ಆವೃತ್ತಿಗಳು
Kannada

ನಾವು ಹೂಡಿಕೆ ಮಾಡುವುದು ಕರ್ನಾಟಕದಲ್ಲಿ ಮಾತ್ರ: ಕಮಲ್ ಬಾಲಿ, ಎಂಡಿ, ವೊಲ್ವೊ ಇಂಡಿಯಾ

ಟೀಮ್​ ವೈ.ಎಸ್​. ಕನ್ನಡ

YourStory Kannada
6th Feb 2016
1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಹೂಡಿಕೆ ಕರ್ನಾಟಕ 2016, ಜಾಗತಿಕ ಹೂಡಿಕೆದಾರರ ಸಮಾವೇಷದ ಎರಡನೇ ದಿನ, ಭಾರತದಲ್ಲಿ ವೊಲ್ವೊ ಪ್ರಯಾಣ ಪ್ರಾರಂಭ ಮತ್ತು ಬೆಂಗಳೂರು ಅದರ ಅವಿಭಾಜ್ಯ ಅಂಗವಾಗಿದ್ದು ಹೇಗೆ ಎಂದು ವೊಲ್ವೊ ಇಂಡಿಯಾದ ಎಂ.ಡಿ ಕಮಲ್ ಬಾಲಿ, ಆಟೋ ಮತ್ತು ಮಷೀನ್ ಟೂಲ್ಸ್ ವಿಷಯದ ಸಮ್ಮೇಳನದಲ್ಲಿ ಮಾತನಾಡಿದರು.

ಕರ್ನಾಟಕ- ಇದುವೇ ನಮ್ಮ ನಿರ್ದಿಷ್ಠ ಸ್ಥಳ

2014-15ರ ಭಾರತದ ಜಿಡಿಪಿಗೆ ಕರ್ನಾಟಕದ ಬೆಳವಣಿಗೆ 5.68% ಕೊಡುಗೆ ನೀಡಿದೆ ಎಂದು ಅವಲೋಕನ ಮಾಡುತ್ತಾ ಭಾರತದಲ್ಲಿ ವೊಲ್ವೊ ಪ್ರಾರಂಭಕ್ಕೆ ಕರ್ನಾಟಕವೇ ನಮ್ಮ ನಿರ್ದಿಷ್ಟ ಸ್ಥಳವಾಗಿತ್ತು ಎಂದು ಕಮಲ್ ಬಾಲಿ ಒತ್ತಿ ಹೇಳಿದರು. ಜತೆಗೆ ಇಲ್ಲಿನ ಹೂಡಿಕೆ ಸ್ನೇಹಿ ಸರ್ಕಾರ ಹಾಗೂ ಎಲ್ಲ ಹಂತಗಳಲ್ಲೂ ಬೆಂಬಲ ಸಿಗುವುದರಿಂದ ನಮ್ಮ ವ್ಯವಹಾರವನ್ನು ಇಲ್ಲಿಯೇ ಮುಂದುವರೆಸುತ್ತೇವೆ ಎಂದರು.

image


ಕರ್ನಾಟಕದಲ್ಲಿ ಮಾತ್ರ ನಮ್ಮ ಹೂಡಿಕೆ ಇರುತ್ತದೆ. ಬೆಂಗಳೂರಿನ ಕಾಸ್ಮೊಪಾಲಿಟನ್ ಪರಿಸರ, ಹವಾಮಾನ, ಪ್ರತಿಭಾ ಸಂಗಮ ಮತ್ತು ಶೈಕ್ಷಣಿಕ ಸಂಸ್ಥೆಗಳು ಇದಕ್ಕೆ ಕಾರಣ. ರಾಜ್ಯದಲ್ಲಿ ಪ್ರಸ್ತುತ ಮುಂಚೂಣಿಯಲ್ಲಿರೋ ಐಟಿ ಉದ್ಯಮ, ದೂರಸಂಪರ್ಕ, ಭಾರೀ ಯಂತ್ರೋಪಕರಣ ಕಂಪನಿಗಳ ಜತೆಗೆ ಅತ್ಯುತ್ತಮ ಅಂತರ್ಜಾಲ ವ್ಯವಸ್ಥೆ ಹಾಗೂ ಆಪ್ಟಿಕಲ್ ಫೈಬರ್ ಸಂಪರ್ಕವೂ ಸಹ ಇದಕ್ಕೆ ಕಾರಣವಾಗಿದೆ ಎನ್ನುತ್ತಾರೆ ಕಮಲ್ ಬಾಲಿ.

ಕರ್ನಾಟಕದಲ್ಲಿ 17 ವರ್ಷ

ವೊಲ್ವೊ ಸಮೂಹ ಬೆಂಗಳೂರಿನಲ್ಲಿ ತಮ್ಮ ಟ್ರಕ್ ಕಾರ್ಖಾನೆ ಸ್ಥಾಪನೆ ಮಾಡಿದ್ದು 1998 ರಲ್ಲಿ ಮತ್ತು ತಮ್ಮ ಕಾರ್ಯಾಚರಣೆಯನ್ನು ಹೊಸ ಮೌಲ್ಯದ ಟ್ರಕ್‍ಗಳಿಗೆ ವಿಸ್ತÀ್ತರಿಸಿದ್ದು 2014ರಲ್ಲಿ. ಕಂಪನಿ 2007ರಲ್ಲಿ ವೊಲ್ವೊ ಬಸ್ ಫ್ಯಾಕ್ಟರಿ ಸ್ಥಾಪನೆ ಮಾಡಿತು ಹಾಗೂ 2013ರಲ್ಲಿ ತಮ್ಮ ಉತ್ಪಾದನೆಯ ಹೆಜ್ಜೆಯನ್ನು 100% ಹೆಚ್ಚುಗೊಳಿಸಿದರು. 2014-19ರ ವರೆಗಿನ ಪ್ರಗತಿಶೀಲ ಕೈಗಾರಿಕಾ ನೀತಿಯಿಂದ ವಾರ್ಷಿಕ 12% ಕೈಗಾರಿಕಾ ಬೆಳವಣಿಗೆ ಗುರಿ ಹಾಕಿಕೊಂಡಿದೆ.

ಇದನ್ನು ಓದಿ

ಭಾರತ ಮತ್ತು ಜರ್ಮನಿ- ಸಂಬಂಧ ಸುಧಾರಣೆಯ ಹೊಸ ಶೃಂಗ - 10 ಅಂಶಗಳು

ಕರ್ನಾಟಕದ ಉತ್ಪಾದನಾ ವಲಯದ ಜಿಡಿಪಿಗೆ ತಮ್ಮ ಕೊಡುಗೆಯನ್ನು ಕೈಗಾರಿಕಾ ನೀತಿ ವರ್ಷದ ಅಂತ್ಯಕ್ಕೆ 16.87% ನಿಂದ 20% ಗೆ ಹೆಚ್ಚಿಸೋ ಗುರಿ ವೊಲ್ವೊ ಮುಂದಿದೆ. ಅಲ್ಲದೇ 5 ಲಕ್ಷ ಕೋಟಿ ಹೂಡಿಕೆಯನ್ನು ಸೆಳೆದು 15 ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿ ಮಾಡೋ ಯೋಜನೆಯೂ ಕಂಪನಿ ಮುಂದಿದೆ.

ಕರ್ನಾಟಕ ಮತ್ತು ಭಾರತೀಯ ಉಪಖಂಡದಲ್ಲಿ ಯಶಸ್ಸು

ತಮ್ಮ ಗುರಿಗಳಾದ ಪರಿಸರ ಸ್ನೇಹಿ ಉತ್ಪನ್ನ ಅಭಿವೃದ್ಧಿ, ನಗರೀಕರಣಕ್ಕೆ ಸಹಾಯ, ಸುರಕ್ಷಾ ಮಾನದಂಡಗಳ ಖಾತರಿ ಮತ್ತು ಕೌಶಲ್ಯ ಅಭಿವೃದ್ಧಿಗೆ ಕೊಡುಗೆಯಂತಹ ರಾಜ್ಯ ಮತ್ತು ರಾಷ್ಟ್ರದ ಆದ್ಯತೆಗಳಿಗೆ ತಾವು ಹೊಂದಿಕೊಂಡಿರೋದೇ ಕರ್ನಾಟಕದಲ್ಲಿ ವೊಲ್ವೊ ಯಶಸ್ಸಿಗೆ ಕಾರಣ ಎಂದು ನಂಬುತ್ತಾರೆ. ತಮ್ಮ ಲಾಜಿಸ್ಟಿಕ್ಸ್, ಟೆಲಿಮ್ಯಾಟಿಕ್ಸ್, ಟ್ರಕ್ ತಂತ್ರಜ್ಞಾನ ಮತ್ತು ಐಟಿ ಸೇವೆಗಳಲ್ಲಿ 360 ಡಿಗ್ರಿ ಹೆಜ್ಜೆ ಗುರುತು ಮೂಡಿಸುವುದು ಮತ್ತು ‘ಭಾರತದಲ್ಲೇ ತಯಾರಿಸಿ’ ಎನ್ನುವುದು ಕಂಪನಿ ಗುರಿ. ಸಧ್ಯ 3500ಮಂದಿ ಕಾರ್ಮಿಕ ವರ್ಗ ಮತ್ತು 400 ಮಾರಾಟ-ಸೇವಾ ಪ್ರತಿನಿಧಿಗಳೊಂದಿಗೆ ವೊಲ್ವೊ ಬೆಂಗಳೂರಿನ ಹೊಸಕೋಟೆ, ಪೀಣ್ಯ ಮತ್ತು ಮಧ್ಯಪ್ರದೇಶದ ಪೀತಾಂಬರ್‍ನಲ್ಲಿ ತಮ್ಮ ಉತ್ಪಾದನಾ ಘಟಕ ಹೊಂದಿದೆ.

ಭಾರತದಲ್ಲಿ ತಯಾರಿಕೆ ಮತ್ತು ವಿತರಣೆಯ ಜತೆ ಲ್ಯಾಟಿನ್ ಅಮೆರಿಕಾ, ದಕ್ಷಿಣ ಅಮೆರಿಕಾ ಮತ್ತು ಏಷ್ಯಾದ ಹಲವು ದೇಶಗಳಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಪ್ರಸ್ತುತ ತಮ್ಮ ಬಸ್‍ಗಳನ್ನು ದಕ್ಷಿಣ ಆಫ್ರಿಕಾ, ದಕ್ಷಿಣ ಏಷ್ಯಾ ಮತ್ತು ಯೂರೋಪ್‍ಗಳಿಗೆ ರಫ್ತು ಮಾಡುತ್ತಿದ್ದಾರೆ. ಉತ್ತಮ ರಸ್ತೆ ತಂತ್ರಜ್ಞಾನವನ್ನು ನಿರ್ಮಿಸೋ ಮೂಲಕ ಉನ್ನತ ಗುಣಮಟ್ಟದ ಮೂಲಸೌಕರ್ಯ ಅಭಿವೃದ್ಧಿಯನ್ನು ಕ್ಷಿಪ್ರವಾಗಿ ಕಾರ್ಯಗತಗೊಳಿಸುವ ಗುರಿಯನ್ನು ವೊಲ್ವೊ ಹೊಂದಿದೆ. ಇವರು ಭಾರತೀಯ ನೌಕಾದಳ ಮತ್ತು ಕೋಸ್ಟ್‍ಗಾರ್ಡ್‍ಅನ್ನು ಶಕ್ತಿಯುತವನ್ನಾಗಿ ಮಾಡಲು ಸಹಾಯ ಮಾಡುತ್ತಿದ್ದಾರೆ.

