ಮೆಡಿಕಲ್ ಉದ್ಯಮಕ್ಕೂ ಒಂದು ನಿಯಮ ಬೇಕು- ಕಿರಣ್ ಮಜುಂದಾರ್ ಶಾ

ಟೀಮ್​ ವೈ.ಎಸ್​. ಕನ್ನಡ

ಮೆಡಿಕಲ್ ಉದ್ಯಮಕ್ಕೂ ಒಂದು ನಿಯಮ ಬೇಕು- ಕಿರಣ್ ಮಜುಂದಾರ್ ಶಾ

Wednesday March 01, 2017,

1 min Read

ಮೆಡಿಕಲ್ ಉದ್ದಿಮೆಗಳಲ್ಲಿ ಭಾರತ ಸ್ಪಷ್ಟ ಮೇಲುಗೈ ಸಾಧಿಸುತ್ತಿದೆ. ಆದ್ರೆ ಈ ಉದ್ಯಮಕ್ಕೊಂದು ಸ್ಪಷ್ಟ ರೂಪುರೇಷೆಗಳಾಗಲಿ ಅಥವಾ ಸರಿಯಾದ ನಿಯಮಗಳು ಇಲ್ಲ. ಮೆಡಿಕಲ್ ಡಿವೈಸ್ ಮತ್ತು ಸರ್ಟಿಫೈ ಆಗದ ಮೆಡಿಕಲ್ ವಹಿವಾಟುಗಳಿಂದ ರೋಗಿಗಳು ನರಳಾಡುತ್ತಿದ್ದಾರೆ. ಹೀಗಾಗಿ ಬಯೋಟೆಕ್ ಎಂ.ಡಿ, ಉದ್ಯಮಿ ಕಿರಣ್ ಮಜುಂದಾರ್ ಶಾ ಮೆಡಿಕಲ್ ಉದ್ಯಮಕ್ಕೊಂದು ಏಕರೂಪದ ಶಾಸನ ತರಬೇಕು ಅಂತ ಒತ್ತಾಯ ಮಾಡಿದ್ದಾರೆ.

image


“ ನನ್ನ ಪ್ರಕಾರ ಮೆಡಿಕಲ್ ಡಿಸೈಸ್​​ಗಳನ್ನು ಪೂರೈಸುವ ಕಂಪನಿಗಳಿಗೆ ಏಕರೂಪದ ಶಾಸನಗಳನ್ನು ಮಾಡಬೇಕು. ಮಾರ್ಕೆಟ್​​ನಲ್ಲಿ ಸಿಗುವ ಸರ್ಟಿಫೈಡ್ ಅಲ್ಲದ ಡಿವೈಸ್​​ಗಳಿಂದಾಗಿ ರೋಗಿಗಳಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಮೆಡಿಕಲ್ ಡಿವೈಸ್ ತಯಾರಿಕಾ ಕಂಪನಿಗಳಿಗೆ ಒಂದು ಶಾಸನ ಬದ್ಧ ನಿಯಮವನ್ನು ಜಾರಿಗೆ ತರಬೇಕು ”
- ಕಿರಣ್ ಮಜುಂದಾರ್ ಶಾ, ಎಂ.ಡಿ. ಬಯೋಟೆಕ್

ಇತ್ತೀಚೆಗೆ ಮೆಡಿಕಲ್ ಉದ್ಯಮಗಳ ಮತ್ತು ಅಗತ್ಯ ವಸ್ತುಗಳ ಬೆಲೆಯನ್ನು ನಿರ್ಧರಿಸಲು ನ್ಯಾಷನಲ್ ಫಾರ್ಮಾಸುಟಿಕಲ್ ಪ್ರೈಸಿಂಗ್ ಅಥಾರಿಟಿ (NPPA)ಯನ್ನು ಸ್ಥಾಪಿಸಲಾಗಿತ್ತು. ಈಗಾಗಲೇ NPPA ಕಾರ್ಯ ನಿರ್ವಹಿಸಲು ಆರಂಭಿಸಿದೆ. ಆದ್ರೆ ಅದು ಔಷಧಗಳ ಬೆಲೆಗೆ ಮಾತ್ರ ಸೀಮಿತಗೊಂಡಿದೆ. ಹೀಗಾಗಿ ಮೆಡಿಕಲ್ ಡಿವೈಸ್​​ಗಳ ಬೆಲೆ ನಿರ್ಧರಿಸುವ ಮತ್ತು ಅವುಗಳ ಕ್ವಾಲಿಟಿ ಚೆಕ್ ಮಾಡಿ ಸರ್ಟಿಫೈ ಮಾಡುವ ಸಂಸ್ಥೆಯೊಂದರ ಅನಿವಾರ್ಯತೆ ಇದೆ ಎನ್ನುತ್ತಾರೆ ಕಿರಣ್ ಮಜುಂದಾರ್ ಶಾ

ಒಂದು ಶಾಸನ ಬದ್ಧ ನಿಯಮವನ್ನು ರೂಪಿಸಿದ್ರೆ ಮೆಡಿಕಲ್ ಡಿವೈಸ್ ತಯಾರಿಕಾ ಸಂಸ್ಥೆಗಳ ಮೇಲೆ ಕಣ್ಣಿಡಲು ಸುಲಭವಾಗುತ್ತದೆ. ಅಷ್ಟೇ ಅಲ್ಲ ಮೆಡಿಕಲ್ ವಸ್ತುಗಳ ರಫ್ತು ವಿಚಾರದಲ್ಲೂ ಕಂಟ್ರೋಲ್ ಸಿಗುತ್ತದೆ. ಇತ್ತೀಚೆಗೆ NPPA ಜೀವರಕ್ಷಕ ಸಾಧನಗಳ ಬೆಲೆಯನ್ನು ಶೇಕಡಾ 85ರಷ್ಟು ಇಳಿಕೆ ಮಾಡಿ ಗಮನಸೆಳೆದಿತ್ತು. ಒಟ್ಟಿನಲ್ಲಿ ಮೆಡಿಕಲ್ ಉದ್ಯಮ ಭಾರತದಲ್ಲಿ ಸಾಕಷ್ಟು ವೇಗದಲ್ಲಿ ಬೆಳೆಯುತ್ತಿದೆ. ಹೀಗಾಗಿ ಅದಕ್ಕೊಂದು ನಿಯಮದ ಅಗತ್ಯವಂತೂ ಇದ್ದೇ ಇದೆ.

ಇದನ್ನು ಓದಿ: 

1. ಕಾರು ತಯಾರಿಸುವ ಕನಸು ನನಸು ಮಾಡಿಕೊಂಡ ಬೆಂಗಳೂರಿನ ಯುವಕ..!

2. ರುಚಿ ರುಚಿಯಾಗಿದೆ 'ಹುಡ್ಲಿ'ಯ ಉಪ್ಪಿನ ಕಾಯಿ- ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ನೀಡಿದ ಯುವಕರಿಗೆ ಜೈ

3. ಹಣೆ ಬರಹ ಬದಲಿಸಿದ 2.60 ಕೋಟಿ ರೂಪಾಯಿ- ಆಟೋ ಡ್ರೈವರ್ ಮಗ ಈಗ ಸೂಪರ್ ಕ್ರಿಕೆಟರ್..!