ಆವೃತ್ತಿಗಳು
Kannada

ಬದುಕಿಗೆ ಹೊಸ "ದಿಕ್ಕು" ತೋರುವ ಜೀವಸೆಲೆ "ನರ್ಮದಾ"

ಟೀಮ್​ ವೈ.ಎಸ್​.ಕನ್ನಡ

30th Dec 2016
Add to
Shares
16
Comments
Share This
Add to
Shares
16
Comments
Share

ಧಾರವಾಡ ಸಿಟಿಯ ಬಗ್ಗೆ ಗೊತ್ತಿರುವವರಿಗೆ ಥಟ್ಟಂತ ನೆನಪಾಗೋದು- ಕವಿ ದ.ರಾ.ಬೇಂದ್ರೆ, ಮನಸೂರೆಗೊಳ್ಳೋ ತಣ್ಣನೆಯ ಸಿಟಿ, ಸಾಹಿತ್ಯದ ಚಟುವಟಿಕೆಗಳು, ಇದಕ್ಕೂ ಹೆಚ್ಚೆಂದರೆ ಹಲವು ಮಂದಿ ದಿಗ್ಗಜರನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದ ಕರ್ನಾಟಕ ವಿಶ್ವ ವಿದ್ಯಾಲಯ. ಆದರೆ ಇದೇ ಧಾರವಾಡ ನಗರದ ಸ್ಲಮ್ ಗಳ ಬಗ್ಗೆ ಯಾರಾದರೂ ಮಾತನಾಡಿದ್ದು ಕಂಡಿದ್ದೀರಾ? ಧಾರವಾಡದ ಸ್ಲಮ್ ಮಕ್ಕಳ ಬದುಕಿನ ದಿಕ್ಕನ್ನೇ ಬದಲಿಸುತ್ತಿರುವ ಜೀವಸೆಲೆಯೊಂದರ ಬಗ್ಗೆ ಗೊತ್ತಾ? ಧಾರವಾಡ ಅನ್ನೋ ಶಿಕ್ಷಣಕಾಶಿಯ ಸ್ಲಮ್ ಗಳ ಮಕ್ಕಳ ದಿಕ್ಕನ್ನೇ ಬದಲಿಸುತ್ತಿರುವ ಅಮ್ಮನನ್ನು ಭೇಟಿಯಾಗ್ಬೇಕು ಅಂದ್ರೆ ನೇರವಾಗಿ ಧಾರವಾಡ ಶ್ರೀನಗರ ಸರ್ಕಲ್ ಗೆ ಬನ್ನಿ. ನಿಮಗೆ ಧಾರವಾಡದ ಬಗೆಗಿನ ಹೊಸ ಪ್ರಪಂಚವೊಂದನ್ನು ತೋರಿಸುತ್ತದೆ.

image


ದಿಕ್ಕು ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್

ಸಾಹಿತ್ಯ ಲೋಕದ ಮೇರು-ಕೇಂದ್ರ ಸಾಹಿತ್ಯ ಅಕಾಡೆಮಿ ಪಡೆದುಕೊಂಡ ಉಗ್ರ ವಿಮರ್ಶಕರಾದ ಕೀರ್ತಿನಾಥ ಕುರ್ತಕೋಟಿಯವರ ನೆನಪಿನಲ್ಲಿ ಜೀವತಳೆದದ್ದೇ ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್. ಹಲವು ಮಂದಿ ಸಾಹಿತ್ಯ ಪ್ರೇಮಿಗಳ ಶ್ರಮದಿಂದ ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್ ಇಂದಿಗೂ ಅದ್ಭುತ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ. ಇದೇ ಟ್ರಸ್ಟ್​ನ ಮತ್ತೊಂದು ಶ್ಲಾಘನೆಯೆ ಕೆಲಸ ಮತ್ತು ಅದರ ಬೆನ್ನೆಲುಬಾಗಿ ನಿಂತವರೇ ನರ್ಮದಾ ರಾಮ ಕುರ್ತಕೋಟಿ.

ಇದನ್ನು ಓದಿ: ಹೊಸ ವರ್ಷದಲ್ಲಿ ಕಾಲ ಕಳೆಯೋದು ಹೇಗೆ..?- ಹಾಲಿಡೇ ಪ್ಲಾನ್ ಬಗ್ಗೆ ಯೋಚನೆ ಮಾಡಿ..!​

ಅಕ್ಷರಶಃ ನರ್ಮದಾ ಕುರ್ತಕೋಟಿಯವರ ಬೆನ್ನಿಗಿರುವುದು ರಾಮಸೇನೆಯೇ. ಸ್ಲಮ್ ಮಕ್ಕಳ ಪಾಲಿಗೆ ನರ್ಮದಾ, ಅವರ ಬದುಕಿನ ದಿಕ್ಕನ್ನೇ ಬದಲಿಸುತ್ತಿರುವ ಅಮ್ಮ. 2005 ರಲ್ಲಿ ಕರ್ತಕೋಟಿ ಮೆಮೊರಿಯಲ್ ಟ್ರಸ್ಟ್ ನ ಹೊಸ ಆಶಾಕಿರಣವಾಗಿ ಮೂಡಿದ್ದು "ದಿಕ್ಕು".

image


ಧಾರವಾಡದ ಸ್ಲಮ್ ಮಕ್ಕಳಿಗೆ ಉಳಿದೆಲ್ಲ ಮಕ್ಕಳಂತೆ ಬದುದಿನ ದಾರಿಯೇ ಮುಚ್ಚಿಹೋಗಿತ್ತು. ಅವರ ನೋವು, ಶಿಕ್ಷಣದಿಂದ ವಂಚಿತರಾಗದ್ದವರ ಅಳಲು ತಟ್ಟಿದ್ದು ನರ್ಮದಾ ಅಮ್ಮ ಮತ್ತು ಟ್ರಸ್ಟ್ ನ ಸದಸ್ಯರಿಗೆ. ದಿಕ್ಕು ಅನ್ನೋ ಸಂಸ್ಥೆಯನ್ನು ಪ್ರಾರಂಭಿಸಿ ಸ್ಲಮ್ ನಿವಾಸಿಗಳಲ್ಲಿ ಶಿಕ್ಷಣ ಕ್ರಾಂತಿಯ ಬೀಜ ಬಿತ್ತಿರುವ ದಿಕ್ಕು ಅಕ್ಷರಶಃ ಕೊಳಗೇರಿಯ ಹೊಸ ದಿಕ್ಕೇ.

" ದಿಕ್ಕು ಟ್ರಸ್ಟ್ ಹತ್ತಾರು ಸಾಮಾಜಿಕ ಬದಲಾವಣೆಯ ಕೆಲಸಗಳನ್ನು ನಿರಂತರ ಮಾಡಿಕೊಂಡು ಬಂದಿದೆ. ಶಾಲೆಗಳಿಂದ ದೂರವಿರೋ ಸ್ಲಮ್ ಮಕ್ಕಳನ್ನು ಶಾಲೆಯ ಅಂಗಳಕ್ಕೆ ತರಲಾಗುತ್ತಿದೆ, ಶಾಲೆಗೆ ಹೋಗುತ್ತಿದ್ದರೂ ಕೂಡ ಓದಿನಲ್ಲಿ ಹಿಂದೆ ಉಳಿದಿರೋ ಮಕ್ಕಳಿಗೆ ನಿರಂತರ ಮಾರ್ಗದರ್ಶನ ಅಮ್ಮನ ನೆರವಿನಿಂದ ಸಿಗ್ತಿದೆ, ಸ್ಲಮ್ ನಿವಾಸಿ ಮಕ್ಕಳು ಕೇವಲ ಓದಿನಲ್ಲಿ ಹಿಂದಿರೋದಕ್ಕೆ ಅವರ ಸುತ್ತಮುತ್ತಲ ವಾತಾವರಣವೂ ಕೂಡ ಕಾರಣ. ಹೀಗಾಗಿಯೇ ದಿಕ್ಕು ಟ್ರಸ್ಟ್ ಕೇವಲ ಪುಸ್ತಕದ ಬದನೆಕಾಯಿಯಲ್ಲ, ಅಂತಹ ಮಕ್ಕಳ ಪೋಷಕರಲ್ಲೂ ಹಲವು ರೀತಿಯ ಸಾಮಾಜಿಕ ಬದಲಾವಣೆಗಳನ್ನು ತಂದಿರೋ ಸಾರ್ಥಕತೆ ಜೀವಸೆಲೆ" 
- ನರ್ಮದಾ ಕುರ್ತಕೋಟಿ, ದಿಕ್ಕು ಟ್ರಸ್ಟ್ ಮುಖ್ಯಸ್ಥೆ

ಪ್ರತಿವರ್ಷವೂ ಶಾಲಾ ರಜಾ ದಿನಗಳಲ್ಲಿ ಪೋಕರಿತನಕ್ಕೆ ಬೀಳೋ ಮಕ್ಕಳಿಗೆಲ್ಲ ದಿಕ್ಕು ತೋರೋದು ಕ್ರಿಯೇಟಿವ್ ಶಿಬಿರಗಳು. ಜ್ಷಾನಪೀಠ ಸಾಹಿತಿ ಗಿರೀಶ್ ಕಾರ್ನಾಡರಿಂದ ಹಿಡಿದು ಅಪ್ರತಿಮ ಕಲಾವಿದರೆಲ್ಲ ಸ್ಲಮ್ ನಿವಾಸಿಗಳ ಬದುಕು ಬದಲಿಸಲು ಶಿಬಿರಗಳ ಸಾರಥ್ಯ ವಹಿಸುತ್ತಾರೆ. ಕಲಾಕೃತಿಗಳು, ಚಿತ್ರಗಳು, ಓದು, ಬರಹ, ಕ್ರೀಡೆ, ಸಾಹಿತ್ಯ, ಯೋಗ, ಧ್ಯಾನ ಸೇರಿದಂತೆ ಶಿಬಿರಗಳಲ್ಲಿ ನಡೆಯೋ ಕ್ರಿಯಾಶೀಲ ಚಟುವಟಿಕೆಗಳಿಂದಾಗಿ ದಿಕ್ಕು ಮೆಮೋರಿಯಲ್ ಟ್ರಸ್ಟ್ ಧಾರವಾಡದ ಮನೆಮಾತಾಗಿದೆ. ಶಿಬಿರಗಳಲ್ಲಿ ನುರಿತ ಮಕ್ಕಳ ಅದ್ಭುತ ನೃತ್ಯ, ನಾಟಕಗಳನ್ನು ಕಂಡವರು ನರ್ಮದಾ ಮತ್ತು ಟ್ರಸ್ಟ್ ನ ಶ್ರಮಕ್ಕೆ ಹ್ಯಾಟ್ಸ್​ ಆಪ್ ಹೇಳಿಯೇ ತೆರಳೋದು.

image


ಅಗತ್ಯವಿರೋ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ನಡೆಯುತ್ತೆ, ಕೇವಲ ಅಕ್ಷರ ಕಲಿಸಿಕೊಟ್ಟರೆ ಸಾಕಾ? ಮಕ್ಕಳ ಆರೋಗ್ಯದ ಹೊಣೆಯನ್ನೂ ಕೆಲವೊಮ್ಮೆ ದಿಕ್ಕು ತನ್ನ ಹೆಗಲ ಮೇಲೆ ಹೊತ್ತುಕೊಂಡಿದೆ, ಸ್ಲಮ್ ನಿವಾಸಿಗಳಲ್ಲಿ ನೈತಿಕತೆ ಮತ್ತು ಸಂಸ್ಕಾರಭರಿತ ಶಿಕ್ಷಣದಿಂದಲೇ ದಿಕ್ಕು ಧಾರವಾಡದ ಹೆಮ್ಮೆಯ ಸಂಸ್ಥೆಗಳಲ್ಲೊಂದು.

ಇದನ್ನು ಓದಿ:

1. ನಾಟಿ ಫ್ಯಾಕ್ಟರಿಯ Naughty ಸ್ಟೋರಿ..!

2. ಸನ್ಯಾಸಿ, ಯೋಗ ಗುರು, ಉದ್ಯಮಿ, ಕುಂಚ ಕಲಾವಿದ ಸಕಲಕಲಾ ವಲ್ಲಭ ಭರತ್ ಠಾಕುರ್

3. ನಿಮಗಿಷ್ಟವಿರುವ ಕೆಲಸ ಮಾಡಿ- ಕೈ ತುಂಬಾ ಸಂಬಳ ಪಡೆಯಿರಿ

Add to
Shares
16
Comments
Share This
Add to
Shares
16
Comments
Share
Report an issue
Authors

Related Tags