ಆವೃತ್ತಿಗಳು
Kannada

` Rubique'ನಲ್ಲಿ ಸಾಲ ಪಡೆಯೋದು ಬಲು ಸುಲಭ

ಟೀಮ್​ ವೈ.ಎಸ್​. ಕನ್ನಡ

23rd Dec 2015
Add to
Shares
1
Comments
Share This
Add to
Shares
1
Comments
Share

ನೀವು ಸಾಲದ ನಿರೀಕ್ಷೆಯಲ್ಲಿದ್ದೀರಿ ಎಂದುಕೊಳ್ಳಿ, ಒಬ್ಬ ಗ್ರಾಹಕರಾಗಿ ನೀವು ಆನ್‍ಲೈನ್ ವೆಬ್ ಸಂಗ್ರಾಹಕರ ಮೊರೆ ಹೋಗಬಹುದು, ಮೂರನೇ ಮಾರಾಟಗಾರರು, ಬ್ಯಾಂಕ್‍ಗಳು ಅಥವಾ ಹಣಕಾಸು ಸಂಸ್ಥೆಗಳ ನೆರವು ಪಡೆಯಬಹುದು. ಎಚ್‍ಡಿಎಫ್‍ಸಿ, ಸಿಟಿ ಬ್ಯಾಂಕ್, ಯಸ್ ಬ್ಯಾಂಕ್‍ನಂತಹ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದ ಮಾನವ್‍ಜೀತ್ ಸಿಂಗ್ ಅವರಿಗೆ ನೈಜ ಸ್ಥಿತಿಯ ಅರಿವಾಗಿತ್ತು. ಇವ್ಯಾವುದೂ ಸಾಲ ಪಡೆಯುವವರು ಮತ್ತು ಕೊಡುವವರನ್ನು ಒಂದೆಡೆ ಸೇರಿಸುವುದಿಲ್ಲ ಎಂಬುದು ಅರ್ಥವಾಗಿತ್ತು. ಸಾಲ ಅನ್ನೋದು ಒಂದು ಸಂಕೀರ್ಣ ಉತ್ಪನ್ನ. ಅಲ್ಲಿ ಅರ್ಹತಾ ಮಾನದಂಡಗಳು ಮತ್ತು ಲಭ್ಯತೆಯಂತಹ ಪ್ಯಾರಾಮೀಟರ್‍ಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ಸಮಸ್ಯೆಗಳನ್ನೆಲ್ಲ ಮಾನವ್‍ಜೀತ್ ಬ್ಯಾಂಕರ್ ಹಾಗೂ ಗ್ರಾಹಕರ ದೃಷ್ಟಿಕೋನದಿಂದ ಗಮನಿಸಿದ್ರು.

ಅಂತರ ಕಡಿಮೆ ಮಾಡುವ ಪ್ರಯತ್ನ...

ಸಾಲ ವಿತರಣೆಯಲ್ಲಿ ಬ್ಯಾಂಕ್‍ಗಳಿಗೆ ಎದುರಾಗುವ ದೊಡ್ಡ ಸವಾಲೆಂದರೆ ಗ್ರಾಹಕರ ಗಳಿಕೆಯ ಬೆಲೆಯನ್ನು ನಿಯಂತ್ರಿಸುವುದು. ಯಾಕಂದ್ರೆ ಭಾರತದಲ್ಲಿ ಅದೆಷ್ಟೋ ಮಂದಿ ಇದುವರೆಗೂ ಸಾಲ ಪಡೆದಿಲ್ಲ. ಗ್ರಾಹಕರು ಸಹಜವಾಗಿಯೇ ವಹಿವಾಟಿನ ಸಮಯದ ಬಗ್ಗೆ ಚಿಂತಿಸುತ್ತಾರೆ. ಆದ್ರೆ ಬ್ಯಾಂಕ್‍ಗಳು ಫೈಲ್‍ಗಳ ಪರಿಶೀಲನೆಯಲ್ಲಿ ತೊಡಗಿಕೊಳ್ಳುತ್ತವೆ. ಹಾಗಾಗಿ ಸಾಲ ವಿತರಣೆ ಸಂಗ್ರಾಹಕರು ಅಂದುಕೊಂಡ ರೀತಿಯಲ್ಲಿ ನಡೆಯುವುದಿಲ್ಲ. ಹತ್ತಾರು ಸಂಗ್ರಾಹಕರ ವೇದಿಕೆಗಳಿವೆ ಆದ್ರೆ ಸಾಲಗಾರರು ಮತ್ತು ಸಾಲಕೊಡುವವರನ್ನು ಭೇಟಿ ಮಾಡಿಸಲು, ಸಾಲದ ಪ್ರಕ್ರಿಯೆಗೆ ನೆರವಾಗಲು ಸೂಕ್ತ ವೇದಿಕೆ ಇಲ್ಲ ಅನ್ನೋದು ಮಾನವ್‍ಜೀತ್ ಅವರ ಅಭಿಪ್ರಾಯ. ಇದೇ ಕಾರಣಕ್ಕೆ ಅವರು `ಬೆಸ್ಟ್ ಡೀಲ್ ಫೈನಾನ್ಸ್' ಅನ್ನು ಹುಟ್ಟುಹಾಕಿದ್ರು. ಈಗ ಅದನ್ನು ` Rubique 'ಎಂದು ಕರೆಯಲಾಗುತ್ತದೆ. ತಂತ್ರಜ್ಞಾನದ ನೆರವಿನಿಂದ ಸಾಲಗಾರರು ಮತ್ತು ಸಾಲಕೊಡುವವರನ್ನು ಒಂದೆಡೆ ಸೇರಿಸುವುದರ ಜೊತೆಗೆ ಪ್ರಕ್ರಿಯೆಯನ್ನು ಸರಳಗೊಳಿಸುವತ್ತ ` Rubique ' ಗಮನಹರಿಸಿದೆ.

image


ಇತ್ತೀಚೆಗೆ ಕ್ರೆಡಿಟ್ ಕಾರ್ಡ್ ಹಾಗೂ ವೈಯಕ್ತಿಕ ಸಾಲದ ಬಗ್ಗೆ ಹೆಚ್ಚು ಗಮನಹರಿಸಲಾಗುತ್ತಿದೆ. ಆದ್ರೆ ` ` Rubique 'ತಂಡ ಸಾಲ ನೀಡಿಕೆಯ ಸಂಪೂರ್ಣ ಸೇವೆಯನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ. ತಮ್ಮ ಹಿನ್ನೆಲೆ ಹಾಗೂ ವಲಯದಲ್ಲಿನ ಅನುಭವದಿಂದಾಗಿ ಬ್ಯಾಂಕ್‍ಗಳು ಹಾಗೂ ಹಣಕಾಸು ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವಂತೆ ಮಾಡುವುದು ಕಠಿಣವಲ್ಲ ಅನ್ನೋದನ್ನು ಮಾನವ್‍ಜೀತ್ ಅರಿತಿದ್ದಾರೆ. ಬ್ಯಾಂಕ್‍ಗಳು ಹಾಗೂ ಗ್ರಾಹಕರನ್ನು ಸೂಕ್ತ ಪ್ರಕ್ರಿಯೆ ಮೂಲಕ ಸಂಪರ್ಕಿಸಲು ತಂತ್ರಜ್ಞಾನದ ನೆರವು ಬೇಕಿದೆ. ಹಾಗಾಗಿಯೇ ಮಾನವ್‍ಜೀತ್ ಅವರ ಸ್ನೇಹಿತ, ಜಪಾನ್‍ನ ನೋಮುರಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದೀಪ್ ಸಂಬಿಯಾರ್, ಸಹ ಸಂಸ್ಥಾಪಕರಾಗಿ ` Rubique 'ಬಳಗವನ್ನು ಸೇರಿಕೊಂಡಿದ್ದಾರೆ. ಸೇವೆಯನ್ನು ಸಂಪೂರ್ಣ ಆನ್‍ಲೈನ್ ಮಾಡುವುದು ಇದಕ್ಕಿರುವ ಪರಿಹಾರವಲ್ಲ ಅನ್ನೋದು ` Rubique ' ತಂಡಕ್ಕೆ ಅರ್ಥವಾಗಿತ್ತು. ಯಾಕಂದ್ರೆ ಭಾರತದಲ್ಲಿ ಆನ್‍ಲೈನ್ ಬಳಕೆ ಇನ್ನೂ ಎಳಸಾದ ಹಂತದಲ್ಲೇ ಇದೆ. ಭಾರತದ ಹಣಕಾಸು ವ್ಯವಸ್ಥೆಯಲ್ಲಿ ಕಣ್ಣಾರೆ ಕಂಡು, ಸ್ಪರ್ಷಿಸಿದ್ರೆ ಮಾತ್ರ ಸಮಾಧಾನ ಎನ್ನುತ್ತಾರೆ ಮಾನವ್‍ಜೀತ್. ಮೂಲ ಮಾಹಿತಿಗಳನ್ನು ಆನ್‍ಲೈನ್‍ನಲ್ಲಿ ಪಡೆದರೂ `ಆರ್‍ಬಿಐ'ಗೆ ಮೂಲ ಏಙಅ ಸಹಿ ಮತ್ತು ದಾಖಲೆಗಳ ಅಗತ್ಯವಿದೆ.

` Rubique 'ಆನ್‍ಲೈನ್ ಹಾಗೂ ಅಸಿಸ್ಟೆಡ್ ಆನ್‍ಲೈನ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆನ್‍ಲೈನ್ ಪ್ರಕ್ರಿಯೆ ತಡೆರಹಿತವಾಗಿದೆ, ಅಲ್ಲಿ ಗ್ರಾಹಕರು ಉತ್ಪನ್ನವನ್ನು ಆಯ್ಕೆ ಮಾಡಿಕೊಂಡು ದಾಖಲೆಗಳು ಮತ್ತು ಇತರ ಮಾಹಿತಿಗಳನ್ನು ಅಪ್‍ಲೋಡ್ ಮಾಡಬಹುದು. ` Rubique ' ಕೂಡ ವೆಬ್‍ಸೈಟ್ ಅನ್ನು ಸಂಪರ್ಕಿಸುವ ಕಾಲ್ ಸೆಂಟರ್ ಅನ್ನು ಹೊಂದಿದೆ. ಹಾಗಾಗಿ ಕ್ಲೈಂಟ್‍ಗಳ ಜೊತೆ ಕಸ್ಟಮರ್ ಕೇರ್ ಸದಾ ಸಂಪರ್ಕದಲ್ಲಿರಬಹುದು. ಉದಾಹರಣೆಗೆ, ಯಾರಾದರೂ ಅಪ್‍ಲೋಡಿಂಗ್ ಹಂತದಲ್ಲಿ ಸ್ಥಗಿತಗೊಳಿಸಿದ್ರೆ ಕಾಲ್ ಸೆಂಟರ್, ಕೂಡಲೇ ಗ್ರಾಹಕರಿಗೆ ನೆರವಾಗುತ್ತದೆ.

ಮುಂಬೈನಲ್ಲಿ ಟ್ರಕ್ ಲೋನ್ ಫೈನಾನ್ಸಿಂಗ್ ಒಂದನ್ನು ಮಾಡಲಾಗಿತ್ತು. ಒಂದು ವಾರದ ಮಟ್ಟಿಗೆ ಅವರು 20 ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಂಡಿದ್ರು, ಅವರು ಟ್ರಕ್ ಮಾಲೀಕರು ಆನ್‍ಲೈನ್ ಮಾದರಿಯನ್ನು ಇಷ್ಟಪಡ್ತಾರೋ ಅಥವಾ ಅಸಿಸ್ಟೆಡ್ ಆನ್‍ಲೈನ್ ಮಾದರಿಯನ್ನು ನೆಚ್ಚಿಕೊಳ್ತಾರೋ ಅನ್ನೋ ಬಗ್ಗೆ ಸಮೀಕ್ಷೆ ಮಾಡಿದ್ರು. ಕೇವಲ ಆಯ್ಕೆಗಳನ್ನು ಕೊಡುವುದರಿಂದ ಗ್ರಾಹಕರಿಗೆ ನೆರವಾಗಲು ಸಾಧ್ಯವಿಲ್ಲ. ಗ್ರಾಹಕರು ತಮ್ಮ ದಾಖಲೆಗಳನ್ನು ಅಪ್‍ಲೋಡ್ ಮಾಡಲು ಬಯಸದೇ ಇದ್ದಲ್ಲಿ ಕಸ್ಟಮರ್ ಕೇರ್ ಅವರಿಗೆ ಅಗತ್ಯ ಸಲಹೆಗಳನು ನೀಡುತ್ತದೆ.

