ಆವೃತ್ತಿಗಳು
Kannada

ಹೊಸ ಜಮಾನದ ಥ್ರಿಲಿಂಗ್ ಗೇಮ್ಸ್ ಸ್ಮ್ಯಾಶ್ ನಲ್ಲಿ

ಆರಾಧ್ಯ

20th Mar 2016
Add to
Shares
4
Comments
Share This
Add to
Shares
4
Comments
Share

ಪಾರ್ಕ್​ನಲ್ಲಿ, ಗ್ರೌಂಡ್​​ಗಳಲ್ಲಿ ಆಟ ಆಡೋ ಕಾಲ ಮುಂಚೆ ಇತ್ತು.. ಆದ್ರೆ ಈಗ ಏನಾದ್ರು ಕಂಪ್ಯೂಟರ್, ಮೊಬೈಲ್, ಆನ್ ಲೈನ್ ನಲ್ಲಿ ಆಟವಾಡೋ ಕಾಲ.. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಕೂಡ ಇದಕ್ಕೆ ಮಾರು ಹೋಗಿದ್ದಾರೆ.. ಈಗಾಗಿ ಮಾಲ್ ಗಳಲೂ ಕೂಡ ಹೊಸ ಹೊಸ, ಮನರಂಜನೆಯ ಆಟಗಳನ್ನ ಪರಿಚಯ ಮಾಡ್ತಾನೆ ಇರ್ತಾರೆ.. ಈಗ ಅದಕ್ಕೆ ಹೊಸ ಸೇರ್ಪಡೆ ಸ್ಮ್ಯಾಶ್ ಗೇಮ್ .. ಹೌದು ಹೊರ ರಾಜ್ಯಗಳಲ್ಲಿ ಈಗಾಗಲ್ಲೇ ಬಹಳಷ್ಟು ಪ್ರಸಿದ್ಧವಾಗಿರು ಸ್ಮ್ಯಾಶ್ ಗೇಮಿಂಗ್ ಸಂಸ್ಥೆ ಇದೀಗ ಸಿಲಿಕಾನ್ ಸಿಟಿಯಲ್ಲಿ ಮೊಟ್ಟ ಮೊದಲ ಬಾರಿಗೆ ಟ್ರಿನಿಟಿ ವೃತ್ತದಲ್ಲಿರುವ ಒನ್ ಎಂ.ಜಿ. ಮಾಲ್​​ನಲ್ಲಿ ಪ್ರಾರಂಭ ಮಾಡಿದೆ..

image


ವೀಕೆಂಡ್ ನಲ್ಲಿ ಸಿಲಿಕಾನ್ ಸಿಟಿ ಮಂದಿ ಇಲ್ಲಿಗೆ ಹೋದ್ರೆ ಸಖತ್ ಎಂಜಾಯ್ ಮಾಡಬಹುದು.. ಬೇರೆ ಸಂಸ್ಥೆಗಳ ಗೇಮ್ ಗಿಂತ ಈ ಸ್ಮ್ಯಾಶ್ ನಲ್ಲಿ ಹೊಸ ಪರಿಕಲ್ಪನೆಗಳಿಂದ ಅಭಿವೃದ್ಧಿಪಡಿಸಿರುವ ಸಖತ್ ಡಿಫರೆಂಟ್ ಹಾಗೂ ಥ್ರಿಲಿಂಗ್ ಗೇಮ್ ಗಳು ಇವೆ.. ಅಷ್ಟೇ ಅಲ್ಲದೇ ದಣಿವಾದಾಗ ಸವಿಯಲು ಬಗೆಬಗೆಯ ಹಣ್ಣಿನ ರಸ, ಪಾನೀಯಗಳು ಹಾಗೂ ರುಚಿಕರವಾದ ತಿನಿಸುಗಳು ದೊರೆಯುವ ಮೈಟಿ ರೆಸ್ಟೊರೆಂಟ್, ಸಂಜೆ ಸ್ನೇಹಿತರೊಂದಿಗೆ ಮದಿರೆ ಸೇವಿಸುತ್ತಾ ಬೇಸರ ಕಳೆಯಲು ಮಿನಿ ಬಾರ್. ಒಟ್ಟಾರೆ ಕುಟುಂಬದ ಎಲ್ಲ ಸದಸ್ಯರೂ ಒಂದೆಡೆ ಸೇರಿ ಸಮಯ ಕಳೆಯಲು ಹೇಳಿ ಮಾಡಿಸಿದ ಸ್ಥಳ ಇದಾಗಿದೆ.. ಇಲ್ಲಿ ಐದು ವರ್ಷದ ಮಕ್ಕಳಿಂದ 70 ವರ್ಷದವರೂ ಆಡಬಹುದಾದ 30ಕ್ಕೂ ಹೆಚ್ಚು ಆಟಗಳಿವೆ.

ಇದನ್ನು ಓದಿ: ಮಕ್ಕಳಿಗಾಗಿ ನಗರದಲ್ಲಿ ಮೈಂಡ್ ಗೇಮ್ಸ್ ಅರಮನೆ

image


ಏಳು ವರ್ಷ ಮೇಲ್ಪಟ್ಟವರಿಗೆ ಎಂಟರಿಂದ ಹತ್ತು ವರ್ಚ್ಯುವಲ್ ರಿಯಾಲಿಟಿ ಗೇಮ್ಸ್, ಟ್ವಿಲೈಟ್ ಬೌಲಿಂಗ್, 360 ಡಿಗ್ರಿ ಕ್ರಿಕೆಟ್, ಸೂಪರ್ ಕೀಪರ್, ಸೂಪರ್ ಸಾನಿಕ್ ಫುಟ್ಬಾಲ್, ಮಕ್ಕಳಿಗಾಗಿ ಕ್ಲಾಸಿಕ್ ಟ್ರಾಂಪಲಿಂಗ್ ಪ್ಲಾಟ್ ಹಾಗೂ ಆರ್ಕಿಡ್ ಗೇಮ್ಸ್ ಪರಿಚಯಿಸಲಾಗಿದೆ. ಕ್ರಿಕೆಟ್ ಪ್ರಿಯರಿಗಾಗಿ 360 ಡಿಗ್ರಿ ಕ್ರಿಕೆಟ್ ಗೇಮ್. ಇದನ್ನು ಏಳು ವರ್ಷ ಮೇಲ್ಪಟ್ಟರು ಮಾತ್ರ ಆಡಬಹುದು. ಈ ಆಟ ಆಡುವ ಮೊದಲು ತಮ್ಮ ಅನುಭವಕ್ಕೆ ತಕ್ಕಂತೆ ಬಿಗಿನರ್, ಅಮೆಚ್ಯುರ್, ಕೌಂಟಿ, ರಾಷ್ಟ್ರೀಯ, ಅಂತರರಾಷ್ಟ್ರೀಯ ಹೀಗೆ ಐದು ಹಂತಗಳಲ್ಲಿ ಯಾವುದಾದರೂ ಒಂದು ಹಂತವನ್ನು ಆಯ್ಕೆ ಮಾಡಿಕೊಳ್ಳಬಹುದು. ನಂತರ ತಮಗೆ ಯಾವ ಬೌಲರ್ ಹಾಗೂ ಯಾವ ರೀತಿಯ ಬೌಲಿಂಗ್ ಬೇಕು ಎಂದು ಆಯ್ಕೆ ಮಾಡಿಕೊಂಡು, 15 ನಿಮಿಷ ಅಥವಾ ಮೂರು ಓವರ್ ಆಟವಾಡಬಹುದು. ಕ್ರಿಕೆಟ್ ಪಿಚ್ ಸುತ್ತಲೂ ಅಳವಡಿಸಿರುವ ಸೆನ್ಸರ್ಗಳು ಚೆಂಡಿನ ಮತ್ತು ಬ್ಯಾಟ್ ಬೀಸಿದ ವೇಗವನ್ನು ಆಧರಿಸಿ ಸ್ಕೋರ್ ತಿಳಿಸುತ್ತದೆ..ಸೂಪರ್ ಸಾನಿಕ್ ಫುಟ್ಬಾಲ್, ಸೂಪರ್ ಕೀಪರ್ ಹೀಗೆ ಹಲವಾರು ಆಟಗಳಿವೆ. ಇವುಗಳೊಂದಿಗೆ ವರ್ಚುವಲ್ ರಿಯಾಲಿಟಿ ಗೇಮ್ಸ್ ಇಲ್ಲಿನ ಪ್ರಮುಖ ಆಕರ್ಷಣೆ.

image


ಏಕಕಾಲದಲ್ಲಿ 300 ಮಂದಿ ಆಟವಾಡುವಷ್ಟು ಸ್ಥಳಾವಕಾಶ ಹೊಂದಿರುವ ‘ಸ್ಮ್ಯಾಶ್’ನಲ್ಲಿ ಭಾಗವಹಿಸಲು ಆನ್​ಲೈನ್ ಬುಕಿಂಗ್ ಸಹ ಮಾಡಬಹುದು. ಅಂದರೆ http://smaaash.in/ ವೆಬ್​ಸೈಟ್​​ಗೆ ಹೋಗಿ ನಿಮ್ಮ ಸಂಪೂರ್ಣ ಮಾಹಿತಿ ದಾಖಲಿಸಿ, ಸಂಪರ್ಕಿಸಲು ದೂರವಾಣಿ ಸಂಖ್ಯೆ ನೀಡಿದರೆ ಸಾಕು. ನಿಮಗೆ ಸ್ಮ್ಯಾಶ್ ಸಿಬ್ಬಂದಿ ಕರೆ ಮಾಡಿ ಬುಕ್ ಮಾಡಿಕೊಳ್ಳುತ್ತಾರೆ. ಇಲ್ಲಿ ಆಟವಾಡಲು ಕಾರ್ಡ್​ಗಳನ್ನು ಪಡೆಯಬಹುದು. ಎಲ್ಲ ಆಟಗಳನ್ನು ಆಡಲು ಎರಡು ಸಾವಿರ ಮೌಲ್ಯದ ಕಾರ್ಡ್ ಖರೀದಿಸಿದರೆ, ಅದನ್ನು ಆರು ತಿಂಗಳಿನ ಒಳಗೆ ಯಾವಾಗ ಬೇಕಾದರೂ ಬಳಸಿಕೊಳ್ಳಬಹುದು.

ಇದನ್ನು ಓದಿ

1. ಕಸ ದಿಂದ ರಸ, ಮನೆಯಲ್ಲೇ ಬೆಳೆಯಿರಿ ತಾಜಾ ತರಕಾರಿ..!

2. ಒನ್ ಡೇ ರೆಸ್ಟೋರೆಂಟ್‍ನಲ್ಲಿ ವಿಕೆಂಡ್ ಮಸ್ತಿ

3. ವಿಶ್ವಾದ್ಯಂತ ಇರುವ ಕನ್ನಡಿಗರಿಗೆ ಇಂಟರ್​ನೆಟ್​ನಲ್ಲಿ ರೇಡಿಯೋ ಕೇಳಿಸಲಿದೆ ನಮ್ ರೇಡಿಯೋ ತಂಡ; ಯಾಕಂದ್ರೆ ಕನ್ನಡ ಕೇಳೋ ಮಜಾನೇ ಬೇರೆ!!

Add to
Shares
4
Comments
Share This
Add to
Shares
4
Comments
Share
Report an issue
Authors

Related Tags