ಆವೃತ್ತಿಗಳು
Kannada

ಔಷಧ ಉದ್ಯಮದ ಯಶಸ್ವಿ ಸಾರಥಿ : ದೇಶದ 2ನೇ ಶ್ರೀಮಂತ ದಿಲೀಪ್ ಸಾಂಘ್ವಿ

ಟೀಮ್ ವೈ.ಎಸ್.ಕನ್ನಡ 

YourStory Kannada
19th Jan 2017
Add to
Shares
3
Comments
Share This
Add to
Shares
3
Comments
Share

ಅವರ ತಂದೆ ಔಷಧ ವ್ಯಾಪಾರಿ, ಅದೇ ಉದ್ಯಮದಲ್ಲಿ ಬದುಕು ಸಾಗಿಸ್ತಾ ಇದ್ರು. ತಂದೆಯ ಬಳಿ 10,000 ರೂಪಾಯಿ ಪಡೆದಿದ್ದ ಮಗ ಈಗ ದೊಡ್ಡ ಔಷಧ ಕಂಪನಿಯೊಂದರ ಮಾಲೀಕ. ಭಾರತದ ಎರಡನೇ ಅತಿದೊಡ್ಡ ಶ್ರೀಮಂತ ವ್ಯಕ್ತಿ. ಅವರ್ಯಾರು ಗೊತ್ತಾ? ಖ್ಯಾತ ಉದ್ಯಮಿ ದಿಲೀಪ್ ಸಾಂಘ್ವಿ.

image


ದಿಲೀಪ್ ಅವರು ಜನಿಸಿದ್ದು ಮುಂಬೈನಲ್ಲಿ. ನಂತರ ಅವರ ತಂದೆ ಕೋಲ್ಕತ್ತಾಗೆ ಶಿಫ್ಟ್ ಆದ್ರು. ಕೋಲ್ಕತ್ತಾ ಯೂನಿವರ್ಸಿಟಿಯಲ್ಲಿ ಪದವಿ ಮುಗಿಸಿದ ದಿಲೀಪ್ ತಂದೆಯಂತೆ ತಾವು ಕೂಡ ಉದ್ಯಮ ಲೋಕಕ್ಕೆ ಕಾಲಿಟ್ಟರು. ಕೋಲ್ಕತ್ತಾದಲ್ಲೇ ಸ್ವಂತ ಉದ್ಯಮ ಆರಂಭಿಸಿದ್ರು. ಆಗ ದಿಲೀಪ್ ಜೊತೆ ಒಬ್ಬನೇ ಒಬ್ಬ ಉದ್ಯೋಗಿ ಕೆಲಸ ಮಾಡ್ತಾ ಇದ್ದ. ಆ ಸಮಯದಲ್ಲಿ ದಿಲೀಪ್ ಮನೋವೈದ್ಯಶಾಸ್ತ್ರಕ್ಕೆ ಸಂಬಂಧಪಟ್ಟ ಔಷಧಗಳನ್ನು ಮಾರಾಟ ಮಾಡುತ್ತಿದ್ರು. ನಂತರ ಮುಂಬೈಗೆ ಶಿಫ್ಟ್ ಆದ ದಿಲೀಪ್, ಗುಜರಾತ್​ನ ವಪಿ ಎಂಬಲ್ಲಿ ಕಾರ್ಖಾನೆಯೊಂದನ್ನು ಶುರು ಮಾಡಿದ್ರು.

ವ್ಯಾಪಾರದಲ್ಲಿ ತಂದೆಗೆ ನೆರವಾಗುತ್ತಿದ್ದಾಗ್ಲೇ ಸ್ವಂತ ಫ್ಯಾಕ್ಟರಿ ಆರಂಭಿಸಬೇಕೆಂಬ ಆಲೋಚನೆ ದಿಲೀಪ್ ಸಾಂಘ್ವಿ ಅವರಿಗೆ ಬಂದಿತ್ತು. ಹಾಗಾಗಿ ಟ್ರೇಡಿಂಗ್ ಬ್ಯುಸಿನೆಸ್ ಬಿಟ್ಟು ಸ್ವಂತ ಕಾರ್ಖಾನೆ ಆರಂಭಿಸಿದ ದಿಲೀಪ್, ತಮ್ಮದೇ ಆದ ಬ್ರಾಂಡ್ ಒಂದನ್ನು ಸೃಷ್ಟಿಸಿದ್ರು. ತಂದೆಯ ಬಳಿ ಸ್ವಲ್ಪ ಹಣಕಾಸಿನ ನೆರವು ಪಡೆದು 1982ರಲ್ಲಿ ‘ಸನ್ ಫಾರ್ಮಾಸುಟಿಕಲ್’ ಕಂಪನಿಯನ್ನು ಆರಂಭಿಸಿದ್ರು. ಸ್ನೇಹಿತರು ಹಾಗೂ ಪರಿಚಯಸ್ಥರಿಂದ ಸಹಾಯ ಪಡೆದು ಹೊಸ ಸಾಹಸಕ್ಕೆ ಕೈಹಾಕಿದ್ರು. ಮನೋರೋಗ ಚಿಕಿತ್ಸೆಗೆ ಬೇಕಾದ 5 ಬಗೆಯ ಔಷಧಗಳನ್ನು ಉತ್ಪಾದಿಸಲು ಶುರು ಮಾಡಿದ್ರು. ಹೀಗೆ ಯಶಸ್ಸಿನ ಒಂದೊಂದೇ ಮೆಟ್ಟಿಲೇರುತ್ತಾ ಬಂದ ‘ಸನ್ ಫಾರ್ಮಾಸುಟಿಕಲ್’ ಕಂಪನಿ 1996ರಲ್ಲಿ 24 ದೇಶಗಳಲ್ಲಿ ಕಾರ್ಯಾರಂಭ ಮಾಡಿತ್ತು.