‘ವೊಲ್ವೊ ಆಪರೇಟರ್ ಐಡಲ್ ಸ್ಪರ್ಧೆ’ ಮತ್ತು ‘ವೊಲ್ವೊ ಇಂಧನ ಸಮೀಕ್ಷೆ ಸವಾಲು’ಗಳಂತಹ ವಿವಿಧ ಸ್ಪರ್ಧೆಗಳ ಮೂಲಕ ಕಂಪನಿಯು ತನ್ನ ಚಾಲಕರು ಮತ್ತು ನಿರ್ವಾಹಕರ ಸುರಕ್ಷತಾ ಗುಣಮಟ್ಟ ಹಾಗೂ ಇಂಧನ ದಕ್ಷತೆಯನ್ನು ಸುಧಾರಿಸಲು ಗುರಿ ಹಾಕಿಕೊಂಡಿದೆ.

ವೊಲ್ವೊ-ಜಿಎಂಆರ್ ಪಾಲದಾರಿಕೆಯ ಮೂಲಕ ನಿರುದ್ಯೋಗಿ ಯುವಕರಿಗೆ ಹೈದರಾಬಾದ್, ದೆಹಲಿ ಮತ್ತು ಬೆಂಗಳೂರಿನ ಸಿಇ ಡೆಮೋ ಕೇಂದ್ರದಲ್ಲಿ ನಿರ್ವಾಹಕರಾಗಲು ತರಬೇತಿ ನೀಡಿ ಸಹಾಯ ಮಾಡುತ್ತಿದೆ. ಉತ್ತಮ ರಸ್ತೆ ನಿರ್ಮಾಣ ಕೌಶಲ್ಯಕ್ಕಾಗಿ ರಾಸ್ತಾ ಅಕಾಡೆಮಿ ಸಮಾಲೋಚನೆ ಒದಗಿಸುತ್ತದೆ ಹಾಗೂ ರಸ್ತೆ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಕಾರ್ಯಕ್ರಮಗಳು ಮತ್ತು ತರಬೇತಿಯನ್ನು ನೀಡುತ್ತಿದೆ.

ಭವಿಷ್ಯದ ಯೋಜನೆಗಳು

ಉತ್ತಮ ಭವಿಷ್ಯವನ್ನು ಊಹಿಸಲು ನಾವೇ ಅದನ್ನು ರಚಿಸಬೇಕು ಎಂಬ ತತ್ವವÀನ್ನು ವೊಲ್ವೊ ನಂಬುತ್ತದೆ. ಸಮರ್ಥನೀಯವಾದ ಸಾರಿಗೆ ಕ್ಷೇತ್ರದ ಪರಿಹಾರಕ್ಕೆ ನಾಯಕನಾಗುವುದು ವೊಲ್ವೊದ ದೂರಾಲೋಚನೆ. ಇದನ್ನು ಸಾಧಿಸಲು ಮತ್ತು ಭವಿಷ್ಯಕ್ಕೆ ಆಕಾರ ಕೊಡಲು ಕಂಪನಿಯು ಐದು ಪ್ರವೃತ್ತಿಯ ಅರಿವನ್ನು ಇರಿಸಿಕೊಂಡಿದ್ದಾರೆ.

1. ಡಿಜಿಟಲೀಕರಣ

2. ಪಶ್ಚಿಮದಿಂದ ಪೂರ್ವಕ್ಕೆ ಆರ್ಥಿಕ ಶಕ್ತಿಯ ವರ್ಗ

3. ಆರ್ಥಿಕ ಅಸಮಾನತೆಯ ಅಗಲೀಕರಣ

4. ನಮ್ಮ ಹಾಗೂ ಭೂಮಿಯ ನಡುವಣ ಸಂಬಂಧವನ್ನು ಬದಲಾಯಿಸುವುದು

5. ನಗರೀಕರಣಕ್ಕೆ ವೇಗ

ಬಸ್‍ಗಳಲ್ಲಿ ಹೈಬ್ರಿಡ್ ತಂತ್ರಜ್ಞಾನ ಉಪಯೋಗದ ಮೂಲಕ 40% ಇಂಧನದ ಸಮರ್ಥನೀಯ ಉಳಿತಾಯ, ಇಂಗಾಲ ಮತ್ತು ಹೊಗೆ ಹೊರಸೂಸುವಿಕೆಯನ್ನು 50% ಕಡಿಮೆ ಮಾಡುವುದು ಮತ್ತು ಪ್ರಯಾಣಕರಿಗೆ ಸುಖ ಪ್ರಯಾಣದ ಅನುಭವ ಕೊಡುವುದು ವೊಲ್ವೊ ಕರ್ನಾಟಕದ ಭವಿಷ್ಯದ ಯೋಜನೆಗಳು. ಕರ್ನಾಟಕವನ್ನು ಸಾಟಿಯಿಲ್ಲದ ಜಾಗತಿಕ ತಾಣವನ್ನಾಗಿ ಮಾಡಲು ಕಮಲ್ ತಮ್ಮ ಪ್ರಸ್ತಾವನೆಗಳನ್ನ ಮುಂದಿಟ್ಟು ಅಧಿವೇಶನವನ್ನ ಕೊನೆಗೊಳಿಸಿದರು.

1. ಸುಲಭ ಕಾರ್ಮಿಕ ನೀತಿ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ಹೊಸ ಚೈತನ್ಯ, ಉತ್ಪಾದಕತೆ ಮತ್ತು ಸಂರಕ್ಷಣೆಯನ್ನು ಉತ್ತೇಜಿಸಲು ಸಂಬಂಧಿತ ಅನುಸರಣೆ.

2. ರಸ್ತೆಗಳನ್ನು ಟ್ರಾಫಿಕ್ ಮುಕ್ತ ಮಾಡಲು ಮೂಲಸೌಕರ್ಯ ಲಭ್ಯತೆಯ ವೃದ್ಧಿ, ವಿಮಾನ ನಿಲ್ದಾಣ, ವಿದ್ಯುತ್ ಮತ್ತು ನೈರ್ಮಲ್ಯ ಕ್ಷೇತ್ರದಲ್ಲಿ ಮೂಲಸೌಕರ್ಯದ ಅಭಿವೃದ್ಧಿ.

3. ಸರಕು ಮತ್ತು ಸೇವಾ ತೆರಿಗೆಗಳ ಪರಿಚಯ (ಉSಖಿ) ಮತ್ತು ವರ್ಗಾವಣೆ ಬೆಲೆ ಸರಳ (ಖಿP) ಗೊಳಿಸುವುದರ ಮೂಲಕ ತೆರಿಗೆ ಸಂಬಂಧಿತ ಅನುಸರಣೆಯನ್ನು ಕಡಿಮೆ ಮಾಡುವುದು.

4. ಉತ್ತಮ ಸಾರ್ವಜನಿಕ ಖಾಸಗೀ ಸಹಭಾಗಿತ್ವದ ಮೂಲಕ ಕೌಶಲ್ಯ ಅಭಿವೃದ್ಧಿಯ ಸಾಧ್ಯತೆ ಮತ್ತು ಏಕಗವಾಕ್ಷಿ ಪರವಾನಗಿ ಪರಿಣಾಮಕಾರಿಯಾಗಿ ಸುಧಾರಣೆ ಮಾಡುವುದು.

ಇದನ್ನು ಓದಿ

1. ಅರಮನೆ ನಗರದಲ್ಲಿ ಐಟಿ ಕಂಪು

2.ಚಿನ್ನದ ಗಣಿಯ ನೆಲೆ ಕೋಲಾರಕ್ಕೆ ಬೇಕಿದೆ ಚಿನ್ನದಂಥಾ ಹೂಡಿಕೆ..!

3.ಚಿಕ್ಕಮಗಳೂರ ಕಾಫಿ ಘಮ್ ಎನ್ನುತ್ತಿದೆ....!

1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags