ಆವೃತ್ತಿಗಳು
Kannada

ಅಭಿಮಾನಿಗಳು ದೇವರು, ನಿರ್ಮಾಪಕರು ಅನ್ನದಾತರು..!

ಟೀಮ್​ ವೈ.ಎಸ್​. ಕನ್ನಡ

23rd Apr 2017
Add to
Shares
3
Comments
Share This
Add to
Shares
3
Comments
Share

ಕನ್ನಡ ಚಿತ್ರರಸಿಕರ ಆರಾಧ್ಯ ದೈವ, ಕನ್ನಡ ಕುಲ ಕೋಟಿ ಕಂಠೀರವ,ಅಭಿಮಾನಿಗಳ ಪಾಲಿನ ಬೇಡರ ಕಣ್ಣಪ್ಪ, ವರನಟ ಡಾ ರಾಜ್ ಕುಮಾರ್ ಸಾವಿರಾರು ಕಲಾವಿದರ ನಡುವೆ ವಿಭಿನ್ನವಾಗಿ ನಿಲ್ಲುವ ನಟ. ಈ ನಟ ಇಷ್ಟೆಲ್ಲಾ ಪ್ರಸಿದ್ದ ಪಡೆಯಲು ಸಾಕಷ್ಟು ಕಾರಣಗಳಿದ್ದು ಡಾ.ರಾಜ್​ ಹುಟ್ಟುಹಬ್ಬದ ವಿಶೇಷವಾಗಿ ಅವರ ಒಂದುಷ್ಟು ವಿಚಾರಗಳನ್ನ ಮುಂದೆ ಇಟ್ಟಿದ್ದೇವೆ. 

image


ಅಭಿಮಾನಿಗಳಿಗೂ ಅನ್ನ ಹಾಕಿದ ಮೊದಲ ನಟ

ಚಿತ್ರರಂಗ ಅದೆಷ್ಟೇ ಬೆಳೆದಿದ್ರು ಅಭಿಮಾನಿಗಳು ನಮ್ಮ ಸಿನಿಮಾ ನೋಡಿ ನಮ್ಮನ್ನ ಇಷ್ಟರ ಮಟ್ಟಿಗೆ ಮೇಲೆ ತಂದಿದ್ದಾರೆ ಅವ್ರಿಗೆ ನಮ್ಮ ಕೃತಜ್ಞತೆ ಸಲ್ಲಿಸಬೇಕೆಂದು ನಿರ್ಧರಿಸಿದ ಮೊದಲ ನಟ ಡಾ.ರಾಜ್ ಕುಮಾರ್..!

ಅತಿ ಹೆಚ್ಚು ಪ್ರತಿಮೆಗಳನ್ನು ಹೊಂದಿರುವ ವಿಶ್ವದ ಮೊದಲ ನಟ 

ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಮೂಲೆ ಮೂಲೆ ಸೇರಿದಂತೆ ಎಲ್ಲಾ ಕಡೆಗಳಲ್ಲಿಯೂ ಡಾ. ರಾಜ್ ಪ್ರತಿಮೆಯನ್ನ ಕಾಣಬಹುದು. ಅತೀ ಹೆಚ್ಚು ಪ್ರತಿಮೆಗಳನ್ನ ಹೊಂದಿರುವ ಏಕೈಕ ನಟ ಡಾ. ರಾಜ್​ಕುಮಾರ್​​.

ಇದನ್ನು ಓದಿ: ನಿಮ್ಮಭಾಷೆಯಲ್ಲೇ ನಿಮ್ಮ ಸ್ಮಾರ್ಟ್​ಫೋನ್- "ಇಂಡಸ್ ಆಪರೇಟಿಂಗ್ ಸಿಸ್ಟಮ್​"ನಿಂದ “ಭಾರತ್” ಕ್ರಾಂತಿ

ನಟನೆಗೆಂದು ಗೌರವ ಡಾಕ್ಟರೇಟ್ ಪಡೆದ ಮೊದಲ ನಟ ಡಾ.ರಾಜ್

ಸಾಕಷ್ಟು ಕಲಾವಿದರು ಕೂಡ ತಮ್ಮ ಅಭಿನಯದಲ್ಲಿ ಪ್ರೇಕ್ಷಕರನ್ನ ಮೋಡಿ ಮಾಡ್ತಿದ್ದ ಅಣ್ಣಾವ್ರಿಗೆ ಗೌರವ ಡಾಕ್ಟರೇಟ್ ಕೂಡ ಸಂದಿದೆ. ನಟನೊಬ್ಬನಿಗೆ ಗೌರವ ಡಾಕ್ಟರೇಟ್​ ಸಿಕ್ಕಿದ್ದು ಅದೇ ಮೊದಲು..!

- ನಟಿಸಿದ ಮೊದಲ ಚಿತ್ರಕ್ಕೆ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ ಪಡೆದ ಮೊದಲ ಕನ್ನಡ ನಟ ಡಾ.ರಾಜ್

- ಅನ್ಯ ಭಾಷಾ ಚಿತ್ರಗಳಲ್ಲಿ ನಟಿಸದ ಪ್ರಥಮ ಕೀರ್ತಿ ಡಾ.ರಾಜ್​ಗೆ ಸಲ್ಲುತ್ತದೆ.

- ಅತಿ ಹೆಚ್ಚು ದ್ವಿಪಾತ್ರ ಹಾಗೂ ತ್ರಿಪಾತ್ರಗಳಲ್ಲಿ ನಟಿಸಿದ ಪ್ರಥಮ ಕನ್ನಡಿಗ

- ಶ್ರೇಷ್ಠ ಸಿನಿ ಪುರಸ್ಕಾರ 'ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ' ಪಡೆದ ಮೊದಲ ಕನ್ನಡಿಗ

- ಭಾರತ ಚಿತ್ರರಂಗದ ಮೊಟ್ಟ ಮೊದಲ ಬಾಂಡ್ ಹೀರೋ ಡಾ.ರಾಜ್

- ಅತಿ ಹೆಚ್ಚು ಪೌರಾಣಿಕ, ಐತಿಹಾಸಿಕ ಹಾಗೂ ಕಾದಂಬರಿ ಆಧಾರಿತ ಸದಭಿರುಚಿಯ ಚಿತ್ರಗಳಲ್ಲಿ ನಟಿಸಿದ ಏಕೈಕ ಕನ್ನಡಿಗ

- ಪ್ರಪಂಚದಾದ್ಯಂತ ಸುಮಾರು 4800ಕ್ಕೂ ಹೆಚ್ಚಿನ ರಿಜಿಸ್ಟರ್ಡ್ ಅಭಿಮಾನಿ ಸಂಘಟನೆಗಳನ್ನುಳ್ಳ ಏಕೈಕ ಏಶಿಯನ್ ಡಾ. ರಾಜ್ ಕುಮಾರ್​

- ಸುಮಾರು ಐವತ್ತು ವರ್ಷಗಳ ಕಾಲ ಹೀರೋ ಆಗಿಯೇ ಸೇವೆಗೈದ ಪ್ರಥಮ ಭಾರತೀಯ ನಟ ಡಾ. ರಾಜ್

- ಒಂದೇ ವರ್ಷದ ಅಂತರದಲ್ಲಿ ಮೂರು ಬಾರಿ ಸತತ ಹತ್ತಕ್ಕೂ ಮೀರಿದ ಉತ್ತಮ ಚಿತ್ರಗಳಲ್ಲಿ ನಟಿಸಿದ ಪ್ರಥಮ ದಾಖಲೆ ಡಾ ರಾಜ್ ರದ್ದು

- ನಟನೆಗಷ್ಟೇ ಅಲ್ಲದೆ ಗಾಯನಕ್ಕೂ 'ರಾಷ್ಟ್ರ ಪ್ರಶಸ್ತಿ' ಪಡೆದ ಭಾರತದ ಮೊದಲ ನಟ ಡಾ. ರಾಜ್

- ಡಾ ರಾಜ್ ರ ಜೀವಿತಾವಧಿಯಲ್ಲೇ 'ಡಾ ರಾಜ್ ಕುಮಾರ್' ಎಂಬ ಅವರದೇ ಹೆಸರಿನ ಪ್ರಶಸ್ತಿ ಪುರಸ್ಕಾರ ನೀಡಲಾಗುತ್ತಿತ್ತು, ಈ ದಾಖಲೆಯುಳ್ಳ ಪ್ರಥಮ ಭಾರತೀಯ ಕಲಾವಿದ ಡಾ ರಾಜ್

- ಶ್ರೇಷ್ಠ 'ಎನ್ ಟಿ ಆರ್ ಆಂಧ್ರ ಪ್ರಶಸ್ತಿ' (NTR Andhra Award) ಪಡೆದ ಏಕೈಕ ಕನ್ನಡ ನಟ ಡಾ ರಾಜ್

- ಅಮ್ಮ, ಮಗಳು ಎರಡು ತಲೆಮಾರುಗಳೊಂದಿಗೂ ನಾಯಕನಾಗಿ ನಟಿಸಿದ ದಾಖಲೆ ಡಾ ರಾಜ್ ರದು. ಆದವಾನಿ ಲಕ್ಷ್ಮಿದೇವಿ ಹಾಗೂ ರೂಪಾದೇವಿ ಅಮ್ಮ ಹಾಗೂ ಮಗಳ ಜೊತೆ ಡಾ. ರಾಜ್​ ನಟಿಸಿದ್ದರು

- ಕಪ್ಪು ಬಿಳುಪಿನ ಸಮಯದಲ್ಲೇ ನೂರು ಯಶಸ್ವಿ ಚಿತ್ರಗಳನ್ನು ಪೂರೈಸಿದ ಏಕೈಕ ಕನ್ನಡಿಗ ಡಾ ರಾಜ್

- ಉತ್ತಮ ಅಭಿನಯಕ್ಕಾಗಿ ಫ್ರೆಂಚ್ ಸರ್ಕಾರದ ಗೌರವಯುತ 'ಕೆಂಟಕಿ ಕರ್ನಲ್ ಪ್ರಶಸ್ತಿ' ಪಡೆದ ಏಕೈಕ ಭಾರತದ ನಟ ಡಾ ರಾಜ್

- ಅತಿ ಹೆಚ್ಚು ಸಿನಿ ಸಂಬಂಧಿತ ಬಿರುದಾವಳಿಗಳನ್ನು ಗಳಿಸಿರುವ ಏಕೈಕ ಭಾರತೀಯ ಡಾ ರಾಜ್

- "ಕರ್ನಾಟಕ ರತ್ನ" ಪ್ರಶಸ್ತಿ ಪಡೆದ ಏಕೈಕ ಕನ್ನಡ ಕಲಾವಿದ ಡಾ ರಾಜ್ ಹಾಗೂ ಅಭಿಮಾನಿಗಳನ್ನೇ ದೇವರೆಂದು ಕರೆದು ಇತರರಿಗೆ ಮಾದರಿ ಎನಿಸಿದ ಏಕೈಕ ಅಪರೂಪದ ಕಲಾವಿದ ನಮ್ಮ ಡಾ ರಾಜ್.

ಇದನ್ನು ಓದಿ:

1. ಕೆಲವೇ ದಿನಗಳಲ್ಲಿ ಲಾಸ್ಟ್ ಶೋ ಫಿಕ್ಸ್​.. ಇತಿಹಾಸ ಸೃಷ್ಠಿಯಲ್ಲಿ ನೀವು ಒಬ್ಬರಾಗಿ..!

2. ಟ್ರೆಂಡಿಯಾಗಿದೆ, ಸಖತ್​ ಟೇಸ್ಟೀಯಾಗಿದೆ- ಸಮ್ಮರ್​ನಲ್ಲಿ ನೈಟ್ರೋಜನ್​ ಐಸ್​ಕ್ರೀಮ್​ನದ್ದೇ ಮಾತು...! 

3. 1000 ಕೋಟಿಯ ವಿಶೇಷ ಪ್ರಾಜೆಕ್ಟ್​- ದಾಖಲೆ ಬರೆಯಲಿದೆ "ದಿ ಮಹಾಭಾರತ್

Add to
Shares
3
Comments
Share This
Add to
Shares
3
Comments
Share
Report an issue
Authors

Related Tags