ಆವೃತ್ತಿಗಳು
Kannada

2ನೇ ವರ್ಗದ ನಗರಗಳಲ್ಲಿ ಮಾರಾಟ ನಂತರದ ಕೆಲಸಕ್ಕೆ ಜೈಪುರ ಮೂಲದ ಸೇವಾ ಈಗ ವಿಳಾಸವಾಗಿದೆ

ಆರ್​​.ಪಿ.

9th Nov 2015
Add to
Shares
2
Comments
Share This
Add to
Shares
2
Comments
Share

ರವಿ ರಾಯ್ಜದಗೆ ಸ್ಟಾರ್ಟ್‍ಅಪ್ ಹುಳ ಚಿಕ್ಕವನಿರುವಾಗಲೇ ತಲೆಗೆ ಹತ್ತಿತ್ತು. ಸಣ್ಣ ವಯಸ್ಸಲ್ಲೇ ಆತ 14 ಮಕ್ಕಳಿಗೆ ಕೋಚಿಂಗ್ ತರಗತಿಗಳನ್ನು ನಡೆಸುತ್ತಿದ್ದ. ಆದ್ರೆ ಸ್ವತಂತ್ರವಾಗಿ ತಾನೇ ಏನಾದರೊಂದು ವ್ಯಾಪಾರ ಮಾಡಬೇಕೆಂಬ ಆಸೆ ಆತನಲ್ಲಿ ಚಿಗುರುತ್ತಾ ಹೋಯ್ತು. ಆಗ ಗೃಹೋಪಯೋಗಿ ವಸ್ತುಗಳ ಸೇವೆಗಳು ಸಂಪರ್ಕಕ್ಕೆ ಸಿಗುತ್ತಿರಲಿಲ್ಲ, ಅಲ್ಲದೇ ಗುಣಮಟ್ಟದ ದೃಢೀಕರಣವೂ ಇರದೇ ಇದ್ದುದನ್ನು 2010ರಲ್ಲೇ ರವಿ ಗುರುತಿಸಿದ್ದ. ತನ್ನ ಮನೆಯಲ್ಲೇ ತನ್ನ ತಾಯಿಗೆ ಸದಾ ಒಂದಿಲ್ಲೊಂದು ಸಮಸ್ಯೆ ಕಾಡುತ್ತಿದ್ದುದು ಆತನ ಗಮನಕ್ಕೆ ಬಂದಿತ್ತು. ಈ ಅಂತರಕ್ಕೆ ಉತ್ತರ ಹುಡುಕಬೇಕಿತ್ತು.

image


ಸೇವಾ, ಒಂದು ಸೇವೆ

ಗೃಹೋಪಯೋಗಿ ವಸ್ತುಗಳ ದುರಸ್ತಿಗೆ ತಂತ್ರಜ್ಞರನ್ನು ಬೇಡಿಕೆ ಮೇಲೆ ಸರಬರಾಜು ಮಾಡುವ ಕೆಲಸವನ್ನು ಸೇವಾ ಮಾಡ್ತಿದೆ. ಮತ್ತು ಬಳಕೆ ಮಾಡಿದ ವಸ್ತುಗಳಿಗೆ ಉತ್ತಮ ಗ್ರಾಹಕರನ್ನು ಹುಡುಕೋ ಕಾರ್ಯಕ್ಕೂ ಸಂಸ್ಥೆ ಮುಂದಾಗಿದೆ. ಇದಲ್ಲದೇ ಇ-ತ್ಯಾಜ್ಯವನ್ನು ಕಡಿಮೆ ಮಾಡಲು ಪರಿಣಾಮಕಾರಿ ಮಾರ್ಗವನ್ನು ಸಂಸ್ಥೆ ಹುಡುಕುತ್ತಿದೆ. ರವಿಗೆ ಸೇವಾ ಕನಸಿನ ವ್ಯಾಪಾರಕ್ಕಿಂತಲೂ ಹೆಚ್ಚಿನದ್ದಾಗಿದೆ. ರಾಷ್ಟ್ರಮಟ್ಟದಲ್ಲಿ ಸೇವಾ ಬ್ರಾಂಡ್ ಅಭಿವೃದ್ಧಿ ಮಾಡಬೇಕೆಂಬ ಮಹದಾಸೆ ಇದೆ. “ಸ್ವಭಾವತಃ ನಾನು ಸಹಾಯ ಮಾಡಲು ಇಷ್ಟಪಡುತ್ತೇನೆ. ಆದ್ದರಿಂದ ವ್ಯಾಪಾರಕ್ಕೆ ಸೇವಾ ಎಂದು ಹೆಸರಿಟ್ಟೆ. ಎಲೆಯನ್ನು ನಮ್ಮ ವ್ಯಾಪಾರದ ಗುರುತಾಗಿ ಆಯ್ಕೆ ಮಾಡಿಕೊಂಡಿದ್ದಿವಿ. ಜೀವ ಇರೋವರೆಗೂ ಮರ ಅಥವಾ ಪ್ರಕೃತಿ ಸೇವೆ ಮಾಡುತ್ತಲೇ ಇರುತ್ತದೆ”.

ಇತರೆ ಸ್ಪರ್ಧಿಗಳಂತೆ ಇವರದ್ದು ಆನ್‍ಲೈನ್ ಮಾರಾಟ ವೇದಿಕೆಯಲ್ಲ. ಈ ಸ್ಟಾರ್ಟ್‍ಅಪ್ ನಲ್ಲಿ ಸಕ್ರಿಯವಾಗಿ ಕೆಲಸ ಮಾಡುವ 47 ಜನರ ತಂಡವಿದೆ. ಇವರು ಜೈಪುರ, ಜೋಧ್‍ಪುರ, ದೆಹಲಿ, ಉದಯ್‍ಪುರ, ಪುಣೆ, ಗುರಗಾಂ ಮತ್ತು ನೋಯ್ಡಾಗಳಲ್ಲಿ ಸೇವೆ ಒದಗಿಸುತ್ತಾರೆ.

“ಕೇವಲ ಆನ್‍ಲೈನ್ ಮಾರುಕಟ್ಟೆಯನ್ನು ನೋಡಿಕೊಳ್ಳುವ ಇತರೆ ಸ್ಪರ್ಧಿಗಳಿಗಿಂತ ಭಿನ್ನವಾಗಿ ನಾವು ಪ್ರತಿಯೊಂದು ವ್ಯವಹಾರದಲ್ಲೂ ಆಳವಾಗಿ ತಲುಪಬೇಕಿದೆ. ನಮ್ಮ ಇತರೆ ಸ್ಫರ್ಧಿಗಳು ಕಡಿಮೆ ಸಂಪನ್ಮೂಲ ಮತ್ತು ಮೌಲ್ಯವನ್ನು ಹೊಂದಿದ್ದು, ಸ್ಥಳೀಯವಾಗಿ ಸೇವೆ ಒದಗಿಸುವವರು. ಕೇಂದ್ರೀಕರಿಸಿದ ಪ್ರದೇಶದಲ್ಲಿ ತಂಡದೊಂದಿಗೆ ಕೆಲಸ ಮಾಡೋ ಅವರು ಸ್ವಯಂ ಉದ್ಯೋಗಿಗಳು” ಎನ್ನುತ್ತಾನೆ ರವಿ.

ಸೇವಾ ವೆಚ್ಚ

ಗೃಹೋಪಯೋಗಿ ವಸ್ತುಗಳ ಬೆಲೆಯ ಆಧಾರದಲ್ಲಿ ಸೇವಾ ವೆಚ್ಚವನ್ನು ಪಡೆಯಲಾಗುತ್ತದೆ. ಸಾಮಾನ್ಯವಾಗಿ 300ರೂಗಳಿಂದ ಪ್ರಾರಂಭವಾಗಿ ಸಣ್ಣಪುಟ್ಟ ವಸ್ತುಗಳನ್ನು ಬದಲಾಯಿಸಬೇಕಿದ್ದಲ್ಲಿ ಅದಕ್ಕೆ ತಕ್ಕಂತೆ ವೆಚ್ಚವನ್ನು ಏರಿಸಲಾಗುತ್ತದೆ. ಸಂಸ್ಥೆಯು ಮುಂದುವರಿದ ವಾರಂಟಿ ಸೇವೆಯನ್ನು ವರ್ಷಕ್ಕೆ 2999ರಿಂದ 7999 ರೂಪಾಯಿಗಳಿಗೆ ಕೊಡುತ್ತಿದೆ. ಒಟ್ಟು 60000 ಬೆಲೆವರೆಗಿನ ವಸ್ತುಗಳಿಗೆ 2999 ಮತ್ತು 2ಲಕ್ಷದವರೆಗಿನ ವಸ್ತುಗಳಿಗೆ 7999 ಎಂದು ದರವನ್ನ ನಿಗದಿ ಮಾಡಲಾಗಿದೆ. ಈ ಅವಧಿಯಲ್ಲಿ ವಸ್ತುಗಳಿಗೆ ಏನೇ ಸಮಸ್ಯೆ ಬಂದರೂ ಅದನ್ನು ಖಚಿತವಾಗಿ ರಿಪೇರಿ ಮಾಡಿಕೊಡಲಾಗುತ್ತದೆ.

image


ಕಳೆದ ನಾಲ್ಕು ವರ್ಷದಲ್ಲಿ ಕಂಪನಿಯು ಸುಮಾರು 500% ಬೆಳೆದಿದೆ. 2011-12ರ 14 ಲಕ್ಷ ಆದಾಯಕ್ಕೆ ವಿರುದ್ಧವಾಗಿ 2014-15ರಲ್ಲಿ ಇದುವರೆಗೂ 70 ಲಕ್ಷದ ವಹಿವಾಟು ನಡೆದಿದೆ. ಸ್ಥಳೀಯವಾಗಿ ಸುಮಾರು 13 ಸಾವಿರ ಜನರಿಗೆ ಕಂಪನಿ ಸೇವೆ ಒದಗಿಸುತ್ತಿದೆ. ಅಲ್ಲದೇ ವೊಡಾಫೋನ್, ಇನ್ಫೋಸಿಸ್, ಎಸ್‍ಬಿಐ ನಂತಹ ದೊಡ್ಡ ದೊಡ್ಡ ಸಂಸ್ಥೆಗಳಿಗೂ ಸೇವಾ ಗಾಳ ಹಾಕಿದ್ದಾರೆ. ರವಿ ಹೇಳುವಂತೆ ಶೇಕಡಾ 40ರಷ್ಟು ಬೇಡಿಕೆ ಹಳೇ ಗ್ರಾಹಕರಿಂದಲೇ ಬರುತ್ತದಂತೆ. ಗ್ತಾಹಕರ ಮಾಹಿತಿಯೂ ಸಹ ಪ್ರತಿವರ್ಶ ಶೇ 30ರಷ್ಟು ಬೆಳವಣಿಗೆ ಕಂಡಿದೆ. ಮುಂದಿನ ವರ್ಷಗಳಲ್ಲಿ ಇದನ್ನು 60% ಮಾಡಿಕೊಂಡು ಮುನ್ನಡೆಯಬೇಕು ಅನ್ನೋದು ಇವನ ಆಸೆ.

ದಾರಿ ಮುಂದುವರಿದಂತೆ

ಉಪಯೋಗಿಸಿದ ಮತ್ತು ಹಳೆಯ ವಸ್ತುಳನ್ನು ಗ್ರಾಹಕರಿಗೆ ಸೇವಾ ವಾರಂಟಿ ಮುಖೇನ ಕೊಳ್ಳುವ ಹಾಗೂ ಮಾರಾಟ ಮಾಡುವ ಯೋಜನೆ ಹೊಂದಿದೆ. ಇದೇ ಸೇವೆಗಳು ಮೊಬೈಲ್ ಅಪ್ಲಿಕೇಷನ್ ಗಳ ಮೂಲಕ ಹೊರತಂದಿದ್ದು ಕೆಲವೆ ದಿನಗಳಲ್ಲಿ ಕಾರ್ಯನಿರ್ವಹಿಸಲಿದೆ. ಮುಂದಿನ ವರ್ಷದ ಮಧ್ಯಭಾಗದಲ್ಲಿ ಗುಜರಾತ್‍ನ ಅಹಮದಾಬಾದ್, ರಾಜ್‍ಕೋಟ್, ಸೂರತ್ ಮತ್ತು ವಡೋದರಾಗಳಲ್ಲಿ ಶಾಖೆಗಳನ್ನು ಪ್ರಾರಂಭಿಸುವ ಗುರಿ ಹೊಂದಿದ್ದಾರೆ.