2011ರಲ್ಲಿ Ranbaxy 2 ಬಿಲಿಯನ್ ಆದಾಯ ಗಳಿಸುವ ಮೂಲಕ ಈ ಸಾಧನೆ ಮಾಡಿದ ಭಾರತೀಯ ಮೂಲದ ಮೊದಲ ಕಂಪನಿ ಎನಿಸಿಕೊಂಡಿತ್ತು. 1987ರಲ್ಲಿ 'ಮಿಲ್ಮೆಟ್ ಲ್ಯಾಬ್ಸ್' ಅನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಸನ್ ಫಾರ್ಮಾ ನೇತ್ರವಿಜ್ಞಾನ ಕ್ಷೇತ್ರಕ್ಕೂ ಕಾಲಿಟ್ಟಿತ್ತು. ಕಳೆದ ವರ್ಷ ಅಮೆರಿಕದಲ್ಲಿ ದಿಲೀಪ್ ‘ಬ್ರಾಂಡೆಡ್ ಒಫ್ತಾಲ್ಮಿಕ್’ ಬ್ಯುಸಿನೆಸ್ ಶುರು ಮಾಡಿದ್ದಾರೆ. ಜಾಗತಿಕ ಮಟ್ಟದಲ್ಲಿ ದಿಲೀಪ್ ಅವರ ಕಂಪನಿ 6ನೇ ಸ್ಥಾನದಲ್ಲಿದೆ.

'ಸನ್ ಫಾರ್ಮಾ'ವನ್ನು ದಿಲೀಪ್ ಅಮೆರಿಕ ಮತ್ತು ಯುರೋಪಿಯನ್ ರಾಷ್ಟ್ರಗಳಿಗೆ ವಿಸ್ತರಿಸಿದ್ದಾರೆ. Ranbaxy ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ 'ಸನ್ ಫಾರ್ಮಾ' ಉದ್ಯಮ ಲೋಕದಲ್ಲಿ ದಿಟ್ಟ ಹೆಜ್ಜೆ ಇಟ್ಟಿತ್ತು. 2012ರಲ್ಲಿ URL Pharam Inc. ಮತ್ತು DUSA Pharmaceuticals Inc. ಅನ್ನು ಕೂಡ ಸನ್ ಫಾರ್ಮಾ ಸ್ವಾಧೀನಕ್ಕೆ ಪಡೆದಿತ್ತು. ದಿಲೀಪ್ ಸಾಂಘ್ವಿ 21.7 ಬಿಲಿಯನ್ ಡಾಲರ್ ಆಸ್ತಿಗೆ ಒಡೆಯರು. ಅವರ ಒಡೆತನದ 'ಸನ್ ಫಾರ್ಮಾ' ಭಾರತದ ನಂಬರ್ 1 ಕಂಪನಿ, ವಿಶ್ವದ ಅತಿದೊಡ್ಡ ಸಂಸ್ಥೆಗಳಲ್ಲಿ 5 ಸ್ಥಾನ ಪಡೆದಿದೆ.

''ಇತರರಿಗೂ ಮುನ್ನವೇ ಅವಕಾಶವನ್ನು ಗುರುತಿಸುವವನೇ ನಿಜವಾದ ಉದ್ಯಮಿ. ಹಣಕ್ಕಾಗಿ ಆತ ಅವಕಾಶ ಕಳೆದುಕೊಳ್ಳುವುದಿಲ್ಲ. ತನ್ನ ದೃಷ್ಟಿಕೋನವನ್ನು ಹಂಚಿಕೊಳ್ಳಬಲ್ಲ ಅದ್ಭುತ ತಂಡವನ್ನು ಕಟ್ಟುತ್ತಾನೆ. ಅದನ್ನು ಕಾರ್ಯರೂಪಕ್ಕೆ ತರುತ್ತಾನೆ. ಕಲಿಕೆ ಅನ್ನೋದು ಯಾವಾಗಲೂ ಇರುತ್ತದೆ’’ ಎನ್ನುತ್ತಾರೆ ದಿಲೀಪ್.

ಸಮರ್ಪಣೆ, ಪರಿಶ್ರಮ, ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ದಿಲೀಪ್ ಅವರನ್ನು ಯಶಸ್ವಿ ಉದ್ಯಮಿಗಳ ಸಾಲಿನಲ್ಲಿ ನಿಲ್ಲಿಸಿದೆ.  

ಇದನ್ನೂ ಓದಿ.. 

ಯಶಸ್ಸುಕೊಟ್ಟವರಿಗಾಗಿ "ಯಶೋ"ಮಾರ್ಗ

ಫ್ಯಾಷನ್​ ಡಿಸೈನಿಂಗ್​ ಪಧವೀಧರೆಯ ಆನ್​ಲೈನ್​ ಉದ್ಯಮ

Add to
Shares
3
Comments
Share This
Add to
Shares
3
Comments
Share
Report an issue
Authors

Related Tags