ಆವೃತ್ತಿಗಳು
Kannada

ಮೊಬೈಲ್ ವಿಡಿಯೋ ಬಳಕೆದಾರರಿಗಾಗಿ `ಕೆರಿಯರ್ ಬಿಲ್ಲಿಂಗ್' 100 ಮಿಲಿಯನ್ ಗ್ರಾಹಕರನ್ನು ಗಳಿಸಿದ `ವುಕ್ಲಿಪ್'

ಟೀಮ್​ ವೈ.ಎಸ್​. ಕನ್ನಡ

YourStory Kannada
17th Dec 2015
Add to
Shares
2
Comments
Share This
Add to
Shares
2
Comments
Share

ನಿಖಿಲ್ ಜಕತ್ದರ್ ಹುಟ್ಟಿ ಬೆಳೆದಿದ್ದೆಲ್ಲ ಪುಣೆಯಲ್ಲಿ. ಪುಣೆ ವಿಶ್ವವಿದ್ಯಾನಿಲಯದಲ್ಲಿ ಪದವಿ ಪೂರೈಸಿದ ನಿಖಿಲ್, ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ರು. ಪಿಎಚ್‍ಡಿ ಮಾಡುತ್ತಿದ್ದಾಗ್ಲೇ, ಸ್ವಂತ ಉದ್ಯಮವನ್ನೂ ಶುರು ಮಾಡಿದ್ರು. ಮೂರು ವರ್ಷಗಳ ನಂತರ ತಮ್ಮ ಸಂಸ್ಥೆ ` Timbre Technologies’ ಅನ್ನು ನಿಖಿಲ್, 138 ಮಿಲಿಯನ್ ಡಾಲರ್‍ಗೆ `ಟೋಕ್ಯೋ ಎಲೆಕ್ಟ್ರಾನ್'ಗೆ ಮಾರಾಟ ಮಾಡಿದ್ರು. 1998-2006ರ ಅವಧಿಯಲ್ಲಿ ಸ್ವಯಂ ಪರಿಶ್ರಮದಿಂದ ಒಂದು ಕಂಪನಿಯನ್ನು ಆರಂಭಿಸಿದ್ದ ನಿಖಿಲ್, ಇನ್ನೂ 2 ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ನೆರವಾಗಿದ್ದರು. ಅಷ್ಟೇ ಅಲ್ಲ ಮೂರು ಸಂಸ್ಥೆಗಳಿಗೆ ವಿದಾಯ ಹೇಳುವ ಸಂದರ್ಭ ಕೂಡ ಅವರಿಗೆ ಬಂದೊದಗಿತ್ತು. ಸದ್ಯ ನಿಖಿಲ್ ಸ್ವತಂತ್ರ ಮೊಬೈಲ್ ವಿಡಿಯೋ ಮಾಧ್ಯಮ ಸಂಸ್ಥೆ `ವುಕ್ಲಿಪ್'ನ ಸಂಸ್ಥಾಪಕರು ಹಾಗೂ ಸಿಇಓ ಕೂಡ ಹೌದು.

image


2006ರಲ್ಲೇ ನಿಖಿಲ್ ಸಂಸ್ಥಾಪಕರಾಗಿ, ಹೂಡಿಕೆದಾರರಾಗಿ `ವುಕ್ಲಿಪ್' ಅನ್ನು ಸೇರಿದ್ರು. ಆದ್ರೆ 2007ರ ವೇಳೆಗೆ ಉತ್ಪನ್ನವಿದ್ರೂ ಮಾರ್ಕೆಟಿಂಗ್ ಮಾಡಲು `ವುಕ್ಲಿಪ್'ನಲ್ಲಿ ಹಣವಿರಲಿಲ್ಲ. ಬಳಿಕ ಸಿಇಓ ಸ್ಥಾನವನ್ನು ಅಲಂಕರಿಸಿದ ನಿಖಿಲ್, ಯಶಸ್ವಿಯಾಗಿ ತಮ್ಮ ಜವಾಬ್ಧಾರಿಯನ್ನು ನಿರ್ವಹಿಸುತ್ತಿದ್ದಾರೆ. ಈ ಪಯಣದ ಪ್ರತಿಕ್ಷಣವನ್ನೂ ತಾವು ಎಂಜಾಯ್ ಮಾಡ್ತಿರೋದಾಗಿ ನಿಖಿಲ್ ಹೇಳಿಕೊಳ್ತಾರೆ.

