ಆವೃತ್ತಿಗಳು
Kannada

ಪಕುಮೇನಿಯಾ ಪಕ್ವವಾದ ಕಥೆ...!

ಟೀಮ್​​ ವೈ.ಎಸ್​​.

7th Nov 2015
Add to
Shares
0
Comments
Share This
Add to
Shares
0
Comments
Share

ಭಾರತ ಹಳ್ಳಿಗಳ ದೇಶವಾದ್ರೂ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ಜನಸಂಖ್ಯೆ ಕಡಿಮೆಯಾಗ್ತಿದೆ. ಯುವಕರ ಸಂಖ್ಯೆಯಂತೂ ಇನ್ನೂ ಇಳಿಮುಖವಾಗ್ತಿದೆ. ಉತ್ತಮ ಶಿಕ್ಷಣ,ಉದ್ಯೋಗಗಳಿಗಾಗಿ ಜನರು ಹಳ್ಳಿಗಳನ್ನು ತೊರೆಯುತ್ತಿದ್ದಾರೆ. ಒಂದೂರಿನಿಂದ ಮತ್ತೊಂದೂರಿಗೆ, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗೋದು ಸಾಮಾನ್ಯವಾಗಿಬಿಟ್ಟಿದೆ. ಹೀಗಾಗಿ ಉತ್ತರದವರು ದಕ್ಷಿಣದಲ್ಲಿ, ದಕ್ಷಿಣದವರು ಉತ್ತರ ಭಾಗಗಳಲ್ಲಿ ಕಾಣಸಿಗೋದು ಅಪರೂಪವೇನಲ್ಲ.

image


ಹೀಗೆ ಯಾವುದೋ ಕಾರಣಕ್ಕಾಗಿ ಊರನ್ನು ಬಿಟ್ಟರೂ ಮನೆಯ, ಕುಟುಂಬದ, ಆಪ್ತರ ನೆನಪು ಬಾಧಿಸದೇ ಇರದು. ಅದರಲ್ಲೂ ಮನೆಯಲ್ಲಿ ಮಾಡುವ ತಿಂಡಿ,ಸಿಹಿತಿಂಡಿ ನೆನೆಸಿಕೊಂಡರೆ ಯಾರಿಗಾದರೂ ಬಾಯಲ್ಲಿ ನೀರೂರುತ್ತೆ. ಬೇಕು ಅಂದ ತಕ್ಷಣ ನೂರಾರು ಕಿಲೋಮೀಟರ್ ದೂರದಲ್ಲಿರುವ ಮನೆಗೆ ಹೋಗೋದಿಕ್ಕೂ ಸಾಧ್ಯವಿಲ್ಲ. ಅದರಲ್ಲೂ ಊರು ಬಿಟ್ಟು ಊರಿಗೆ ಬಂದವರು ಅಲ್ಲಿನ ಆಹಾರ ಒಗ್ಗದೇ ಪಡುವ ಪಾಡು ಹೇಳತೀರದು. ಹಾಗೆ ಕಷ್ಟ ಪಟ್ಟ ಮೂವರು ಹುಡುಗರ ಗುಂಪೊಂದು ಇದಕ್ಕೆ ಪರಿಹಾರ ಕಂಡುಹಿಡಿದಿದೆ. ಅದೇ ಪಕುಮೇನಿಯಾ ಡಾಟ್ ಕಾಮ್.

ಪಕುಮೇನಿಯಾ ಹುಟ್ಟಿದ್ದು ಹೇಗೆ..?

ನಮ್ಮಲ್ಲಿ ಇಷ್ಟವಾದ ಆಹಾರ ಅದ್ರಲ್ಲೂ ಗುಣಮಟ್ಟದ ಹಾಗೂ ರುಚಿಕರವಾದ ಆಹಾರ ಸಿಗುತ್ತೆ ಅಂತಾದ್ರೆ ಜನ ಕೊಂಡುಕೊಳ್ಳೋಕೆ ಹಿಂದೆ ಮುಂದೆ ನೋಡಲ್ಲ. ಅದೆಷ್ಟು ಹಣವಾದ್ರೂ ಸರಿ ಕೊಂಡುಕೊಳ್ಳುತ್ತಾರೆ. ರುಚಿಯ ಮುಂದೆ ದುಡ್ಡು ಗೌಣವಾಗುತ್ತೆ. ತಮಗೆ ಮಾತ್ರವಲ್ಲ... ಇಂಥ ಸಮಸ್ಯೆ ದೇಶದಲ್ಲಿರೋ ಬಹುತೇಕರಿಗಿದೆ ಅನ್ನೋದನ್ನು ಮನಗಂಡ ವೈಭವ್ ಶ್ರೀವಾತ್ಸವ್, ನಿಖಿತಾ ಹಾಗೂ ಪ್ರೇಮಾಂಶು ಅನ್ನೋ ಗೆಳೆಯರ ತಂಡ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಹಿಡಿಯೋಕೆ ಮುಂದಾಯ್ತು.

ಆಹಾರ, ತಿಂಡಿ ತಿನಿಸು ಅದರಲ್ಲೂ ಸಿಹಿತಿಂಡಿಗಳಿಗೆ ಅದರದೇ ಅಸಲಿ ಟೇಸ್ಟ್ ಇದ್ದರೆ ಗ್ರಾಹಕರಿಗೆ ಸಂಪೂರ್ಣ ಸಂತೃಪ್ತಿ ಸಿಗುತ್ತೆ. ಯಾವ ಊರು ಯಾವ ಸಿಹಿತಿಂಡಿಗೆ ಪ್ರಸಿದ್ಧಿಯೋ ಅಲ್ಲಿಂದಲೇ ಅದನ್ನು ತರಿಸಿ ಗ್ರಾಹಕರಿಗೆ ನೀಡಿದ್ರೆ ಗ್ರಾಹಕರು ಖುಶ್ ಆಗ್ತಾರೆ. ಉದಾಹರಣೆಗೆ ಆಗ್ರಾದಿಂದ ಪೇಥಾಸ್, ಇಂಧೋರ್​​ನ ನಮ್ಕೀನ್ ಹಾಗೂ ಮಿಠಾಯಿ ಹೀಗೆ... ಇದನ್ನು ಅಲ್ಲಿಂದಲೇ ತರಿಸಿದರೆ ಮಾತ್ರ ಈ ಸ್ವೀಟ್​ನ ಒರಿಜಿನಲ್ ಟೇಸ್ಟ್ ಬರುತ್ತೆ ಅನ್ನೋದು ಪಕುಮೇನಿಯಾ ವೆಬ್​ಸೈಟ್​​ನ ಸಹ ಸಂಸ್ಥಾಪಕ ವೈಭವ್ ಶ್ರೀವಾತ್ಸವ್ ಅಭಿಪ್ರಾಯ.

image


ಇದಾದ ಬಳಿಕ ಪಕುಮೇನಿಯಾ ಸದಸ್ಯರಾದ ವೈಭವ್, ನಿಖಿತಾ ವೋಹ್ರಾ ಹಾಗೂ ಪ್ರೇಮಾಂಶು ಸೇರಿ ದೇಶದ ಬೇರೆ ಬೇರೆ ಕಡೆಗಳಿಂದ ಸ್ವಾದಿಷ್ಟ ತಿಂಡಿ-ತಿನಿಸುಗಳು, ಸಿಹಿತಿಂಡಿಗಳನ್ನು ತರಿಸೋ ಕಾರ್ಯಕ್ಕೆ ಮುಂದಾದರು. ಗ್ರಾಹಕರು ತಮಗಿಷ್ಟವಾದ ಸ್ವೀಟ್​​​ಗಳಿಗೆ ಆರ್ಡರ್ ಮಾಡಿ, ಆ ಸ್ವೀಟ್​​ಗಳನ್ನು ಗ್ರಾಹಕರ ಮನೆ ಬಾಗಿಲಿಗೇ ತರಿಸಿಕೊಳ್ಳೋ ವೇದಿಕೆ ಕಲ್ಪಿಸೋ ಕಾರ್ಯಕ್ಕೆ ಯೋಜನೆ ರೂಪಿಸಿದರು.

ಇದಕ್ಕಾಗಿ ಈ ಟೀಂ ಮೊದಲು ದೇಶದ ಬೇರೆ ಬೇರೆ ಕಡೆಗಳಲ್ಲಿ ಅಸಲಿ ಸ್ವಾದದೊಂದಿಗೆ ಗುಣಮಟ್ಟ ಹೊಂದಿರೋ ಸ್ವೀಟ್ ತಯಾರಿಸೋ ಸಣ್ಣ ವ್ಯಾಪಾರಿಗಳನ್ನು ಸಂಪರ್ಕಿಸಿತು. ಆದ್ರೆ ಸಿಹಿತಿಂಡಿಗಳ ಗುಣಮಟ್ಟ ಹಾಗೂ ಅದು ಕೆಡದಂತೆ ಕಾಪಾಡಿಕೊಂಡು ಗ್ರಾಹಕರು ಹೇಳಿದ ಸಮಯಕ್ಕೆ ಸರಿಯಾಗಿ ಆರ್ಡರ್ ತಲುಪಿಸೋ ಕಾರ್ಯವೇ ಇವರಿಗೆ ಸವಾಲಿನದಾಗಿತ್ತು. ಗ್ರಾಹಕರು ಕೊಟ್ಟಿರೋ ಆರ್ಡರ್ ತಾಜಾ ಹಾಗೂ ಟೇಸ್ಟಿಯಾಗಿದ್ದರೆ ಗ್ರಾಹಕರು ಹೆಚ್ಚಿನ ಸಂತಪ್ತಿ ಹೊಂದುತ್ತಾರೆ. ಹೀಗಾಗಿ ಪಿಕಪ್ ಹಾಗೂ ಡೆಲಿವರಿ ನೀಡೋದು ಕೂಡಾ ಸವಾಲಿನ ಕೆಲಸವೇ ಆಗಿತ್ತು.

ಈ ವೇಳೆ ವೈಭವ್ ಹಾಗೂ ಅವರ ತಂಡ ದೇಶದ ಪ್ರತಿಷ್ಠಿತ ಸರಕು ಸಾಗಣೆ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಎರಡರಿಂದ ಏಳು ದಿನಗಳೊಳಗೆ ಗ್ರಾಹಕರು ಆರ್ಡರ್ ಮಾಡಿದ ಸ್ವೀಟ್​​ಗಳನ್ನು ತಲುಪುವಂತೆ ಮಾಡಲಾಯ್ತು. ಇದರಿಂದ ಫ್ರೆಶ್ ಸಿಹಿತಿಂಡಿಗಳನ್ನು ತಿಂದು ಸಂತೋಷ ಪಡುವಂತಾಯ್ತು.

image


ಈ ಉದ್ಯಮವನ್ನು ಇನ್ನಷ್ಟು ಯಶಸ್ವಿಯಾಗಿ ಬೆಳೆಸೋಕೆ ಯೋಜಿಸಿದ ಈ ಮೂವರು ಸ್ನೇಹಿತರು ಬೇರೆ ಬೇರೆ ಜವಾಬ್ದಾರಿ ಹೊತ್ತುಕೊಂಡರು. ವೈಭವ್ ಶ್ರೀವಾತ್ಸವ್ ವ್ಯಾಪಾರಿಗಳ ಜೊತೆ ಸಂಪರ್ಕ ಹಾಗೂ ಅವರೊಂದಿಗಿನ ಸಂಬಂಧಗಳನ್ನು ಹಣಕಾಸಿನ ವ್ಯವಹಾರಗಳನ್ನು ನಿರ್ವಹಿಸುವ ಜವಾಬ್ದಾರಿ ಪಡೆದರು. ನಿಖಿತಾ ಮಾರ್ಕೆಟಿಂಗ್ ಜವಾಬ್ದಾರಿ ಜೊತೆಗೆ ಗ್ರಾಹಕರ ಸಂಬಂಧಗಳ ನಿರ್ವಹಣೆ ಹೊತ್ತುಕೊಂಡರು. ಇನ್ನುಳಿದ ಸದಸ್ಯ ಪ್ರೇಮಾಂಶು ಆನ್ಲೈನ್ ಮಾರ್ಕೆಟಿಂಗ್, ಐಟಿ ಸಿಸ್ಟಮ್ ಹಾಗೂ ಅದರ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡರು. ಇವರ ಜೊತೆಗೆ ಚಂದನ್ ಶ್ರೀಕಾಂತ್ ಇವರಿಗೆ ಸಹಾಯ ಮಾಡುತ್ತಿದ್ದರು.

ದಿನಗಳೆದಂತೆ ಪಕುಮೇನಿಯಾ ಯಶಸ್ವಿಯಾಗುತ್ತಾ ಸಾಗಿತು. ಗ್ರಾಹಕರನ್ನು ಸಂತೃಪ್ತಿಗೊಳಿಸೋಕೆ ಈ ತಂಡದ ಪ್ರಮುಖ ಗುರಿಯಾಗಿತ್ತು. ಇನ್ನು ಐಟಿ ಕಂಪನಿಗಳಲ್ಲೂ ಪಕುಮೇನಿಯಾ ಡಾಟ್ ಕಾಮ್ ಬಗ್ಗೆ ಮಾಹಿತಿ ನೀಡೋ ಸಲುವಾಗಿ ಮಳಿಗೆಗಳನ್ನು ತೆರೆಯಲಾಯ್ತು. ಇದರಿಂದಾಗಿ ಅಲ್ಲಿನ ಉದ್ಯೋಗಿಗಳ ಅಗತ್ಯತೆಗಳನ್ನು ಅರ್ಥಮಾಡಿಕೊಂಡು ಅದನ್ನು ಪೂರೈಸೋದ್ರ ಜೊತೆಗೆ ಉದ್ಯಮವನ್ನು ಯಶಸ್ವಿಗೊಳಿಸಿಕೊಳ್ಳಲು ಅನುಕೂಲವಾಯ್ತು.

ಆರಂಭದಲ್ಲಿ ಸಹ ಸಂಸ್ಥಾಪಕರ ವೈಯಕ್ತಿಕ ಬಂಡವಾಳ ಹಾಕಿ ಆರಂಭದಲ್ಲಿ ಉದ್ಯಮ ಆರಂಭಿಸಲಾಯ್ತು. ಹೂಡಿಕೆದಾರರಿಂದ ಸಂಗ್ರಹಿಸಿ ಸೇವೆಗಳನ್ನು ವಿಸ್ತರಿಸೋದು ಸಹ ಸಂಸ್ಥಾಪಕರಲ್ಲಿ ಒಬ್ಬರಾದ ವೈಭವ್ ಅವರ ಮುಂದಿನ ಯೋಜನೆ. ಅಲ್ಲದೇ ಹೆಚ್ಚಿನ ಹಾಗೂ ವೈವಿದ್ಯಮಯ ಆಹಾರ, ತಿಂಡಿ - ತಿನಿಸುಗಳನ್ನು ಗ್ರಾಹಕರಿಗೆ ನೀಡೋದು ಇವರ ಗುರಿಯಾಗಿದೆ. ಈ ಉದ್ಯಮ ಇಡೀ ದೇಶದಲ್ಲಿ ಹೆಸರು ಮಾಡೋದಿಕ್ಕೆ ಈ ಯುವ ತಂಡದ ಶ್ರಮ ಸಾಕಷ್ಟಿಸಿದೆ. ಯಾವುದೇ ಯಶಸ್ಸು ಕೇವಲ ವಯಸ್ಸಿನ ಕಾರಣದಿಂದ ಒಲಿದುಬರೋದಿಲ್ಲ. ಚಿಕ್ಕವಯಸ್ಸಿನವರು ಏನು ಸಾಧಿಸಬಹುದು ಅನ್ನೋದನ್ನು ವೈಭವ್ ಶ್ರೀವಾತ್ಸವ್ ತೋರಿಸಿಕೊಟ್ಟಿದ್ದಾರೆ.

Add to
Shares
0
Comments
Share This
Add to
Shares
0
Comments
Share
Report an issue
Authors

Related Tags