ಆವೃತ್ತಿಗಳು
Kannada

ಸೆಲೆಬ್ರಿಟಿ ಬಾಲಿವುಡ್ ನಟರನ್ನು ಆಕರ್ಷಿಸುತ್ತಿರುವ ರೈಲ್ವೆ ಬಾಂಡ್

ಉಷಾ ಹರೀಶ್​

YourStory Kannada
2nd Mar 2016
Add to
Shares
4
Comments
Share This
Add to
Shares
4
Comments
Share

ಭಾರತೀಯರ ಜೀವನಾಡಿ ಎಂದೇ ಹೆಸರು ಗಳಿಸಿ, ಮಧ್ಯಮವರ್ಗದವರ ಸಂಚಾರದ ಮಾರ್ಗವಾಗಿರುವ ರೈಲ್ವೇ ಇದೀಗ ವಿಮಾನದಲ್ಲಿ ಸಂಚರಿಸುವ ಬಾಡಲಿವುಡ್ ನಟರು, ದೊಡ್ಡ ದೊಡ್ಡ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿರುವ ನೌಕರರನ್ನು ತನ್ನತ್ತ ಸೆಳೆಯುತ್ತಿದೆ.

ಅರೇ ರೈಲು ಹೇಗೆ ಇವರನ್ನೇಲ್ಲಾ ತನ್ನ ಸೆಳೆಯುತ್ತಿದೆ ಎಂದು ಯೋಚಿಸಿದರೆ ನಿಮ್ಮ ಊಹೆ ತಪ್ಪಾಗುತ್ತಿದೆ. ಇವರ್ಯಾರು ರೈಲಿನಲ್ಲಿ ಪ್ರಯಾಣ ಮಾಡುತ್ತೇವೆ ಎಂದು ಮುಂದೆ ಬರುತ್ತಿಲ್ಲ ಬದಲಾಗಿ ಭಾರತೀಯ ರೈಲ್ವೇ ಫೈನಾನ್ಸ್ ಕಾರ್ಪೋರೇಷನ್ (ಐಆರ್​ಎಫ್​ಸಿ) ಬಾಂಡ್​ಗಳನ್ನು ಖರೀದಿಸಲು ಮುಗಿ ಬೀಳುತ್ತಿದ್ದಾರೆ.

image


ಇದನ್ನು ಓದಿ: ಗೋ ವೆಜ್, ಗೋ ಗ್ರೀನ್ ಮೂಲಮಂತ್ರ..!

ಭಾರತದ ಅರ್ಥ ವ್ಯವಸ್ಥೆ ಬೆಳವಣಿಗೆ

ಬೇರೆ ಬೇರೆ ಬಾಂಡ್ ಮತ್ತು ಷೇರುಗಳನ್ನು ಕೊಳ್ಳುವ ಬದಲಿಗೆ ಭಾರತೀಯ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್(ಐಆರ್​ಎಫ್​ಸಿ) ಬಾಂಡ್​ಗಳನ್ನು ಬಾಲಿವುಡ್ ನಟರಾದ ಆಮಿರ್ ಖಾನ್, ಅಕ್ಷಯ್ ಕುಮಾರ್, ಕಪೂರ್ ಸಹೋದರಿಯರಾದ ಕರೀನಾ ಮತ್ತು ಕರಿಷ್ಮಾ ಸೇರಿದಂತೆ ಮತ್ತಿತರರು ಖರೀದಿಸುವ ಮೂಲಕ ಭಾರತದ ಅರ್ಥ ವ್ಯವಸ್ಥೆಯನ್ನು ಬಲಪಡಿಸಲು ತಮ್ಮ ಅಮೂಲ್ಯ ಕಾಣಿಕೆಯನ್ನು ನಿಡುತ್ತಿದ್ದಾರೆ. ಈ ಸಾಲಿನಲ್ಲಿ ಇನ್ನಷ್ಟು ನಟರು ಸೇರಿಕೊಂಡಿದ್ದಾರೆ.

ಕಾರ್ಪೋರೇಟ್ ಮಂದಿಯನ್ನು ಸೆಳೆಯುತ್ತಿರುವ ರೈಲ್ವೇ ಬಾಂಡ್

ಐಆರ್​ಎಫ್​ಸಿ ಬಾಂಡ್ ತನ್ನತ್ತ ಕೇವಲ ಬಾಲಿವುಡ್ ಮಂದಿಯನ್ನು ಮಾತ್ರ ಸೆಳೆಯುತ್ತಿಲ್ಲ, ಬದಲಿಗೆ ಕಾರ್ಫೊರೇಟ್ ಕಂಪನಿಗಳ ಮುಖ್ಯಸ್ಥರು ಮತ್ತು ಸಾಕಷ್ಟು ಶ್ರೀಮಂತರು ಈ ಬಾಂಡ್ಗಳನ್ನು ಕೊಳ್ಳುವತ್ತ ಚಿತ್ತ ಹರಿಸಿದ್ದಾರೆ.ದೇಶದ ದೊಡ್ಡ ಬ್ಯಾಂಕ್​ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2,600 ಕೋಟಿ ರೂ., ವಿಫ್ರೊ 1,000 ಕೋಟಿ ರೂ.ಗಳನ್ನು ಈ ಬಾಂಡ್​​ಗಳಲ್ಲಿ ಹೂಡಿಕೆ ಮಾಡಿದೆ. ಇನ್ಫೋಸಿಸ್, ಆಕ್ಸಿಸ್ ಬ್ಯಾಂಕ್, ಯೆಸ್ ಬ್ಯಾಂಕ್​ಗಳೂ ಐಆರ್​ಎಫ್​ಸಿ ಬಾಂಡ್​ಗಳ ಖರೀದಿಗೆ ಮುಗಿ ಬಿದ್ದಿವೆ.

image


ಈ ಬಾಂಡ್​ಗೆ ತೆರಿಗೆ ರಿಯಾಯಿತಿ

ಭಾರತದ ಎಲ್ಲಾ ಶ್ರೀಮಂತರು ಸೆಲೆಬ್ರಿಟಿಗಳನ್ನು ತನ್ನತ್ತ ಸೆಳೆಯುತ್ತಿರುವುದರ ಗುಟ್ಟು ಈ ಬಾಂಡ್ ತೆರಿಗೆಮುಕ್ತವಾಗಿದೆ. ಈ ಕಾರಣ ಮತ್ತು ಭಾರತೀಯ ಅರ್ಥ ವ್ಯವಸ್ಥೆ ಬೆಳೆಯುತ್ತವೆ ಎನ್ನುವ ಉದ್ದೇಶವನ್ನಿಟ್ಟುಕೊಂಡು ಈ ಎಲ್ಲಾ ಸೆಲೆಬ್ರಟಿಗಳು ತಮ್ಮ ಕೋಟ್ಯಾಂತರ ರೂಪಾಯಿಗಳನ್ನು ಇದರಲ್ಲಿ ತೊಡಗಿಸಿದ್ದಾರೆ. ಇಷ್ಟೊಂದು ಉತ್ತಮ ಪ್ರತಿಕ್ರಿಯೆ ಪಡೆದಿರುವ ಐಆರ್​ಎಫ್​ಸಿ 4,532 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದೆ. ಈಗಾಗಲೇ 10,796 ಕೋಟಿ ರೂ.ನಷ್ಟು ಬಿಡ್​ಗಳನ್ನು ಸ್ವೀಕರಿಸಿದೆ. ಬ್ಯಾಂಕ್​ನ ನಿಶ್ಚಿತ ಠೇವಣಿಗಳಿಗೆ ಹೋಲಿಸಿದರೆ ಐಆರ್​ಎಫ್​ಸಿ ಬಾಂಡ್​ಗಳು ಸೂಕ್ತ. ತೆರಿಗೆ ಉಳಿಸುವುದಲ್ಲದೇ, ಉತ್ತಮ ರಿಟರ್ನ್ಸ್ ಅನ್ನು ನಿರೀಕ್ಷಿಸಬಹುದಾಗಿದೆ ಎಂದು ಹಣಕಾಸು ಸಲಹೆಗಾರರು ಹೇಳುತ್ತಾರೆ. ವಾರ್ಷಿಕ ಶೇ.7.5 ಬಡ್ಡಿದರವನ್ನು ಈ ಬಾಂಡ್​​ಗಳು ಹೊಂದಿದ್ದು, ಇವನ್ನು ಖರೀದಿಸಿದವರು ಮುಂದಿನ 20 ವರ್ಷಗಳ ಕಾಲ ತೆರಿಗೆ ರಿಯಾಯಿತಿಯನ್ನು ಪಡೆಯಲಿದ್ದಾರೆ.

ಇದನ್ನು ಓದಿ

1. ಕರಾವಳಿಯಲ್ಲಿ ಬಯಲು ಸೀಮೆಯ ರುಚಿಗೆ ಡಿಮ್ಯಾಂಡ್!

2. ಲೇಟ್​​ನೈಟ್.ಇನ್ ವೆಬ್​​ಸೈಟ್​​ನಲ್ಲಿ ಮಿಡ್​​ನೈಟ್ ಭೋಜನ..!

3. ಪಿಡ್ಜಾ ಐಸ್‍ಕ್ರಿಮ್..24 ಕ್ಯಾರೆಟ್ ಗೋಲ್ಡ್ ಐಸ್‍ಕ್ರೀಮ್!!!


Add to
Shares
4
Comments
Share This
Add to
Shares
4
Comments
Share
Report an issue
Authors

Related Tags