ಆವೃತ್ತಿಗಳು
Kannada

ಇಂಟರ್​ನೆಟ್ ಇಲ್ಲದೆಯೂ ಮೊಬೈಲ್​ನಲ್ಲಿ ಹಣದ ವರ್ಗಾವಣೆ-ಇನ್ಫೋಸಿಸ್​ನ ಮಾಜಿ ಉದ್ಯೋಗಿಯ ವಿಭಿನ್ನ, ವಿನೂತನ ತಂತ್ರಜ್ಞಾನ

ಟೀಮ್ ವೈ.ಎಸ್​. ಕನ್ನಡ

YourStory Kannada
8th Aug 2016
6+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ತಂತ್ರಜ್ಞಾನ ದಿನದಿಂದ ದಿನಕ್ಕೆ ಅಪ್​ಡೇಟ್​ ಆಗುತ್ತಲೆ ಇದೆ. ಇವತ್ತು ಇದ್ದ ಟೆಕ್ನಾಲಜಿ ನಾಳೆ ಇರುತ್ತೆ. ಆದ್ರೆ ಅದು ಸಾಕಷ್ಟು ಅಭಿವೃದ್ಧಿ ಆಗುತ್ತದೆ. ಬ್ಯಾಂಕಿಂಗ್​ ವಿಚಾರದಲ್ಲಂತೂ ತಂತ್ರಜ್ಞಾನದ ಅಭಿವೃದ್ಧಿ ಸಾಕಷ್ಟು ಆಗುತ್ತಿದೆ. ಎಟಿಎಂನಿಂದ ಹಿಡಿದು ಮೊಬೈಲ್​ ಬ್ಯಾಂಕಿಂಗ್​ ತನಕ ಎಲ್ಲವೂ ಸೂಪರ್​ ಫಾಸ್ಟ್​ ಆಗಿ ಬೆಳೆಯುತ್ತಿದೆ. ಈಗ ಬ್ಯಾಂಕಿಂಗ್​ ವಿಚಾರದಲ್ಲಿ ಮತ್ತಷ್ಟು ಬೆಳವಣಿಗೆ ಆಗಿದೆ. ಎಷ್ಟರ ಮಟ್ಟಿಗೆ ಅಂದ್ರೆ ಮೊಬೈಲ್​ ಬ್ಯಾಂಕಿಂಗ್​ನ್ನು ಇಂಟರ್​ನೆಟ್​ ಇಲ್ಲದೆಯೂ ಮಾಡಬಹುದ. ಇಂತಹ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಿದ್ದು ಬೆಂಗಳೂರಿನವರೇ.

image


ನೀವು ಯಾವುದಾರು ಅಂಗಡಿಗೆ ಹೋಗಿ ವಸ್ತುಗಳನ್ನು ಪರ್ಚೇಸ್​ ಮಾಡಿರ್ತಿರಾ ಅಂತ ಅಂದುಕೊಳ್ಳಿ. ನಿಮ್ಮ ಜೇಬಿನಲ್ಲಿ ದುಡ್ಡಿಲ್ಲ. ಅಂಗಡಿಯಾತನ ಬಳಿ ಸ್ವೈಪಿಂಗ್​ ಮೆಷಿನ್​ ಇದ್ರೆ ಓ.ಕೆ. ಇಲ್ದೇ ಇದ್ರೆ ಎಟಿಎಂಗೆ ಹೋಗಿ ಹಣ ಡ್ರಾ ಮಾಡಿ ಆತನಿಗೆ ಕೊಡಬೇಕು. ಆದರೆ ಬೆಂಗಳೂರಿನ ಇನ್ಫೋಸಿಸ್​ನ ಮಾಜಿ ಉದ್ಯೋಗಿ ಕುಮಾರ್ ಅಭಿಷೇಕ್ ಎಂಬುವವರು ಇಂಟರ್​ನೆಟ್​​ ಇಲ್ಲದೆ ಮೊಬೈಲ್​ನಿಂದ ನಿಮ್ಮ ಹಣವನ್ನು ಅಂಗಡಿಯವರಿಗೆ ವರ್ಗಾಯಿಸಬಹುದಾದ ತಂತ್ರಜ್ಞಾನ ಕಂಡುಹಿಡಿದಿದ್ದಾರೆ.

ಹೌದು, ಇದು ಅಚ್ಚರಿ ಆಗಿದ್ದರೂ ಸತ್ಯ. ನಿಮ್ಮ ಬಳಿಯಿರುವ ಸ್ಮಾರ್ಟ್​ಫೋನ್​ ಥವಾ ಸಾಮಾನ್ಯ ಮೊಬೈಲ್​ನಿಂದಲೇ ಇದನ್ನು ಮಾಡಬಹುದು. ಅದು ಕೂಡ ಇಂಟರ್​ನೆಟ್​ ಇಲ್ಲದೆಯೂ ಸಾಧ್ಯ. ಈ ನೂತನ ತಂತ್ರಾಂಶದ ಹೆಸರು ಟೋನ್​​ ಟ್ಯಾಗ್​. ಟೋನ್​ ಟ್ಯಾಗ್​ ಮೂಲಕ ಅಂಗಡಿ ಮಾಲೀಕರಿಗೆ ದುಡ್ಡನ್ನು ವರ್ಗಾಯಿಸಬಹುದು. ಅಂಗಡಿಗಳಲ್ಲಿ ಏನನ್ನಾದ್ರು ಕೊಂಡು ಕೊಂಡಾಗ ಜೇಬಲ್ಲಿ ದುಡ್ಡು ಇಲ್ಲದೇ ಇದ್ದಾಗ ಅಥವಾ ಅಂಗಡಿಯಾತ ಚಿಲ್ಲರೆ ಇಲ್ಲ ಎಂದು ಚಾಕಲೇಟ್​ ನೀಡಿದಾಗ, ಅನುಭವಿಸುವ ಕಿರಿಕಿರಿಯನ್ನು ತಪ್ಪಿಸಲು ಈ ಟೋನ್​​​ ಟ್ಯಾಗ್​ ತಂತ್ರಾಂಶ ನೆರವಾಗಲಿದೆ.

image


ಇಂಟರ್​ನೆಟ್ ಇಲ್ಲದೆ ಆ್ಯಪ್ ಡೌನ್​ಲೋಡ್

ಟೋನ್​ಟ್ಯಾಗ್ ಆ್ಯಪ್​ನ್ನು ಅನ್ನು ಗ್ರಾಹಕರು ಇಂಟರ್​ನೆಟ್​ನಿಂದ ಡೌನ್​ಲೋಡ್ ಮಾಡಿಕೊಳ್ಳಬಹುದು. ಒಂದುವೇಳೆ ನಿಮ್ಮ ಮೊಬೈಲ್​ನಲ್ಲಿ ಇಂಟರ್ನೆಟ್ ವ್ಯವಸ್ಥೆ ಇಲ್ಲದೇ ಹೋದರೆ , ಟೋನ್​ಟ್ಯಾಗ್​ನ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ, ಆ್ಯಪ್ ಡೌನ್​ಲೋಡ್ ಮಾಡಿಕೊಳ್ಳಬಹುದು. ಟೋನ್ ಟ್ಯಾಗ್ ತಂತ್ರಜ್ಞಾನ ಅಳವಡಿಸಿರುವ ಕಡೆಗಳಲ್ಲೆಲ್ಲ ನಗದು ರಹಿತ ವರ್ಗಾವಣೆ ಮಾಡಬಹುದು.

ಖಾಸಗಿ ಬ್ಯಾಂಕುಗಳ ಜೊತೆ ಒಪ್ಪಂದ

ಟೋನ್ ಟ್ಯಾಗ್ ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈಗಾಗಲೇ ಖಾಸಗಿ ವಲಯದ ಹಲವಾರು ಬ್ಯಾಂಕ್​ಗಳ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಇದರ ಅನುಕೂಲ ದೊರೆಯುತ್ತಿದೆ.

 " 2013ರಲ್ಲಿ ಅಸ್ತಿತ್ವಕ್ಕೆ ಬಂದ ಟೋನ್ ಟ್ಯಾಗ್ ಸ್ಟಾರ್ಟಪ್ ಮೂರು ವರ್ಷಗಳಲ್ಲೇ ಸಾಕಷ್ಟು ಅಭಿವೃದ್ಧಿ ಗಳಿಸಿದೆ. ಅಷ್ಟೇ ಅಲ್ಲದೆ ದೇಶದ ಬೃಹತ್ ಕಂಪನಿ ರಿಲಯನ್ಸ್ ಕ್ಯಾಪಿಟಲ್ ವೆಂಚರ್​ನಿಂದ 2015ರಲ್ಲಿ 1 ಕೋಟಿ ಡಾಲರ್ ಬಂಡವಾಳವನ್ನು ಪಡೆಯುವ ಮೂಲಕ ದೇಶದ ಇತರೆ ಸ್ಟಾರ್ಟ್ಅಪ್​ಗಳು ಅಚ್ಚರಿ ಪಡುವಂತೆ ಮಾಡಿದೆ. ಈ ಸ್ಟಾರ್ಟಪ್ 30ಕ್ಕೂ ಹೆಚ್ಚು ಬ್ರ್ಯಾಂಡ್ ಸ್ಟೋರ್​ಗಳ ಜತೆಗೆ ಒಪ್ಪಂದ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದು, ನಗದು ರಹಿತ ಹಣಕಾಸು ವರ್ಗಾವಣೆ, ಡಿಜಿಟಲ್ ಇಂಡಿಯಾ ಪರಿಕಲ್ಪನೆಗೆ ಪುಷ್ಟಿ ತುಂಬಲಿದೆ"
- ಕುಮಾರ್ ಅಭಿಷೇಕ್, ಟೋನ್ ಟ್ಯಾಗ್​ ಸಂಸ್ಥಾಪಕ

ಯಾವುದೆ ಮೊಬೈಲ್ ಮೂಲಕ ಹಣ ವರ್ಗಾವಣೆ

ಈಗಿನ ನಗದು ರಹಿತ ವರ್ಗಾವಣೆಗಳಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಪೇಟಿಎಂನಂತಹ ಆ್ಯಪ್​ಗಳನ್ನು ಬಳಸಬೇಕು. ಸ್ವೈಪಿಂಗ್ ಮೆಷಿನ್​ನಲ್ಲಿ ಮ್ಯಾಗ್ನಟಿಕ್ ವೇವ್ಸ್ ತಂತ್ರಜ್ಞಾನ ಬಳಕೆಯಾಗುತ್ತಿದೆ. ಅಲ್ಲಿ ಕಾರ್ಡ್​ಗಳನ್ನು ಉಜ್ಜಬೇಕು. ಇನ್ನೊಂದು ವಿಧದಲ್ಲಿ ಎನ್ಎಫ್​ಸಿ ಟೆಕ್ನಾಲಜಿಯಲ್ಲಿ ರೇಡಿಯೊ ತರಂಗಗಳನ್ನು ಅಧರಿಸಿ ನಗದು ರಹಿತ ವರ್ಗಾವಣೆ ಮಾಡಬಹುದು. ಹೀಗಿದ್ದರೂ ಸ್ಮಾರ್ಟ್​ಫೋನ್​ಗ ಅಗತ್ಯ ಆ ಮೆಷಿನ್​ಗಿರುತ್ತದೆ. ಆದರೆ ಟೋನ್ ಟ್ಯಾಗ್​ನ ಧ್ವನಿಯಾಧಾರಿತ ತಂತ್ರಜ್ಞಾನದಲ್ಲಿ ಇದಾವುದರ ಅಗತ್ಯ ಇರುವುದಿಲ್ಲ. ನಿಮ್ಮ ಯಾವುದೇ ಮೊಬೈಲ್ ಮೂಲಕ, ಬ್ಯಾಂಕ್ ಖಾತೆಯಿಂದ ಹಣವನ್ನು ವರ್ಗಾಯಿಸಬಹುದು.

image


ಸೌಂಡ್​ವೇವ್ ಟೆಕ್ನಾಲಜಿ

ಇನ್ಫೋಸಿಸ್​ನಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್ ಅಭಿಷೇಕ್ ಕಂಪನಿಯಿಂದ ಹೊರಬಂದು ಇಂತಹ ಒಂದು ವಿಭಿನ್ನ ಅಪರೂಪದ ತಂತ್ರಜ್ಞಾನವನ್ನು ಕಂಡು ಹಿಡಿದಿದ್ದಾರೆ. ಕಂಪನಿ ಆರಂಭಿಸಿದ ಕೆಲವೇ ವರ್ಷಗಳಲ್ಲಿ ಇದು ಸಾಕಷ್ಟು ಜನಪ್ರಿಯವಾಗುತ್ತಿದ್ದು, ಕೇವಲ ಮೊಬೈಲ್​ನಿಂದ ಹೊಮ್ಮುವ ಧ್ವನಿ ತರಂಗಗಳ ಮೂಲಕವೇ ಹಣಕಾಸು ವರ್ಗಾವಣೆಯನ್ನು ಇಲ್ಲಿ ಮಾಡಬಹುದು. ಒಟ್ಟಿನಲ್ಲಿ ನಿಮಗೆ ಇಂಟರ್ನೆಟ್ ಹಾಕಿಸಿಕೊಳ್ಳಲು ಕಷ್ಟವಾದರೆ, ನಿಮ್ಮ ಜೇಬಿನಲ್ಲಿ ಹಣ ಇಲ್ಲದೇ ಹೋದರೆ ಈ ಟೋನ್ ಟ್ಯಾಗ್ ಆ್ಯಪ್ ಇದ್ದರೆ ಸಾಕು ನಿಮಗೆ ಏನು ಬೇಕಾದರು ಕೊಳ್ಳಬಹುದು.

ಇದನ್ನು ಓದಿ:

1. ಪ್ರಯಾಣಿಕರ ಮನ ಗೆಲ್ಲೋದಿಕ್ಕೆ ಹೊಸ ಪ್ಲಾನ್​- ಬಿಎಂಟಿಸಿಯಿಂದ ಹೊಸ ಟೆಕ್ನಾಲಜಿ

2. ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಅಪ್ಪಟ ಕನ್ನಡ ರಂಗಭೂಮಿ ಪ್ರತಿಭೆ

3. 15 ಲಕ್ಷದ ನೌಕರಿ ತೊರೆದು ಹಳೆ ಸೆಲೂನ್ ಗೆ ಹೊಸ ಟಚ್ ನೀಡಿದ ಸ್ನೇಹಿತರು

6+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags