ಆವೃತ್ತಿಗಳು
Kannada

ಬದಲಾವಣೆಗಳನ್ನು ಒಪ್ಪಿಕೊಳ್ಳುವದೆ ಐಟಿಯ ಮೂಲ ಮಂತ್ರವಾಗಬೇಕು

YourStory Kannada
17th Nov 2017
1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
ಇತರೆ ಗಣ್ಯರೊಂದಿಗೆ ತಂತ್ರಿಕ ಮೇಳದಲ್ಲಿ ರಾಜ್ಯದ ಮುಖ್ಯಮಂತ್ರಿಗಳು

ಇತರೆ ಗಣ್ಯರೊಂದಿಗೆ ತಂತ್ರಿಕ ಮೇಳದಲ್ಲಿ ರಾಜ್ಯದ ಮುಖ್ಯಮಂತ್ರಿಗಳು


ಐಟಿ ಉದ್ಯಮವು ಅದಮ್ಯ ಬದಲಾವಣಗಳನ್ನು ಎದುರಿಸುತ್ತಿದೆ. ಮೊದಲೆಲ್ಲ ಬರಿ ಸರ್ವಿಸ್ ಕೊಟ್ಟರೆ ಸಾಕಿತ್ತು, ಈಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI ) ನಿಂದ ಸಾಕಷ್ಟು ಪ್ರಗತಿಯಾಗಿದೆ.ಈಗ ಫ್ರೀಲಾನ್ಸಿಂಗ್ ಪದ್ಧತಿಯಿಂದ ಕೆಲಸದ ನೇಮಕಾತಿ ಕೂಡ ಇಳಿಮುಖವಾಗಿದೆ.

ನಾಸ್ಕಾಮ್ ಪ್ರಕಾರ, ಇದು 160 ಬಿಲಿಯನ್ ಡಾಲರ್ ನ ಉದ್ಯಮವಾಗಿದೆ ಮತ್ತು 2020 ರ ವೇಳೆಗೆ 250 ಬಿಲಿಯನ್ ಡಾಲರ್ ಉದ್ಯಮವಾಗುವದು. ಮಾಹಿತಿ ತಂತ್ರಜ್ಞಾನದ ಕಂಪನಿಗಳು ಈಗ ಬ್ಲಾಕ್‌ಚೈನ್, (AI ) ಮತ್ತು ಎಮ್‌ಎಲ್ ಉದ್ಯಮಗಳಲ್ಲೂ ಹಣ ಹೂಡುತ್ತಿವೆ.

ಐಟಿ ಉದ್ಯಮವು ಕ್ಲೈಂಟ್ ವ್ಯವಹಾರ ಸಮಸ್ಯೆಗಳನ್ನೂ ಕೂಡ ಗಮನಿಸಬೇಕು ಕೇವಲ ತಂತ್ರಜ್ಞಾನವನ್ನು ಮಾತ್ರ ಗಮನಹರಿಸಬಾರದು ಎಂದು ಗಣ್ಯರು ಅಭಿಪ್ರಾಯಪಟ್ಟರು.

ಮೈಂಡ್ಟ್ರೀ ಕಂಪನಿಯ ಎನ್.ಎಸ್ ಪಾರ್ಥಸಾರಥಿ ಅವರು, "ಐಟಿ ಉದ್ಯಮವು ಬದಲಾವಣೆಯ ಬಗ್ಗೆ ಚಿಂತೆ ಮಾಡಬಾರದು. ವಿಕಾಸಗಳು ನಡೆದಿವೆ ಹಾಗು ಉದ್ಯಮದಲ್ಲಿ ಅನೇಕ ಬದಲಾವಣೆಗಳು ಬೆಳವಣಿಗೆಗೆ ಮೂಲವಾಗುವವು. ಇನ್ನು ೨೦ ವರ್ಷಗಳಲ್ಲಿ ಅನೇಕ ಬದಲಾವಣೆಗಳು ಕಾಣಿಸಿಕೊಳ್ಳುವವು. ಹತ್ತು ವರ್ಷದ ಕೆಳಗೆ ಕೇವಲ ತಂತ್ರಜ್ಞಾನ ಗೊತ್ತಿದ್ದರೆ ಸಾಕಿತ್ತು, ಆದರೆ ಎಗ ನಮಗೆ ’ಆಲ್ ರೌಂಡರ್’ ಬೇಕು " ಎಂದು ಅಭಿಪ್ರಾಯ ಪಟ್ಟರು.

ತವಂತ್ ಟೆಕ್ನಾಲಜೀಸ್ ಸಿ‌ಇ‌ಒ ಸರ್ವೇಶ್ ಮಹೇಶ್ ರವರು, "ತಂತ್ರಜ್ಞಾನ ಕ್ಕೆ ಯಾವಾಗಲೂ ಹೆಚ್ಚಿನ ಬೇಡಿಕೆ ಇದ್ದೇ ಇರುವದು, ಆದರೆ ಗ್ರಾಹಕರೇ ದೇವರು. ಅವರ ಅನುಕೂಲಕ್ಕೆ ತಕ್ಕಂತೆ ನಮ್ಮ ಸ್ಟ್ರಾಟೆಜಿ ಬದಲಾಯಿಸಬೇಕು" ಎಂದರು.

ಸಣ್ಣ ತಂಡಗಳಿಂದ ಮೌಲ್ಯವರ್ಧನೆ

ಈಗಿನ ಯೋಜನೆಗಳಲ್ಲಿ 70 ಅಥವಾ 80 ಜನರ ಅಗತ್ಯವಿಲ್ಲ. ಸಣ್ಣ ತಂಡಗಳೇ ಅಭೂತಪೂರ್ವ ಸಾಧನೆಗಳನ್ನು ಮಾಡುತ್ತವೆ.

ಥಾಟ್ ವರ್ಕ್ಸ್ ಟೆಕ್ನಾಲಜೀಸ್‌ನ MD, ಸುಧೀರ್ ತಿವಾರಿ, " ಈಗ ಗ್ರಾಹಕರೂ ಕೂಡ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಅವರ ಅವಶ್ಯಕತೆಗೆ ತಕ್ಕಂತೆ ನಾವು ಕೂಡ ಬದಲಾವಣೆ ಮಾಡಿಕೊಳ್ಳಬೇಕು", ಎಂದರು.

"ವೋಕ್ಸ್‌ವ್ಯಾಗನ್ ಮತ್ತು ಜನರಲ್ ಮೋಟರ್ಸ್‌ನಂತಹ ಕಂಪನಿಗಳು ತಮ್ಮನ್ನು ಗ್ರಾಹಕರ ದತ್ತಾಂಶವನ್ನು ಹೊಂದಿರುವ ಸಾಫ್ಟ್ವೇರ್ ಕಂಪೆನಿಗಳೆಂದು ಪರಿಗಣಿಸಿ ಮತ್ತು ಡಿಜಿಟಲ್‌ಆಗಿ ಸೇವೆ ಮಾಡಲು ಬಯಸುತ್ತವೆ. ಹಾಗಾಗಿ ಐಟಿ ಕಂಪೆನಿಗಳು ವೇಗವಾಗಿ ಕಲಿಯಬೇಕು" ಎಂದು ಕೂಡ ಅಭಿಪ್ರಾಯಪಟ್ಟರು.

ಸಿಜಿ‌ಐ, ಇನ್ಫರ್ಮೇಷನ್ ಸಿಸ್ಟಮ್ಸ್ ಅಂಡ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ಸ್‌ನ ಎಮ್ಡಿ ಜಾರ್ಜ್ ಜೆ ಮಟ್ಟಕಲ್‌ರವರು," ಭವಿಷ್ಯವು ಪ್ರಕಾಶಮಾನವಾಗಿದೆ ಏಕೆಂದರೆ ಉದ್ಯಮವು ಯಾವಾಗಲೂ ಬದಲಾವಣೆಯನ್ನು ನಿರ್ವಹಿಸುತ್ತಿದೆ", ಎಂದರು.

ದೇಶದಲ್ಲಿ ಇರುವ ಕೌಶಲ್ಯಗಳ ಕಾರಣ ಉದ್ಯಮವು ಬೆಳೆಯುತ್ತಿದೆ. ನಮ್ಮ ಗ್ರಾಹಕರು ಭಾರತವನ್ನು ದಿಜಿಟಲ್ ಇಂಡಿಯ ಮಾಡುವದರಲ್ಲಿ ಸಹಕರಿಸುತ್ತಿದ್ದಾರೆ.

ಐಟಿ ಸೇವೆಗಳಿಗೆ ಇಂದಿರುವ ಸವಾಲೆಂದರೆ ಜನ ಮತ್ತು ಸಾಂಸ್ಕೃತಿಕ ಬದಲಾವಣೆಗಳನ್ನು ಒಪ್ಪಿಕೊಳ್ಳುವದು. ಈಗಾಗಲೇ ಇನ್ಫೋಸಿಸ್, ವಿಪ್ರೋ ಮತ್ತು ಟಿಸಿ‌ಎಸ್ ಮುಂತಾದ ಕಂಪೆನಿಗಳು ಈ ಬದಲಾವಣೆಯನ್ನು ನಿಭಾಯಿಸಲು ತಯಾರಗುತ್ತಿವೆ. ಉಳಿದವರು ಕೂಡ ಈ ತತ್ವವನ್ನು ಪಾಲಿಸಿದರೆ ದೇಶ ಮುಂಚೂಣಿಗೆ ಹೋಗಲು ತಡವಾಗುವದಿಲ್ಲ.

1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags