ಆವೃತ್ತಿಗಳು
Kannada

ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸರ್ವಿಸಸ್ ನಿಂದ 20 ಕೋಟಿ ಹೂಡಿಕೆ ಪಡೆದಿರುವ ಜಿಗ್ ಸಾ ಅಕಾಡೆಮಿ

ಟೀಮ್​ ವೈ.ಎಸ್​​. ಕನ್ನಡ

13th Dec 2015
Add to
Shares
0
Comments
Share This
Add to
Shares
0
Comments
Share

ಆನ್‌ಲೈನ್ ಅನಾಲಿಟಿಕ್ಸ್ ಶಿಕ್ಷಣ ಸಂಸ್ಥೆ ಜಿಗ್ ಸಾ ಅಕಾಡೆಮಿ, ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸರ್ವಿಸ್ ಸಂಸ್ಥೆಯಿಂದ 20 ಕೋಟಿ ಹೂಡಿಕೆ ಪಡೆದಿದೆ. ಈ ಹೂಡಿಕೆಯ ಮೊತ್ತವನ್ನು ಜಾಗತಿಕ ಮಟ್ಟದಲ್ಲಿ ಅಸ್ತಿತ್ವ ಸಾಧಿಸಲು ಬಳಸುವುದಾಗಿ ಜಿಗ್ ಸಾ ಅಕಾಡೆಮಿ ಹೇಳಿಕೊಂಡಿದೆ.

2011ರಲ್ಲಿ ಗೌರವ್ ವೊಹ್ರಾ ಮತ್ತು ಸರಿತಾ ದಿಗುಮಾರ್ಟಿಯವರಿಂದ ಆರಂಭವಾಗಿದ್ದೇ ಜಿಗ್ ಸಾ ಅಕಾಡೆಮಿ. ಅನಾಲಿಟಿಕ್ಸ್ ಮತ್ತು ದೊಡ್ಡ ಮಟ್ಟದ ಡಾಟಾ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರರಿಗೆ ಪ್ರಪಂಚದಾದ್ಯಂತ ಪಸರಿಸುವ ದೃಷ್ಟಿಯಿಟ್ಟುಕೊಂಡು ಅಕಾಡೆಮಿಯನ್ನು ಆರಂಭಿಸಲಾಯಿತು.

image


ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸರ್ವಿಸ್(ಎಂಎಜಿಇ)ನ ಸಹಾಯದೊಂದಿಗೆ ಜಿಗ್ ಸಾ ಸಂಸ್ಥೆ ಜಾಗತಿಕ ಮಟ್ಟದಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಲು ಮತ್ತು ಯಶಸ್ವಿಯಾಗಿ ಹೊಸ ಮಾರುಕಟ್ಟೆ ಸಂಭಾವ್ಯತೆಯನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ಕೆಲಸ ಮಾಡುವ ಭರವಸೆ ಹೊಂದಿದೆ ಜಿಗ್ ಸಾ ಸಂಸ್ಥೆ. ಈ ಪಾಲುದಾರಿಕೆಯಿಂದ ನಮಗೆ ಅತ್ಯಂತ ಸಂತೋಷವಾಗಿದೆ. ಭಾರತ ಮತ್ತು ವಿದೇಶಗಳಲ್ಲೂ ಅನಾಲಿಟಿಕ್ಸ್ ಮತ್ತು ಬಿಗ್ ಡಾಟಾ ತರಬೇತಿ ಮಾರುಕಟ್ಟೆಗೆ ಸಾಕಷ್ಟು ಅವಕಾಶಗಳಿವೆ. ಈ ಹೂಡಿಕೆಯ ಸುತ್ತು ಕಾರ್ಪೋರೇಟ್ ತರಬೇತಿ ವಿಭಾಗದಲ್ಲಿ ನಮಗೆ ಜಾಗತಿಕವಾಗಿ ದೊಡ್ಡ ಹೆಜ್ಜೆಗಳನ್ನಿಡಲು ಸಹಾಯಕವಾಗಿದೆ ಎಂದಿದ್ದಾರೆ ಸಂಸ್ಥೆಯ ