ಆವೃತ್ತಿಗಳು
Kannada

ಚಿಕ್ಕಮಗಳೂರ ಕಾಫಿ ಘಮ್ ಎನ್ನುತ್ತಿದೆ....!

ಟೀಮ್​​ ವೈ.ಎಸ್​. ಕನ್ನಡ

2nd Feb 2016
Add to
Shares
0
Comments
Share This
Add to
Shares
0
Comments
Share

ಚಿಕ್ಕಮಗಳೂರು ಜಿಲ್ಲಾ ಅವಲೋಕನ

ಚಿಕ್ಕಮಗಳೂರು ಕರ್ನಾಟಕದ ಕಾಫಿ ತವರು. ಪ್ರತಿಕಪ್ ಸ್ವಾದದ ಹೆಚ್ಚಳಕ್ಕೆ ಪ್ರಾಮುಖ್ಯತೆ ಕೊಡುತ್ತಲೇ ಅನಾದಿ ಕಾಲದಿಂದಲೂ ಭಾರತದಾದ್ಯಂತ ತನ್ನ ಕಾಫಿ ಕಂಪನ್ನು ಸೂಸುತ್ತಿದೆ. ಮಸಾಲೆ ಪದಾರ್ಥಗಳು, ಹಣ್ಣುಗಳು ಹಾಗೂ ಹೂಗಳ ಸಂಬಂಧಿತ 611 ಆಹಾರ ಸಂಸ್ಕರಣಾ ಘಟಕಗಳು ಜಿಲ್ಲೆಯ ಉದ್ಯಮಕ್ಕೆ ಹೆಚ್ಚಿನ ಪ್ರಚಾರ ತಂದುಕೊಟ್ಟಿದೆ. ಚಿಕ್ಕಮಗಳೂರು 7202 ಚದರ ಕಿಮೀ ವಿಸ್ತೀರ್ಣದಲ್ಲಿ ಹರಡಿಕೊಂಡಿದ್ದು, ಚಿಕ್ಕಮಗಳೂರು, ಕಡೂರು, ಕೊಪ್ಪ, ಮೂಡಿಗೆರೆ, ಎನ್.ಆರ್.ಪುರ, ಶೃಂಗೇರಿ ಮತ್ತು ತರೀಕೆರೆ ಹೆಸರಿನ 7 ತಾಲ್ಲೂಕುಗಳನ್ನು ಹೊಂದಿದೆ. ಜಿಲ್ಲೆಯಲ್ಲಿ 79.25 ಪ್ರತಿಶತ ಸಾಕ್ಷರತೆ ಇದೆ.

image


ಆರ್ಥಿಕ ಸ್ಥಿತಿಗತಿ

ಚಿಕ್ಕಮಗಳೂರಿನ ಒಟ್ಟು ಜಿಡಿಪಿ ರೂ 52.22 ಶತಕೋಟಿ ಇದ್ದು, ರಾಜ್ಯದ ಜಿಎಸ್‍ಡಿಪಿಗೆ ಇದರ ಕೊಡುಗೆ 1.7% ಇದೆ. ಇನ್ನು ಜಿಲ್ಲಿಯವರ ತಲಾ ವಾರ್ಷಿಕ ಆದಾಯ 66,366 ರೂ ಆಗಿದೆ.

ವ್ಯವಸಾಯಕ್ಕೆ ಪ್ರಾಮುಖ್ಯತೆ

ಚಿಕ್ಕಮಗಳೂರಿನಲ್ಲಿ ಅದರ ಒಟ್ಟಾರೆ ಭೂಮಿಯಲ್ಲಿ 37.26% ವ್ಯವಸಾಯಕ್ಕೆ ಮೀಸಲಿಡಲಾಗಿದೆ. ಅದರಲ್ಲಿ 58% ಭೂಮಿಯಲ್ಲಿ ಗೋಧಿ, ರಾಗಿ, ನವಣೆ, ಜೋಳದಂತಹ ಬೆಳೆ ಬೆಳೆಯಲಾಗುತ್ತಿದೆ. ಇಲ್ಲಿನ ಹವಾಮಾನ ಮಸಾಲೆ, ಹಣ್ಣು ಮತ್ತು ಹೂಗಳನ್ನು ಬೆಳೆಯುವುದಕ್ಕೆ ಪ್ರಶಸ್ತವಾಗಿದೆ. ಮೆಣಸು, ಏಲಕ್ಕಿ, ಶುಂಠಿ ಮತ್ತು ಹರಿಶಿನದ ಜತೆ ಬಾಳೆಹಣ್ಣು, ಮಾವು, ಸಪೋಟ ಮತ್ತು ಗುಲಾಬಿ ಬೆಳೆಯಲಾಗುತ್ತದೆ. 13.36% ಭೂಮಿಯನ್ನು ಧಾನ್ಯಗಳನ್ನು ಬೆಳೆಯಲು ಮೀಸಲಿಡಲಾಗಿದ್ದು, ಕೇವಲ 2.36% ಭೂಮಿಯಲ್ಲಿ ಕಾಫಿ, ಟೀ, ಕೋಕಾ ಹಾಗೂ ವಿಳ್ಳೇದೆಲೆಗಳನ್ನು ಬೆಳೆಯಲಾಗುತ್ತದೆ. ಇಲ್ಲಿನ ಮಣ್ಣು ಖನಿಜಗಳಿಂದ ಸಮೃದ್ಧವಾಗಿದೆ.

ಕೈಗಾರಿಕಾ ಭೂ ಅವಲೋಕನ

ಇಲ್ಲಿನ ವ್ಯವಸಾಯ ಸ್ನೇಹಿ ಹವಾಮಾನ ಪ್ರವಾಸೋದ್ಯಮಕ್ಕೂ ಹೇಳಿ ಮಾಡಿಸಿದಂತಿದೆ. ಬಾಬಾ ಬುಡನ್ ಗಿರಿ ಬೆಟ್ಟ ಮತ್ತು ಭದ್ರಾ ವನ್ಯಜೀವಿ ಧಾಮ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಹಾಗೂ ಪ್ರಸಿದ್ಧ ದೇವಸ್ಥಾನಗಳು ಜಿಲ್ಲೆಯನ್ನು ಪ್ರಮುಖ ತಾಣವನ್ನಾಗಿ ಮಾಡಿದೆ. ಇದರಿಂದಾಗಿಯೇ ಜಿಲ್ಲೆಯಲ್ಲಿ ಕಾರ್ಪೊರೇಟ್ ಆತಿಥ್ಯ ಕೇಂದ್ರಗಳು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಬೆಳವಣಿಗೆ ಹೊಂದುತ್ತಿದೆ. ಇದಲ್ಲದೆ ಜಿಲ್ಲೆಯಲ್ಲಿ ಮೂರು ಕೈಗಾರಿಕಾ ಎಸ್ಟೇಟ್‍ಗಳಿದ್ದು, 1 ಕೈಗಾರಿಕಾ ಪ್ರದೇಶವಿದೆ. 3 ಕೈಗಾರಿಕಾ ಪ್ರದೇಶದ ಅಭಿವೃದ್ಧಿ, ಒಂದು ಕೈಗಾರಿಕಾ ಪಾರ್ಕ್, 1 ಕೈಗಾರಿಕಾ ಎಸ್ಟೇಟ್ ಗಳನ್ನು ಚಿಕ್ಕಮಗಳೂರು, ಕಡೂರು ಮತ್ತು ಕೊಪ್ಪದಲ್ಲಿ ಪ್ರಾರಂಭಿಸಲು ಪ್ರಸ್ತಾವನೆ ಇಡಲಾಗಿದೆ. 141 ಪಶು ಸಂಸ್ಥೆಗಳು, ತಾಂತ್ರಿಕ ಸಂಸ್ಥೆಗಳು ರೈತರಿಗೆ ಇತರೆ ಕ್ಷೇತ್ರಗಳಲ್ಲಿನ ಮಾಹಿತಿಯನ್ನು ಕೊಡುತ್ತಿವೆ.. ಜವಳಿ ಮತ್ತು ಮರ ಕೈಗಾರಿಕೆಗಳು ಜಿಲ್ಲೆಯಲ್ಲಿ ಇದೀಗ ಪ್ರವರ್ಧಮಾನಕ್ಕೆ ಬರುತ್ತಿದೆ.

ಮೂಲ ಸೌಕರ್ಯ ಮತ್ತು ಸಂಪನ್ಮೂಲಗಳು

ಭೂಮಿ ಮತ್ತು ಮಣ್ಣು: ಚಿಕ್ಕಮಗಳೂರಿನ ಸುಮಾರು 25.45 ಪ್ರತಿಶತ ಭೂಮಿ ಅರಣ್ಯದಿಂದ ಆವೃತವಾಗಿದೆ. 37.26% ಭೂಮಿಯನ್ನು ತೋಟಗಾರಿಕೆಗೆ ಬಳಸಲಾಗುತ್ತಿದೆ. ಇದಾದ ಬಳಿಕವೂ 25% ವ್ಯವಸಾಯ ಮಾಡಲಾಗದ ಭೂಮಿಯ ಜತೆ 12.18% ಭೂಮಿ ಲಭ್ಯವಿದೆ. ವಿವಿಧ ವ್ಯವಸಾಯ ಹವಾಮಾನ ಮತ್ತು ಫಲವತ್ತಾದ ಮಣ್ಣು ಜಿಲ್ಲೆಯ ವ್ಯವಸಾಯ ಉತ್ಪಾದನೆಯನ್ನು 109% ಹೆಚ್ಚಿಸಿದೆ.

ಜಲಾಶಯಗಳು: ತುಂಗ, ಭದ್ರಾ, ಹೇಮಾವತಿ, ವೇದಾವತಿ, ನೇತ್ರಾವತಿ, ಯಗಚಿ ನದಿಗಳ ಉಗಮ ಸ್ಥಾನ ಚಿಕ್ಕಮಗಳೂರು. ಜಿಲ್ಲೆಗೆ ನೀರಿನ ಬೇಡಿಕೆಯನ್ನು ಹಿರೇಕೊಳಲೆ ಟ್ಯಾಂಕ್, ಹೊನ್ನಮ್ಮನಗೊಲ್ಲ ಮತ್ತು ಯಗಚಿ ರಿಸರ್ವಾಯರ್ ಹಿನ್ನೀರಿನಿಂದ ಬೋರ್‍ವೆಲ್‍ಗಳ ಮೂಲಕ ಶಾಶ್ವತವಾಗಿ ಪೂರೈಕೆ ಮಾಡಲಾಗುತ್ತಿದೆ.

ವಿದ್ಯುತ್ ಸರಬರಾಜು

ಚಾಮುಂಡೇಶ್ವರಿ ಎಲೆಕ್ಟ್ರಿಕ್ ಸಪ್ಲೈ ಕಂಪನಿಯಿಂದ ಚಿಕ್ಕಮಗಳೂರಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಶರಾವತಿ ಜಲವಿದ್ಯುತ್ ಯೋಜನೆ ಮತ್ತು ಭದ್ರಾ ವಿದ್ಯುತ್ ಉತ್ಪಾದನಾ ಕೇಂದ್ರದಿಂದ ಕರೆಂಟ್ ನೀಡಲಾಗುತ್ತದೆ. ಇದರ ಮಾಸ್ಟರ್ ಸ್ವೀಕೃತಿ ಕೇಂದ್ರ ಶಿವಮೊಗ್ಗದಲ್ಲಿದ್ದು 110 ಕಿಲೋವಾಟ್ ಮತ್ತು 66 ಕಿಲೋವಾಟ್ ಟ್ರಾನ್ಸ್‍ಮಿಷನ್ ಲೈನ್‍ಗಳನ್ನು ಹೊಂದಿದೆ. ಭವಿಷ್ಯದಲ್ಲಿ ಆಂಬ್ಳೆ ಕೈಗಾರಿಕಾ ಪ್ರದೇಶದ ಹತ್ತಿರದ ಹಿರೇಮಗಳೂರಿನಲ್ಲಿ ಎಕ್ಸ್‍ಪ್ರೆಸ್ ಶೀಡರ್ ಮೂಲಕ ಪಡೆಯುವ 2*11 ಮೆಗಾವಾಟ್ ಸಾಮಥ್ರ್ಯದ ಸಬ್ ಸ್ಟೇಷನ್‍ಗಳನ್ನು ಪ್ರಾರಂಭಿಸಲು ಕೆಪಿಟಿಸಿಎಲ್ ಯೋಜನೆ ರೂಪಿಸಿದೆ. ಇದಲ್ಲದೇ ಹೀರೇನಲ್ಲೂರು, ಅಂರ್ತಗಟ್ಟ, ಕಳಸಾಪುರ, ಯಗಟಿ, ನೇರಳಕೆರೆ, ಶಿವಾನಿ ಮತ್ತು ಮುತ್ತಿನಕೊಪ್ಪದಲ್ಲಿ ಸಬ್‍ಸ್ಟೇಷನ್‍ಗಳ ನಿರ್ಮಾಣದ ಪ್ರಸ್ತಾವನೆ ಇದೆ.

ಜ್ಞಾನ ಕ್ಷೇತ್ರ

ಉನ್ನತ ಶಿಕ್ಷಣಕ್ಕೆ ಚಿಕ್ಕಮಗಳೂರಿನಲ್ಲಿ 73 ಡಿಗ್ರಿ ಕಾಲೇಜುಗಳಿವೆ. 1 ಎಂಜಿನಿಯರಿಂಗ್ ಹಾಗೂ 1 ತೋಟಗಾರಿಕೆ ಕಾಲೇಜು ಹಾಗೂ 2 ಆಯುರ್ವೇದ ಕಾಲೇಜು ಸಹ ಇದೆ.

ವೈದ್ಯಕೀಯ ಸಂಪನ್ಮೂಲ

ನಾಗರೀಕ ಮೂಲಸೌಕರ್ಯ ಉತ್ತಮವಾಗಿ ಜಿಲ್ಲೆಯಾದ್ಯಂತ ಹರಡಿರೋದ್ರಿಂದ ಇಲ್ಲಿ 88 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವೆ. 5 ಆಯುರ್ವೇದಿಕ ಆಸ್ಪತ್ರೆಗಳ ಜತೆ 5 ಸಮುದಾಯ ಆರೋಗ್ಯ ಕೇಂದ್ರ 283 ಸಾಮಾನ್ಯ ಆಸ್ಪತ್ರೆಗಳು ಜಿಲ್ಲೆಯಾದ್ಯಂತ ಇದೆ.

ಸಂಪರ್ಕ ವ್ಯವಸ್ಥೆ

ಚಿಕ್ಕಮಗಳೂರು ಜಿಲ್ಲೆ ರಸ್ತೆ, ಆಕಾಶ ಸಾರಿಗೆ, ರೈಲ್ವೆ ಮತ್ತು ಸಮುದ್ರ ಸಾರಿಗೆಗಳಿಗೆ ಸಂಪರ್ಕ ಹೊಂದಿದೆ. ಎನ್‍ಎಚ್ 206 ಮತ್ತು ಎನ್‍ಎಚ್13 ಜಿಲ್ಲಿಯಿಂದ ಹಾದು ಹೋಗಿದ್ದು, 11 ರೈಲ್ವೆ ಸ್ಟೇಷನ್ ಒಳಗೊಂಡ 95 ಕಿಮೀ ಉದ್ದದ ರೈಲು ಸಂಪರ್ಕವೂ ಇದೆ. ಜಿಲ್ಲೆಗೆ ಹತ್ತಿರದ ಏರ್‍ಪೋರ್ಟ್‍ಗಳೆಂದರೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯ ದೇಶೀಯ ವಿಮಾನ ನಿಲ್ದಾಣಗಳು. ಅಲ್ಲದೇ ಕಾರವಾರ ಮತ್ತು ಮಂಗಳೂರು ಬಂದರುಗಳು ಜಿಲ್ಲೆಗೆ ಹತ್ತಿರದಲ್ಲಿವೆ.

ಕೊನೇ ಮಾತು

ಸಾಕಷ್ಟು ಸಂಪತ್ತು ಸಂಪನ್ಮೂಲಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿರೋ ಚಿಕ್ಕಮಗಳೂರು ಭವಿಷ್ಯದಲ್ಲಿ ಕೈಗಾರೀಕರಣಕ್ಕೆ ಸಾಕ್ಷಿಯಾಗೋದ್ರಲ್ಲಿ ಸಂಶಯವಿಲ್ಲ, ಅಲ್ಲದೇ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೂ ಸಹ ವಿಫುಲ ಅವಕಾಶಗಳಿವೆ.

Add to
Shares
0
Comments
Share This
Add to
Shares
0
Comments
Share
Report an issue
Authors

Related Tags