ಆವೃತ್ತಿಗಳು
Kannada

ಭಾರತದ 400 ಕಟ್ಟಡಗಳಲ್ಲಿ ಶಕ್ತಿ ಸಂಪನ್ಮೂಲಗಳ ಪೂರ್ಣ ಉಳಿತಾಯ : ಇದು ಇಬ್ಬರು ಸ್ನೇಹಿತರ ಅಪೂರ್ವ ಸಾಹಸ..!

ಟೀಮ್​ ವೈ.ಎಸ್​. ಕನ್ನಡ

YourStory Kannada
18th Apr 2016
3+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಬೆಳೆಯುತ್ತಿರುವ ಭಾರತದ ಸಣ್ಣ ನಗರಗಳಲ್ಲಿ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಲ್ಪಿಸುವುದೇ ಒಂದು ದೊಡ್ಡ ಸವಾಲು. ಇನ್ನು ಅಭಿವೃದ್ಧಿ ಮಂತ್ರ ಪಠಿಸುವ ಯಾವುದೇ ಸರ್ಕಾರವಾದ್ರೂ ಸಣ್ಣ ನಗರಗಳಿಗೆ ಮೂಲಭೂತ ಸೌಕರ್ಯಗಳನ್ನ ಒದಗಿಸಲು ಇನ್ನಿಲ್ಲದ ರೀತಿ ತಿಣುಕಾಡುತ್ತವೆ. ಆದ್ರೆ 35 ವರ್ಷದ ಅರುಣ್ ಶೆಣೈ ಹಾಗೂ 40 ವರ್ಷದ ಮದನ್ ಕರ್ಪೇಕರ್ ಮಾಡಿರೋ ಪ್ರಯತ್ನ ನೀರು ಹಾಗೂ ವಿದ್ಯುತ್ ಸಮಸ್ಯೆಗಳನ್ನ ತೊಲಗಿಸುವ ಬಗ್ಗೆ ಹೊಸ ಭರವಸೆ ನೀಡಿದೆ. ಪುನರ್ ನವೀಕರಣಗೊಳಿಸಲಾದ ಶಕ್ತಿಗಳನ್ನ ಉಳಿಸಿಕೊಳ್ಳಬೇಕು, ಅದ್ರ ಬಗ್ಗೆ ಕಾಳಜಿ ವಹಿಸಬೇಕು ಅನ್ನೋ ಮಾತುಗಳನ್ನ ಹೇಳುವವರು ಅದೆಷ್ಟೋ ಮಂದಿ. ಅವುಗಳನ್ನ ಪಠ್ಯಪುಸ್ತಕಗಳಿಗಷ್ಟೇ ಸೀಮಿತಗೊಳಿಸಿದವರಿಗೇನು ಕಮ್ಮಿ ಇಲ್ಲ. ಆದ್ರೆ ಅರುಣ್ ಶೆಣೈ ಹಾಗೂ ಮದನ್ ಮದನ್ ಕರ್ಪೇಕರ್ ಮಾತ್ರ ಇದನ್ನ ಯಾವತ್ತಿಗೂ ಹಗುರವಾಗಿ ಪರಿಗಣಿಸಲಿಲ್ಲ. ಶಕ್ತಿ ಸಂಪನ್ಮೂಲಗಳ ಬಗ್ಗೆ ಅವುಗಳನ್ನ ಉಳಿಸುವ ಬಗ್ಗೆ ದೊಡ್ಡ ಆಂದೋಲವನ್ನ ಮಾಡಬೇಕು ಅಂತ ಪಣತೊಟ್ಟವರು ಇವರು. ಇದಕ್ಕಾಗಿ ಇವರು ಏಪ್ರಿಲ್ 2010ರಲ್ಲಿ ಆರಂಭಿಸಿದ್ದು ಗ್ರೀನ್ ಇಂಡಿಯಾ ಬ್ಯುಲ್ಡಿಂಗ್ ಸಿಸ್ಟಮ್ ಅಂಡ್ ಸರ್ವೀಸಸ್. ಅಂದ್ರೆ ವಾಸವಿರುವ ಆಪಾರ್ಟ್ ಮೆಂಟ್ ನಲ್ಲೊಂದು ಚಿಕ್ಕ ಆಪರೇಷನ್. ಇವರ ಈ ತಂಡ ಈಗಾಗಲೇ 9 ಮಂದಿ ಸದಸ್ಯರನ್ನ ಒಳಗೊಂಡಿದ್ದು ಈಗಾಗಾಲೇ ತಮ್ಮ ಮಿಷನ್ ಅನ್ನ ಅದ್ಭುತವಾಗಿ ಕಾರ್ಯರೂಪಕ್ಕೆ ತರಲು ಮುಂದಾಗಿದ್ದಾರೆ.

image


ಅಪೂರ್ವ ಗುರಿಯತ್ತ ಪಯಣ..

ಒಕ್ಲಹೋಮಾ ಸ್ಟೇಟ್ ಯುನಿವರ್ಸಿಟಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪೂರ್ಣಗೊಳಿಸಿರುವ ಅರುಣ್ ಯುಎಸ್ ಎ ನ ಪ್ರತಿಷ್ಠಿತ ವಿದ್ಯಾಸಂಸ್ಥೆಯಿಂದಲೂ ಪ್ರಮಾಣ ಪಡೆದವರು. ಅಮೆರಿಕಾದಲ್ಲಿ ಪುನರ್ ನವೀಕರಿಸಲು ಆಗದಿರುವ ಶಕ್ತಿ ಸಂಪನ್ಮೂಲಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ ಅರುಣ್ ಭಾರತದಲ್ಲಿ ಕಂಡು ಬಂದಿದ್ದ ಶಕ್ತಿ ಸಂಪನ್ಮೂಲಗಳ ಕೊರತೆಗೊಂದು ಪರ್ಯಾಯ ಹಾದಿ ಕಂಡುಕೊಡಬೇಕು ಅನ್ನೋ ನಿಟ್ಟಿನಲ್ಲಿ ಕಾರ್ಯಕ್ರಮ ಆರಂಭಿಸಿದ್ರು. ಇದಕ್ಕಾಗಿ ಮುಂಬೈನ ಐಐಎಂಬಿ ಯುನಿವರ್ಸಿಟಿಯಲ್ಲಿ ವಿಶೇಷ ಅಧ್ಯಯನ ಆರಂಭಿಸಿದ್ರು. ಅಮೆರಿಕಾ ಹಾಗೂ ಭಾರತದಲ್ಲಿ ಕಳೆದ 15 ವರ್ಷಗಳಿಂದ ಹೀಟಿಂಗ್ ಹಾಗೂ ಕೂಲಿಂಗ್ ಸಿಸ್ಟಮ್ ಗಳಾಗಿ ಗುರುತಿಸಿಕೊಂಡಿರುವ ವಸ್ತಗಳ ಬಗ್ಗೆ ಸೂಕ್ಷ್ಮವಾಗಿ ಅವಲೋಕನ ನಡೆಸಿದ್ರು. ಇನ್ನು ಇದೇ ರೀತಿಯ ಕನಸು ಹಾಗೂ ಉದ್ದೇಶವನ್ನ ಹೊತ್ತಿರುವ ಮದನ್ ಕರ್ಪೇಕರ್ ಕೂಡ ಅರುಣ್ ಅವನ್ನ ಭೇಟಿ ಮಾಡಿ ತಮ್ಮ ಯೋಜನೆಗಳನ್ನ ವಿವರಿಸಿದ್ರು. ಇದಕ್ಕೆ ಅವರಿಂದಲೂ ಅದ್ಭುತವಾದ ಸ್ಪಂದನೆ ಸಿಕ್ಕಿದ್ದು ವಿಶೇಷ. ಇನ್ನು 2009ರಲ್ಲಿ ತಮ್ಮ ಮಹತ್ವಾಕಾಂಕ್ಷೆಯ ಜಿಐಬಿಎಸ್ ಎಸ್ ಕಂಪನಿಯನ್ನು ಶುರುಮಾಡಿದ್ರು. ಅದ್ರಲ್ಲೂ ಮುಂದಿನ 20 ವರ್ಷಗಳಲ್ಲಿ ಶಕ್ತಿ ಸಂಪನ್ಮೂಲ ಕ್ಷೇತ್ರದಲ್ಲಿ ಹೊಸತನವನ್ನ ಗುರುತಿಸಬೇಕು ಅನ್ನೋದು ಇವರ ಮಹತ್ವಾಕಾಂಕ್ಷೆಯಾಗಿತ್ತು.

ಇದನ್ನು ಓದಿ: ಅಮೂಲ್ಯ ಜೀವ ಉಳಿಸಲು ‘ವಿಷ ಮಾಹಿತಿ ಕೇಂದ್ರ’

ಅರುಣ್ ಶೆಣೈ ಹಾಗೂ ಮದನ್ ಕರ್ಪೇಕರ್ ಅವರಿಂದ ಶುರುವಾಗಿರುವ ಜಿಐಬಿಎಸ್ ಎಸ್ ವಿದ್ಯುತ್ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುವ ಬಗ್ಗೆ ಈಗಾಗಲೇ ಸೂಚನೆ ನೀಡಿದೆ. ವಿದ್ಯುತ್ ಬಿಲ್ ನಲ್ಲಿ ಸಾಕಷ್ಟು ಕಡಿಮೆ ದರ ಬರುವ ಬಗ್ಗೆ ಸುಳಿವು ನೀಡಿದೆ. ಇದಕ್ಕಾಗಿ ವಿಶೇಷ ಟೆಕ್ನಾಲಜಿಗಳ ಮೊರೆ ಹೋಗಿರುವ ಇವರಿಬ್ರು ಇದನ್ನ ಅಳವಡಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಮುಂಬೈನಲ್ಲಿ ಸದ್ಯ ಮುಖ್ಯ ಕಚೇರಿಯನ್ನ ಹೊಂದಿರುವ ಇವರ ಕಂಪನಿ ಭವಿಷ್ಯದಲ್ಲಿ ಬೆಂಗಳೂರು, ದೆಹಲಿ , ಹೈದ್ರಾಬಾದ್ ಹಾಗೂ ಸಿಂಗಪುರವನ್ನ ಗುರಿಯಾಗಿಸಿಕೊಂಡಿದ್ದಾರೆ. ಇನ್ನು ಜಿಐಬಿಎಸ್ ಎಸ್ ಇದುವರೆಗೂ ಭಾರತದ 400 ಕಟ್ಟಡಗಳಲ್ಲಿ ವಾರ್ಷಿಕ ಎಂಟು ಮಿಲಿಯನ್ ಪವರ್ ಯುನಿಟ್ ಗಳನ್ನ ಹಾಗೂ 150 ಮಿಲಿಯನ್ ಲೀಟರ್ ನೀರನ್ನ ಉಳಿತಾಯ ಮಾಡಿರೋದು ವಿಶೇಷ.

image


ಜಿಐಬಿಎಸ್ ಎಸ್ ನಲ್ಲಿದೆ ಸ್ಪೆಷಲ್ ಟೆಕ್ನಾಲಜಿ

ಜಿಐಬಿಎಸ್ ಎಸ್ ಈ ರೀತಿಯ ಸಕ್ಸಸ್ ಕಾಣಲು ಪ್ರಮುಖ ಕಾರಣ ಈ ಕಂಪನಿಯಲ್ಲಿರುವ ಜೆದರ್ ಮಾಲ್ ಟೆಕ್ನಾಲಜಿ. ಈ ತಂತ್ರಜ್ಞಾನದಲ್ಲಿ ಬಿಸಿಯಾಗುವ ಹಾಗ ತಣ್ಣಗಾಗುವ ಪ್ರಕ್ರಿಯೆಯನ್ನ ಸುಲಭವಾಗಿ ಗುರುತಿಸಬಹುದು. ಏರ್ ಕಂಡೀಷನ್ ರೀತಿಯಲ್ಲಿ ಕಾರ್ಯನಿರ್ವಹಿಸುವ ಈ ತಂತ್ರಜ್ಞಾನ ಇಂಡಸ್ಟ್ರೀಸ್ ಗಳಲ್ಲಿ ಹೆಚ್ಚು ಬಳಕೆಯಾಗುತ್ತದೆ. “ಸಾಂಪ್ರದಾಯಿಕ ಏರ್ ಕೂಲರ್ ಗಳಿಗೆ ಹೋಲಿಸಿದ್ರೆ ಶೇಕಡಾ 60ರಷ್ಟು ಶಕ್ತಿಯನ್ನ ಉಳಿಸಬಹುದು ” ಅಂತಾರೆ ಕಂಪನಿಯ ಮಾಲಿಕ ಅರುಣ್. ಅನ್ನು ಕೇವಲ ಏರ್ ಕೂಲಿಂಗ್ ಮಾತ್ರವಲ್ಲದೆ ಗ್ರೌಂಡ್ ಟೆಂಪರೇಚರನ್ನೂ ಇದು ಬ್ಯಾಲೆನ್ಸ್ ಮಾಡೋದ್ರಲ್ಲಿ ಮಹತ್ವದ ಪಾತ್ರವಹಿಸುತ್ತದೆ.

ಇನ್ನು ಇವರ ತಂತ್ರಜ್ಞಾನ ಕೇವಲ ವಿದ್ಯುತ್ ಉಳಿತಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ನೀರಿನ ಬಳಕೆಯನ್ನೂ ಇದು ತಗ್ಗಿಸುವಲ್ಲಿ ಮಹತ್ವದ ಪಾತ್ರವಹಿಸಿರೋದು ವಿಶೇಷ. ಇದ್ರ ಸ್ಪೆಷಲ್ ಏರ್ ಕಂಡೀಷನ್ ಸಿಸ್ಟಮ್ ಪ್ರತೀ ಗಂಟೆಗೆ ಸುಮಾರು 10 ಲೀಟರ್ ನೀರಿನ ಬಳಕೆಯನ್ನ ತಗ್ಗಿಸುತ್ತದೆ. ಇನ್ನು ಮಾರ್ಕೆಟ್ ನಲ್ಲೂ ಇದು ಭವಿಷ್ಯದಲ್ಲಿ ಅದ್ಭುತವಾಗಿ ಬೆಳೆಯುವ ಸೂಚನೆಯನ್ನ ಈಗಾಗಲೇ ನೀಡಿದೆ. ಭವಿಷ್ಯದ ಮಾರ್ಕೆಟ್ ನಲ್ಲಿ ಇದ್ರ ಗಾತ್ರ ಸುಮಾರ 70 ಸಾವಿರ ಕೋಟಿಗಳೆಂದು ಅಂದಾಜಿಸಲಾಗಿದೆ. ಅಲ್ಲದೆ ಮುಂದಿನ 10 ವರ್ಷಗಳಲ್ಲಿ ಈ ತಂತ್ರಜ್ಞಾನದ ಬಳಕೆ ಶೇಕಡಾ 300ರಷ್ಟು ಹೆಚ್ಚುತ್ತದೆ ಅನ್ನೋ ಭವಿಷ್ಯಗಳೂ ಹೊರಬಿದ್ದಿವೆ. ಈಗಾಗಲೇ 400 ಕಟ್ಟಡಗಳಲ್ಲಿ ಇವುಗಳನ್ನ ಅಳವಡಿಸಿ ಪರಿಶೀಲಿಸಲಾಗುತ್ತಿದೆ. ಒಂದೊಮ್ಮೆ ಇದು ಇನ್ನಷ್ಟು ಪರಿಣಾಕಾರಿಯಾದ್ರೆ ಪುನರ್ ನವೀಕರಿಸಲು ಸಾಧ್ಯವಾಗದ ವಿದ್ಯುತ್ ಹಾಗೂ ನೀರಿನ ಸಂಪನ್ಮೂಲಗಳ ರಕ್ಷಣೆಗೆ ಆನೆ ಬಂದಂತಾಗುತ್ತದೆ.

ಲೇಖಕರು – ಬಿಂಜಾಲ್ ಷಾ

ಅನುವಾದ – ಸ್ವಾತಿ 

ಇದನ್ನು ಓದಿ: 

1. ಮಹಿಳೆಯರ ದೇಗುಲ ಪ್ರವೇಶಕ್ಕಾಗಿ ತೃಪ್ತಿ ದೇಸಾಯಿ ಹೋರಾಟ..!

2. ನಾರಿಯರ ದಿಲ್ ಕದ್ದ ‘ಬಸವ’ನ ಬುಟಿಕ್

3. ಉದಯಪುರದ ಮೂರು ಕಂಪನಿಗಳ ಒಡೆಯನಿಗೆ ಕೇವಲ 25ರ ಹರೆಯ.. !

3+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags