ಆವೃತ್ತಿಗಳು
Kannada

ಭಾರತದಲ್ಲಿ ಮುಂಚೂಣಿಯಲ್ಲಿರುವ ಇ-ವೆಹಿಕಲ್ ಕ್ರಾಂತಿಯ ಹರಿಕಾರಿಣಿ ಕೊಯಮತ್ತೂರಿನ ಮಹಿಳಾ ಉದ್ಯಮಿ

ಟೀಮ್​ ವೈ.ಎಸ್​​​

19th Sep 2015
Add to
Shares
8
Comments
Share This
Add to
Shares
8
Comments
Share

ಎಲೆಕ್ಟ್ರಿಕ್ ವಾಹನಗಳ ಉದ್ಯಮ ಇಗಾಗಲೆ ಕ್ಷಿಪ್ರ ಬೆಳವಣಿಗೆಯನ್ನು ಕಂಡುಕೊಳ್ಳತೊಡಗಿದರೂ ಉತ್ತಮ ಪಾರಿಸರಿಕ ಸೂಚನೆ ಹಾಗೂ ಸರ್ಕಾರಗಳ ಪ್ರೋತ್ಸಾಹದ ಕೊರತೆಯಿದೆ.. ಆದರೂ 2020ರ ಸುಮಾರಿಗೆ ಸುಮಾರು 7 ಮಿಲಿಯನ್ ಎಲೆಕ್ಟ್ರಿಕಲ್ ಹಾಗೂ ಹೈಬ್ರಿಡ್ ವಾಹನಗಳನ್ನು ರಸ್ತೆಗಿಳಿಸಬೇಕು ಅನ್ನುವ ಸರ್ಕಾರದ ಗುರಿ ಹಾಗೂ ಮಹತ್ವಾಕಾಂಕ್ಷಿ ಯೋಜನೆಯ ಕಾರಣ ಸಣ್ಣದೊಂದು ಭರವಸೆಯ ಕಿರಣ ಕಾಣಿಸತೊಡಗಿದೆ..

ಆದರೂ ಈ ಉದ್ಯಮ ಸ್ವತಂತ್ರ್ಯವಾಗಿ ಗುರುತಿಸಿಕೊಳ್ಳಲು ಹೆಣಗಾಡುತ್ತಿದೆ.. ಕೆಲವು ಸಂಸ್ಥೆಗಳು ಮಾತ್ರ ಅತ್ಯುತ್ತಮ ಗುಣಮಟ್ಟದ ಭವಿಷ್ಯದ ಸೂಚನೆ ನೀಡಿವೆಯಷ್ಟೆ.. ಅವುಗಳಲ್ಲಿ ಆ್ಯಂಪೇರ್​​ ಎಲೆಕ್ಟ್ರಿಕ್ ತನ್ನ ವಿಶಿಷ್ಟ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಶೋಧನೆಗಳಿಂದಾಗಿ ಹೊಸದೊಂದು ಭಾರತೀಯ ವಿದ್ಯುತ್ ವಾಹನ ಉದ್ಯಮ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ.. ಸಂಸ್ಥೆಯ ಉತ್ಪನ್ನಗಳಾದ ಇ-ಸೈಕಲ್, ಇ- ಸ್ಕೂಟರ್, ಲಗೇಜ್​​ಗಳನ್ನು ಹೊರಬಲ್ಲ ಇ-ಟ್ರಾಲಿ ಹಾಗೂ ವಿಕಲಚೇತನರಿಗೆ ನೆರವಾಗಬಲ್ಲ ವಾಹನಗಳ ತಯಾರಿಕೆ ಯೋಜನೆ ಪ್ರಗತಿಯಲ್ಲಿದೆ..

ಜಪಾನ್​​ನಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ತಮ್ಮ ಪತಿಯೊಂದಿಗೆ ಭಾಗವಹಿಸಿದ್ದ ಹೇಮಲತಾ ಅಣ್ಣಾಮಲೈಯವರ ಈ ಐಡಿಯಾ ಆ್ಯಂಪೇರ್ ಸಂಸ್ಥೆಯ ಪಾಲಿನ ಹೊಸ ಸವಾಲಾಗಿದೆ.. ಆ ಕಾನ್‍ಫರೆನ್ಸ್​​ನಲ್ಲಿ ಮಾತನಾಡಿದ್ದ ಭಾಷಣಕಾರರು ಹೇಳಿದ್ದ ಒಂದು ಮಾತಿನಂತೆ ಮುಂಬರುವ ದಿನಗಳಲ್ಲಿ ಇ- ವಾಹನಗಳು ಅಂದರೆ ಆಂತರಿಕ ದಹನಕಾರಿ ಎಂಜಿನ್ (ಇಂಟರ್ನಲ್ ಕಂಬಷನ್ ಎಂಜಿನ್)ಗಳಿಗಿಂತ ಎಲೆಕ್ಟ್ರಿಕಲ್ ಎಂಜಿನ್​ಗಳು ಹೆಚ್ಚಿನ ಪ್ರಾಧಾನ್ಯತೆ ಗಳಿಸುತ್ತವೆ ಅನ್ನುವುದಾಗಿತ್ತು..

2007ರಲ್ಲಿ ಹೇಮಲತಾ 50 ಮಿಲಿಯನ್ ರೂಪಾಯಿ ಮೂಲ ಬಂಡವಾಳದೊಂದಿಗೆ ಆ್ಯಂಪೇರ್ ಎಲೆಕ್ಟ್ರಿಕ್ ಆರಂಭಿಸಿದ್ರು.. ಬಳಿಕ ಕೆಲವು ಕಾಲದ ನಂತರ ಹೊರಗಿನ ಬಂಡವಾಳ ಹೂಡಿಕೆದಾರರಿಂದ ಈಕ್ವಿಟಿ ಬಂಡವಾಳ ಹೂಡಿಕೆಯಾಯಿತು.. ಅನುತ್ಪಾದಕ ಕ್ಷೇತ್ರ ಅಥವಾ ನಾನ್ ಮ್ಯಾನುಫ್ಯಾಕ್ಚರಿಂಗ್ ಹಿನ್ನೆಲೆಯಿಂದ ಬಂದ ಹೇಮಲತಾಗೆ ಉತ್ಪಾದನಾ ಕ್ಷೇತ್ರ ನಿಜಕ್ಕೂ ಸವಾಲಿನ ಸಂಗತಿಯೇ ಆಗಿತ್ತು..

ಹೇಮಲತಾ ಅಣ್ಣಾಮಲೈ

ಹೇಮಲತಾ ಅಣ್ಣಾಮಲೈ


ವ್ಯಾಪಾರದ ತಂತ್ರಗಳನ್ನು ಕಲಿಯಲು ನಮ್ಮ ಪ್ರಶ್ನೆಗಳ ಕಲಿಕೆಯೇ ನಮ್ಮ ತಂಡದ ಇಂಧನವಾಗಿತ್ತು.. ಇದರಲ್ಲಿ ಹತ್ತು ಹಲವು ತೊಂದರೆಗಳಿದ್ದವು ಆದರೆ ನಮ್ಮ ತಪ್ಪುಗಳೇ ನಮ್ಮ ಕಟ್ಟಡ ನಿರ್ಮಾಣದ ಸಿಮೆಂಟ್ ಆಗಿತ್ತು.. ಇವತ್ತು ನಾವು ಈ ಸ್ಥಿತಿ ತಲುಪಲು ನಮಗೆ ಎದುರಾದ ಸವಾಲುಗಳೇ ಕಾರಣ.. ಪ್ರತಿಭೆಗಳ ಅನ್ವೇಷಣೆ ಹಾಗೂ ಟೀಮ್ ಕಟ್ಟುವುದು ನಮ್ಮ ಇತರೆ ಸವಾಲುಗಳು ಅಂದಿದ್ದಾರೆ ಹೇಮಲತಾ..

ಸರಣಿ ವಾಣಿಜ್ಯೋದ್ಯಮಿ ಹೇಮಲತಾ:

ತಮ್ಮ 27ನೇ ವಯಸ್ಸಿನಲ್ಲಿಯೇ ಕಿರಿಯ ಉದ್ಯಮಿಯಾಗಿ ಗುರುತಿಸಿಕೊಂಡವರು ಹೇಮಲತಾ.. ಅವರ ಮೊದಲ ಕೆಲವು ಉದ್ದಿಮೆಗಳು ವೃತ್ತಿಪರ ಸೇವೆಗಳು, ತಂತ್ರಜ್ಞಾನ ತರಬೇತಿ, ಪ್ರವಾಸೋದ್ಯಮ ಹಾಗೂ ಟಿಕೆಟ್ ಬುಕಿಂಗ್, ಪ್ರತಿಭೆಗಳ ಅನ್ವೇಷಣೆಯಲ್ಲಿ ಅಂತರಾಷ್ಟ್ರೀಯ ಸಲಹೆಗಳನ್ನು ನೀಡುವ ಸೇವೆ ಮುಂತಾದ ಬೇರೆ ಬೇರೆ ವಿಭಾಗಗಳಲ್ಲಿ ಹೇಮಲತಾ ಹೂಡಿಕೆ ಮಾಡಿ ವಿಭಿನ್ನ ಪ್ರಯೋಗ ನಡೆಸಿದ್ದರು.. ಓರ್ವ ಯಶಸ್ವಿ ಸರಣಿ ವಾಣಿಜ್ಯೋದ್ಯಮಿಯಾಗಿ ಹೇಮಲತಾ ಸತತ 15 ವರ್ಷ ತಮ್ಮ ವಿವಿಧ ಉದ್ಯಮಗಳನ್ನು ನಿಭಾಯಿಸಿದ್ದರು.. ಹೇಮಲತಾ ಹೇಳುವಂತೆ ಅವರ ಈ ವಾಣಿಜ್ಯ ಉದ್ಯಮದ ಕಾರ್ಯನಿರ್ವಹಣೆಯ ಪ್ರತೀ ದಿನವೂ ವಿಶೇಷ ಹಾಗೂ ಸವಾಲಿನದ್ದಾಗಿತ್ತು.. ಈ ಅನುಭವವೇ ನಿಜವಾದ ಪ್ರಶಸ್ತಿ..

ಆಸ್ಟ್ರೇಲಿಯಾದ ರಾಯಲ್ ಮೆಲ್ಬರ್ನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಎಂಬಿಎ ಕಲಿತಿರುವ ಹೇಮಲತಾ ಕೊಯಮತ್ತೂರಿನ ಸರ್ಕಾರಿ ತಾಂತ್ರಿಕ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದಾರೆ..

ಬಂಡವಾಳದ ಹರಿವು:

ಇತ್ತೀಚೆಗಷ್ಟೆ ಜಾಗತಿಕ ಬಿಸಿನೆಸ್ ಐಕಾನ್ ರತನ್ ಟಾಟಾ ಸಹ ಬಹಿರಂಗಪಡಿಸದ ಮೊತ್ತವೊಂದಷ್ಟನ್ನು ಕೊಯಮತ್ತೂರ್ ಮೂಲದ ಎಲೆಕ್ಟ್ರಿಕ್ ವೆಹಿಕಲ್ ಉದ್ಯಮದ ಪ್ರಾರಂಭಕ್ಕೆ ನೀಡಿದ್ದಾರೆ.. ಆ್ಯಂಪೇರ್ ಇಂತಹ ಪ್ರಧಾನ ಬಂಡವಾಳಗಳನ್ನು ಸಮರ್ಪಕವಾಗಿ ಹಾಗೂ ನಿಖರವಾಗಿ ಬಳಸಿಕೊಳ್ಳತೊಡಗಿದೆ.. ಮುಖ್ಯವಾಗಿ ನಾಲ್ಕು ಕೀ ಅಂಶಗಳನ್ನು ಗುರಿಯಾಗಿರಿಸಿಕೊಂಡು ಇ ಎಲೆಕ್ಟ್ರಿಕ್ ವೆಹಿಕಲ್ ಸಂಸ್ಥೆ ಶುರುವಾಯಿತು.. ಅದೆಂದರೆ ಬ್ಯಾಟರಿ, ಮೋಟಾರ್, ಚಾರ್ಜರ್ ಹಾಗೂ ಕಂಟ್ರೋಲರ್..

ಇ-ಸೈಕಲ್​​ ಜೊತೆಗೆ ಹೇಮಲತಾ

ಇ-ಸೈಕಲ್​​ ಜೊತೆಗೆ ಹೇಮಲತಾ


ಇ ಸೈಕಲ್ ಹಾಗೂ ಇ ಸ್ಕೂಟರ್​​ಗಳಿಗೆ ಹೊಂದಿಕೆಯಾಗುವಂತಹ 36 ವ್ಯಾಟ್ ಹಾಗೂ 48 ವ್ಯಾಟ್​ಗಳ ಚಾರ್ಜರ್​​ಗಳನ್ನು ನಾವು ಅದಾಗಲೆ ತಯಾರಿಸಿದ್ದೆವು.. ಇದರಿಂದ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಯಿತು ಹಾಗೂ ಭಾರತೀಯ ಎಲೆಕ್ಟ್ರಿಕ್ ವೆಹಿಕಲ್ ಕ್ಷೇತ್ರದಲ್ಲಿ ನಂಬಿಕೆಗೆ ಅರ್ಹವಾದ ಪ್ರತ್ಯೇಕ ಸಂಸ್ಥೆಯೊಂದನ್ನು ಹುಟ್ಟುಹಾಕಲು ನೆರವಾಯ್ತು ಅಂತಾರೆ ಹೇಮಲತಾ..

ಬಿ2ಸಿ ಯೋಜನೆಯಲ್ಲಿ ಪ್ರಾಥಮಿಕ ಉತ್ಪನ್ನಗಳಾದ ಎಲೆಕ್ಟ್ರಿಕ್ ಸೈಕಲ್​​ಗಳು ಹಾಗೂ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳು ಮತ್ತು ಬಿ2ಬಿ ಯೋಜನೆಯಲ್ಲಿ ಇ-ಸ್ಕೂಟರ್​​ಗಳನ್ನು ಉತ್ಪಾದಿಸಲಾಗುತ್ತಿದೆ. ಕೊರಿಯರ್ ಹಂಚುವ ಹುಡುಗರಿಗೆ ಹಾಗೂ ಮನೆ ಬಾಗಿಲಿಗೆ ಉತ್ಪನ್ನಗಳನ್ನು ತಲುಪಿಸುವ ಡೆಲಿವರಿ ಹುಡುಗರಿಗೆ ಇ-ಸ್ಕೂಟರ್​​ಗಳು ಉತ್ತಮವಾಗಿದೆ..

ಉತ್ಪಾದನಾ ವಿಧಾನ:

ಭಾರತದಲ್ಲಿ ಇ-ವಾಹನಗಳಿಗೆ 36 ಹಾಗೂ 48 ವ್ಯಾಟ್​​ಗಳ ಸ್ವಂತ ಚಾರ್ಜರ್​ಗಳನ್ನು ಹೊಂದಿರುವ ಮೊದಲ ಸಂಸ್ಥೆ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಆ್ಯಂಪೇರ್​ಗೆ ನಿರಂತರ ಸಂಶೋಧನೆ ಹಾಗೂ ಅಧ್ಯಯನಗಳೇ ಬ್ಯಾಕ್​​ಬೋನ್​​​ ಎನಿಸಿದೆ..

ಹೇಮಲತಾ ಹೇಳುವಂತೆ ಭಾರತದ ರಸ್ತೆಗಳ ಪರಿಸ್ಥಿತಿಯಲ್ಲಿ ಹಾಗೂ ವಿದ್ಯುತ್ ಶಕ್ತಿಯ ಅಭಾವದಿಂದಾಗಿ ಇ-ವೆಹಿಕಲ್​​ಗಳಿಗೆ ಚಾರ್ಜರ್​ಗಳೇ ದೊಡ್ಡ ಸಮಸ್ಯೆಯಾಗಿದೆ..

ಇಂದು ಆ್ಯಂಪೇರ್ ಎಲೆಕ್ಟ್ರಿಕ್​​​​ನ ಎಲ್ಲಾ ವಾಹನಗಳೂ ರಿಸರ್ಚ್ ಹಾಗೂ ಡೆವಲಪ್​ಮೆಂಟ್​​​ ತಂಡದ ಪ್ರಯೋಗಾತ್ಮಕ ಮೋಟಾರ್ ಹಾಗೂ ಕಂಟ್ರೋಲರ್​ಗಳಿಂದ ನಿಯಂತ್ರಿಸಲ್ಪಡುತ್ತಿವೆ.. ಇ ತಂಡ ಅತ್ಯಂತ ಪರಿಣಿತ ಬ್ಯಾಟರಿ ಚಿಪ್ ಅನ್ನು ಸಂಶೋಧಿಸಿದ್ದು ಬ್ಯಾಟರಿಯ ದೀರ್ಘಕಾಲಿಕ ಅವಧಿಯನ್ನು ಹೆಚ್ಚಿಸಿದೆ.. ಸಂಸ್ಥೆ ತನ್ನ ಆದಾಯದ ಬಹುಪಾಲನ್ನು R&D ತಂಡದ ಸಂಶೋಧನೆ ಹಾಗೂ ಮರು ಸಂಶೋಧನೆಗೆ ಬಳಸುತ್ತಿದೆ.. ಸಂಸ್ಥೆಯ ಶೇ 20ರಷ್ಟು ಕೆಲಸಗಾರರು ಇ ರಿಸರ್ಚ್ ಅನಾಲಿಸಿಸ್ ಕೆಲಸಗಳಿಗೆ ಶ್ರಮಿಸುತ್ತಿದ್ದಾರೆ ಅನ್ನುವ ಮಾಹಿತಿ ನೀಡಿದ್ದಾರೆ ಹೇಮಲತಾ..

ಉತ್ಪಾದನೆಗೆ ಬೇಕಾದ ಬಹಳಷ್ಟು ಕಚ್ಚಾ ಸರಕು ಹಾಗೂ ಮೆಟೀರಿಯಲ್​​ಗಳನ್ನು ಸ್ಥಳೀಯ ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಸಲಾಗುತ್ತಿದೆ ಆದರೆ ಮುಖ್ಯವಾದ ಪಾರ್ಟ್​ಗಳಾದ ಬ್ಯಾಟರಿ ಹಾಗೂ ಮೋಟಾರ್​ನಂತಹ ಮ್ಯಾಗ್ನೆಟ್​​ಗಳನ್ನು ಮಾತ್ರ ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.. ಇಂದು ಸಂಸ್ಥೆ ವಾರ್ಷಿಕ ಸುಮಾರು 30 ಸಾವಿರ ಇ-ವೆಹಿಕಲ್​​ಗಳನ್ನು ತಯಾರಿಸಬಲ್ಲ ಸಾಮರ್ಥ್ಯ ಹೊಂದಿದೆ ಅಂತ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಹೇಮಲತಾ..

ವ್ಯಾವಹಾರಿಕ ಅವಕಾಶಗಳನ್ನು ಬಳಸಿಕೊಳ್ಳುವುದು:

ಸರ್ಕಾರದ ಉತ್ತೇಜನ ಹಾಗೂ ಮಾರುಕಟ್ಟೆಯಲ್ಲಿ ಗಣನೀಯ ಬೇಡಿಕೆ ಕಂಡುಬಂದಿದ್ದೂ ಸಹ ಸಂಸ್ಥೆಯ ಬೆಳವಣಿಗೆಗೆ ಪೂರಕ ಅಂಶ.. ನಮ್ಮ ಸಣ್ಣ ಅವಕಾಶದಲ್ಲೇ ಶೇ 100ರಷ್ಟು ಸ್ಥಳೀಯವಾಗಿ ಇ-ವೆಹಿಕಲ್ ಉತ್ಪಾದನೆಯ ಭವಿಷ್ಯದ ಯೋಜನೆ ಹೊಂದಿದ್ದೇವೆ ಅಂತ ಹೇಮಲತಾ ತಮ್ಮ ಕನಸು ತೋಡಿಕೊಂಡಿದ್ದಾರೆ..

ಇ-ಸ್ಕೂಟರ್​​ ಜೊತೆಗೆ ಹೇಮಲತಾ

ಇ-ಸ್ಕೂಟರ್​​ ಜೊತೆಗೆ ಹೇಮಲತಾ


ಸರ್ಕಾರಗಳೂ ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆ ಕಡೆಗೆ ಆಸಕ್ತಿ ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಇ-ವೆಹಿಕಲ್ ಬಳಕೆಯ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಬೇಕಿದೆ..

ಹೇಮಲತಾ ಕೆಲವು ಇನ್ನಿತರೆ ಮುಖ್ಯ ವಿಚಾರಗಳ ಬಗ್ಗೆಯೂ ಗಮನ ಹರಿಸಿದ್ದು ಇದರಿಂದ ಉದ್ಯಮಕ್ಕೆ ಮತ್ತಷ್ಟು ಲಾಭದಾಯಕವಾಗಲಿದೆ:

ಸಮಾನ ತೆರಿಗೆ ಮಾದರಿ (ಎಲೆಕ್ಟ್ರಿಕ್ ವಾಹನಗಳಿಗೆ ಸಿಎಸ್​​ಟಿ​​/ವ್ಯಾಟ್)ಯನ್ನು ಸಾಧ್ಯವಾದಷ್ಟು ಬೇಗ ಎಲ್ಲಾ ರಾಜ್ಯಗಳಲ್ಲಿ ಜಾರಿಗೆ ತರುವುದು, ಚಾರ್ಜಿಂಗ್ ಮೂಲಸೌಕರ್ಯದ ಅಭಿವೃದ್ಧಿಗೆ ಆದ್ಯತೆ, ಸಾಧ್ಯವಾದರೆ ಪ್ರತ್ಯೇಕ ಸೈಕಲ್ ಲೇನ್​​ಗಳ ಜೊತೆಗೆ ರಸ್ತೆಗಳ ಗುಣಮಟ್ಟ ಉತ್ತಮಪಡಿಸುವುದು, ಕೇವಲ ಎಲೆಕ್ಟ್ರಿಕ್ ವೆಹಿಕಲ್​​ಗಳನ್ನು ಬಳಸುವ ಕುಟುಂಬಗಳಿಗೆ ಟ್ಯಾಕ್ಸ್ ಬೆನಿಫಿಟ್ ನೀಡುವುದು ಮುಂತಾದವುಗಳು..

ಗ್ರಾಮೀಣ ಮಾರುಕಟ್ಟೆಗಳಲ್ಲಿ ಸಾಮಾಜಿಕ ಪರಿವರ್ತನೆ:

ಗ್ರಾಮೀಣ ಭಾಗದಲ್ಲಿ ಸಾಮಾಜಿಕ ಪರಿವರ್ತನೆಗಾಗಿ ಮಿತವ್ಯಯದ ಇಂಜಿನಿಯರಿಂಗ್ ಮೂಲಕ ಆ್ಯಂಪೇರ್ ಆರ್&ಡಿ ಟೀಮ್ ಕಾರ್ಯನಿರತವಾಗಿದೆ.. ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ವಿಕಲಚೇತನರಿಗೆ ಇ-ವೆಹಿಕಲ್ ತಯಾರಿಸಿಕೊಟ್ಟ ಮೊದಲ ಕಂಪೆನಿ ಅನ್ನುವ ಶ್ರೇಯವೂ ಇದರದ್ದಾಗಿದೆ..

ಆ್ಯಂಪೇರ್ ವಿನ್ಯಾಸಗೊಳಿಸಿರುವ ಟ್ರೈಸುಲ್ ಅನ್ನುವ ವಾಹನ ಜವಳಿ ಹಾಗೂ ಹೊಲಿಗೆ ಉದ್ಯಮದ ಕೆಲಸಗಾರರನ್ನು ಗುರಿಯಾಗಿಸಿಕೊಂಡು ನಿರ್ಮಾಣವಾದದ್ದಾಗಿದೆ.. ಇವರೆಲ್ಲಾ ಗ್ರಾಮೀಣ ಪ್ರದೇಶದ ಮಹಿಳೆಯರಾಗಿದ್ದು 20-40 ವರ್ಷದ ನಡುವಿನ ಮಹಿಳೆಯರು ಕಾರ್ಖಾನೆಯ ಆವರಣದೊಳಗೇ ಪ್ರತಿದಿನವೂ 12-15 ಕಿಮೀ ನಡೆಯಬೇಕಿತ್ತು..

ಮಹಿಳೆಯರ ಕಲ್ಯಾಣ ಯೋಜನೆ ಸಂಸ್ಥೆ ಪ್ರಾರಂಭವಾದ ದಿನದಿಂದಲೂ ಹಾಕಿಕೊಂಡ ಮಹತ್ತರ ಯೋಜನೆ.. ಈಗ ಶೇ 30ರಷ್ಟು ಮಹಿಳೆಯರು ಶಾಪ್ ಫ್ಲೋರ್ ಒಳಗೆ ಇ ಉತ್ಪನ್ನ ಬಳಸುತ್ತಿದ್ದು ಈ ಪ್ರಮಾಣವನ್ನು ದ್ವಿಗುಣಗೊಳಿಸುವ ಉದ್ದೇಶ ತಮ್ಮದಾಗಿದೆ ಅಂತ ಹೇಮಲತಾ ಹೇಳಿದ್ದಾರೆ..

ದರನಿಗದಿ ಕಾರ್ಯಸೂಚಿ:

ಮಾರುಕಟ್ಟೆಯ ಸ್ಥಿತಿ ಹಾಗೂ ಬೇಡಿಕೆಯ ಅಗತ್ಯತೆಗಳ ಆಧಾರದಲ್ಲಿ ಆ್ಯಂಪೇರ್ ದರ ನಿಗದಿ ಕಾರ್ಯಸೂಚಿ ರೂಪಿಸಲಾಗಿದೆ.. ಇ-ಸೈಕಲ್ 20ರಿಂದ 30 ಸಾವಿರದೊಳಗೆ ಲಭ್ಯವಿದ್ದು, ಇ-ಸ್ಕೂಟರ್​ಗಳು 20ರಿಂದ 45 ಸಾವಿರ ರೂಪಾಯಿಗಳಿಗೆ ಲಭ್ಯವಿದೆ..

ಆ್ಯಂಪೇರ್ ಸರ್ಕಾರದ ಆರ್ಥಿಕ ಗುರಿ ಸಾಧನೆಯಲ್ಲಿ ಅತ್ಯುತ್ತಮ ಪಾತ್ರ ವಹಿಸಲಿದೆ.. 7 ಮಿಲಿಯನ್ ವಾಹನಗಳ ಸರ್ಕಾರದ ಟಾರ್ಗೆಟ್​​ನ ಶೇ 15-20 ಪ್ರತಿಶತ ವೆಹಿಕಲ್​​ಗಳನ್ನುಆ್ಯಂಪೇರ್ ಉತ್ಪಾದಿಸಿಕೊಡಲಿದೆ.. ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯ ಅನ್ವಯ ಪ್ರತಿ ಕುಟುಂಬವೂ ಇ ಬೈಕ್​​ಗ​ಳನ್ನು ಉಪಯೋಗಿಸುವಲ್ಲಿ ನಾವು ಜನತೆಯನ್ನು ಉತ್ತೇಜಿಸಲಿದ್ದೇವೆ.. ಇದರಿಂದ ಸಕಾರಾತ್ಮಕ ಹಾಗೂ ಸುಸ್ಥಿರ ಪ್ರಾಕೃತಿಕ ಸಮತೋಲನವನ್ನೂ ಸಾಧಿಸಬಹುದು ಅಂತ ಹೇಮಲತಾ ತಿಳಿಸಿದ್ದಾರೆ..

ವಿಸ್ತರಣಾ ವಿನೋದ:

ಆ್ಯಂಪೇರ್ ಈ ಮೊದಲು ತಿಂಗಳಿಗೆ 200 ವಾಹನಗಳನ್ನು ಉತ್ಪಾದಿಸುತ್ತಿತ್ತು ಆದರೆ ಸರ್ಕಾರ ಮಧ್ಯಂತರ ಸಬ್ಸಿಡಿ ನೀಡಿದ ಹಿನ್ನೆಲೆಯಲ್ಲಿ ಈಗ ಇ ಪ್ರಮಾಣ 687ಕ್ಕೆ ಏರಿದೆ..

ಸಂಸ್ಥೆ ಈ ವರ್ಷಾಂತ್ಯದೊಳಗೆ ತನ್ನ 2 ಹೊಸ ಉತ್ಪನ್ನಗಳನ್ನು ಲಾಂಚ್ ಮಾಡಲು ಯೋಜನೆ ಸಿದ್ಧಪಡಿಸಿಕೊಂಡಿದೆ.. ಆ್ಯಂಪೇರ್ ಮುಂದಿನ 3 ವರ್ಷದೊಳಗೆ ಸಂಪೂರ್ಣವಾಗಿ ಮಹಿಳೆಯರೇ ಆಪರೇಟ್ ಮಾಡಬಲ್ಲ ಇ ಸೈಕಲ್ ತಯಾರಿಕಾ ಕಾರ್ಖಾನೆಯನ್ನು ನಿರ್ಮಿಸುವ ಯೋಜನೆಯನ್ನೂ ಹೊಂದಿದೆ

ಸರ್ಕಾರ ಮೇಕ್ ಇನ್ ಇಂಡಿಯಾ ಯೋಜನೆಯ ಬಗ್ಗೆ ಮಾತನಾಡುವ ಬದಲು ಕ್ರಿಯಾತ್ಮಕವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸಕ್ಕೆ ಮುಂದಾಗಬೇಕು.. ಇದು ಅಷ್ಟು ಸುಲಭವಲ್ಲ ಆದರೆ ಮನಸಿದ್ದಲ್ಲಿ ಮಾರ್ಗವಿದೆ ಅನ್ನುತ್ತಾರೆ ಹೇಮಲತಾ.

Add to
Shares
8
Comments
Share This
Add to
Shares
8
Comments
Share
Report an issue
Authors

Related Tags