ಫೈನ್‍ಟೆಕ್‍ನ ತಾಂತ್ರಿಕ ಅಂಶಗಳು...

ಒಮ್ಮೆ ನೀವು ಆನ್‍ಲೈನ್‍ನಲ್ಲಿ ಸಾಲಕ್ಕಾಗಿ ಅಪ್ಲೈ ಮಾಡಿದ್ರೆ ಹೊಂದಾಣಿಕೆಯ ಕ್ರಮಾವಳಿ ಶುರುವಾಗುತ್ತದೆ, ಆಯ್ಕೆಗಳೂ ಅಲ್ಲಿರುತ್ತವೆ. ಇವನ್ನೆಲ್ಲ ಭರ್ತಿ ಮಾಡುವುದರಿಂದ ಬ್ಯಾಂಕ್‍ನ ಮಾನದಂಡ ಮತ್ತು ಅರ್ಹತೆ ಹಾಗೂ ಗ್ರಾಹಕರ ಅಗತ್ಯಗಳ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಪ್ರತಿಯೊಬ್ಬರಿಗೂ ಸಾಲ ಕೊಡುವವರು ಇದ್ದೇ ಇರುತ್ತಾರೆ ಅನ್ನೋ ಮೂಲ ತತ್ವದ ಮೇಲೆ ` Rubique ' ಕಾರ್ಯನಿರ್ವಹಿಸುತ್ತಿದೆ. ಒಮ್ಮೆ ಪ್ರಕ್ರಿಯೆ ಆರಂಭವಾದ್ರೆ Rubique '`-ಕೂಡ ಸಿಐಬಿಐಎಲ್ ಅಥವಾ ಕ್ರೆಡಿಟ್ ಅರ್ಹತಾ ಪ್ರಮಾಣದ ಮಾನದಂಡಗಳನ್ನು ಆರಂಭಿಸುತ್ತದೆ. ನಿಮ್ಮ ಸ್ಕೋರ್ ಅವರ ಮಾನದಂಡಗಳಿಗೆ ಹೊಂದಾಣಿಕೆಯಾಗದೇ ಇದ್ರೆ ನಿಮಗೆ ಹಣಕಾಸು ಸಂಸ್ಥೆಗಳ ಮೂಲಕ ಸಾಲ ಕೊಡಿಸುವ ವ್ಯವಸ್ಥೆ ಮಾಡಲಾಗುತ್ತದೆ.

image


ಮಾರ್ಚ್‍ನಿಂದ ಈವರೆಗೆ ` Rubique 'ಗೆ ಸುಮಾರು 11,000 ಅರ್ಜಿಗಳು ಬಂದಿವೆ. 2,300 ಅರ್ಜಿಗಳಿಗೆ ಅನುಮೋದನೆಯೂ ಸಿಕ್ಕಿದೆ. ಈಗಾಗ್ಲೇ ` Rubique ' 150 ಕೋಟಿ ರೂಪಾಯಿ ಸಾಲವನ್ನು ವಿತರಣೆ ಮಾಡಿದೆ. ಸುಮಾರು 41 ಬ್ಯಾಂಕ್‍ಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ವರ್ಷಾಂತ್ಯದ ವೇಳೆಗೆ 20 ಉತ್ಪನ್ನಗಳ ಸಂಯೋಜನೆಯೊಂದಿಗೆ ಆನ್‍ಲೈನ್ ಸಂಯೋಜನೆ ಕೂಡ ಪೂರ್ಣವಾಗಲಿದೆ. ಕಳೆದ ವರ್ಷ ಅಕ್ಟೋಬರ್‍ನಲ್ಲೇ ` Rubique ' ಸಂಘಟನೆಯಾಗಿದ್ರೂ, ಈ ವರ್ಷ ಮಾರ್ಚ್‍ನಲ್ಲಿ ಸಾಲ ವಿತರಣೆ ಪ್ರಕ್ರಿಯೆ ಆರಂಭವಾಗಿತ್ತು. ಎಲ್ಲ ಬ್ಯಾಂಕ್‍ಗಳು ಸಂಪೂರ್ಣ ಆನ್‍ಲೈನ್‍ಮಯವಾಗಿಲ್ಲ, ಆಂತರಿಕ ತಾಂತ್ರಿಕ ವ್ಯವಸ್ಥೆಯನ್ನು ಹೊಂದಿಲ್ಲ. ನೂತನ e-ಏಙಅ ನಿಯಮ ಜಾರಿಯಲ್ಲಿರುವುದರಿಂದ ಸುದೀರ್ಘ ಪಯಣ ಬಾಕಿ ಇದೆ ಎನ್ನುತ್ತಾರೆ ಮಾನವ್‍ಜೀತ್.

ಅಂಕಿ-ಅಂಶಗಳು ಏನು ಹೇಳುತ್ತವೆ..?

ಬಲವಾದ ಆನ್‍ಲೈನ್ ಉಪಸ್ಥಿತಿ ಹೊಂದಿರದ ಬ್ಯಾಂಕ್‍ಗಳೊಂದಿಗೂ ಖubique ಟೈ ಅಪ್ ಮಾಡಿಕೊಂಡಿದೆ. ಆನ್‍ಲೈನ್ ಪ್ರಕ್ರಿಯೆಯ ಸಂಘಟನೆ ಹಾಗೂ ಸಾಲ ವಿತರಣೆ ಬಗ್ಗೆ ತಂಡ ಹೆಚ್ಚು ಗಮನಹರಿಸಿದೆ. ` Rubique ' ಬ್ಯಾಂಕ್‍ಗಳಿಂದ ಆದಾಯ ಸಂಗ್ರಹಿಸ್ತಾ ಇದೆ. ಈ ತಿಂಗಳಾಂತ್ಯಕ್ಕೆ ` Rubique 'ನ ಆದಾಯ 3 ಕೋಟಿ ರೂಪಾಯಿಗೆ ತಲುಪಲಿದೆ ಅನ್ನೋ ವಿಶ್ವಾಸ ಮಾನವ್‍ಜೀತ್ ಅವರದ್ದು. ಅಕ್ಟೋಬರ್‍ನಲ್ಲಿ ` Rubique ' ಕಳಾರಿ ಕ್ಯಾಪಿಟಲ್‍ನಿಂದ 3 ಮಿಲಿಯನ್ ಡಾಲರ್ ನಿಧಿ ಸಂಗ್ರಹಿಸಿದೆ. `ಮಿಂತ್ರಾ' ಕಂಪನಿಯ ಮಾಜಿ ವಿಪಿ ಅನಾದಿ ಮಿಶ್ರಾ,` Rubique 'ನ ಸಿಟಿಓ ಆಗಿ ನೇಮಕವಾಗಿದ್ದು ಬೆಂಗಳೂರಿನ ಟೆಕ್ ಹಬ್ ಅನ್ನು ಮುನ್ನಡೆಸುತ್ತಿದ್ದಾರೆ. ಹಣಕಾಸಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನೊಂದು ಸುತ್ತಿನ ಮೌಲ್ಯ ಸೃಷ್ಟಿಯಾಗಲಿದೆ ಅನ್ನೋದು ಅನಾದಿ ಮಿಶ್ರಾ ಅವರ ಅಭಿಪ್ರಾಯ. ಬುದ್ಧಿವಂತ, ಭಾವೋದ್ರಿಕ್ತ ಹಾಗೂ ವೃತ್ತಿಪರರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ ಅಂತಾ ಖುಷಿಯಿಂದ ಹೇಳಿಕೊಳ್ತಾರೆ. ಸಾಲವಿತರಣೆ ಪ್ರಕ್ರಿಯೆ ತಡೆರಹಿತವಾಗಿರಬೇಕು ಅನ್ನೋ ಕಾರಣಕ್ಕೆ ತಾಂತ್ರಿಕ ವ್ಯವಸ್ಥೆಗಳಿಗೆ ` Rubique ' ಹೆಚ್ಚು ಗಮನಹರಿಸುತ್ತಿದೆ.

`ಯುವರ್‍ಸ್ಟೋರಿ' ಮಾಹಿತಿ...

2014ರಲ್ಲಿ ಈ ವಲಯದಲ್ಲಿ ಹೂಡಿಕೆ 3 ಬಿಲಿಯನ್ ಡಾಲರ್‍ನಿಂದ 12 ಬಿಲಿಯನ್ ಡಾಲರ್‍ಗೆ ಏರಿಕೆಯಾಗಿದೆ. ತಂತ್ರಜ್ಞಾನದ ಬಳಕೆಯಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆ ಇನ್ನಷ್ಟು ಸರಳವಾಗಿದೆ. ಹಣದ ವರ್ಗಾವಣೆ, ಅಕೌಂಟ್ ನಿರ್ವಹಣೆ, ಹೂಡಿಕೆ, ಸಾಲ ನೀಡಿಕೆ ಎಲ್ಲ ಪ್ರಕ್ರಿಯೆಗಳೂ ಈಗ ಸುಲಭ. ವರ್ಷದಿಂದ ವರ್ಷಕ್ಕೆ ಬ್ಯಾಂಕಿಂಗ್ ಕ್ಷೇತ್ರ ಶೇ.48ರಷ್ಟು ಪ್ರಗತಿ ಹೊಂದುತ್ತಿದೆ. ಸಿಲಿಕಾನ್ ವ್ಯಾಲಿಯಲ್ಲಿ ಹೂಡಿಕೆ ಶೇ.117ರಷ್ಟು ಹೆಚ್ಚಳವಾಗಿದೆ, ಯುರೋಪ್‍ನಲ್ಲಿ 1.48 ಬಿಲಿಯನ್ ಡಾಲರ್‍ನಷ್ಟು ಹೂಡಿಕೆ ಮಾಡಲಾಗಿದೆ. ಶೇ.60ರಷ್ಟು ಭಾರತಿಯರು ಇದುವರೆಗೂ ಬ್ಯಾಂಕಿಂಗ್ ಸೇವೆಯನ್ನು ಪಡೆದಿಲ್ಲ, ಶೇ.90ರಷ್ಟು ಸಣ್ಣ ಉದ್ಯಮಗಳು ಔಪಚಾರಿಕ ಹಣಕಾಸು ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿಲ್ಲ.

ಸದ್ಯ ಶೇ.60ರಷ್ಟು ಭಾರತೀಯರು ಮೊಬೈಲ್‍ಗಳನ್ನು ಹೊಂದಿದ್ದಾರೆ. 2019ರ ವೇಳೆಗೆ ಶೇ.60ಕ್ಕೂ ಹೆಚ್ಚು ಭಾರತೀಯರು ಸ್ಮಾರ್ಟ್ ಫೋನ್ ಒಡೆಯರಾಗಲಿದ್ದಾರೆ. ಸ್ಮಾರ್ಟ್‍ಫೋನ್‍ನಿಂದಾಗಿ ಭಾರತದ ಹಣಕಾಸು ವಲಯದಲ್ಲಿ ಹೊಸ ಯುಗಾರಂಭವಾಗಿದೆ.

ಲೇಖಕರು: ಸಿಂಧು ಕಶ್ಯಪ್

ಅನುವಾದಕರು: ಭಾರತಿ ಭಟ್

Add to
Shares
1
Comments
Share This
Add to
Shares
1
Comments
Share
Report an issue
Authors

Related Tags