ಆವೃತ್ತಿಗಳು
Kannada

ಸಿಲಿಕಾನ್​ ಸಿಟಿಯಲ್ಲಿ ಟ್ರಾಂಪೋಲಿನ್​ ಟ್ರೆಂಡ್​- ಬೆಂಗಳೂರಿನಲ್ಲಿದೆ ಅತಿ ದೊಡ್ಡ ಪ್ಲೇ ಸ್ಟೇಷನ್​..!

ಟೀಮ್​ ವೈ.ಎಸ್​. ಕನ್ನಡ

12th May 2017
Add to
Shares
8
Comments
Share This
Add to
Shares
8
Comments
Share

ಬಾಹುಬಲಿಯಲ್ಲಿ ಪ್ರಭಾಸ್‌ ಬೆಟ್ಟದಿಂದ ಬೆಟ್ಟಕ್ಕೆ ಜಿಗಿಯುತ್ತಿರುವುದನ್ನು ಕಂಡ ನಮಗೂ ಆ ತರ ಹಾರುವ ಅನುಭವ ಬೇಕು ಎನಿಸುತ್ತದೆ. ಅಂತಹದ್ದೊಂದು ಅವಕಾಶವನ್ನು ನೀವು ಬೆಂಗಳೂರಿನಲ್ಲೇ ಪಡೆಯಬಹುದು. ಒಮ್ಮೆ ನೆಗೆದರೆ, ಆಕಾಶ ಮುಟ್ಟಿದಅನುಭವ. ಇಲ್ಲಿ ನಿಮ್ಮ ಕಾಲು ನೀವು ಹೇಳಿದ ಹಾಗೆ ಕೇಳುವುದಿಲ್ಲ. ಎಷ್ಟೋ ಎತ್ತರವನ್ನು ತಲುಪಿ, ಪುನಃ ಬಂದು ಕೆಳಕ್ಕೆ ಬೀಳುತ್ತೀರಿ. ಆದ್ರೂ ನಿಮಗೆ ಪೆಟ್ಟಾಗುವುದಿಲ್ಲ..! ಸರಿಯಾಗಿ ಹೆಜ್ಜೆಯೂರಿ ನಿಲ್ಲಲೂ ಆಗೋದಿಲ್ಲ. ಯಾಕೆ ಗೊತ್ತಾ? ನೀವು ಮತ್ತೆ ಮತ್ತೆ ಮೇಲಕ್ಕೆ ನೆಗೆಯುತ್ತಾ ಇರುತ್ತೀರಿ.

image


ಈ ಅನುಭವ ನಿಮದಾಗಬೇಕಾದರೆ ಎಲೆಕ್ಟ್ರಾನಿಕ್​ ಸಿಟಿಯ ಪ್ಲೇ ಫ್ಯಾಕ್ಟರಿಗೆ ಹೋಗಬೇಕು. ಅಲ್ಲಿ ಮೈದಾನದ ಮಾದರಿಯ ಟ್ರಾಂಪೊಲಿನ್ ಸ್ಪೇಸ್​​​ನಲ್ಲಿ ನೀವು ಆಡಿದ್ದೇ ಆಟ. ಟ್ರಾಂಪೊಲಿನ್ ಮೇಲೆ ಒಮ್ಮೆ ನೆಗೆದರೆ, ಮತ್ತೆ ಮತ್ತೆ ಚೆಂಡು ಪುಟಿದಂತೆ ನೀವು ಮತ್ತೆ ಮೇಲೆ ಹೋಗುತ್ತೀರಾ. ಇಂತಹ ಆಟವನ್ನು ನೀವು ಬಿಂದಾಸ್‌ ಆಗಿ ಆಡಿ ಸಂತೋಷವನ್ನು ನಿಮ್ಮದಾಗಿಸಿಕೊಳ್ಳಬಹುದು. ಇದರೆ ಜತೆಗೆ ಇನ್ನಷ್ಟು ಆಟಗಳು ಸಹ ಈ ಟ್ರಾಂಪೊಲಿನ್‌ ಸ್ಪೇಸ್‌ನಲ್ಲಿ ಇದೆ.

ಭಾರತದ ಅತಿ ದೊಡ್ಡ ಪ್ಲೇ ಸ್ಟೋರ್

ಟ್ರಾಂಪೊಲಿನ್‌ ಸ್ಪೇಸ್‌ ಭಾರತದ ಅತಿ ದೊಡ್ಡ ಪ್ಲೇ ಸ್ಟೋರ್ ಆಗಿದೆ. ಅಷ್ಟೇ ಅಲ್ಲದೆ ಇದು ಏಷ್ಯಾದಲ್ಲೇ ಎರಡನೇಯ ಸ್ಥಾನದಲ್ಲಿದೆ. ಹಾಗಾಗಿ ಇದು ಬೆಂಗಳೂರಿಗೆ ಒಂದು ಹೆಮ್ಮೆಯಾಗಿದೆ. ನೆಲದ ಮೇಲೆ ಹಾಸಿರುವ ಸಾಫ್ಟ್ ಪ್ಯಾಡ್ ಮೇಲೆ ನೀವೆಷ್ಟೇ ಎತ್ತರಿಂದ ಬಿದ್ದರೂ ಸ್ವಲ್ಪವೂ ಪೆಟ್ಟಾಗುವುದಿಲ್ಲ. ಸ್ವಲ್ಪವೂ ಮೈಕೈನೋವಾಗುವುದಿಲ್ಲ.

ಇದನ್ನು ಓದಿ: ಕೋಟಿಗಟ್ಟಲೆ ವ್ಯವಹಾರ ನಡೆಸಲು ಲಕ್ಷಗಟ್ಟಲೆ ಸಂಬಳ ಬರುವ ಕೆಲಸ ಬಿಟ್ಟ ಸಚಿನ್..!

ಉತ್ತಮ ವ್ಯಾಯಾಮ

 ಈ ಟ್ರಾಮ್‌ ಪೊಲಿನ್‌ನಲ್ಲಿರುವ ಮಾದರಿಯ ಆಟಗಳ ಬಗ್ಗೆ ನಾಸಾದ ವಿಜ್ಞಾನಿಗಳೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಈ ಟ್ರಾಂಪೊಲಿನ್ ಮೇಲೆ 10 ನಿಮಿಷ ಕುಣಿದರೆ ನೀವು 30 ನಿಮಿಷ ರನ್ನಿಂಗ್ ಮಾಡುವುದಕ್ಕೆ ಸಮ ಎಂದು ಅವರು ಹೇಳಿದ್ದಾರೆ. ಈ ಟ್ರಾಮ್‌ ಪೊಲಿನ್‌ನಲ್ಲಿ ಆಟಗಳು ದಪ್ಪ ಇರುವವರು ಮತ್ತು ಕ್ಯಾಲೊರಿ ಕರಗಿಸಿಕೊಳ್ಳಲು ಅನುಕೂಲವಾಗುತ್ತದೆ. ಆಟ ಆಡಿ ಮಜಾ ಮಸ್ತಿ ಮಾಡುವುದಲ್ಲದೇ, ದಪ್ಪಗೆ ಇದ್ದವರು ಕ್ಯಾಲೊರಿ ಕರಗಿಸಿಕೊಳ್ಳಬಹುದು. ಇಷ್ಟೆಲ್ಲ ಅನುಕೂಲವಾಗುವಂತಹ ಒಂದೊಳ್ಳೆ ತಾಣವಾಗಿದೆ ಟ್ರಾಮ್‌ ಪೊಲಿನ್. ಥೇಟ್ ಸ್ಪ್ರಿಂಗ್ ಮೇಲೆ ಬಿದ್ದು ಜಿಗಿದಂತೆ ಫೀಲ್ ಆಗುವ ಈ ಪ್ಯಾಡ್ ಮೇಲೆ ನೀವು ಹಕ್ಕಿಯಂತೆ ಫೀಲ್‌ ಮಾಡುತ್ತೀರಾ.

image


ಹಲವು ಆಟಗಳು

ಈ ಟ್ರಾಮ್‌ ಪೊಲಿನ್‌ನಲ್ಲಿ ಇನ್​ಡೋರ್ ಸ್ಟೇಡಿಯಂ ರೀತಿ ಇದನ್ನು ಕಟ್ಟಲಾಗಿದೆ. ಈ ರೀತಿಯೇ ಇರುವ ಪ್ಲೇ ಫ್ಯಾಕ್ಟರಿಯಲ್ಲಿ ನಾಲ್ಕೈದು ಕೋಣೆಯ ಮಾದರಿಯ ಬಾಕ್ಸ್​​ಗಳನ್ನು ನಿರ್ಮಿಸಲಾಗಿದೆ. ಈ ಬಾಕ್ಸ್‌ಗಳಲ್ಲಿ ಸಾಹಸಕ್ಕೆ ಅನುಕೂಲವಾಗುವಂತಹ ಹಲವು ಮಾದರಿಯ ಆಟಗಳನ್ನು ಹೋದವರು ಆಡಬಹುದು.

ಫುಟ್ಬಾಲ್‌,ಬಾಸ್ಕೇಟ್‌ ಬಾಲ್‌ ಆಡಬಹುದು

ಈ ಟ್ರಾಮ್‌ ಪೊಲಿನ್‌ನಲ್ಲಿ ನೀವು ಪ್ರಭಾಸ್‌ನಂತೆ ಜಿಗಿಯಬಹುದು, ಜಾಕೀಚಾನ್‌ನಂತೆ ಜಂಪ್‌ ಮಾಡಬಹುದು, ಜತೆಗೆ ವಿರಾಟ್‌ ಕೊಹ್ಲಿಯಂತೆ ಡೈವ್​ ಹೊಡೆಯಬಹುದು. ಫುಟ್‌ಬಾಲ್‌ ಲೋಕದ ಧೃವತಾರೆ ಮೆಸ್ಸಿಯಂತೆ ನೀವು ಜಿಗಿಯಲೂ ಬಹುದು. ಅದು ಹೇಗೆ ಎಂದರೆ ಇಲ್ಲಿ ಇನ್​ಡೋರ್ ಕ್ರಿಕೆಟ್, ಇನ್​ಡೋರ್ ಫುಟ್‌ಬಾಲ್ ಆಡಲೂ ವ್ಯವಸ್ಥೆಯಿದೆ. ಬಾಸ್ಕೆಟ್ ಬಾಲ್,ಕಬಡ್ಡಿಯನ್ನೂ ಇಲ್ಲಿ ಆಡಬಹುದು. ಇಲ್ಲಿಗೆ ಹೋದರೆ ನೀವು ನಿಮ್ಮ ಮನಸ್ಸಿನ ಸಂತೋಷವನ್ನಷ್ಟೇ ಅಲ್ಲದೇ ದೇಹ ಆರೋಗ್ಯಕ್ಕೆ ಅನುಕೂಲವಾಗುವಂತಹ ಸಾಕಷ್ಟು ಆಟಗಳು ಸಹ ಇಲ್ಲಿವೆ. ಅವೆಲ್ಲವನ್ನು ಹಾಡಿ ಎಂಜಾಯ್‌ ಮಾಡಬಹುದು.

ನೆಗೆಯುತ್ತಲೇ ಸೆಲ್ಫಿಗೆ ಅವಕಾಶ

ಈ ಟ್ರಾಮ್‌ ಪೊಲಿನ್‌ಗೆ ಬಂದು ಆಟ ಆಡುವವರು ಎಷ್ಟೋ ಮಂದಿ ನೆಗೆದಾಡುತ್ತಲೇ ಸೆಲ್ಫಿತೆಗೆದುಕೊಳ್ಳುತ್ತಾರೆ. ಅದನ್ನು ಎಂಜಾಯ್‌ ಮಾಡುತ್ತಾರೆ. ಈ ಒಟ್ಟಿನಲ್ಲಿ ಟ್ರಾಮ್‌ ಪೊಲಿನ್‌ ಪ್ಲೇ ಫ್ಯಾಕ್ಟರಿ ಮಕ್ಕಳು ಸೇರಿದಂತೆ ಎಲ್ಲ ವರ್ಗದವರಿಗೆ ಮನರಂಜನೆ ಪೂರೈಸುವ ಮೈದಾನವಂತೂ ಹೌದು.

ಇದನ್ನು ಓದಿ:

1. ವಾಯುಸೇನೆಯಲ್ಲಿ ಮಹಿಳೆಯರ ಪವರ್- ಯುದ್ಧವಿಮಾನಗಳಲ್ಲಿ ಮಹಿಳಾ ಪೈಲಟ್​ಗಳ ದರ್ಬಾರ್

2. ಟೆರೆಸ್​ ಮೇಲೆ ಬೆಳೆಯುತ್ತೆ ತರಕಾರಿ-ತಪ್ಪಿ ಹೋಯಿತು ಕಸದ ಕಿರಿಕಿರಿ..!

3. ಪತ್ರಕರ್ತನ ಸ್ಟಾರ್ಟ್​ಅಪ್ ಉದ್ಯಮ- "ನದಿಮನೆ"ಯಲ್ಲಿ ಪ್ರವಾಸಿಗರಿಗೆ ಸಿಗುತ್ತೆ ಸಂಭ್ರಮ

Add to
Shares
8
Comments
Share This
Add to
Shares
8
Comments
Share
Report an issue
Authors

Related Tags