ಆವೃತ್ತಿಗಳು
Kannada

ಹಸಿವಾಗಿದ್ಯಾ, ಕ್ಲಿಕ್ ಮಾಡಿ..ಫುಡ್​ಪಂಡಾ ಹೊಟ್ಟೆ ತುಂಬಿಸುತ್ತೆ..!

ಟೀಮ್​ ವೈ.ಎಸ್​.ಕನ್ನಡ

28th Jun 2016
Add to
Shares
0
Comments
Share This
Add to
Shares
0
Comments
Share

ಮೊದಲೆಲ್ಲ ಹಸಿವು ಆಯಿತು ಅಂದ್ರೆ, ಕಿಲೋಮೀಟರ್‍ಗಟ್ಟಲೆ ಹೋಟೆಲ್ ಹುಡುಕುತ್ತಾ ಹೋಗಬೇಕಿತ್ತು. ಆದ್ರೆ ಈಗ ಹಾಗಿಲ್ಲ. ನೀವು ಕುಳಿತ ಕಡೆಯೇ ನಿಮಗಿಷ್ಟವಾದ ಊಟ ಕ್ಷಣ ಮಾತ್ರದಲ್ಲೇ ಬರುತ್ತದೆ. ನಿಮಗೆ ಎಲ್ಲಾ ವೆರೈಟಿ ಊಟಗಳು ಒಂದೇಕಡೆ ಸೆಲಟಕ್ಟ್ ಮಾಡೋದಕ್ಕೆ ಅವಕಾಶವೂ ಸಿಗುತ್ತದೆ. ಚೈನೀಸ್, ನಾರ್ತ್​ಇಂಡಿಯನ್, ಸೌಥ್‍ಇಂಡಿಯನ್, ಹೀಗೆ ಹತ್ತಕ್ಕೂ ಹೆಚ್ಚು ಶೈಲಿಯ ಫುಡ್‍ ಒಂದೇ ಕಡೆ ಆಯ್ಕೆ ಮಾಡಿಕೊಳ್ಳಬಹುದು. ಅದು ನಿಮಗೆ ಇಂತಹದ್ದೇ ಹೋಟೆಲ್​​ನಲ್ಲಿ ಬೇಕು ಅಂತ ಇದ್ರೆ ಅಲ್ಲಿಂದನೇ ಪಾರ್ಸೆಲ್ ಬರುತ್ತದೆ. ಹಾಗಂತ ನೀವು ನಿಮಗಿಷ್ಟವಾದ ಹೋಟೆಲ್‍ಗೆ ಕಾಲ್ ಮಾಡಿ ಆರ್ಡರ್ ಮಾಡಬೇಕಿಲ್ಲ. ಜಸ್ಟ್​ ಕ್ಲಿಕ್ ಫುಡ್​ಪಂಡಾ. ನಿಮಗಿಷ್ಟವಾದ ಫುಡ್ ಸೆಲೆಕ್ಟ್ ಮಾಡಿ. ಕೇವಲ 19 ನಿಮಿಷಗಳಲ್ಲಿ ನಿಮ್ಮ ಊಟ ನಿಮ್ಮ ಮುಂದೆ ಇರತ್ತದೆ.

image


ಏನಿದು ಫುಡ್​ಪಂಡಾ...?

ಫುಡ್​ಪಾಂಡ ಆನ್​ಲೈನ್ ಫುಡ್‍ ಡೆಲವೆರಿ ಮಾಡೋ ಸಂಸ್ಥೆ ಅಂತ ಕರೆಯಬಹುದು. ಒಮ್ಮೆ ನೀವು ಫುಡ್‍ಪಾಂಡಗೆ ಲಾಗ್‍ಇನ್ ಮಾಡಿ ನಿಮ್ಮ ಲೊಕೇಷನ್ ಸೆಲೆಕ್ಟ್ ಮಾಡಿದ್ರೆ ಸಾಕು. ಫುಡ್​ಪಾಂಡಾದಲ್ಲಿ ರಿಜಿಸ್ಟರ್‍ ಆಗಿರೋ, ನೀವು ಇರೋ ಏರಿಯಾದಲ್ಲಿರೋ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಪ್ರತಿಯೊಂದು ಲಿಸ್ಟ್​ಗಳು ಡಿಸ್ಲ್ಪೇ ಆಗುತ್ತದೆ. ಅದ್ರಲ್ಲಿ ನಿಮಗೆ ಬೇಕಾದ ಫುಡ್‍ಅನ್ನ ಸೆಲೆಕ್ಟ್ ಮಾಡಿದ್ರೆ ಆಯ್ತು. ನಿಮ್ಮ ಊಟ ನಿಮ್ಮ ಮುಂದೆರೆಡಿ ಇರುತ್ತದೆ. ಇದಕ್ಕಾಗಿ ಹೆಚ್ಚುವರಿ ಚಾರ್ಜ್ ಮಾಡೋದಿಲ್ಲ. ವಿಶೇಷ ಅಂದ್ರೆ ಇಲ್ಲಿ ನಿಮಗೆ ಫುಡ್ ಮೇಲೆ ಡಿಸ್ಕೌಂಟ್‍ ಕೂಡ ಸಿಗುತ್ತದೆ.

ಇದನ್ನು ಓದಿ: ಇದು ಬರೀ ಜಾಹೀರಾತು ಅಲ್ಲ ಗುರು...ಬೇರೆ ಏನೋ ಇದೆ..!

ದೇಶದ ಮೂಲೆ ಮೂಲೆಯಲ್ಲೂ ಫುಡ್​ಪಾಂಡ...

ಫುಡ್​ಪಾಂಡ ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ, ವಿಶ್ವದ ಮೂಲೆ ಮೂಲೆಗೂ ಫುಡ್ ಸರ್ವಿಸ್ ಮಾಡುತ್ತದೆ. ಭಾರತ ಸೇರಿದಂತೆ ಮಲೇಷಿಯಾ, ಪಾಕಿಸ್ತಾನ, ಬಾಂಗ್ಲಾದೇಶ, ಸಿಂಗಾಪೂರ್,ಹಾಂಕ್​ಕಾಂಗ್​, ಇಂಡೋನೇಷಿಯಾ, ಫಿಲಿಪೈನ್ಸ್​ , ರಷ್ಯಾ, ಸೌದಿ ಅರೇಬಿಯಾ, ಹೀಗೆ ಇನ್ನೂ ಅನೇಕ ದೇಶಗಳಲ್ಲಿ ಫುಡ್​ಪಂಡಾ ತನ್ನ ಸರ್ವೀಸ್‍ ಅನ್ನ ಹೊಂದಿದೆ. ಅಷ್ಟೇ ಅಲ್ಲದೆ ಫುಡ್​ಪಂಡಾ ತನ್ನದೇಯಾದ ಆ್ಯಪ್‍ ಅನ್ನ ಹೊಂದಿದ್ದು, ಆ ಆ್ಯಪ್‍ ಅನ್ನ ಡೌನ್​ಲೋಡ್ ಮಾಡಿಕೊಂಡ್ರೆ, ನಿಮ್ಮ ಫುಡ್‍ ಆರ್ಡರ್ ಮಾಡೋಕೆ ಸಖತ್ ಸುಲಭ.

image


ಫಂಕ್ಷನ್​ಗಳಲ್ಲೂ ಫುಡ್​ಪಂಡಾ..!

ಫುಡ್​ಪಂಡಾ ಟೀಮ್​ನ ತಮ್ಮ ನೆಟ್​​ವರ್ಕ್​ ಅನ್ನ ತುಂಬಾ ದೊಡ್ಡದಾಗಿ ಬೆಳೆಸಿರೋದ್ರಿಂದ, ಕೇವಲ ಸಿಂಗಲ್ ಫುಡ್‍ ಸರ್ವಿಸ್ ಮಾತ್ರವಲ್ಲದೆ ಪಾರ್ಟಿ ಮತ್ತು ಫಂಕ್ಷನ್​ಗಳಿಗೂ ಫುಡ್ ಸರ್ವಿಸ್ ಮಾಡಲಾಗುತ್ತದೆ. ನಿಮಗೆ ಬೇಕಾದ ಹೋಟೆಲ್​ನಿಂದ ಇಷ್ಟು ಮೀಲ್ಸ್​ ಅಥವಾ ಪಾರ್ಟಿಗೆ ಬೇಕಾದ ಫುಡ್ ,ಸ್ಯಾಕ್ಸ್​ ಆರ್ಡರ್ ಮಾಡಿದ್ರೆ ಆಯ್ತು, ಫುಡ್​ಪಂಡಾ ಟೀಮ್​ನವ್ರು ಬಂದು ನಿಮ್ಮ ಫಂಕ್ಷನ್​ನಲ್ಲಿ ಫುಡ್ ಸರ್ವಿಸ್ ಮಾಡಿ ಹೋಗ್ತಾರೆ. ಬೆಳಗಿನ ಕಾಫಿಯಿಂದ, ಮಧ್ಯರಾತ್ರಿ 3 ಗಂಟೆವರೆಗೂ ಫುಡ್​ಪಂಡಾದ ಟೀಮ್​ ಕೆಲಸ ಮಾಡುತ್ತದೆ.

ಫುಡ್​ಪಂಡಾಕ್ಕೆ ನೀವು ಯಾವಾಗ ಬೇಕಿದ್ರು ಫುಡ್‍ಆರ್ಡರ್ ನೀಡಬಹುದು. ಫುಡ್​ಪಂಡಾದಲ್ಲಿ ಒಂದೆರೆಡಲ್ಲ ಸರಿಸುಮಾರು 4000 ರೆಸ್ಟೋರೆಂಟ್​ಗಳು ರಿಜಿಸ್ಟರ್‍ ಆಗಿದ್ದು, ಆಯಾ ದೇಶದ ಸಂಸ್ಕೃತಿಗೆ ತಕ್ಕಂತಹ ಫುಡ್ ಅನ್ನ ಒಂದೇಕ್ಲಿಕ್​ನಲ್ಲಿ ನೀವು ಪಡೆದು, ನಿಮ್ಮ ಹೊಟ್ಟೆ ತುಂಬಿಸಿಕೊಳ್ಳಬಹುದು. ದೇಶ ಹಾಗೂ ವಿದೇಶದಲ್ಲೂ ಹರಡಿರುವ ಫುಡ್​ಪಂಡಾ ಸರ್ವಿಸ್ ಸಖತ್ ಹೆಲ್ಪ್ ಫುಲ್‍ ಆಗಿದ್ದು ಜನರಿಂದ ಸೂಪರ್‍ ರೆಸ್ಪಾನ್ಸ್​ ಕೂಡ ಬರ್ತಿದೆ. ನಿಮಗೇನಾದ್ರೂ ಫುಡ್​ಪಂಡಾದ ಮೂಲಕ ಫುಡ್​ ತರಿಸಿಕೊಳ್ಳುವ ಆಸಯಾಗಿದ್ರೆ, ತಡ ಯಾಕೆ ಮಾಡ್ತಿರಾ.. ಒಂದು ಕ್ಲಿಕ್​ ಮಾಡಿ, ನಿಮ್ಮಿಷ್ಟದ ಫುಡ್​ ತರಿಸಿಕೊಳ್ಳಿ.

ಇದನ್ನು ಓದಿ:

1. ಗ್ಲಾಮರ್ ಬೊಂಬೆಯಾದ್ಲು ಯೋಗ ಟೀಚರ್..!

2. ಬಳಸಿಕೊಂಡಿದ್ದು ಸೆಕೆಂಡ್​ಹ್ಯಾಂಡ್​ ವಸ್ತು- ತಯಾರಾಗಿದ್ದು ಪರಿಸರ ಸ್ನೇಹಿ ಕಾರು..!

3. ಕ್ಯಾಮರಾ ಕಣ್ಣಲ್ಲಿ ಮಹಿಳೆಯ ಬವಣೆಗಳ ಮಿಡಿತ : ಇದು ಸೊನಾಲಿ ಗುಲಾಟಿ ಕೈಚಳಕ

Add to
Shares
0
Comments
Share This
Add to
Shares
0
Comments
Share
Report an issue
Authors

Related Tags