ಮೊಬೈಲ್ ವಿಡಿಯೋ ಜನಪ್ರಿಯತೆ ಬಗ್ಗೆ ಪಂಥ...

2006-07ರಲ್ಲಿ ಡೆಸ್ಕ್​ಟಾಪ್​​ ವೆಬ್‍ನಲ್ಲಿ ಯೂಟ್ಯೂಬ್ ಲಭ್ಯತೆ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿತ್ತು. ಆಗ ಹೊಸದೇನನ್ನಾದ್ರೂ ಮಾಡಬೇಕೆಂದು ನಿಖಿಲ್ ಕನಸು ಕಂಡಿದ್ರು. ಭವಿಷ್ಯದಲ್ಲಿ ಮೊಬೈಲ್, ವಿಡಿಯೋ ಬಳಕೆಯ ಸಾಧನವಾಗಲಿದೆ ಎಂದು ಪಂಥ ಕಟ್ಟಿದ್ರು. ಮೊದಲ ಐಫೋನ್ ಆಗಮನದೊಂದಿಗೆ ನಿಖಿಲ್ ಅವರ ಭವಿಷ್ಯವೂ ನಿಜವಾಗಿತ್ತು. ಭಾರತ, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ ರಾಷ್ಟ್ರಗಳು ಮತ್ತು ಆಫ್ರಿಕಾದ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಮೊಬೈಲ್ ಫೋನ್ ಸಂಚಲನವನ್ನೇ ಸೃಷ್ಟಿಸಿತ್ತು. 2008ರ ವೇಳೆಗೆ `ವುಕ್ಲಿಪ್' ಮೊಬೈಲ್ ವಿಡಿಯೋ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮನರಂಜನೆಯನ್ನು ಒದಗಿಸುತ್ತಿದೆ. ಭಾರತದಂತಹ ದೇಶಗಳಲ್ಲಿ ಜನರು ಡೆಸ್ಕ್​​ಟಾಪನ್ನ ಬದಿಗಿಟ್ಟು, ಮೊಬೈಲ್ ಅನ್ನೇ ಮನರಂಜನೆಯ ಸಾಧನವಾಗಿ, ಕರೆ ಹಾಗೂ ಸಂದೇಶಗಳ ಮೂಲಕ ನಡೆಸುವ ಸಂವಹನಕ್ಕಾಗಿ ಬಳಸಿಕೊಳ್ಳಲು ಆರಂಭಿಸಿದ್ರು. ಭಾರತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್‍ಫೋನ್ ಮಾರುಕಟ್ಟೆಗಳಲ್ಲಿ ಒಂದಾಗಲಿದೆ ಎಂಬ ತಮ್ಮ ಭವಿಷ್ಯ ವಾಸ್ತವವಾಗಿ ಬದಲಾಗಿತ್ತು ಎನ್ನುತ್ತಾರೆ ನಿಖಿಲ್. ಸದ್ಯ ಭಾರತದಲ್ಲಿ 944 ಮಿಲಿಯನ್‍ಗೂ ಅಧಿಕ ಬಳಕೆದಾರರು ಮೊಬೈಲ್ ಚಂದಾದಾರರಾಗಿದ್ದಾರೆ. ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಖರೀದಿಸಿ, ಇಂಟರ್ನೆಟ್ ಬಳಸುತ್ತಿದ್ದಾರೆ.

ಅನುಭವಿ ಪೀಳಿಗೆಯೇ ಟಾರ್ಗೆಟ್...

ತನ್ನ ವಿಡಿಯೋ ಕೊಡುಗೆಗಳಿಗಾಗಿ `ವುಕ್ಲಿಪ್' 18-25 ವರ್ಷ ವಯಸ್ಸಿನ ಯುವ ಜನತೆಯನ್ನೇ ಗುರಿಯಾಗಿಟ್ಟುಕೊಂಡಿದೆ. ಅವರನ್ನು ಅನುಭವಿ ಪೀಳಿಗೆ ಅಂತಾನೇ ಕರೆಯಲಾಗ್ತಿದೆ. ಅವರೆಲ್ಲ ಯುವಕರು, ತಿಳುವಳಿಕೆಯುಳ್ಳವರು, ಅವರಲ್ಲಿ ಖರೀದಿ ಸಾಮರ್ಥ್ಯ ಕೂಡ ಹೆಚ್ಚಿದೆ. ಮೊಬೈಲ್ ಬಿಟ್ಟು ಅವರು ಇರುವುದೇ ಇಲ್ಲ. ಅವರ ಪಾಲಿಗೆ `ವುಕ್ಲಿಪ್' ಮನರಂಜನೆಯ ಗಮ್ಯಸ್ಥಾನವಿದ್ದಂತೆ, ಸಂವಹನ ಹಾಗೂ ಸಾಮಾಜಿಕ ಮಾಧ್ಯಮಗಳ ಅಗತ್ಯತೆಗಳನ್ನೂ ಪೂರೈಸಬಲ್ಲದು. ಅವರದ್ದೇ ಆದ್ಯತೆಯ ಸಮಯದಲ್ಲಿ, ತಮ್ಮ ಆಯ್ಕೆಯ ವಿಷಯ ವೀಕ್ಷಿಸುವುದು ಯುವಜನತೆಯ ವಿಶಿಷ್ಟ ಲಕ್ಷಣ. `ಮೊಬೈಲ್ ವಿಡಿಯೋ ಆನ್ ಡಿಮಾಂಡ್ ಬ್ಯುಸಿನೆಸ್'ಗೆ ಇದು ಇನ್ನಷ್ಟು ಉತ್ತೇಜನ ನೀಡುತ್ತಿದೆ.

ಸಮಾಜದ ಇನ್ನೊಂದು ವರ್ಗಕ್ಕೆ ಮೊಬೈಲ್ ಇಂಟರ್ನೆಟ್ ಹಾಗೂ ಮೊಬೈಲ್ ವಿಡಿಯೋ ಒಂದು ಹೊಸ ವಿದ್ಯಮಾನ. ಮೊಬೈಲ್ ಸಾಧನವನ್ನು ಮನರಂಜನೆಗಾಗಿ ಬಳಸಲು ಹೆಚ್ಚು ವೆಚ್ಚವಾಗದಂತೆ ಪರಿಣಾಮಕಾರಿ ಪರಿಹಾರ ಒದಗಿಸುವುದು `ವುಕ್ಲಿಪ್'ನ ಆದ್ಯತೆಗಳಲ್ಲೊಂದು. ಇದಕ್ಕಾಗಿ ಟೆಲಿಕಾಂ ಸೇವೆ ಪೂರೈಕೆದಾರರ ಜೊತೆ ಕೈಜೋಡಿಸಿದೆ. ಕಳೆದ 8 ವರ್ಷಗಳಲ್ಲಿ ಚಂದಾದಾರರ ಆಧಾರದಲ್ಲಿ `ವುಕ್ಲಿಪ್' ವೇದಿಕೆ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಪ್ರತಿ ತಿಂಗಳು 7 ಮಿಲಿಯನ್ ಚಂದಾದಾರರು `ವುಕ್ಲಿಪ್' ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ.

`ವುಕ್ಲಿಪ್'ನ ಪ್ರಮುಖ ಕೊಡುಗೆ...

ಪ್ರದರ್ಶನದ ವಿಚಾರಕ್ಕೆ ಬಂದಾಗ ಸ್ಥಳೀಯ ಆ್ಯಪ್ ಮೂಲಕ ವಿಡಿಯೋ ವೀಕ್ಷಣೆ ಒಂದು ವಿಭಿನ್ನ ಅನುಭವ. `ವುಕ್ಲಿಪ್'ನ ಹೊಸದಾದ ಬಫರ್ - ಫ್ರೀ ಪರಿಹಾರದಿಂದ ಗ್ರಾಹಕರು ಫುಲ್ ಖುಷಿಯಾಗಿದ್ದಾರೆ. ಗ್ರಾಹಕರು ತಮ್ಮ ಮೊಬೈಲ್ ಸೈಟ್ ಮೂಲಕ ಅಥವಾ ಆ್ಯಪ್ ಮೂಲಕ ವಿಡಿಯೋ ವೀಕ್ಷಣೆ ಮಾಡಿದ್ರೂ ಯಾವುದೇ ಅಡಚಣೆ ಎದುರಾಗುವುದಿಲ್ಲ, ಅನುಭವದಲ್ಲಿ ಸ್ಥಿರತೆ ಕಾಯ್ದುಕೊಳ್ಳಬಹುದು. `ಡೈನಾಮಿಕ್ ಅಡಾಪ್ಟಿವ್ ಟ್ರಾನ್ಸ್​ಕೋಡಿಂಗ್​​' ತಂತ್ರಜ್ಞಾನದ ಬಲ `ವುಕ್ಲಿಪ್' ಆ್ಯಪ್‍ಗಿದೆ ಎನ್ನುತ್ತಾರೆ ನಿಖಿಲ್. ಮೊಬೈಲ್‍ನಲ್ಲಿ ಬಫರ್‍ರಹಿತ ವಿಡಿಯೋ ವೀಕ್ಷಣೆಗೆ ಇದು ಅನುಕೂಲ ಮಾಡಿಕೊಟ್ಟಿದೆ. ಆಯಾ ಪ್ರದೇಶದ ಬಳಕೆದಾರರ ವೀಕ್ಷಣೆಯ ಆದ್ಯತೆ, ಹಳೆಯ ಹವ್ಯಾಸಗಳು, ಸಾಧನ ಮತ್ತು ನೆಟ್‍ವರ್ಕ್ ಸಾಮರ್ಥ್ಯವನ್ನು ಆ್ಯಪ್‍ನಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನ ಗುರುತಿಸುತ್ತದೆ. ಅರ್ಥಗರ್ಭಿತ ಹುಡುಕಾಟ ಮತ್ತು ನಯವಾದ ಸಂಚಾರದ ಮೂಲಕ ಬಳಕೆದಾರರು ಅತ್ಯುತ್ತಮ ಅನುಭವ ಪಡೆಯಬಹುದು. `ವುಕ್ಲಿಪ್' ಇಡೀ ಇಂಡಸ್ಟ್ರಿಯ ಅತ್ಯುತ್ತಮ ಆ್ಯಪ್ ಅಂತಲೇ ಹೆಸರುಗಳಿಸಿದೆ.

`ಮೊಬೈಲ್ ವಿಡಿಯೋ ಆನ್ ಡಿಮಾಂಡ್'ನ ಸರ್ಫಿಂಗ್ ಟ್ರೆಂಡ್...

ನಿಖಿಲ್ ಅವರ ಪ್ರಕಾರ ``ಕಡಿಮೆ ವೆಚ್ಚದ ಸ್ಮಾರ್ಟ್ ಫೋನ್‍ಗಳ ವೇಗವಾದ ಅಳವಡಿಕೆ ಮತ್ತು ಮೊಬೈಲ್ ಇಂಟರ್ನೆಟ್ ಲಭ್ಯತೆಯ ಹೆಚ್ಚಳ, ಭಾರತದ ಬಹುತೇಕ ಜನರ ಪಾಲಿಗೆ ಮೊಬೈಲ್ ಹಾಗೂ ಇಂಟರ್ನೆಟ್ ವಿಷಯಕ್ಕೆ ಪ್ರವೇಶ ಪಡೆಯುವುದು ಅತಿ ಹೆಚ್ಚು ಆದ್ಯತೆಯ ವಿಚಾರ ಅನ್ನೋದನ್ನು ದೃಢಪಡಿಸಿದೆ''. ವುಕ್ಲಿಪ್‍ನ `ಗ್ಲೋಬಲ್ ವಿಡಿಯೋ ಇನ್‍ಸೈಟ್ಸ್' ಸಮೀಕ್ಷೆಯ ಪ್ರಕಾರ, ಜನರಿಗೆ ಇಷ್ಟವಾದ ಸಿನಿಮಾ, ಹಾಡುಗಳು ಹಾಗೂ ಟಿವಿ ಕಾರ್ಯಕ್ರಮಗಳ ವೀಕ್ಷಣೆಗೆ ಮೊಬೈಲ್ ಪ್ರಮುಖವಾದ ಮನರಂಜನೆಯ ಮೂಲವಾಗಿದೆ. ಇದೆಲ್ಲವೂ ಈಗ ಕಡಿಮೆ ಬೆಲೆಯ ಸ್ಮಾರ್ಟ್‍ಫೋನ್‍ಗಳ ಮೂಲಕವೇ ನಡೆಯುತ್ತಿದೆ. ಅರ್ಧಕ್ಕಿಂತ ಹೆಚ್ಚು ಮಂದಿ ಪ್ರತಿದಿನ ವೀಕ್ಷಣೆ ಮಾಡಿದ್ರೆ, ಶೇ.80ರಷ್ಟು ಜನ 2-3 ದಿನಕ್ಕೊಮ್ಮೆಯಾದ್ರೂ ಮೊಬೈಲ್‍ನಲ್ಲೇ ವಿಡಿಯೋಗಳನ್ನು ನೋಡುತ್ತಿದ್ದಾರೆ.

ಸಿನಿಮಾ, ಸಂಗೀತ, ಕಾಮಿಡಿ, ಟಿವಿ ಕಾರ್ಯಕ್ರಮಗಳು, ಕ್ರೀಡೆಗೆ ಸಂಬಂಧಿಸಿದ ವಿಡಿಯೋಗಳು, ಮತ್ತು ಸುದ್ದಿ ಸಂಬಂಧಿತ ವಿಷಯಗಳ ವೀಕ್ಷಣೆಯಿಂದಾಗಿ ಭಾರತದಲ್ಲಿ ಮೊಬೈಲ್ ವೀಕ್ಷಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಇನ್ನು ಬಳಕೆಯ ಹವ್ಯಾಸದ ವಿಚಾರಕ್ಕೆ ಬಂದ್ರೆ ಮೊಬೈಲ್ ವಿಡಿಯೋಗಳನ್ನು ಮನೆಯಿಂದ್ಲೇ ಆಕ್ಸೆಸ್ ಮಾಡುವವರ ಸಂಖ್ಯೆ ಹೆಚ್ಚಿದೆ. ಟಿವಿಯಂತಹ ಸಾಂಪ್ರದಾಯಿಕ ಮನರಂಜನಾ ಮಾಧ್ಯಮಗಳಿದ್ರೂ ಭಾರತದ ಮೊಬೈಲ್ ವಿಡಿಯೋ ಗ್ರಾಹಕರು, ಬೇಡಿಕೆ ಮೇರೆಗೆ ವಿಡಿಯೋ ವೀಕ್ಷಣೆಗೆ ಆದ್ಯತೆ ನೀಡುತ್ತಿದ್ದಾರೆ. ಅವರಿಷ್ಟ ಬಂದಾಗ ಅವರಿಗಿಷ್ಟವಾದ ವಿಡಿಯೋವನ್ನು ನೋಡಿ ಎಂಜಾಯ್ ಮಾಡಬಹುದು.

ಕೆರಿಯರ್ ಬಿಲ್ಲಿಂಗ್‍ಗಾಗಿ ಟೆಲಿಕಾಮ್‍ಗಳ ಜೊತೆ ಪಾಲುದಾರಿಕೆ...

ವುಕ್ಲಿಪ್ ಭಾರತದಲ್ಲಿ `ಏರ್‍ಟೆಲ್, ಐಡಿಯಾ ಹಾಗೂ ವೊಡಾಫೋನ್ ಕಂಪನಿಗಳ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಆಗ್ನೇಯ ಏಷ್ಯಾದಲ್ಲಿ `ಇಂಡೋಸ್ಯಾಟ್', `ಮ್ಯಾಕ್ಸಿಸ್', `ಸೆಲ್‍ಕಾಮ್', `ದಿಗಿ', `ಟೆಲ್ಕೋಮ್ಸೆಲ್' ಮತ್ತು ಐಎಎಸ್ ಜೊತೆ ಪಾಲುದಾರನಾಗಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ವೊಡಾಫೋನ್ ಜೊತೆ ಕೈಜೋಡಿಸಿದೆ. ಮೊಬೈಲ್ ಆಪರೇಟರ್‍ಗಳ ಪಾಲಿಗೆ, ವಿಡಿಯೋ ಡೇಟಾ ಪ್ಲಾನ್ ಅಳವಡಿಕೆಯ ವೇಗವರ್ಧಕದಂತಾಗಿದೆ. ಆದಾಯ ಸಂಗ್ರಹ ಹಾಗೂ ಸಂಸ್ಥೆಯ ಬೆಳವಣಿಗೆಗೆ ಇಂಧನವಿದ್ದಂತೆ. ಈ ನಿಟ್ಟಿನಲ್ಲಿ ಹೊಸ ಪ್ರಯತ್ನಗಳಾಗುತ್ತಿವೆ. ಉದಾಹರಣೆಗೆ ಏರ್‍ಟೆಲ್‍ನ 1 ರೂಪಾಯಿ ಮನರಂಜನೆ ಯೋಜನೆಯನ್ನು 2013ರಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಇದ್ರಿಂದಾಗಿ ಮೊಬೈಲ್ ಇಂಟರ್ನೆಟ್ ಬಳಸಿ ಅನುಭವವೇ ಇಲ್ಲದ ಮಿಲಿಯನ್‍ಗಟ್ಟಲೆ ಗ್ರಾಹಕರು ಮೊಬೈಲ್ ವಿಡಿಯೋಗೆ ಪ್ರವೇಶ ಪಡೆದಿದ್ರು. ಕಡಿಮೆ ಬೆಲೆಯ ಡೇಟಾ ಆಫರ್‍ಗಳಿಂದಾಗಿ, ವುಕ್ಲಿಪ್ ವೇದಿಕೆಯಲ್ಲಿ ಪ್ರತಿ ತಿಂಗಳಿಗೆ ಪ್ರತಿಯೊಬ್ಬ ಗ್ರಾಹಕ ಕನಿಷ್ಠ 100 ನಿಮಿಷದ ವಿಡಿಯೋ ವೀಕ್ಷಿಸುವಂತಾಯ್ತು. ವುಕ್ಲಿಪ್‍ನ ಶೇ.60ಕ್ಕಿಂತ ಹೆಚ್ಚು ಬಳಕೆದಾರರ ಮೂಲ ಸ್ಮಾರ್ಟ್‍ಫೋನ್‍ಗಳಿಂದಾಗಿದೆ.

ಮೆಟ್ರೋಪಾಲಿಟನ್ ಸಿಟಿಗಳು ಮತ್ತು ಟೈರ್-1 ಸಿಟಿಗಳಂತೆ, ಟೈರ್-2 ಮತ್ತು ಟೈರ್-3 ನಗರಗಳಲ್ಲಿ ಕೂಡ ಕಾರ್ಡ್ ಮೂಲಕ ಹಣ ಪಾವತಿ ಸೌಲಭ್ಯವನ್ನು ಕಲ್ಪಿಸುವುದು ಅತ್ಯಂತ ಅವಶ್ಯಕ. ಅದೇ ರೀತಿ ಕೆರಿಯರ್ ಬಿಲ್ಲಿಂಗ್ ಕೂಡ ಜನರಿಗೆ ಅನುಕೂಲಕರವಾಗಲಿದೆ.

ನೇರವಾಗಿ ಕೆರಿಯರ್ ಬಿಲ್ಲಿಂಗ್ ಏಕೆ?

ವಿಶ್ವ ಬ್ಯಾಂಕ್ ಪ್ರಕಾರ ಉದಯೋನ್ಮುಖ ಮಾರುಕಟ್ಟೆಯಲ್ಲಿ ಶೇ.93ರಷ್ಟು ವಯಸ್ಕರು ಕ್ರೆಡಿಟ್ ಕಾರ್ಡ್‍ಗಳನ್ನು ಹೊಂದಿಲ್ಲ. ಆದ್ರೆ ಕೆರಿಯರ್ ಬಿಲ್ಲಿಂಗ್ ಗರಿಷ್ಠ ವ್ಯಾಪ್ತಿಯನ್ನು ಹೊಂದಿದೆ. ಟೈರ್-2, ಟೈರ್-3 ಸಿಟಿಗಳಲ್ಲಿ ನಗದು ರಹಿತ ಪಾವತಿದಾರರ ಸಂಖ್ಯೆ ಕಡಿಮೆಯಿದೆ. ಇದೇ ಕಾರಣಕ್ಕೆ ಕೆರಿಯರ್ ಬಿಲ್ಲಿಂಗ್ ಜನಪ್ರಿಯವಾಗುತ್ತಿದೆ. ನೇರ ಕೆರಿಯರ್ ಬಿಲ್ಲಿಂಗ್ ಹೊಸ ಪರಿಕಲ್ಪನೆಯೇನಲ್ಲ, ವೊಡಾಫೋನ್ ಈಗಾಗ್ಲೇ ಇದನ್ನು ಅಳವಡಿಸಿಕೊಂಡಿದೆ. ಇವು ಡೆವಲಪರ್ ಸ್ನೇಹಿಯಾಗಿವೆ. ವೊಡಾಫೋನ್ ಡೆವಲಪರ್ ವೇದಿಕೆಯನ್ನು ಲಾಂಚ್ ಮಾಡಿದಾಗ 50/50ರಷ್ಟು ಶೇರ್ ಕೂಡ ಇತ್ತು.

ಕೆರಿಯರ್ ಬಿಲ್ಲಿಂಗ್ ಇಲ್ಲದೆ `ವುಕ್ಲಿಪ್' ಪ್ರಮಾಣೀಕರಣ ಸಾಧ್ಯವೇ?

