ಆವೃತ್ತಿಗಳು
Kannada

ವಿಶ್ವದೆಲ್ಲೆಡೆ ಯೋಗಾಯೋಗ - ಆರೋಗ್ಯದ ಜೊತೆಗೆ ಲಾಭ

ಟೀಮ್​​ ವೈ.ಎಸ್​​.

YourStory Kannada
11th Nov 2015
Add to
Shares
0
Comments
Share This
Add to
Shares
0
Comments
Share

ಇಂದಿನ ಜಮಾನದಲ್ಲಿ ಮಾಲಿನ್ಯದ ಕಾರಣದಿಂದ ಜನರ ಆರೋಗ್ಯ ಹದಗೆಡುತ್ತಿದೆ. ವಯಸ್ಸಿಗೆ ಮೊದಲೆ ಚರ್ಮ ಸುಕ್ಕುಗಟ್ಟುತ್ತಿದೆ. ಇದರಿಂದ ಆಸ್ಪತ್ರೆಗಳು ತುಂಬಿ ತುಳುಕುತ್ತಿರುತ್ತವೆ. ಹುಷಾರಿಲ್ಲ ಅಂತಾ ಯಾವುದೇ ಡಾಕ್ಟರ್ ಹತ್ತಿರ ಹೋದರೂ ಯೋಗ ಮಾಡಿ, ವಾಕಿಂಗ್ ಮಾಡಿ ಅನ್ನೋದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಇದರಿಂದ ದೊಡ್ಡ ದೊಡ್ಡ ಸಿಟಿಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಯೋಗ ಕೇಂದ್ರಗಳು ಹುಟ್ಟಿಕೊಳ್ಳುತ್ತಿವೆ. ಜನರೂ ಉತ್ತಮ ಆರೋಗ್ಯಕ್ಕೆ ಯೋಗದ ಮೊರೆ ಹೋಗುತ್ತಿದ್ದಾರೆ. ಆದರೆ ಯೋಗ ಮೂಲತಃ ಭಾರತದ್ದಾದ್ರೂ ವಿದೇಶದಲ್ಲಿಯೇ ಅದಕ್ಕೆ ಹೆಚ್ಚು ಪ್ರಾಶಸ್ತ್ಯ ಸಿಕ್ತಿದೆ. ವಿದೇಶಿಗರು ಯೋಗದತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆರೋಗ್ಯ ಹಾಗೂ ಸೌಂದರ್ಯ ಕಾಪಾಡಿಕೊಳ್ಳಲು ಯೋಗದ ಮೊರೆಹೋಗುತ್ತಿದ್ದಾರೆ.

image


ಒಮ್ಮೆ ಯುರೋಪಿನ ದಂಪತಿ ಅಲೆಕ್ಸ್ ಜಾಟನ್ ಹಾಗೂ ಅಲೆಕ್ಸ್ ಕ್ವೈನ್ ಪ್ರಪಂಚ ಪರ್ಯಟನೆ ಮಾಡೋಕೆ ಅಂತಾ ಹೊರಟಿದ್ದಾಗ ಅವರಿಗೆ ಓರ್ವ ಯೋಗಗುರು ಪರಿಚಯವಾಗುತ್ತಾರೆ. ಅವರ ವಿದ್ಯೆಗೆ ಆ ದಂಪತಿ ಮನಸೋಲುತ್ತಾರೆ. ಇದಾದ ಬಳಿಕ ಕೇರಳದ ಕಾಡಿನೊಂದಿಗೆ ಅವರಿಗೆ ನಂಟು ಬೆಳೆಯುತ್ತೆ. ಒಂದು ವಾರಗಳ ಕಾಲ ಆ ದಂಪತಿ ಅದೇ ಕಾಡಿನಲ್ಲಿದ್ದು ಯೋಗಾಭ್ಯಾಸ ಮಾಡುತ್ತಾರೆ. ತದನಂತರದಲ್ಲಿ ಅವರು ಅಲ್ಲಿಂದ ಹೊರಡುತ್ತಾರೆ. ಆದ್ರೆ ಅತ್ಯಂತ ಪ್ರಿಯವಾದ ಯೋಗಗುರುವಿನ ಜೊತೆ ಸಂಪರ್ಕ ಸಾಧ್ಯವಾಗದ ವಿಷಾದ ಅವರನ್ನು ಕಾಡುತ್ತಿರುತ್ತದೆ.

ಜಗತ್ತಿನಲ್ಲಿ ಯಾವುದೇ ಹೊಟೇಲ್, ರೆಸ್ಟೋರೆಂಟ್ ಅಥವಾ ಫೋನ್ ನಂಬರ್ ಗಳನ್ನು ಹುಡುಕೋದು ಕಷ್ಟದ ಕೆಲಸವಲ್ಲ. ಆದ್ರೆ ಅದ್ಭುತ ಯೋಗದ ಅನುಭವ ಹಾಗೂ ಯೋಗಗುರುವಿನೊಂದಿಗೆ ನಿರಂತರ ಸಂಪರ್ಕ ಹೊಂದುವುದು ಕಷ್ಟದ ಕೆಲಸ. ಯಾಕೆಂದ್ರೆ ಅದಕ್ಕೆ ಯಾವುದೇ ವೇದಿಕೆ ಇಲ್ಲ. ಗೂಗಲ್ ನಲ್ಲಿ ಹುಡುಕಿದರೂ ಬಹುತೇಕ ಸಂದರ್ಭಗಳಲ್ಲಿ ಯಾವುದೇ ಪ್ರಯೋಜನವಾಗೋದಿಲ್ಲ. ಆದ್ದರಿಂದಲೇ ಅಲೆಕ್ಸ್ ಯೋಗವನ್ನು ಬಹುತೇಕ ಬಿಟ್ಟುಬಿಟ್ಟಿದ್ದರು. ಆ ಬಳಿಕ ಹೇಗಾದರೂ ಸರಿ ಯೋಗದ ಸುಲಭ ಸಂಪರ್ಕ ಇಡೀ ಜಗತ್ತಿಗೆ ಸಾಧ್ಯವಾಗಿಸಬೇಕೆಂದು ನಿರ್ಧಾರ ಮಾಡಿದರು.

2011 ರಲ್ಲಿ ಅಲೆಕ್ಸ್ ಕ್ವೈನ್ ವೆಬ್ ಉದ್ಯಮದ ಕ್ಲಾಸ್ವೊಂದರಲ್ಲಿ ಕುಳಿತಿದ್ದರು. ಆಗ ಅವರಿಗೆ ಹೊಸದೊಂದು ಯೋಚನೆ ಹೊಳೆಯಿತು. ಯೋಗದ ಅನುಭವ ಹಂಚಿಕೊಳ್ಳುವಂತ, ಯೋಗ ಬಯಸುವವವರಿಗೆ ಸಹಾಯವಾಗುವಂತ ವೇದಿಕೆಯನ್ನು ಅಂತರ್ಜಾಲದಲ್ಲಿ ನಿರ್ಮಾಣ ಮಾಡಬಹುದೆಂದು. ಆಗಲೇ ಕ್ಲೈನ್ ಹಾಗೂ ಅವರ ಸ್ನೇಹಿತರು ಸೇರಿ ಯೋಗ ಟ್ರಯಲ್ ಡಾಟ್ ಕಾಮ್ ಆವಿಷ್ಕರಿಸಿದರು. ಅವರ ಈ ಕಲ್ಪನೆ ಬಹುಬೇಗ ಕಾರ್ಯರೂಪಕ್ಕೂ ಬಂತು.

ಪಾಶ್ಚಾತ್ಯ ದೇಶಗಳಲ್ಲಿ ಜನರು ಯೋಗ ಕಾರ್ಯಾಗಾರಕ್ಕೆ ಅಥವಾ ಯೋಗ ತರಗತಿಗಳಿಗೆ ಹೋಗುತ್ತಾರೆ. ಅದನ್ನು ಇಷ್ಟಪಡುತ್ತಾರೆ. ಪ್ರತಿಯೊಬ್ಬ ಯೋಗಿಯೂ ಆತನ ಯೋಗಗುರುವನ್ನು ಹುಡುಕಿಕೊಂಡು ಹೋಗುತ್ತಾರೆ. ಆದ್ರೆ ಅದನ್ನೇ ಒಂದು ಉದ್ಯಮವನ್ನಾಗಿಸೋದಾದ್ರೆ ಎಲ್ಲಾ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿರುವ ಯೋಗ ಟೀಚರ್ ಬೇಕಾಗುತ್ತೆ. ಯಾವುದೋ ಟೂಲ್​ನಿಂದ ಯೋಗ ಉದ್ಯಮ ನಡೆಸೋಕಾಗಲ್ಲ. ಬದಲಾಗಿ ಒಂದು ಸಂಸ್ಥೆಯಂಥ ವಾತಾವರಣ ಅಲ್ಲಿರಬೇಕಾಗುತ್ತದೆ ಅನ್ನೋದು ಕ್ಲೈನ್ ಅಭಿಪ್ರಾಯವಾಗಿತ್ತು.

ಆದ್ರೆ ಬಹುತೇಕ ಕಡೆಗಳಲ್ಲಿ ಹೆಚ್ಚಿನ ಯೋಗಗುರುಗಳು ಹಣ ಗಳಿಸುವ ಉದ್ದೇಶದ ಹಿಂದೆ ಬಿದ್ದಿದ್ದಾರೆ. ಬಹಳಷ್ಟು ಯೋಗಾಸಕ್ತರಿಗೆ ಇದು ಇಷ್ಟವಾಗುವುದಿಲ್ಲ. ಅದಕ್ಕಾಗಿ ಯೋಗಾಸಕ್ತರ ದೃಷ್ಟಿಯಲ್ಲಿ ನಂಬಿಕಸ್ಥ ಸಂಸ್ಥೆ ಇದಾಗಿರಬೇಕೆಂಬ ಉದ್ದೇಶದೊಂದಿಗೆ ಜಗತ್ತಿನ ಹಲವಾರು ಯೋಗಗುರುಗಳನ್ನು ಕ್ಲೈನ್ ಮತ್ತವರ ತಂಡ ಸಂಪರ್ಕಿಸಿತು.

ಅಷ್ಟಕ್ಕೂ ಯೋಗಟ್ರಯಲ್ ಸಾಮಾಜಿಕ ಸಂಪರ್ಕ ತಾಣ. ಜಗತ್ತಿನ ಬಹುತೇಕ ಪ್ರಸಿದ್ಧ ಯೋಗಗುರುಗಳು ಇಲ್ಲಿ ಸಂಪರ್ಕಕ್ಕೆ ಸಿಗುತ್ತಾರೆ. ಬಳಕೆದಾರರು ಈ ವೆಬ್ಸೈಟ್ನಲ್ಲಿ ತಮ್ಮದೊಂದು ಪ್ರೊಫೈಲ್ ಸೃಷ್ಟಿಸಿಕೊಳ್ಳಬಹುದು. ಇದಕ್ಕೆ ನಾಲ್ಕು ಸರಳ ಹಂತಗಳಿವೆ. ಮೊದಲನೇಯದು ತಾವು ವಿದ್ಯಾರ್ಥಿಯೋ ಅಥವಾ ಗುರುಗಳೋ ಎನ್ನುವುದನ್ನು ನಮೂದಿಸಬೇಕು. ಎರಡನೇಯದು ನೀವಿರುವ ಸ್ಥಳ, ಆ ಬಳಿಕ ನೀವು ಯಾವ ತೆರನಾದ ಯೋಗ ಕಲಿಯಲು ಬಯಸುತ್ತೀರಿ ಹಾಗೂ ಯಾವ ಗುರುವಿನ ಬಳಿ ಅಭ್ಯಾಸ ಮಾಡಲು ಬಯಸುತ್ತೀರಿ ಎಂಬುದನ್ನು ಹೇಳಬೇಕಾಗುತ್ತದೆ. ಇಷ್ಟಾದ ಬಳಿಕ ಈ ವೆಬ್ಸೈಟ್ನಿಂದ ವಿಶ್ವದಾದ್ಯಂತ ಎಲ್ಲೆಲ್ಲಿ, ಯಾವಾಗ ಯೋಗ ತರಬೇತಿಗಳು ನಡೆಯುತ್ತವೆ, ಯೋಗದ ಬಗ್ಗೆ ಕಾರ್ಯಾಗಾರ, ಸಮಾರಂಭ, ಯೋಗ ತರಗತಿಗಳ ಬಗ್ಗೆ ತಿಳಿಯಬಹುದಾಗಿದೆ. ವಿದ್ಯಾರ್ಥಿಯ ಆಸಕ್ತಿಗನುಗುಣವಾಗಿ ಅಪಡೇಟ್ಸ್ ನೀಡಲಾಗುತ್ತದೆ.

image


ಯೋಗ ಟ್ರಯಲ್ ಡಾಟ್ ಕಾಮ್ ಯೋಗವನ್ನು ಒಂದು ಯಶಸ್ವಿ ಉದ್ಯಮವನ್ನಾಗಿಸಿ ನಡೆಸಿಕೊಂಡು ಬರುತ್ತಿದೆ. ಉದ್ಯಮ ಎಂದ ಮೇಲೆ ಲಾಭ ಇರಲೇಬೇಕಲ್ಲವೆ, ಯೋಗಾಟ್ರಯಲ್ ಯೋಗಾಸಕ್ತರಿಗೆ ಸದಸ್ಯತ್ವ ನೀಡುತ್ತದೆ. ಇದರಿಂದ ಸ್ವಲ್ಪ ಮಟ್ಟಿಗಿನ ಫೀಸನ್ನು ತೆಗೆದುಕೊಳ್ಳಲಾಗುತ್ತೆ. ಭಾರತದಲ್ಲಿ ಹೃಷಿಕೇಷ ಹಾಗೂ ಮೈಸೂರಿನಲ್ಲಿ ನುರಿತ ಯೋಗಗುರುಗಳನ್ನು ತಯಾರು ಮಾಡುವ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲದೇ ಈ ಕೇಂದ್ರಗಳ ಕುರಿತು ಇಡೀ ವಿಶ್ವಕ್ಕೆ ಪ್ರಚಾರ ಮಾಡಲಾಗುತ್ತದೆ.

ಈ ಟ್ರಯಲ್ ಡಾಟ್ ಕಾಮ್ ಈಗಾಗಲೇ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಒಂದು ಲಕ್ಷ ತರಬೇತುದಾರರ ಪ್ರೊಫೈಲ್, ವಿಶ್ವದ 10 ಬಿಲಿಯನ್ ಯೋಗಿಗಳ ಜೊತೆ ಸಂಪರ್ಕ, ಮಿಲಿಯನ್ಗಟ್ಟಲೇ ಜನ ಪ್ರತಿ ತಿಂಗಳು ಈ ವೈಬ್ಸೈಟ್ ವೀಕ್ಷಿಸ್ತಾರೆ. ಈ ವೆಬ್ಸೈಟ್ ಬಳಕೆದಾರರಲ್ಲಿ ಅಮೆರಿಕ, ಇಂಗ್ಲೆಂಡ್ ಹಾಗೂ ಕೆನಡಾದವರೇ ಹೆಚ್ಚು. ಅವರವರಿಗೆ ಇಷ್ಟವಾದ ಕ್ಲಾಸ್ ಮತ್ತು ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಭಾರತೀಯ ಗ್ರಾಹಕರಿಗೆ ಸೇವೆ

ಇದಾದ ಬಳಿಕ ಕ್ಲೈನ್ ಹಾಗೂ ತಂಡದವರ ದೃಷ್ಟಿ ಬಿದ್ದಿದ್ದು ಭಾರತದ ಮೇಲೆ. ಯೋಗದ ಮೂಲ ಭಾರತ. ಇಲ್ಲಿನ ಜನರಲ್ಲಿ ಯೋಗ ಹಾಸುಹೊಕ್ಕಾಗಿದೆ ಎಂದು ತಿಳಿದಿದ್ದ ಈ ತಂಡಕ್ಕೆ ಇಲ್ಲಿ ಮಾರ್ಕೆಟಿಂಗ್ ಮಾಡುವುದು ಅಷ್ಟೊಂದು ಸುಲಭವಲ್ಲ ಅನ್ನೋ ಸಂಗತಿ ಅರ್ಥವಾಯಿತು. ಇದರಿಂದ ಈ ತಂಡ ಜನರ ಮನಸ್ಥಿತಿ ಹಾಗೂ ಜನರ ಜೀವನ ಶೈಲಿ, ಆಸಕ್ತಿಗಳ ಬಗ್ಗೆ ಸಂಶೋಧನೆಯಲ್ಲಿ ತೊಡಗಿತು. ಆ ಬಳಿಕ ತಿಳಿದದ್ದೇನೆಂದರೆ ಇಲ್ಲಿ ನಡೆಸಲಾಗುವ ಯೋಗ ತರಬೇತಿ ಹಾಗೂ ತರಗತಿಗಳು ವಿಭಿನ್ನವಾಗಿರುವುದು ಹಾಗೂ ಮೊಬೈಲ್ ಬಳಕೆದಾರರೇ ಇಲ್ಲಿ ಹೆಚ್ಚಾಗಿರುವುದು. ಇದರಿಂದ ಯೋಗಾಟ್ರಯಲ್ ತಂಡ ಮೊಬೈಲ್ ಹಾಗೂ ವಾಟ್ಸಾಪ್ ಮೂಲಕವೇ ಜನರನ್ನು ತಲುಪೋಕೆ ನಿರ್ಧರಿಸಿತು. ಅಲ್ಲದೇ ಇದಕ್ಕಾಗಿ ಒಂದು ಆ್ಯಪ್ ಅನ್ನೂ ಬಿಡುಗಡೆಗೊಳಿಸಿತು.

ಒಟ್ಟಾರೆ ಯೋಗದ ಆಯಾಮಗಳನ್ನು ಬದಲಿಸದೇ ಯೋಗಾಟ್ರಯಲ್ ಡಾಟ್ ಕಾಮ್ ಇದನ್ನೊಂದು ಉದ್ಯಮವನ್ನಾಗಿ ಬದಲಿಸಿದೆ. ಈ ವೆಬ್ಸೈಟ್ನ ಬಳಕೆದಾರರಿಗೆ ಬೇಕಾದ ಸೌಲಭ್ಯ ನೀಡಿದೆ. ಇಡೀ ವಿಶ್ವದಾದ್ಯಂತ ಯೋಗಕ್ಕೆ ಒಂದೊಳ್ಳೆ ವೇದಿಕೆಯಾಗಿಯೂ ಕೆಲಸ ಮಾಡುತ್ತಿದೆ.

Add to
Shares
0
Comments
Share This
Add to
Shares
0
Comments
Share
Report an issue
Authors

Related Tags