image


ದೀರ್ಘಾವಧಿ ದೃಷ್ಟಿಕೋನದಲ್ಲಿ ಇ-ವೇಸ್ಟ್ ಮ್ಯಾನೇಜ್ಮೆಂಟ್ ಸಮಸ್ಯೆಯ ಬಗೆಗೂ ಸೇವಾ ಕಾಳಜಿ ವಹಿಸಲಿದೆ. “ಸಧ್ಯ ನಾವು ಯಂತ್ರಗಳ ದುರಸ್ತಿ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಇರೋದ್ರಿಂದ, ಆ ಯಂತ್ರ ಉಪಯೋಗಕ್ಕೆ ಅರ್ಹ ಅಥವಾ ಇಲ್ಲ ಎಂದು ಸುಲಭವಾಗಿ ಗುರುತಿಸಬಹುದು. ಇನ್ನು ಗ್ರಾಹಕರೇ ನಮ್ಮನ್ನು ಸಂಪರ್ಕಿಸಿ ಅವರಲ್ಲಿರೋ ಇ ತ್ಯಾಜ್ಯವನ್ನು ನಮ್ಮಲ್ಲಿ ಸುರಿಯೋ ಸಾಧ್ಯತೆಯೂ ಹೆಚ್ಚಿದೆ. ಮಾರುಕಟ್ಟೆ ಮತ್ತು ಸಾಗಾಟ ಈಗಾಗಲೇ ಇರೋದ್ರಿಂದ ಇದು ನಮಗೆ ಸುಲಭವಾಗಿ ದಕ್ಕುತ್ತದೆ” ಎನ್ನುತ್ತಾರೆ ಸಂಸ್ಥಾಪಕ ರವಿ.

ಯುವರ್ ಸ್ಟೋರಿ ಅಭಿಪ್ರಾಯ:

ಸಂಕೀರ್ಣತೆ ಮತ್ತು ಆಧುನಿಕತೆಯ ಸ್ಪರ್ಷದೊಂದಿಗೆ ವಿಭಿನ್ನವಾದ ಸ್ಥಳದಲ್ಲಿ ಸೇವಾ ಇ-ತ್ಯಾಜ್ಯವನ್ನು ಕೊಳ್ಳುವ ಮತ್ತು ಮಾರಾಟಮಾಡುವ ಕ್ಷೇತ್ರದಲ್ಲಿನ ಅನ್ವೇಷಣೆಯಲ್ಲಿ ತೊಡಗಿದೆ. ಸೇವಾಕರ್ತಕ ಮೌಲ್ಯಕ್ಕೆ ಇದು ನಿಜಕ್ಕೂ ಸ್ವಲ್ಪವಾದರೂ ಹಿನ್ನಡೆಯನ್ನುಂಟುಮಾಡಬಲ್ಲದು.

ಜತೆಗೆ ಇದೇ ಕ್ಷೇತ್ರದಲ್ಲಿ ಹೆಸರು ಮಾಡಿರೋ ಹ್ಯಾಂಡಿಹೋಂನಂತಹ ಆಟಗಾರರೊಂದಿಗೆ ಸಂಸ್ಥೆ ತೊಡೆತಟ್ಟಿ ನಿಂತಿದೆ. ಕಳೆದ ಕೆಲ ವರ್ಷಗಳಲ್ಲಿ ಗ್ರಾಹಕರಲ್ಲಿ ಆಕರ್ಷಣೆ ಮೂಡಿಸಿರೋ ಸೇವಾ ಇನ್ನು ಮುಂದೆ ಲಾಭದಾಯಕವಾಗಿ ಹೇಗೆಲ್ಲಾ ಹೆಜ್ಜೆ ಇಡುತ್ತದೆ ಅನ್ನೋ ಕುತೂಹಲವಿದೆ.

ವೆಬ್‍ಸೈಟ್-www.sevaservices.com

Add to
Shares
2
Comments
Share This
Add to
Shares
2
Comments
Share
Report an issue
Authors

Related Tags