ಆವೃತ್ತಿಗಳು
Kannada

ವಾಟ್ಸ್​​ಆ್ಯಪ್ ಗೂಢಲಿಪೀಕರಣ ನಿಮಗೆಷ್ಟು ಗೊತ್ತು..?

ಎನ್ಎಸ್​ಆರ್​

YourStory Kannada
16th Apr 2016
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ವಾಟ್ಸ್​​ಆ್ಯಪ್​​ನಲ್ಲಿ ನಿಮಗೆ ಎನ್ಕ್ರಿಪ್ಷಿನ್ ಎನ್ನುವ ಹೊಸ ಆಯ್ಕೆ ಕಾಣ್ತಾ ಇದೆಯಾ? ಏನಿರಬಹುದು ಇದು ಅನ್ನೋ ಕುತೂಹಲಕ್ಕೆ ಇಲ್ಲಿದೆ ಕಿರು ಮಾಹಿತಿ. ಎನ್ಕ್ರಿಪ್ಷಿನ್ ಅಂದ್ರೆ ಗೂಢಲಿಪೀಕರಣ. ವಾಟ್ಸ್​​ಆ್ಯಪ್​​ ಬಳಕೆದಾರರ ಮಧ್ಯೆ ವಿನಿಮಯವಾಗುವ ಎಲ್ಲ ಮಾಹಿತಿಗಳನ್ನು ಭದ್ರವಾಗಿಡುವ ಸಲುವಾಗಿ ಇದನ್ನು ಭಾರತದಲ್ಲಿ ಪರಿಚಯಿಸಲಾಗಿದೆ. ವಾಟ್ಸ್​​ಆ್ಯಪ್​​ ನಲ್ಲಿ ನಾವು ಕಳುಹಿಸುವ ಸಂದೇಶ, ಚಿತ್ರ, ವಿಡಿಯೋ, ಮತ್ತಿತರ ಎಲ್ಲ ದಾಖಲೆಗಳನ್ನು ಯಾರೂ ಕದಿಯದಂತೆ ಮಾಡಲು ಇದು ಉತ್ತಮ ಪರಿಹಾರವಾಗಿದೆ. ಬಳಕೆದಾರರ ಖಾಸಗಿತನ ಕಾಪಾಡುವುದೇ ಇದರ ಪ್ರಮುಖ ಉದ್ದೇಶವಾಗಿದೆ.

image


ನಾವು ಕಳುಹಿಸುವ / ಸ್ವೀಕರಿಸುವ ಎಲ್ಲ ಸಂದೇಶಗಳನ್ನು ಯಾರೂ ಕದಿಯಲಾಗದಂತೆ ಮಾಡುವ ಸಲುವಾಗಿ ವಾಟ್ಸ್​​ಆ್ಯಪ್​​ ಈ ಕ್ರಮ ಕೈಗೊಂಡಿದೆ. ಇದರಿಂದಾಗಿ ಬಳಕೆದಾರರ ವೈಯಕ್ತಿಕ ಮಾಹಿತಿ ಇತರರಿಗೆ ದೊರೆಯುವುದಿಲ್ಲ.

image


ಈ ಮೊದಲು ವಾಟ್ಸ್​​ಆ್ಯಪ್​​ ಎಲ್ಲ ಬಗೆಯ ಸಂದೇಶಗಳ ವಿವರಗಳನ್ನು ಸಂಗ್ರಹಿಸುತ್ತಿತ್ತು. ಆದರೆ ಇನ್ನು ಮುಂದೆ ವಾಟ್ಸ್​​ಆ್ಯಪ್​​ಯಾವುದೇ ಬಗೆಯ ಸಂದೇಶಗಳ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. ಇದರಿಂದಾಗಿ ಬಳಕೆದಾರರ ಯಾವುದೇ ಮಾಹಿತಿಯನ್ನು ಬೇರೆಯವರು ನೋಡಲು ಸಾಧ್ಯವಿಲ್ಲ. ಸಂದೇಶ ಕಳುಹಿಸಿದ ಮತ್ತು ಸ್ವೀಕರಿಸಿದವರಿಗೆ ಮಾತ್ರ ಇದು ಸಾದ್ಯ. ಆದ್ದರಿಂದ ಇನ್ನು ಮುಂದೆ ವಾಟ್ಸ್​​ಆ್ಯಪ್​​ನಲ್ಲಿ ನಡೆಸುವ ಸಂವಹನಗಳ ಮೇಲೆ ಕಣ್ಣಿಡಲು ಯಾರಿಗೂ ಸಾಧ್ಯವಿಲ್ಲ. ಬಳಕೆದಾರರು ಕೂಡ ಈಗ ನಿಶ್ಚಿಂತೆಯಿಂದ ಚಾಟ್ ಮಾಡಬಹುದು.

ಇದನ್ನು ಓದಿ:

1. ಎಸ್ಕೇಪ್ ಹಂಟ್- ಡಿಟೆಕ್ಟಿವ್ ರಹಸ್ಯ ಭೇದಿಸುತ್ತಾ...

2. ಉತ್ತರ ಕರ್ನಾಟಕದ ಸವಿರುಚಿ ಬಯಸುವವರಿಗೆ ಸ್ವರ್ಗ ಹೊಟೇಲ್ ನಳಪಾಕ..

3. ಮನೆ ಪೀಠೋಪಕರಣ ಬಾಡಿಗೆಗೆ ಬೇಕಾ? JUSTonRENT.Com ಗೆ ಲಾಗ್ ಇನ್ ಆಗಿ

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags