ಆವೃತ್ತಿಗಳು
Kannada

ಬೇಕರ್ ಆಗಿ ಬದಲಾದ ಫಿಲ್ಮ್ ಮೇಕರ್: ಪೂನಮ್ ಮರಿಯಾ ಪ್ರೇಮ್ ಅವರ ಕಥೆ

ಟೀಮ್​​ ವೈ.ಎಸ್​​.

6th Nov 2015
Add to
Shares
0
Comments
Share This
Add to
Shares
0
Comments
Share

ದ ಗೋಲ್ಡನ್ ಕಂಪಾಸ್ ಮತ್ತು ಲೈಫ್ ಆಫ್ ಪೈ ಎಂಬ ಎರಡು ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರಗಳಲ್ಲಿ ಪೂನಮ್ ಮರಿಯಾ ಪ್ರೇಮ್ ಕೆಲಸ ಮಾಡಿದ್ದಾರೆ. ಚಲನಚಿತ್ರ ವಿಶ್ಯುವಲ್ ಎಫೆಕ್ಟ್ ಕ್ಷೇತ್ರದಲ್ಲಿ ಕಳೆದ 10 ವರ್ಷಕ್ಕೂ ಹೆಚ್ಚು ಕಾಲದಿಂದ ತೊಡಗಿಸಿಕೊಂಡಿದ್ದಾರೆ. ಚಿತ್ರ ಜಗತ್ತಿನಲ್ಲಿ ಇಂಥದ್ದೊಂದು ಅಪೂರ್ವ ಅನುಭವ ಹೊಂದಿರುವ ಪೂನಮ್ ಕಳೆದ 7 ವರ್ಷಗಳ ಹಿಂದೆ ಬೇಕರ್ ಆಗಿ ಪರಿವರ್ತನೆಗೊಂಡಿದ್ದರು. ಆದರೆ 2012ರಲ್ಲಿ ತಮ್ಮ ಮಗಳ 3ನೇ ವರ್ಷದ ಜನ್ಮದಿನಕ್ಕಾಗಿ ಪ್ರಾಣಿಯ ಥೀಮ್ ಇಟ್ಟುಕೊಂಡು ಕೇಕ್ ಮಾಡಬೇಕೆಂಬ ನಿರ್ಧಾರ ಮಾಡಿದಾಗಲೇ ಅವರಿಗೆ ತಾವೂ ಸಹ ಬೇಕರ್ ಆಗಿ ಕಾಲೂರಬಹುದು ಎಂಬ ಆತ್ಮವಿಶ್ವಾಸ ಮೂಡಿದ್ದು. ಪೂನಮ್ ಅವರೇ ಹೇಳುವ ಪ್ರಕಾರ “ಅದೆಷ್ಟೇ ಕಷ್ಟಕರವಾಗಿರಲಿ, ಅದು ನನ್ನ ಮೊದಲ ಯೋಚನೆ. ಅದು ಸರಿಯಾಗಿ ಮೂಡಿಬರದಿದ್ದರೂ, ಅದು ನಾನೇ ಮಾಡಿದ ಕೇಕ್ ಆಗಿರುತ್ತದೆ” ಎಂಬ ಭಾವನೆಯಲ್ಲಿ ಕೇಕ್ ತಯಾರಿಸಿದರು ಹೈದ್ರಾಬಾದ್‌ನ ಝೋಯ್ಸ್ ಬೇಕ್ ಹೌಸ್‌ನ ಮಾಲೀಕರಾದ ಪೂನಮ್.

image


ಪೂನಮ್ ಅವರು ಬೇಕಿಂಗ್‌ನಲ್ಲಿ ತೊಡಗಿಸಿಕೊಂಡ ಪರಿ

ನಂತರ ತಮ್ಮದೇ ಕೆಲಸಗಳಲ್ಲಿ ತೊಡಗಿಸಿಕೊಂಡರು ಪೂನಮ್. ಆದರೆ ಬೇಕಿಂಗ್ ಅವರ ಬೆನ್ನು ಬಿಟ್ಟಿರಲಿಲ್ಲ. ಅವರ ಸಹೋದ್ಯೋಗಿಯೊಬ್ಬರು ಅವರನ್ನು ತಮ್ಮ ಮಗಳ ಹುಟ್ಟುಹಬ್ಬಕ್ಕಾಗಿ ಕಾಮನಬಿಲ್ಲಿನ ಮಾದರಿಯ ಕೇಕ್ ನಿರ್ಮಾಣ ಹೇಗೆ ಎಂದು ಕೇಳಿದ್ದೇ ತಡ. ಅವರಲ್ಲಿ ಹುದುಗಿದ್ದ ಆಸಕ್ತಿ ಮತ್ತೆ ಚಿಗುರಿತು.

ಆ ಕೇಕ್ ಮಾಡುವಷ್ಟರಲ್ಲಿ ನನಗೆ ಸಾಕಾಗಿಹೋಯಿತು. ದೂರದರ್ಶನಗಳಲ್ಲಿ ಪ್ರದರ್ಶಿಸಲ್ಪಡುವ ದೊಡ್ಡ ದೊಡ್ಡ ಮಟ್ಟದ, ಚೆಂದನೆಯ ಕೇಕ್‌ಗಳನ್ನು ಹೇಗೆ ತಯಾರಿಸುತ್ತಾರೆ ಎಂಬುದು ಆಗ ನನಗೆ ಆಶ್ಚರ್ಯಕರ ವಿಚಾರವಾಗಿ ಕಂಡಿತು ಎಂದು ಹೇಳಿಕೊಂಡಿದ್ದಾರೆ ಪೂನಮ್.

image


ತಿಂಗಳುಗಳು ಕಳೆದಂತೆ ಪೂನಮ್‌ರ ಕಚೇರಿ ಕೆಲಸಗಳು, ಜವಾಬ್ದಾರಿಗಳು ಹೆಚ್ಚತೊಡಗಿದ್ದವು. ಗೊಂದಲಗಳ ನಡುವೆಯೂ ಪೂನಮ್ ತಮ್ಮ ಸಹೋದ್ಯೋಗಿಗಾಗಿ ಸಕ್ಕರೆಯ ಸ್ಟಿಲೆಟ್ಟೋ ಒಂದನ್ನು ಮಾಡಲು ನಿರ್ಧರಿಸಿದರು. ಅವರೇ ಹೇಳುವಂತೆ ಇದನ್ನೇ ವಾಣಿಜ್ಯ ಉದ್ಯಮವಾಗಿ ತೆಗೆದುಕೊಳ್ಳುವ ಯಾವುದೇ ಯೋಜನೆ ಅವರ ಮುಂದಿರಲಿಲ್ಲ. ಆದರೆ ನಂತರ ತಮ್ಮ ಮಗಳ ಹೆಸರು ಝೋಯ್ ಎಂಬ ಹೆಸರಿನಲ್ಲಿ ಫೇಸ್ ಬುಕ್ ಪೇಜ್ ತೆರೆದರು(ಹೀಗೆ ಹುಟ್ಟಿದ್ದೇ ಝೋಯ್ಸ್ ಬೇಕ್ ಹೌಸ್). ನಂತರ ಫೇಸ್ ಬುಕ್ ಪೇಜ್‌ನ ಬಗ್ಗೆ ಮರೆತೇ ಬಿಟ್ಟಿದ್ದರು ಪೂನಮ್. ಒಂದು ದಿನ ಪೂನಮ್ ಅವರ ಪತಿ ಅವರಿಗೆ ಫೇಸ್‌ಬುಕ್‌ನಲ್ಲಿ ಪೂನಮ್ ಅವರ ಪೇಜ್ ಖ್ಯಾತಿಯಾಗುತ್ತಿರುವ ಪರಿಯನ್ನು ತೋರಿಸಿದರು ಎಂದು ನೆನಪಿಸಿಕೊಳ್ಳುತ್ತಾರೆ ಪೂನಮ್.

ನಂತರ ಪೂನಮ್ ಅವರಿಗೆ ಕರೆಗಳು ಮತ್ತು ಕಮೆಂಟ್‌ಗಳು ಸುರಿಮಳೆಯಂತೆ ಬಂದವು. ಜನ ಪೂನಮ್ ಅವರ ಕೇಕ್‌ಗಳನ್ನು ಕೊಳ್ಳಲು ಬಯಸಿದ್ದರು. ಆದರೆ ಪೂನಮ್ ಇದನ್ನೇ ವೃತ್ತಿಯಾಗಿ ತೆಗೆದುಕೊಳ್ಳಬೇಕೇ, ಬೇಡವೇ ಎಂಬುದರ ಬಗ್ಗೆ ಇನ್ನೂ ನಿರ್ಧರಿಸಿರಲಿಲ್ಲ. ಕ್ರಮೇಣ ವಾರಾಂತ್ಯಗಳಲ್ಲಿ ಮಾತ್ರ ಪೂನಮ್ ಕೇಕ್ ನಿರ್ಮಾಣಕ್ಕೆ ಬೇಡಿಕೆ ಸ್ವೀಕರಿಸತೊಡಗಿದ್ದರು. ಇದು ಪೂನಮ್ ಅವರು ಕೇಕ್ ನಿರ್ಮಾಣದಲ್ಲಿ ಪರಿಣಿತಿ ಸಾಧಿಸುವ ಮತ್ತು ಸಂತೃಪ್ತಿಯ ಕಾಲ ಇದಾಗಿತ್ತು.

ನಾನು ಹೆಚ್ಚು ಹೆಚ್ಚು ಬೇಡಿಕೆ ಪಡೆಯುತ್ತಾ ಹೋದಂತೆಲ್ಲಾ ಕೇಕ್ ನಿರ್ಮಾಣಕ್ಕೂ ಒಂದು ಮಾರುಕಟ್ಟೆ ಇದೆ ಮತ್ತು ಈ ಮಾರುಕಟ್ಟೆ ತುಂಬಾ ದೊಡ್ಡದಾಗಿದೆ ಎಂಬುದು ನನಗೆ ಅರ್ಥವಾಯಿತು. ಈ ಮಾರುಕಟ್ಟೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕಠಿಣ ಪರಿಶ್ರಮ, ಅದೆಷ್ಟೋ ನಿದ್ರೆಯಿಲ್ಲದ ರಾತ್ರಿಗಳು, ಕೆಲವು ವೈಫಲ್ಯಗಳು ಮತ್ತು ಕೆಲಸದ ಬಗ್ಗೆ ಅತೀವ ಪ್ರೀತಿಯನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ ಎಂದು ನನಗನ್ನಿಸಿತ್ತು ಅನ್ನುತ್ತಾರೆ ಪೂನಮ್.

image


ಪೂರ್ಣಕಾಲಿಕ ವೃತ್ತಿಯಾಗಿ ಬೇಕಿಂಗ್

ಒಂದು ವರ್ಷ ಕಳೆದ ನಂತರ ಅಂದರೆ ಪೆರ್ಸಿ ಜಾಕ್ಸನ್ ಅವರ ಸೀ ಆಫ್ ಮಾನ್‌ಸ್ಟರ್ಸ್ ಎಂಬ ಚಲನಚಿತ್ರವನ್ನು ಪೂರೈಸಿದ ಬಳಿಕ ಪೂನಮ್, ರಿಧಮ್ ಮತ್ತು ಹ್ಯೂಸ್ ಸಂಸ್ಥೆಯ ಅವರ ಕೆಲಸಕ್ಕೆ ತಿಲಾಂಜಲಿ ಇಟ್ಟರು. ಅಲ್ಲಿಂದ ಪೂನಮ್ ಹಿಂತಿರುಗಿ ನೋಡಲೇ ಇಲ್ಲ. ತಮ್ಮ ಯೋಜನೆಯ ಬಗ್ಗೆ ವಿವರಿಸುತ್ತಾ ಪೂನಮ್, ವಾಸ್ತವವಾಗಿ ಇದು ಗಳಿಕೆಯ ದೃಷ್ಟಿಯಿಂದ ಅತ್ಯುತ್ತಮ ಕೆಲಸ ಆದರೆ ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಜನರು ಅದನ್ನು ಅಷ್ಟಾಗಿ ಗಮನಿಸುವುದಿಲ್ಲ ಎನ್ನುತ್ತಾರೆ.

ಪೂನಮ್ ಹೇಳುವಂತೆ ಜನರ ವಿಚಾರಣೆಗಳು ಮತ್ತು ಬೇಡಿಕೆಗಳು, ವಾಟ್ಸ್ ಆ್ಯಪ್ ಸಂದೇಶಗಳು, ದೂರವಾಣಿ ಕರೆಗಳು, ಈ ಮೇಲ್‌ಗಳಲ್ಲಿ ಒಂದೇ ವೇಗವನ್ನು ಕಾಯ್ದುಕೊಳ್ಳುವುದು ಕಷ್ಟಸಾಧ್ಯ.

ಬಹಳಷ್ಟು ಜನ ನಾವೊಂದು ತಂಡವಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದುಕೊಳ್ಳುತ್ತಾರೆ. ಆದರೆ ಪ್ರತಿದಿನವೂ ಒಬ್ಬಳೇ ಇಷ್ಟೆಲ್ಲಾ ಬೇಡಿಕೆಗಳನ್ನು ಪೂರೈಸುವುದು ನಿಜಕ್ಕೂ ಕಷ್ಟ. ಆದರೆ ನನ್ನ ಪತಿ ನನಗೆ ಬಹಳ ಸಹಕರಿಸುತ್ತಾರೆ. ಅವರ ಹೊರತಾಗಿ ಝೋಯ್ಸ್ ಬೇಕ್ ಹೌಸ್ ಎಂಬ ಸಂಸ್ಥೆ ನನ್ನ ಪಾಲಿನ ಕನಸಾಗಿಯೇ ಉಳಿದುಬಿಡುತ್ತಿತ್ತು ಎನ್ನುತ್ತಾರೆ ಪೂನಮ್.

ಉದ್ಯಮಿಯಾಗುವತ್ತ ಪೂನಮ್ ಹೆಜ್ಜೆ

ಸಂಸ್ಥೆಯೊಂದರ ಉದ್ಯೋಗಿಯಾಗಿದ್ದ ಪೂನಮ್ ಈಗ ಉದ್ಯಮಿಯಾಗಿ ಪರಿವರ್ತನೆಗೊಂಡಿದ್ದಾರೆ. ಎರಡರಲ್ಲೂ ಸಾಧಕ ಬಾಧಕಗಳಿವೆ ಎನ್ನುವುದು ಪೂನಮ್ ಅಭಿಮತ. ಝೋಯ್ಸ್ ಬೇಕ್ ಹೌಸ್ ಪೂನಮ್ ಅವರಿಗೆ ಅವರದ್ದೇ ಆದ ಅಸ್ತಿತ್ವವನ್ನು ಹುಡುಕಿಕೊಟ್ಟಿದೆ. ಇಂದು ತಾವೇನಾಗಿದ್ದೇವೋ ಅದರ ಬಗ್ಗೆ ಪೂನಮ್ ಅವರಿಗೆ ಹೆಮ್ಮೆ ಇದೆ.

ವಿಶ್ಯುವಲ್ಸ್ ಎಫೆಕ್ಟ್ಸ್ ಗಳನ್ನು ಸೃಷ್ಟಿಸುವುದು ನಿಜಕ್ಕೂ ಕಷ್ಟಕರವಾದ ಕೆಲಸ. ಎಷ್ಟೋ ಬಾರಿ ಕಚೇರಿ ಕೆಲಸದ ವೇಳೆಯನ್ನು ವಿಸ್ತರಿಸಿಕೊಳ್ಳಬೇಕಾಗುತ್ತಿತ್ತು. ನಮ್ಮ ಸಾಮರ್ಥ್ಯವನ್ನೂ ಮೀರಿ ಕಾರ್ಯನಿರ್ವಹಿಸಬೇಕಾಗುತ್ತದೆ. ಒಂದೇ ದಿನದಲ್ಲಿ 14-15 ಗಂಟೆಗಳ ಕಾಲ ಕೆಲಸ ಮಾಡಿದ್ದೂ ಇದೆ. ಇದರಿಂದ ನನ್ನ ಮಗಳನ್ನು ಸರಿಯಾಗಿ ನೋಡಿಕೊಳ್ಳಲು ಆಗುತ್ತಿರಲಿಲ್ಲ. ಈಗಲೂ ದಿನಕ್ಕೆ ಸುಮಾರು 12 ಗಂಟೆ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ. ಆದರೆ ವೈಯಕ್ತಿಕ ಜೀವನ ಮತ್ತು ಕೆಲಸವನ್ನು ಸರಿಸಮವಾಗಿ ನಡೆಸುತ್ತಿದ್ದೇನೆ. ನನ್ನ ಮಗಳಿಗೆ ನಾನು ಯಾವಾಗಲೂ ಹತ್ತಿರದಲ್ಲಿರುತ್ತೇನೆ ಎನ್ನುತ್ತಾರೆ ಪೂನಮ್.

image


ಉದ್ಯಮಿಯಾಗಿ ಗ್ರಾಹಕರನ್ನು ಸರಿಯಾಗಿ ನಿರ್ವಹಿಸುವುದು, ಅವರೊಂದಿಗೆ ಮಾತನಾಡುವುದು ಮತ್ತು ಹೆಚ್ಚಿನ ಉದ್ಯಮವನ್ನು ಪಡೆಯುವುದು ನಿಜಕ್ಕೂ ತ್ರಾಸದಾಯಕ. ಮೊದಮೊದಲು ಇದು ಇನ್ನೂ ಹೆಚ್ಚು ಕಷ್ಟವಾಗಿತ್ತು. ನಮ್ಮ ಉತ್ಪನ್ನದ ಮಾರುಕಟ್ಟೆ ಬಗ್ಗೆ ತಿಳಿದುಕೊಳ್ಳುವುದು ಮ್ತು ನಮ್ಮ ಗ್ರಾಹಕರನ್ನು ಅರಿಯುವುದು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯ. ಕಠಿಣ ಪರಿಶ್ರಮಕ್ಕೆ ಮತ್ತು ಉತ್ತಮವಾದ ಕೆಲಸಕ್ಕೆ ಬೆಲೆ ಇದ್ದೇ ಇರುತ್ತದೆ. ಅಡಿಗೆ ಮನೆಯಲ್ಲೇ ಬಹಳಷ್ಟು ಕಾಲ ಕಳೆಯುವುದು ರಗಳೆ ಎನಿಸಿದರೂ ನೀವು ಅದರೊಂದಿಗೆ ಬೆಳೆಯುತ್ತಿದ್ದಂತೆ ಅದು ನಿಮ್ಮ ಜೀವನದ ವಿಧಾನವೇ ಆಗಿಬಿಡುತ್ತದೆ ಎಂಬುದು ಪೂನಮ್ ಅವರ ಅಭಿಪ್ರಾಯ.

ಮಹಿಳೆ ಸ್ವಾವಲಂಬಿಯಾಗಬೇಕು

ಮಹಿಳೆ ಸದಾ ಸ್ವಾವಲಂಭಿಯಾಗಿರಬೇಕು ಮತ್ತು ತಮ್ಮ ಶರೀರ ಸಹಕರಿಸುವವರೆಗೂ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು, ಮನೆಯಿಂದ ಕೆಲಸ ಮಾಡುವುದಾಗಲಿ ಅಥವಾ ಪೂರ್ಣಕಾಲಿಕ ವೃತ್ತಿಯಲ್ಲಾಗಲಿ ತನ್ನ ಶಕ್ತಿಮೀರಿ ಏನನ್ನಾದರೂ ಸಾಧಿಸಲು ಯತ್ನಿಸಬೇಕು ಎಂಬುದು ಮಹಿಳೆಯರಿಗೆ ಪೂನಮ್ ಅವರ ಸಲಹೆ. ಮಕ್ಕಳು ಬೆಳೆದಂತೆ ನೀವೂ ಬೆಳೆಯುತ್ತೀರಿ. ಆದರೆ ಅವರು ಜೀವನದಲ್ಲಿ ಒಮ್ಮೆ ನೆಲೆಯಾಗಿ ನಿಂತರು ಅಂದರೆ ನೀವು ರೂಪಿಸಿಕೊಂಡ, ಗುರುತಿಸಿಕೊಂಡ ಅಸ್ತಿತ್ವ ಮಾತ್ರವೇ ನಿಮ್ಮ ಜೀವಮಾನದುದ್ದಕ್ಕೂ ನಿಮಗೆ ದೊರಕುವುದು ಎನ್ನುತ್ತಾರೆ ಪೂನಮ್.

ಪೂನಮ್ ಅವರು ಸದ್ಯಕ್ಕೆ ತಮ್ಮದೇ ಆದ ಆಫ್‌ಲೈನ್ ರಿಟೇಲ್ ಔಟ್‌ಲೆಟ್ ಆರಂಭಿಸುವ ಯೋಜನೆ ರೂಪಿಸುತ್ತಿದ್ದಾರೆ. ಆದರೆ ಚಿಕ್ಕ ಮಗು ಮತ್ತು ಕೆಲಸದಲ್ಲಿ ಸದಾ ಬ್ಯುಸಿಯಾಗಿರುವ ಪತಿಯೊಂದಿಗೆ ಇರುವ ಪೂನಮ್‌ಗೆ ತಮ್ಮ ಯೋಜನೆಯನ್ನು ಜಾರಿಗೆ ತರಲು ಕೆಲ ಕಾಲ ಹಿಡಿಯುತ್ತದೆ.

Add to
Shares
0
Comments
Share This
Add to
Shares
0
Comments
Share
Report an issue
Authors

Related Tags