ಆವೃತ್ತಿಗಳು
Kannada

ಹೈ-ಫೈ ಸ್ಪಾದಲ್ಲಿ ಮೆರುಗಲಿದೆ ಕೈ ಕಾಲುಗಳು

ಟೀಮ್​ ವೈ.ಎಸ್​. ಕನ್ನಡ

31st May 2016
Add to
Shares
4
Comments
Share This
Add to
Shares
4
Comments
Share
image


ಫ್ಯಾಷನ್–ಟ್ರೆಂಡ್‍ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ..? ಈ ಹಿಂದೆ ಮುಂಬೈ, ದುಬೈ ಫ್ಯಾಷನ್​ಗೆ ಹೆಸರು ಅನ್ನೋ ಸುದ್ದಿಗಳಿತ್ತು. ಆದ್ರೆ ದಿನ ಕಳೆದಂತೆ ಬೆಂಗಳೂರು ಕೂಡ ಫ್ಯಾಷನ್ ಐಕಾನ್‍ ಆಗ್ತಿರೋದು ನಿಜ. ಇಲ್ಲಿ ಪ್ರತಿ ನಿತ್ಯ ಫ್ಯಾಷನ್ ,ಬ್ಯೂಟಿ ಮೈಂಟೇನೆನ್ಸ್​​ಗಾಗಿಯೇ ಸಾಕಷ್ಟು ಗಂಟೆಗಳ ಕಾಲ ಮುಡಿಪಾಗಿಡುತ್ತಾರೆ. ಕೂದಲ ಆರೈಕೆಗಾಗಿ ,ಬಾಡಿ ಮೇಂಟೈನ್​ಗಾಗಿ, ಸಾಕಷ್ಟು ಸ್ಪಾಗಳು ಸ್ಟುಡಿಯೋಗಳು ಇರತ್ತವೆ. ಆದ್ರೆ ನೀವು ಆಕರ್ಷಕವಾಗಿ ಕಾಣಬೇಕು ಅಂದ್ರೆ ನಿಮ್ಮ ಕೈ ಕಾಲುಗಳು ಮತ್ತು ಬೆರಳುಗಳು ಕೂಡ ಸುಂದರವಾಗಿರಬೇಕು. ಮಾಮೂಲಿ ಬ್ಯೂಟಿ ಪಾರ್ಲರ್​​ಗಳಲ್ಲಿ ಪೆಡಿಕ್ಯೂರ್, ಮೆಡಿಕ್ಯಾರ್‍ ಅನ್ನೋದು ಇರುತ್ತದೆ. ಆದ್ರೆ ಉಗುರುಗಳ ಸೌಂದರ್ಯಕ್ಕೆ ಅಂತ ಇಲ್ಲಿ ತನಕ ಯಾವುದೇ ಎಕ್ಸ್​ಕ್ಲೂಸಿವ್​ ಸ್ಪಾ ಇರಲಿಲ್ಲ. ಆದ್ರೆ ಬೆಂಗಳೂರಿನಲ್ಲಿ ಇಂತದೊಂದು ಹೊಸ ಸ್ಪಾ ತಲೆಎತ್ತಿದೆ. ಬೆರಳಿನ ಸೌಂದರ್ಯಕ್ಕೆ ಹೊಸ ಟಚ್​ ನೀಡೋದಿಕ್ಕೆ ಸಜ್ಜಾಗಿದೆ.

image


ಉಗುರುಗಳ ಸೌಂದರ್ಯಕ್ಕೆಂದು ಸ್ಪೆಷಲ್ ಸ್ಪಾ..!

"ಪಾಲೀಷ್ಡ್" ಕೈಗಳ ಮತ್ತು ಕಾಲುಗಳ ಸೌಂದರ್ಯ ಕಾಪಾಡಲೆಂದೇ ಬೆಂಗಳೂರಿನ ಇಂದಿರಾ ನಗರದಲ್ಲಿ ತಲೆ ಎತ್ತಿರೋ ಸ್ಪಾ ಇದಾಗಿದೆ. ಇಲ್ಲಿ ನಿಮ್ಮ ಉಗುರುಗಳ ಜೋಪಾನ ಮತ್ತು ಕೈ, ಕಾಲುಗಳ ಸೌಂದರ್ಯವನ್ನು ಹೆಚ್ಚಿಸಲಾಗುತ್ತದೆ. ಅವುಗಳ ಆರೈಕೆಯೇ ಇವರ ಕೆಲಸ. ಎಲ್ಲದರಲ್ಲೂ ಹೈ-ಫೈ ಅಪೇಕ್ಷಿಸುವ ಜನರಿಗಾಗಿಯೇ ಪಾಲೀಷ್ಡ್​ ಅನ್ನೋ ಸ್ಪಾವನ್ನ ಓಪನ್ ಮಾಡಲಾಗಿದೆ. ಸ್ಪಾ ಅಂದ ಮಾತ್ರಕ್ಕೆ ಸಿಂಪರ್ ಸ್ಪಾ ಇದಲ್ಲ. ಇಲ್ಲಿ ಬರೋ ಪ್ರತಿ ಕಸ್ಟಮರ್​​ಗೂ ಸೂಪರ್ ಸ್ಪೆಷಲ್‍ ಟ್ರೀಟ್​ಮೆಂಟ್​​ ಸಿಗುತ್ತದೆ. ಅಷ್ಟೇ ಅಲ್ಲದೆ ಸ್ಪಾ ಒಳಗಿನ ಅದ್ಭುತವಾದ ಇಂಟೀರಿಯರ್​ ಸೆಟ್ಟಿಂಗ್ಸ್ ನಿಮನ್ನ ಮತ್ತೆ ಮತ್ತೆ ಈ ಸ್ಪಾದ ಒಳಗೆ ಬರುವಂತೆ ಮಾಡುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಕೆಲಸ ಮುಗಿಯುವವರೆಗೂ ಅದ್ಬುತ ಸಂಗೀತವನ್ನೂ ಕೇಳಿ ಆನಂದಿಸಬಹುದು.

image


ದುಬೈನಿಂದ ಬಂದವ್ರಿಗೆ ಹೊಳೆಯಿತು ಹೊಸ ಐಡಿಯಾ

ನೀಲ ಬೋಪಯ್ಯ, ಮೂಲತಃ ಬೆಂಗಳೂರಿನವರೇ. ಬ್ಯುಸಿನೆಸ್ ವುಮೆನ್‍ ಆಗಿದ್ದ ನೇಹಾ 10 ವರ್ಷದಿಂದ ದುಬೈನಲ್ಲಿ ವಾಸವಿದ್ದರು. ಅಲ್ಲಿ ಫ್ಯಾಷನ್ ಮತ್ತು ಬ್ಯೂಟಿಗೆ ಸಾಕಷ್ಟು ಒತ್ತು ನೀಡಲಾಗುತ್ತದೆ. ಅಲ್ಲಿನ ಲೈಫ್ ಸ್ಟೈಲ್​ಗೆ ಒಗ್ಗಿಕೊಂಡಿದ್ದ ನೀಲ ಬೆಂಗಳೂರಿಗೆ ಬಂದ ನಂತರ ನೈಲ್‍ಕೇರ್​ಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರು. ಬೆಂಗಳೂರಿನಲ್ಲಿ ಇಂತಹದೊಂದು ಸೌಲಭ್ಯ ಇಲ್ಲ ಅನ್ನೋದು ತಿಳಿದ ನಂತರ ನಾವ್ಯಾಕೆ ಇಲ್ಲಿ ಪಾಲೀಷ್ಡ್​ ಸ್ಪಾ ಓಪನ್ ಮಾಡಬಾರದು ಅಂತ ಯೋಚನೆ ಮಾಡಿದ್ದರು. ಫ್ಯಾಷನ್​ ಪ್ರಿಯರಿಗೆ ಹೊಸತನ್ನು ತಿಳಿಸಿಕೊಟ್ಟ ಹಾಗೇ ಆಗುತ್ತದೆ ಅನ್ನೋ ಉದ್ದೇಶದಿಂದ ಈ ಪಾಲೀಷ್ಡ್ ಸ್ಪಾವನ್ನು ಓಪನ್ ಮಾಡಿದ್ದಾರೆ.

image


ಏನೆಲ್ಲ ಸೌಲಭ್ಯ ಲಭ್ಯ..?

ಸೌಂದರ್ಯ ಅಂದ್ರೆ ಕೇವಲ ಮುಖ ಮತ್ತು ಕೂದಲನ್ನ ಆರೈಕೆ ಮಾಡೋದು ಅಷ್ಟೇ ಅಲ್ಲ. ದೇಹದ ಅಂಗವಾಗಿರೋ ಕೈ , ಕಾಲುಗಳು ಮತ್ತು ದೇಹದ ಸೌಂದರ್ಯವನ್ನ ಮೆರಗುಗೊಳಿಸೋ ಬೆರಳುಗಳು ಮತ್ತು ಉಗುರುಗಳೂ ಕೂಡ ಅನ್ನೋದು ನೇಹಾ ಅವರ ಅಭಿಪ್ರಾಯ. ನೇಲ್‍ಕೇರ್, ನೇಲ್‍ಆರ್ಟ್ ,ಪೆಡಿಕ್ಯೂರ್ ,ಮೆಡಿಕ್ಯೂರ್ ಹೀಗೆ ಪಾದಗಳಿಗೆ ಮತ್ತು ಕೈಗಳಿಗೆ ಸಂಬಂಧಿಸಿದ ಸರ್ವಿಸ್‍ ಅನ್ನ ಇಲ್ಲಿ ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ನೇಲ್‍ಆರ್ಟ್​ ಬಗ್ಗೆ ಸಾಕಷ್ಟು ಟ್ರೆಂಡ್​ ಸೆಟ್‍ ಆಗಿದ್ದು ಇಲ್ಲಿಯೂ ತುಂಬಾ ಮಹಿಳೆಯರು ಮತ್ತು ಹುಡುಗಿಯರು ನೇಲ್‍ಆರ್ಟ್​ ಅನ್ನ ಮಾಡಿಸಿಕೊಳ್ಳಲು ಬರುತ್ತಾರೆ. ಇನ್ನು ಇಲ್ಲಿ ಉಗುರುಗಳಿಗೆ ಬಳಸೋ ಪ್ರತಿ ನೇಲ್ ಪಾಲೀಷ್​ ಕೆಮಿಕಲ್ ಮುಕ್ತವಾಗಿದೆ. ಪಾಲೀಷ್ಡ್ ಸ್ಪಾದಲ್ಲಿ ನೇಲ್‍ಆರ್ಟ್ ಮತ್ತು ಬೇರೆ ಬೇರೆ ಸರ್ವಿಸ್ ನೀಡಲು ಪ್ರೋಫೆಷನಲ್ ಬ್ಯೂಟಿ ಎಕ್ಸ್​​ಪರ್ಟ್​ಗಳಿದ್ದಾರೆ. ಪಾಲೀಷ್ಡ್​ ಸರ್ವೀಸ್​ ಮತ್ತು ಬ್ಯೂಟಿಯ ಕಾಳಜಿ ಕಸ್ಟಮರ್​ಗಳಿಗೂ ಇಷ್ಟವಾಗಿದೆ. ಪಾಲೀಷ್ಡ್​ ಪ್ರಯತ್ನಕ್ಕೆ ಒಳ್ಳೆಯ ರೆಸ್ಪಾನ್ಸ್​​ ಇದ್ದು ಬ್ಯುಸಿನೆಸ್​, ಅನ್ನೋದನ್ನ ಯಾವುದೇ ರೀತಿಯಲ್ಲಾದ್ರು ಮಾಡಬಹುದು ಅನ್ನೋದಕ್ಕೆ ಇದೊಂದು ಉತ್ತಮ ಉದಾಹರಣೆ ಆಗಿದೆ.

ಇದನ್ನು ಓದಿ

1. ಕಟ್ಟಡ ಕಟ್ಟಲು ಇಟ್ಟಿಗೆ ನೀಡ್ತಿದ್ದ ಕಾರ್ಮಿಕ ಈಗ 20 ಕಂಪನಿಗಳ ಮಾಲೀಕ

2. ಸ್ಮಾರ್ಟ್​ಫೋನ್​ ಕಾಲಕ್ಕೂ ಅಂತ್ಯಬಂತು.. ಇನ್ನೇನಿದ್ರೂ ರೋಬೋ ಫೋನ್​ನದ್ದೇ ಕಾರುಬಾರು..!

3. "ವಿರಾಟ್"​ ರೂಪಕ್ಕೆ ಬೆಚ್ಚಿಬಿದ್ದ ಕ್ರಿಕೆಟ್​ಲೋಕ

Add to
Shares
4
Comments
Share This
Add to
Shares
4
Comments
Share
Report an issue
Authors

Related Tags