ಆವೃತ್ತಿಗಳು
Kannada

ಕ್ರೀಡಾಪಟುಗಳ ಬದುಕಿನ ವ್ಯಥೆ- ಬಾಲಿವುಡ್​ ಮಂದಿಗೆ ಅದೇ ಕಥೆ..!

ಟೀಮ್​ ವೈ.ಎಸ್​. ಕನ್ನಡ

YourStory Kannada
20th Sep 2016
Add to
Shares
3
Comments
Share This
Add to
Shares
3
Comments
Share

ಸಮಾಜದಲ್ಲಿ ಎಲ್ಲರಿಗಿಂತ ಮೊದಲ ಸುದ್ದಿಯಾಗೋದೇ ಕ್ರೀಡಾಪಟುಗಳು. ರಾಜಕೀಯ ಪುಡಾರಿಗಳನ್ನು ಕೂಡ ಮೀರಿಸಬಲ್ಲ ತಾಕತ್ತು ಇರುವುದು ಇದೇ ಕ್ರೀಡಾಪಟುಗಳಿಗೆ ಮಾತ್ರ. ಆಟದಿಂದ ಹೆಚ್ಚು ಸುದ್ದಿ ಮಾಡುವ ಇವರುಗಳು, ಕೆಲವೊಮ್ಮೆ ನೋಟದಲ್ಲೂ ಮಿಂಚುತ್ತಾರೆ. ಆದ್ರೆ ಹೊಸ ಟ್ರೆಂಟ್​ ಏನು ಅಂದ್ರೆ ಬಾಲಿವುಡ್​ನ ಖ್ಯಾತ ಡೈರೆಕ್ಟರ್​ಗಳಿಗೆಲ್ಲಾ ಕ್ರೀಡಾಪಟುಗಳ ಬದುಕಿನ ವ್ಯಥೆಯೇ ಇಂಪ್ರೆಸ್ಸಿವ್​ ಕಥೆಯಾಗಿ ಮಾರ್ಪಾಡಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಂತೂ ಕ್ರೀಡಾಪಟುಗಳ ಬಯೋಗ್ರಾಫಿ ದೊಡ್ಡ ಸದ್ದು ಮಾಡ್ತಿದೆ. ಬಾಕ್ಸಾಫೀಸ್​ನಲ್ಲಿ ದುಡ್ಡನ್ನೂ ದೋಚುತ್ತಿದೆ.

ಕ್ರೀಡಾಪಟುಗಳ ಜೀವನವೇ ಕಲರ್‌ಫುಲ್‌. ಆ ಕಥೆಗಳಲ್ಲಿ ಸಾಕಷ್ಟು ಟ್ವಿಸ್ಟ್‌ಗಳು ಕೂಡ ಇರುತ್ತವೆ. ಯಾರಿಗೆ ಎಲ್ಲಿಂದ ಬ್ರೇಕ್‌ ಸಿಕ್ತು..? ಯಾರು ಯಾರನ್ನು ತುಳಿಯೋ ಪ್ರಯತ್ನ ಮಾಡಿದ್ರು ಅನ್ನೋದು ಸಿನಿಮಾಗಳಲ್ಲಿ ಕಥೆಯಾಗುತ್ತಿದೆ. ಕ್ರೀಡಾಪಟುಗಳು ಜೀವನಾಧರಿತ ಸಿನಿಮಾ ಈಗ ಟ್ರೆಂಡ್ ಆಗಿದೆ. ಕ್ರೀಡಾಪಟುಗಳ ಬಯೋಪಿಕ್ ಸಿನಿಮಾಗಳೆಲ್ಲ ಬಹುತೇಕ ಹಿಟ್ ಆಗಿವೆ. ಆದ್ರೆ ಇದ್ರಿಂದ ಕ್ರೀಡಾಪಟುಗಳಿಗೆ ಏನು ಲಾಭ ಅನ್ನೋ ಪ್ರಶ್ನೆ ಎಲ್ಲರಲ್ಲಿದೆ.

ಇದನ್ನು ಓದಿ: ಬೆಂಗಳೂರಿಗೆ ಅಂದದ ಟಚ್​- ಗಪ್​ಚುಪ್​ ಆಗಿ ಮಾಡ್ತಿದ್ದಾರೆ ವರ್ಕ್​..!

ಸೆಪ್ಟಂಬರ್‌ ಕೊನೆಯ ವಾರದಲ್ಲಿ ರಿಲೀಸ್‌ ಆಗಲು ಸಜ್ಜಾಗಿರುವ ಚಿತ್ರ ಎಂ.ಎಸ್‌. ಧೋನಿ, ಅನ್‌ಟೋಲ್ಡ್‌ ಸ್ಟೋರಿ. ಚಿತ್ರದ ಟ್ರೈಲರ್‌ ಈಗಾಗಲೇ ಸಾಕಷ್ಟು ಹಿಟ್‌ಗಳನ್ನು ಗಳಿಸಿಕೊಂಡಿದೆ. ಮೇಕಿಂಗ್​ನಲ್ಲೂ ಧೋನಿ ಚಿತ್ರ ರಿಚ್‌ ಆಗಿ ಕಾಣಿಸುತ್ತಿದೆ. ಆದ್ರೆ ಧೋನಿ ಚಿತ್ರ ಮಾಡೋದಿಕ್ಕೆ ಸಾಕಷ್ಟು ಖರ್ಚು ಕೂಡ ಮಾಡಲಾಗಿದೆ. ಮಾಹಿಯ ಜೀವನ ಚರಿತ್ರೆಯನ್ನು ಪಡೆದುಕೊಳ್ಳಲು ಟೀಮ್‌ ಇಂಡಿಯಾ ನಾಯಕನಿಗೆ ಭರ್ಜರಿ ರಾಯಲ್ಟಿ ಕೂಡ ನೀಡಲಾಗಿದೆ.

image


ಚಿತ್ರದ ಕಥೆಗೆ ಮಾಹಿಗೆ ಭರ್ಜರಿ ದುಡ್ಡು..!

ಟೀಮ್ ಇಂಡಿಯಾದ ನಿಗದಿತ ಓವರ್‌ಗಳ ನಾಯಕ ಮಹೇಂದ್ರ ಸಿಂಗ್ ಧೋನಿ ಮೈದಾನದ ಹೊರಗಿರಲಿ ಒಳಗಿರಲಿ ಸದಾ ಸುದ್ದಿಯಲ್ಲಿರ್ತಾರೆ. ಅವರೇನ್ ಮಾಡಿದರೂ ಅದು ದಾಖಲೆಯಾಗುತ್ತದೆ. ಈಗ ಬೆಳ್ಳಿ ತೆರೆಯ ಮೇಲೂ ಧೋನಿಯ ಜೀವನ ಕಥೆ ಬರಲು ಸಿದ್ಧವಾಗಿದೆ. ಎಂ.ಎಸ್ ಧೋನಿ ಅನ್​ಟೋಲ್ಡ್ ಸ್ಟೋರಿ ಸಿನಿಮಾ ಬಿಡುಗಡೆಗೆ ಮುನ್ನವೇ, ಧೋನಿ ಚಿತ್ರದ ಕಥೆಗಾಗಿ ಅತೀ ಹೆಚ್ಚು ರಾಯಲ್ಟಿ ಪಡೆದ ಕ್ರೀಡಾಪಟುವೆಂಬ ದಾಖಲೆ ಬರೆದಿದ್ದಾರೆ. ಅಂದಹಾಗೇ, ದುಡ್ಡಿನ ವಿಚಾರದಲ್ಲಿ ಮತ್ಯಾವ ಕ್ರೀಡಾಪಟು ಧೋನಿಯ ಹತ್ತಿರಕ್ಕೂ ಸುಳಿಯೋದಿಲ್ಲ.

ಸಂಭಾವನೆ ಪಡೆಯದೆ ಕಥೆ ಕೊಟ್ಟಿದ್ದ ಅಜರ್

ಟೀಮ್ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದಿನ್ ಅವರ ವಿವಾದಿತ, ಕಲರ್ ಫುಲ್ ಜೀವನ ತೆರೆ ಮೇಲೆ ಮೂಡಿಬಂತು. ತುಂಬಾ ಕುತೂಹಲ ಕೆರಳಿಸಿದ ಅಜರ್ ಚಿತ್ರಕ್ಕೆ, ಅಜರ್ ಯಾವುದೇ ಸಂಭಾವನೆ ಪಡೆಯದೆ ಅವರ ಜೀವನ ಚರಿತ್ರೆ ತೆರೆಮೇಲೆ ಬರುವಂತೆ ನೋಡಿಕೊಂಡ್ರು.

ಒಂದೇ ಒಂದು ರೂಪಾಯಿಗೆ ಮಿಲ್ಖಾ ಸಿಂಗ್ ಜೀವನ ಕಥೆ..!

2013ರಲ್ಲಿ ಬಿಡುಗಡೆಯಾದ ಭಾಗ್ ಮಿಲ್ಖಾ ಭಾಗ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡ್ತು. ಉತ್ತಮ ರೀತಿಯಲ್ಲಿ ಮೂಡಿ ಬಂದ ಸಿನಿಮಾ ಗಲ್ಲಾಪೆಟ್ಟಿಗೆ ದೋಚುವುದರ ಜೊತೆಗೆ ಹಲವರಿಗೆ ಸ್ಪೂರ್ತಿಯಾಗಿತ್ತು. ತಮ್ಮ ಸಂಪೂರ್ಣ ಕಥೆಯನ್ನು ಎಳೆ-ಎಳೆಯಾಗಿ ಬಿಚ್ಚಿಡಲು ಮಿಲ್ಖಾ ಸಿಂಗ್ ಪಡೆದಿದ್ದು ಕೇವಲ 1 ರೂಪಾಯಿ ಮಾತ್ರ.

ಮೇರಿ ಕೋಮ್ ಗೆ 25 ಲಕ್ಷ ಸಂಭಾವನೆ

2014ರಲ್ಲಿ ತೆರೆಕಂಡ ಮೇರಿ ಕೋಮ್ ಜೀವನಚಿರಿತ್ರೆ ಆಧಾರಿತ ಸಿನಿಮಾ ಮೇರಿ ಕೋಮ್ ಹಲವರಿಗೆ ಸ್ಪೂರ್ತಿಯಾಯ್ತು. ಕ್ರೀಡಾ ಚಿಲುಮೆಯಾಗಿ ಚಿತ್ರ ಮೂಡಿಬಂತು. ಆದರೆ ತಮ್ಮ ಬಯೋಪಿಕ್ ಗಾಗಿ 5 ಬಾರಿ ಬಾಕ್ಸಿಂಗ್ ವಿಶ್ವಚಾಂಪಿಯನ್ ಮೇರಿಕೋಮ್ ಪಡದಿದ್ದು, 25 ಲಕ್ಷ ಸಂಭಾವನೆ ಮಾತ್ರ.

ಪಾನ್‌ಸಿಂಗ್ ಗೆ ತೋಮರ್ ಗೆ 15 ಲಕ್ಷ

2012ರಲ್ಲಿ ಬಿಡುಗಡೆಯಾದ ಪಾನ್ ಸಿಂಗ್ ತೋಮರ್ ಅವರ ಜೀವನಾಧರಿತ ಚಿತ್ರ ಬಾಕ್ಸ್ ಆಫಿಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗದಿದ್ರೂ ಚಿತ್ರ ಹಲವರಿಗೆ ಇಷ್ಟವಾಯ್ತು. ಈ ಸಿನಿಮಾಗಾಗಿ ಪಾನ್ ಸಿಂಗ್ ತೋಮರ್ 15 ಲಕ್ಷ ರಾಯಲ್ಟಿ ಪಡೆಯುವ ಮೂಲಕ ತಮ್ಮ ಜೀವನ ಚರಿತ್ರೆ ಸಿನಿಮಾ ಮಾಡಲು ಒಪ್ಪಿಕೊಂಡ್ರು.

ಒಟ್ಟಿನಲ್ಲಿ ಭಾರತ ಎಲ್ಲ ಕ್ರೀಡಾಪಟುಗಳಿಗೆ ಹೋಲಿಸಿದ್ರೆ ಧೋನಿ ಮತ್ತೊಂದು ದಾಖಲೆ ಬರೆದಿದ್ದಾರೆ. 60 ಕೋಟಿ ರಾಯಲ್ಟಿ ಪಡೆದು ಸುದ್ದಿಯಲ್ಲಿರುವ ಮಹಿ, ಅವರಂತೆ ಅವರ ಚಿತ್ರ ಕೂಡ ಹೊಸ ದಾಖಲೆ ಬರೆಯುತ್ತಾ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.

ಮಾಹಿ ಬದುಕಿನಲ್ಲಿ ಅದೆಷ್ಟೋ ತಿರುವುಗಳನ್ನು ದಾಟಿ ಬಂದಿದ್ದಾರೆ. ಕಷ್ಟಗಳನ್ನು ಮೆಟ್ಟಿನಿಂತಿದ್ದಾರೆ. ಧೋನಿ ಚಿತ್ರದಲ್ಲೂ ಇದು ಇರಲಿದೆ. ಮೇರಿಕೋಂ, ಪಾನ್​ ಸಿಂಗ್​ ತೋಮರ್​, ಮಿಲ್ಖಾಸಿಂಗ್​​ ಹೀಗೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮಾಡೆಲ್​ಗಳೇ. ಕಥೆಗಾಗಿ ಪರದಾಡುವ ಡೈರೆಕ್ಟರ್​ಗಳಿಗೆಲ್ಲಾ ಕ್ರೀಡಾಪಟುಗಳೇ ಈಗ ಕಥಾವಸ್ತು..!

ಇದನ್ನು ಓದಿ:

1. ನೆಟ್​ವರ್ಕ್​ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ- 5ಬಾರ್ಜ್​ ಟ್ರೈ ಮಾಡಿ...

2. "ಚಪಾತಿ ಮನೆ"ಯ ಆದರ್ಶ ದಂಪತಿ

3. ಕನ್ನಡದಲ್ಲೊಂದು ಅಂತರಾಷ್ಟ್ರೀಯ ಮಟ್ಟದ Ramp ಆಲ್ಬಂ

Add to
Shares
3
Comments
Share This
Add to
Shares
3
Comments
Share
Report an issue
Authors

Related Tags