ ಸಾಕೂ ನಿಮ್ಮ ಎಲ್ಲ ಸಮಸ್ಯೆಗಳನ್ನು ಮಿಲಿ ಸೆಕೆಂಡ್ಸ್​​ನಲ್ಲಿ ಬಗೆಹರಿಸಲಿದೆ. ಜಗತ್ತನ್ನು ನೋಡುವ ರೀತಿ ಬದಲಾಗಲಿದೆ.

image


ಸಣ್ಣ ಅಕ್ಷರ ಅಥವಾ ದೂರದ ವಸ್ತುಗಳನ್ನು ನೋಡುವುದಕ್ಕೆಂದು ಕನ್ನಡಕಗಳನ್ನು ಬಳಸುತ್ತಿದ್ದರೆ, ಅದನ್ನು ಮೂಲೆಗೆಸೆದು ಲೆನ್ಸ್ ಮೊರೆ ಹೋಗುವ ಕಾಲ ಸಮೀಪಿಸಿದೆ. ವಾತಾವರಣ ಹಾಗೂ ಬೆಳಕು ಬದಲಾಗುತ್ತಿದ್ದಂತೆ ಮಿಲಿಸೆಕೆಂಡುಗಳಲ್ಲಿ ಸ್ವಯಂಚಾಲಿತವಾಗಿ ಬದಲಾಗುವ ಲೆನ್ಸ್​​ಗಳು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿವೆ. ಇವು ಎಷ್ಟು ವೇಗವಾಗಿ ಕೆಲಸ ಮಾಡುತ್ತವೆ ಎಂದರೆ, ನಿಜವಾದ ಮನುಷ್ಯನ ಕಣ್ಣುಗಳು ಸ್ಪಂದಿಸುವ ವೇಗಕ್ಕಿಂತ ಹೆಚ್ಚು ವೇಗವಾಗಿ, ಬೆಳಕು ಹಾಗೂ ಕತ್ತಲಿನ ಸಮಯದಲ್ಲಿ ಇದು ಹೊಂದಿಕೊಂಡು ಬೀಡುತ್ತದೆ. ಹಾಗಾಗಿ ಈ ಲೆನ್ಸ್​​ಗಳು ಅಮೆರಿಕಾದಲ್ಲಿ ಹೆಚ್ಚು ಸುದ್ದಿಗೆ ಗ್ರಾಸವಾಗಿದೆ.

ಇದನ್ನು ಓದಿ: ರೈತರ ಬಂಧು 'ಅಗ್ರಿ ಮಾರ್ಕೆಟ್' ಆ್ಯಪ್

ದೃಷ್ಟಿ ದೋಷಕ್ಕಾಗಿ ಇನ್ಮುಂದೆ ಮನುಷ್ಯರು ಕನ್ನಡಕವನ್ನು ಧರಿಸುವುದನ್ನು ಬಿಟ್ಟು ಬೀಡಬೇಕು, ಅಂತಹ ಲೆನ್ಸ್ ಕಂಡುಹಿಡಿದಿದ್ದೇವೆ ಎಂದು ಅಮೇರಿಕಾದ ಸಂಶೋಧಕರು ಹೇಳಿಕೊಂಡಿದ್ದಾರೆ. ಮೀನಿನ ಕಣ್ಣಿನ ಮಾದರಿಯಲ್ಲಿ ಈ ಲೆನ್ಸ್ ವಿನ್ಯಾಸಗೊಳಿಸಲಾಗಿದೆಯಂತೆ. ಈ ಲೆನ್ಸ್​ನಿಂದ ಕತ್ತಲಲ್ಲೂ ವಸ್ತುಗಳನ್ನು ಹೆಚ್ಚು ಸ್ಪಷ್ಟವಾಗಿ ನೋಡಬಹುದಾಗಿದೆ. ಬೆಕ್ಕು, ನಾಯಿಗಳು ಯಾವ ರೀತಿ ಕತ್ತಲಲ್ಲಿ ವಸ್ತುಗಳನ್ನು ಗ್ರಹಿಸುತ್ತವೋ ಆ ಮಾದರಿಯಲ್ಲಿ, ಎಲ್ಲವನ್ನು ಸ್ಪಷ್ಟವಾಗಿ ಕಾಣಬಹುದುದೆಂದು ಹೇಳಿಕೊಂಡಿದ್ದಾರೆ. ಅಮೆರಿಕದ ಮ್ಯಾಡಿಸನ್​​ನಲ್ಲಿರುವ ವಿಸ್ಕಾನ್ಸಿನ್ ವಿವಿ ಸಂಶೋಧಕ ಹೊಂಗ್ರುಯಿ ಜಿಯಾಂಗ್ ಈ ಲೆನ್ಸನ್ನು ಅಭಿವೃದ್ಧಿಪಡಿಸಿದ್ದಾರೆ. ಅಲ್ಲದೆ ಇದು ಪ್ರೆಸ್ಬಿಯೋಪಿಯಾ ಎಂಬ ಕತ್ತಲೆಯಲ್ಲಿ ದೃಷ್ಟಿ ಸಮಸ್ಯೆ ಇರುವ ರೋಗಿಗಳಿಗೆ ನೆರವಾಗಲಿದೆ ಎಂದು ಸಂಶೋಧಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

image


ಈ ಲೆನ್ಸ್ ವಿಶೇಷವೆಂದರೆ, ವ್ಯಕ್ತಿಯ ಕಾರ್ನಿಯಾಗೆ ಈ ಲೆನ್ಸ್ ಸುಲಭವಾಗಿ ಹೊಂದಿಕೊಳ್ಳುತ್ತದೆ. ಮೀನುಗಳು ಸಮುದ್ರದ ಆಳದಲ್ಲಿ ಕಡಿಮೆ ಪ್ರಮಾಣದಲ್ಲಿ ಬೆಳಕಿದ್ದರೂ ಪರಿಣಾಮಕಾರಿ ದೃಷ್ಟಿ ಹೊಂದಿರುತ್ತವೆ. ಇದಕ್ಕೆ ಮೀನಿನ ಕಣ್ಣಿನ ರಚನೆ ಕಾರಣ. ಅದಂತೆಯೆ ಲೆನ್ಸ್​ನ ರಚನೆಯಾಗಿದ್ದು, ಪರಿಣಾಮಕಾರಿಯಾಗಿ ಇದು ಕೆಲಸ ಮಾಡುತ್ತದೆ. ಈ ವೈಶಿಷ್ಟ್ಯಳ ಅಧ್ಯಯನ ನಡೆಸಿದ ಜಿಯಾಂಗ್, ಕೃತಕ ಕಣ್ಣನ್ನು ಮೊದಲು ರೂಪಿಸಿದ್ದರು. ನಂತರ ಇದೇ ಗುಣಗಳನ್ನು ಹೊಂದಿರುವ ಲೆನ್ಸ್ ಸಿದ್ಧಪಡಿಸಿದ್ದಾರೆ. ಈ ಲೆನ್ಸ್​​ನಲ್ಲಿ ಬೆಳಕನ್ನು ಗ್ರಹಿಸುವ ಅತಿ ಸಣ್ಣ ಕಣಗಳಿವೆ. ಇದರೊಳಗೆ ಅಲ್ಯುಮಿನಿಯಂನಿಂದ ಮಾಡಲಾದ ಪ್ರತಿಫಲಕಗಳಿರುತ್ತವೆ. ಬೆಳಕು ಈ ಭಾಗಕ್ಕೆ ಬಿದ್ದ ತಕ್ಷಣ ಪ್ರತಿಫಲಕಗಳಿಂದ ಕೇಂದ್ರೀಕರಿ ಸಲ್ಪಡುತ್ತದೆ. ಹಾಗಾಗಿ ಕ್ಷಣಮಾತ್ರದಲ್ಲಿ ಇದು ಪ್ರತಿಕ್ರಿಯಿಸುತ್ತದೆ. ಹಾಗಾಗಿ ಹಗಲು-ಕತ್ತಲಿನಲ್ಲಿ ಯಾವ ವಸ್ತುವನ್ನಾದ್ರು ಹೆಚ್ಚು ಸ್ಪಷ್ಟವಾಗಿ ನೋಡಲು ಇದು ಸಹಾಯಕಾರಿಯಾಗಿದೆ.

image


ಪ್ರಯೋಗಾಲಯದಲ್ಲಿ ಈ ಸಾಧನವನ್ನು ಪರೀಕ್ಷಿಸಲಾಗಿದ್ದು, ಚಿತ್ರವನ್ನು ಹೆಚ್ಚು ಸ್ಪಷ್ಟವಾಗಿ ನೋಡುವ ಇದರ ಸಾಮರ್ಥ್ಯ ಹೆಚ್ಚು ಪರಿಣಾಮಕಾರಿಯಾಗಿದೆ. ಅಲ್ಲದೆ ಈ ಸಾಧನ ನಿರ್ವಣಕ್ಕೆ ಯಾವ ಸಾಮಗ್ರಿ ಸೂಕ್ತವಾಗಿದೆ ಎಂದೂ ಪರೀಕ್ಷೆ ನಡೆಸಲಾಗಿದೆ. ಸಿಲಿಕಾನ್ ಡ್ರಾಪ್ಲೆಟ್​​ನಿಂದ ಸದ್ಯ ಲೆನ್ಸ್ ತಯಾರಿಸಲಾಗಿದ್ದು, ಇನ್ನಷ್ಟು ಅಧ್ಯಯನ ನಡೆಸಿದ ಬಳಿಕ ಅಂತಿಮ ರೂಪ ನೀಡಲು ನಿರ್ಧರಿಸಲಾಗಿದೆ. ಕೆಲವೇ ವರ್ಷಗಳಲ್ಲಿ ಈ ಲೆನ್ಸ್ ಮಾರುಕಟ್ಟೆಗೆ ಬರುವ ಸಾಧ್ಯತೆಯಿದ್ದು, ದೃಷ್ಟಿ ಸಮಸ್ಯೆ ಉಳ್ಳವರು ಈಗ ಹೆಚ್ಚು ಸ್ಪಷ್ಟವಾಗಿ ಜಗತ್ತನ್ನು ನೋಡುವ, ಕಣ್ತುಂಬಿಕೊಳ್ಳುವ ಕಾಲ ಸಮೀಪಿಸಿದೆ.

ಇದನ್ನು ಓದಿ

1. ಹಚ್ಚಿದ್ದು ಬಣ್ಣ ..ಮಾಡುತ್ತಿರೋದು ಸೇವೆ-ಬಣ್ಣಕ್ಕೂ ಬಂತು ಸೇವೆಯ ನಂಟು ..

2. ಓದಿದ್ದು ಎಂಬಿಎ, ಆಗಿದ್ದು ಕೋಳಿ ಫಾರ್ಮ್ ಮಾಲೀಕ..!

3. ಚಿತ್ರಕಲಾ ಲೋಕದಲ್ಲೊಂದು ವರ್ಣ ‘ವಿಲಾಸ’