ಆವೃತ್ತಿಗಳು
Kannada

ಆರ್ಡರ್​ ಮಾಡಿದ ಊಟಕ್ಕಾಗಿ ಕಾಯುವ ಪರಿಸ್ಥಿತಿ ತಪ್ಪಿಸಿದ ಸ್ಮಾರ್ಟ್​ ಕ್ಯೂ

ಟೀಮ್​ ವೈ.ಎಸ್​. ಕನ್ನಡ

YourStory Kannada
23rd Dec 2015
Add to
Shares
1
Comments
Share This
Add to
Shares
1
Comments
Share


ಇವತ್ತು ಬದುಕು ಯಾಂತ್ರೀಕೃತವಾಗಿ ಬಿಟ್ಟಿದೆ. ಕಾರ್ಯದೊತ್ತಡದಿಂದಾಗಿ ಸಂಬಂಧಗಳೇ ಬೆಳೆಯುವುದೇ ಕಷ್ಟವಾಗಿ ಬಿಟ್ಟಿದೆ. ನಮ್ಮ ಸುಖ- ದುಃಖವನ್ನು ಹಂಚಿಕೊಳ್ಳಲು ಸಮಯವಿಲ್ಲದಂತಾಗಿದೆ. ಕಚೇರಿಗೆ ಕಾಲಿಟ್ಟರೆ ಅಲ್ಲಿ ಮಾತನಾಡಲು ಕೂಡ ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸಹದ್ಯೋಗಿಗಳೊಂದಿಗೆ ಹರಟಲು ಸಿಗುವ ಸಮಯವೆಂದರೇ ಅದು ಊಟದ ಸಮಯ. ಆದರೆ, ಅಲ್ಲಿಯೂ ಕೂಡ ಜನಸಂದಣಿಯಿಂದ ಮಾತನಾಡಲು ಆಗದಂತಹ ಸನ್ನಿವೇಶವಿಲ್ಲದೆ. ಕುಟುಂಬಕ್ಕೆ ಸಿಗುವ 45 ನಿಮಿಷಗಳ ಕಾಲಾವಧಿ ಬರೀ ಊಟ ಆರ್ಡರ್ ಮಾಡುವುದಕ್ಕೆ ಹಾಗೂ ಊಟ ಕೊಳ್ಳುವುದಕ್ಕೇನೆ ಸೀಮಿತವಾಗಿದೆ. ಊಟದ ಸರತಿ ಸಾಲಿನಿಂದಾಗಿ, ಯಾರೊಂದಿಗೂ ಚರ್ಚಿಸದೆಯೇ ಕೆಲವೇ ತಿಂದು ಹೋಗುವುದರಲ್ಲೇ ಸಮಯ ವ್ಯಯವಾಗುತ್ತಿದೆ.

ಕಾರ್ಪೋರೇಟ್ ಕಂಪನಿಗಳ ಫುಡ್ ಕೋರ್ಟಿನಲ್ಲಿ ಅನುಭವಿಸಿದ್ದ ಯಾತನೆಯನ್ನು ಕೃಷ್ಣ ವೇಜ್ ತಮ್ಮದೇ ಆದ ವಿಭಿನ್ನ ರೀತಿಯಲ್ಲಿ ಅರ್ಥೈಸುತ್ತಾರೆ. ಅವರ ಕಂಪನಿಯ ಫುಡ್ ಕೋರ್ಟ್‌ನಲ್ಲಿ ಮಧ್ಯಾಹ್ನ 1.30ಕ್ಕೆ ಸರತಿ ಸಾಲಲ್ಲಿ ನಿಂತರೆ, ಕನಿಷ್ಠ ಅಂದರೆ 40 ನಿಮಿಷ ಊಟಕ್ಕಾಗಿ ಕಾಯುವಂತಹ ಸ್ಥಿತಿ ಉಂಟಾಗಿತ್ತು.

ಬಹುತೇಕ ಕಾರ್ಪೋರೇಟ್ ಫುಡ್ ಪಾರ್ಕ್ ಗಳಲ್ಲಿ ಸಿದ್ಧಪಡಿಸಿದ ಆಹಾರ ತಿನಿಸುಗಳು ಇದ್ದರೂ ಕೂಡ, ಸರ್ವೀಸ್ ನಲ್ಲಿ ಸಮಯ ವ್ಯಯವಾಗುತ್ತಿದ್ದದ್ದು ಕಂಡುಬಂದಿತ್ತು. ಮ್ಯಾನುಯಲ್ ಕ್ಯಾಷಿಯರ್ ಕೌಂಟರ್ ನಲ್ಲಿ ಬಿಲ್ ಪಾವತಿ ಹಾಗೂ ಹಣ ನೀಡುವುದು ವಿಳಂಬವಾಗುತ್ತಿದ್ದರಿಂದ, ಆಹಾರ ಪೂರೈಕೆ ವ್ಯವಸ್ಥೆಯಲ್ಲಿ ವಿಳಂಬವಾಗುತ್ತಿದ್ದ ಅಂಶ ಕೂಡ ಅರಿವಿಗೆ ಬಂದಿತ್ತು. ಈ ಯಾಂತ್ರಿಕೃತ ಯುಗದಲ್ಲೂ ಸಮಯ ವಿಳಂಬವಾಗುತ್ತಿದ್ದನ್ನು ಅರಿತ ಕೃಷ್ಣ ವೇಜ್ ಹಾಗೂ ಸ್ನೇಹಿತರು ಕಂಡು ಹಿಡಿದ ವ್ಯವಸ್ಥೆಯೇ ಸ್ಮಾರ್ಟ್ ಕ್ಯೂ.

image


ಸ್ಮಾರ್ಟ್ ಕ್ಯೂ ಅನ್ನುವುದು ಒಂದೇ ಒಂದು ದಿನದಲ್ಲಿ ಅಸ್ತಿತ್ವಕ್ಕೆ ಬಂದ ಪದ್ಧತಿಯಲ್ಲ. ಕೃಷ್ಣ ವೇಜ್ ಇದರ ಸಂಸ್ಥಾಪಕರು. ಅಭಿಷೇಕ್ ಹಾಗೂ ಸುಜಿತ್ ಲಾಲ್ವಾನಿ UI ಗಳು ಮತ್ತು Uxs ಏಳು ಆವೃತ್ತಿಗಳಲ್ಲಿ ಈ ಪರಿಪೂರ್ಣ ಅಪ್ಲಿಕೇಷನ್ ಸಿದ್ಧಪಡಿಸಿದ್ದಾರೆ. ಈ ಆಟೋಮೇಟಿಕ್ ಪ್ರಕ್ರಿಯೆಯಿಂದಾಗಿ ಈ ಹಿಂದೆ ವ್ಯಯವಾಗುತ್ತಿದ್ದ ಸಮಯ ಆರರಿಂದ ಒಂದಕ್ಕೆ ಉಳಿಕೆಯಾಗಿದೆ. ಸಂಪೂರ್ಣ ಸ್ವಯಂಚಾಲಿತ SmartQ 2015 Tech30 ಕಂಪನಿಯಾಗಿದೆ.

ಈ ಅತ್ಯಾಧುನಿಕ ತಂತ್ರಜ್ಞಾನ ಪದ್ಧತಿಯಿಂದ ನಿಮ್ಮ ಸಮಯ ಉಳಿತಾಯವಾಗಲಿದೆ. ಕೇವಲ 30 ಸೆಕೆಂಡ್‌ಗಳಲ್ಲಿ ಗ್ರಾಹಕರ ಆರ್ಡರ್ ಅನ್ನು ಸ್ವೀಕರಿಸಬಹುದಾಗಿದೆ. ಈ ಮೆಷಿನ್ ಬಳಕೆ ಮಾಡಿದರೆ ಒಂದೇ ಸಮಯದಲ್ಲಿ ಎರಡು ಬಿಲ್ ಗಳು ಸಿಗಲಿದೆ. ಒಂದು ಬಿಲ್ ನೇರವಾಗಿ ಅಡುಗೆ ಕೋಣೆ ತಲುಪಲಿದೆ. ಮತ್ತೊಂದು ಬಿಲ್ ಸರ್ವರ್ ಕೈಗೆ ಹೋಗಲಿದೆ. ನಿಮ್ಮ ಆರ್ಡರ್ ಅನ್ನು ಅಡುಗೆ ಭಟ್ಟ ಸ್ವೀಕರಿಸಿ, ತಿಂಡಿಯನ್ನು ಸಿದ್ಧಪಡಿಸುತ್ತಾನೆ. ಸರ್ವರ್ ತನ್ನ ಕೈಯಲ್ಲಿರುವ ಬಿಲ್ ಅನ್ನು ಹೊಂದಾಣಿಕೆ ಮಾಡಿಕೊಳ್ಳುತ್ತಾನೆ. ಕೆಲವೇ ಕ್ಷಣಗಳಲ್ಲಿ ನಿಮ್ಮ ಅಗತ್ಯತೆಗಳನ್ನು ಪೂರೈಸುತ್ತಾನೆ. ಇದರಿಂದಾಗಿ, ಸಮಯವೂ ಉಳಿತಾಯವಾಗಲಿದೆ. ನಿಮ್ಮ ಸ್ನೇಹಿತರೊಂದಿಗೆ ಹರಟುತ್ತಿರುವಾಗಲೇ ನಿಮ್ಮ ಟೇಬಲ್‌ಗೆ ತಿಂಡಿ ಬಂದು ಸೇರಲಿದೆ.

ಇಂದು ಅಸ್ತಿತ್ವದಲ್ಲಿರುವ ಸುಮಾರು 4 ಬಿಲಿಯನ್ ಪುಡ್ ಕೋರ್ಟ್ ಗಳು, ಔಟ್ ಲೇಟ್‌ಗಳ ಪೈಕಿ, ಬಹುತೇಕ ಪುಡ್ ಕೋರ್ಟ್ ಗಳು ಆಹಾರ ಪೂರೈಕೆಯಲ್ಲಿ ವಿಳಂಬವಾಗಿರುವುದರಿಂದ, ಗ್ರಾಹಕರನ್ನು ಕಳೆದುಕೊಂಡಿವೆ. ಬಹುತೇಕ ಪುಡ್ ಕೋರ್ಟ್ ಗಳಲ್ಲಿ ಸರ್ವೀಸ್ ಸರಿ ಇಲ್ಲದಿರುವುದರಿಂದ ಮುಚ್ಚುವ ಹಂತ ಕೂಡ ತಲುಪಿದೆ.

ಸ್ಮಾರ್ಟ್ ಕ್ಯೂ ಸಾಫ್ಟ್ ವೇರ್ ಬಳಕೆ ಮಾಡಿದ ಬಳಿಕ ಗ್ರಾಹಕರನ್ನು ನಿಯಂತ್ರಿಸಬಹುದಾಗಿದೆ. ಪ್ರತಿ ಒಂದು ಗಂಟೆ ಅವಧಿಯಲ್ಲಿ ಸುಮಾರು 1 ಲಕ್ಷ ಆರ್ಡರ್ ಗಳನ್ನು ಸ್ವೀಕರಿಸಬಹುದಾಗಿದೆ. 6 ತಿಂಗಳ ಹಿಂದೆ ಅನ್ವೇಷಣೆ ಗೊಂಡ ಈ ಸಾಫ್ಟ್ ವೇರ್ ಅನ್ನು ಬೆಂಗಳೂರಿನ ಎರಡು ಕಾರ್ಪೋರೇಟರ್ ಕಚೇರಿಗಳಲ್ಲಿ ಬಳಕೆ ಮಾಡಲಾಗಿದೆ. ಮೊದಲ ಅವಧಿಯಲ್ಲಿ ಸುಮಾರು 8000 ಔಟ್ ಲೇಟ್ ಗಳು ಇದನ್ನು ಬಳಕೆ ಮಾಡಿಕೊಂಡವು. ದಿನಕ್ಕೆ 600 ರಿಂದ 650ರಷ್ಟಿದ್ದ ವಹಿವಾಟು ದಿನಕ್ಕೆ 1ರಿಂದ ಒಂದೂವರೆ ಲಕ್ಷಕ್ಕೆ ಮುಟ್ಟಿತ್ತು.

ಇವತ್ತು ಸ್ಮಾರ್ಟ್ ಕ್ಯೂ ಅಪ್ಲಿಕೇಷನ್ ಅನ್ನು ಬಹುತೇಕ ಮಾಲ್, ಮಲ್ಟಿಫ್ಲೆಕ್ಸ್ ಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಇಲ್ಲಿ ಗ್ರಾಹಕರ ಸಂಖ್ಯೆ ದಿನೇ ದಿನೇ ದ್ವಿಗುಣವಾಗುತ್ತಿದೆ. ಗ್ರಾಹಕರಿಗೆ ತ್ವರಿತಗತಿಯಲ್ಲಿ ಪೂರೈಕೆ ಮಾಡಲು ಇದು ಸಹಕಾರಿಯಾಗುತ್ತಿದೆ. ಹೀಗಾಗಿ, ರೆಸ್ಟೋರೆಂಟ್, ಫುಡ್ ಪಾರ್ಕ್ ಗಳಿಗೆ ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಸ್ಮಾರ್ಟ್ ಕ್ಯೂ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಿದೆ. ಅಂದು ಮೂರು ಜನ ಇಂಜಿನಿಯರಿಂಗ್ ಕಂಡು ಹಿಡಿದ ಈ ಅಪ್ಲಿಕೇಷನ್ ಈಗ ಅತ್ಯಂತ ಜನಪ್ರಿಯವಾಗಿದೆ. ಮಲ್ಟಿಫ್ಲೆಕ್ಸ್ , ಮಾಲ್ ಗಳು ಸೇರಿದಂತೆ, 15 ಜಾಗಗಳಲ್ಲಿ ಸ್ಮಾರ್ಟ್ ಕ್ಯೂ ಆರಂಭಿಸುವ ಉದ್ದೇಶವನ್ನು ಹೊಂದಲಾಗಿದೆ. ಮುಂದಿನ 2 ತಿಂಗಳಲ್ಲಿ ಈ ಗುರಿ ಮುಟ್ಟುವ ಯೋಜನೆ ಇಟ್ಟುಕೊಳ್ಳಲಾಗಿದೆ.


ಲೇಖಕರು: ಬಿಂಜಾಲ್​ ಷಾ

ಅನುವಾದಕರು: ಶೃತಿ

Add to
Shares
1
Comments
Share This
Add to
Shares
1
Comments
Share
Report an issue
Authors

Related Tags