ಈ ಪ್ರಶ್ನೆಗೆ ಸರಳವಾದ ಉತ್ತರ ಅಂದ್ರೆ ಅಸಾಧ್ಯ. ಒಂದು ಪ್ರಮಾಣದಲ್ಲಿ `ವುಕ್ಲಿಪ್' ಅನ್ನು ವೀಕ್ಷಿಸಲು ಸಾಧ್ಯವಿರಲಿಲ್ಲ. ಸಹಜವಾಗಿಯೇ ಗ್ರಾಹಕರು ಆನ್‍ಲೈನ್‍ನಲ್ಲಿ ಉಚಿತ ಕಂಟೆಂಟ್ ಕಡೆಗೆ ಆಕರ್ಷಿತರಾಗುತ್ತಾರೆ. ಹಣ ಪಾವತಿಸಲು ಅವರು ಆಸಕ್ತರಾಗಿದ್ದರೂ ಸೂಕ್ತ ವಿಧಾನಗಳಿರಲಿಲ್ಲ. 2012ರಲ್ಲಿ ನಿಖಿಲ್ ಕೆರಿಯರ್ ಬಿಲ್ಲಿಂಗ್ ಅನ್ನು ಪರಿಚಯಿಸಿದ್ರು. ಭಾರತ, ಇಂಡೋನೇಷ್ಯಾ, ಮಲೇಷಿಯಾ, ಥೈಲ್ಯಾಂಡ್, ಈಜಿಪ್ಟ್, ಯುಎಇ, ನೈಜೀರಿಯಾ ಮತ್ತು ಕೀನ್ಯಾದಲ್ಲಿ ಸಮಗ್ರ ಕೆರಿಯರ್ ಬಿಲ್ಲಿಂಗ್ ಅನ್ನು ಅಳವಡಿಸಿದೆ. ವುಕ್ಲಿಪ್‍ನ ಉಚಿತ ಸೈಟ್‍ನ 100 ಮಿಲಿಯನ್ ಬಳಕೆದಾರರ ಪೈಕಿ 30 ಮಿಲಿಯನ್ ಮಂದಿ ಸಮಗ್ರ ಕೆರಿಯರ್‍ಗಳಿಂದ ಬಂದಿದ್ದಾರೆ.

ಅಭಿವೃದ್ಧಿಯತ್ತ ಮುಂದಡಿ...

ವಿಶ್ವದ 200ಕ್ಕೂ ಹೆಚ್ಚು ಪ್ರಖ್ಯಾತ ಸ್ಟೂಡಿಯೋಗಳೊಂದಿಗೆ ವುಕ್ಲಿಪ್ ಆಯಕಟ್ಟಿನ ಪಾಲುದಾರಿಕೆ ಮಾಡಿಕೊಂಡಿದೆ. ಹಾಲಿವುಡ್ ಮತ್ತು ಪ್ರಾದೇಶಿಕ ಸಿನಿಮಾಗಳು, ಟಿವಿ ಕಾರ್ಯಕ್ರಮಗಳು ಮತ್ತು 20 ಭಾಷೆಗಳ ಮ್ಯೂಸಿಕ್ ವಿಡಿಯೋಗಳಿಗೆ ಪ್ರವೇಶ ಪಡೆದಿದೆ. ಮಿಲಿಪಿಟಾಸ್ ಮತ್ತು ಕ್ಯಾಲಿಫೋರ್ನಿಯಾದಲ್ಲಿ ವುಕ್ಲಿಪ್ ಕಚೇರಿಯಿದೆ. ಮುಂಬೈ, ದೆಹಲಿ, ದುಬೈ, ಬೀಜಿಂಗ್, ಕೌಲಾಲಂಪುರ, ಪುಣೆ, ಜಕಾರ್ತಾ, ಬ್ಯಾಂಕಾಕ್ ಸೇರಿದಂತೆ ವಿವಿಧೆಡೆ ವುಕ್ಲಿಪ್‍ನ 200 ನೌಕರರು ಕೆಲಸ ಮಾಡ್ತಿದ್ದಾರೆ. ಇನ್ನೂ 100 ಮಂದಿ ವೃತ್ತಿಪರರನ್ನು ನೇಮಕ ಮಾಡಿಕೊಳ್ಳಲು ವುಕ್ಲಿಪ್ ಮುಂದಾಗಿದೆ. ಯುವ ಎಂಜಿನಿಯರಿಂಗ್ ಪ್ರತಿಭೆಗಳು ಹಾಗೂ ಅನುಭವಿಗಳ ಜೊತೆಗೂಡಿ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಗುರಿ ನಿಖಿಲ್ ಅವರ ಮುಂದಿದೆ.


ಲೇಖಕರು:ಇಮ್ಯಾನ್ಯುಯಲ್​ ಅಂಬೆರ್ಬರ್​​

ಅನುವಾದಕರು: ಭಾರತಿ ಭಟ್​

Add to
Shares
2
Comments
Share This
Add to
Shares
2
Comments
Share
Report an issue
Authors

Related Tags