ಆವೃತ್ತಿಗಳು
Kannada

ಸೈಕಲ್ ಸವಾರಿ ಮಾಡುತ್ತಲೇ ಚೆನ್ನೈ ನಗರದ ರಕ್ಷಣೆಗಿಳಿದ ಖಾಕಿ ಪಡೆ..

ಟೀಮ್ ವೈ.ಎಸ್.ಕನ್ನಡ 

17th Nov 2016
Add to
Shares
23
Comments
Share This
Add to
Shares
23
Comments
Share

ಚೆನ್ನೈ ಪೊಲೀಸರು ಈಗ ಸೈಕಲ್ ಏರಿದ್ದಾರೆ. ಹಳೆಯ ಗೋಲ್ಡನ್ ಡೇಸ್​ಗೆ ಮರಳಿದ್ದಾರೆ. ಪ್ರತಿನಿತ್ಯ ಪೊಲೀಸರು ಸೈಕಲ್ ಸವಾರಿ ಮಾಡುತ್ತ ಗಲ್ಲಿ ಗಲ್ಲಿಯಲ್ಲೂ ಗಸ್ತು ತಿರುಗುತ್ತಿದ್ರೆ ಸಾರ್ವಜನಿಕರಲ್ಲಿ ಒಂದು ರೀತಿಯ ಸುರಕ್ಷತಾ ಭಾವ. ಜನರ ನಿಜವಾದ ರಕ್ಷಣೆಗೆ ಈ ಸೈಕಲ್ ಗಸ್ತು ಸಹಕರಿಸುತ್ತಿದೆ.

image


'ಲೈವ್ ಚೆನ್ನೈ' ನೀಡಿರೋ ಮಾಹಿತಿ ಪ್ರಕಾರ ಚೆನ್ನೈನಲ್ಲಿ ದಿನನಿತ್ಯ ರಾತ್ರಿ ಪೊಲೀಸರ 88 ತಂಡಗಳು ಗಸ್ತು ತಿರುಗುತ್ತವೆ. ಸೈಕಲ್ ಬದಲು ಕಾರು ಮತ್ತು ಬೈಕ್​ಗಳಲ್ಲಿ ಗಸ್ತು ಹೊರಟರೆ ಸ್ಥಳಕ್ಕೆ ಬೇಗ ಹೋಗಿ ತಲುಪಬಹುದು ನಿಜ. ಆದ್ರೆ ಕಾರು ಮತ್ತು ಬೈಕ್ ಸೌಂಡ್ ಕೇಳಿದ್ಮೇಲೂ ದುಷ್ಕರ್ಮಿಗಳು ಅಲ್ಲೇ ಇರುವಷ್ಟು ದಡ್ಡರಲ್ಲ. ಕಾರು ಮತ್ತು ಬೈಕ್ ಸದ್ದು ಕೇಳ್ತಿದ್ದಂತೆ ಪರಾರಿಯಾಗಿಬಿಡ್ತಾರೆ. ಕಳ್ಳರು ಮತ್ತು ಕ್ರಿಮಿನಲ್ಗಳನ್ನು ರೆಡ್ ಹ್ಯಾಂಡಾಗಿ ಹಿಡಿಯೋದು ಕಷ್ಟ. ಇನ್ನು ಕಾಲುಹಾದಿಗಳಲ್ಲಿ ಓಡಿದ್ರಂತೂ ಕಾರು ಮತ್ತು ಬೈಕ್ಗಳಲ್ಲಿ ಅವರನ್ನು ಚೇಸ್ ಮಾಡೋದು ಅಸಾಧ್ಯ. ಆದ್ರೆ ಸೈಕಲ್​ನಲ್ಲಾದ್ರೆ ಎಷ್ಟು ಚಿಕ್ಕ ರಸ್ತೆಯಾದ್ರೂ ಅವರನ್ನು ಅಟ್ಟಿಸಿಕೊಂಡು ಹೋಗಬಹುದು. 

ಹಾಗಾಗಿ ರಿಯಲ್ ಟೈಮಲ್ಲಿ ಸೈಕಲ್ ಪೊಲೀಸರಿಗೆ ಬೆಸ್ಟ್. ವಾಸ್ತವವಾಗಿ ನಗರವನ್ನು ರಕ್ಷಿಸಲು ಸೈಕ್ಲಿಂಗ್ ಪೊಲೀಸರಿಗೆ ನೆರವಾಗುತ್ತಿದೆ. ನಾಗರೀಕರು ಮತ್ತು ಪೊಲೀಸರ ಮಧ್ಯೆ ನಂಬಿಕೆ ಬೆಳೆಸಲು ಕೂಡ ಸೈಕಲ್ ಗಸ್ತು ಸಹಕಾರಿಯಾಗಿದೆ. ''ಸೈಕಲ್​ನಲ್ಲಿ ಗಸ್ತು ತಿರುಗುವ ಪರಿಕಲ್ಪನೆ ಪೊಲೀಸರನ್ನು, ಸಾರ್ವಜನಿಕರಿಗೆ ಇನ್ನಷ್ಟು ಹತ್ತಿರವಾಗಿಸಿದೆ'' ಅನ್ನೋದು ಮೈಲಾಪುರದ ಉಪ ಪೊಲೀಸ್ ಆಯುಕ್ತ ವಿ.ಬಾಲಕೃಷ್ಣನ್ ಅವರ ಅಭಿಪ್ರಾಯ.

ಕಳೆದ ಜುಲೈನಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪೊಲೀಸರಿಗೆ ಸೈಕಲ್ ಒದಗಿಸಿದ್ರು. ಪೊಲಿಸ್ ಠಾಣೆಗಳಿಗೆ 250 ಸೈಕಲ್ಗಳು ಹಾಗೂ 100 ಹೊಸ ಮೋಟಾರ್​ ಸೈಕಲ್​ಗಳನ್ನು ವಿತರಿಸಿದ್ದರು. ಈಗ ಪ್ರತಿ ಪೊಲೀಸ್ ಠಾಣೆಯಲ್ಲೂ ಎರಡು ಸೈಕಲ್ಗಳಿವೆ. ಆರಕ್ಷಕರು ಸೈಕಲ್ ಸವಾರಿ ಮಾಡುತ್ತಲೇ ಜನರ ಬಳಿ ತೆರಳ್ತಿದ್ದಾರೆ. ಕಳ್ಳ-ಕಾಕರು, ಕ್ರಿಮಿನಲ್ಗಳನ್ನು ಮಟ್ಟ ಹಾಕ್ತಿದ್ದಾರೆ. 

ಇದನ್ನೂ ಓದಿ.. 

ಐದು ತಲೆಮಾರಿನ ಗಾಯಕರಿಂದ ನಾಡಗೀತೆ- ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ಸಾಹಸ

ಮಂಚನಬೆಲೆಯಲ್ಲಿ ಕಾಡಾನೆ ಸಿದ್ದನ ಪ್ರಾಣ ಉಳಿಸಲು ಎರಡನೇ ಹಂತದ ಚಿಕಿತ್ಸಾ ಕಾರ್ಯಾಚರಣೆ ಶುರು

Add to
Shares
23
Comments
Share This
Add to
Shares
23
Comments
Share
Report an issue
Authors

Related Tags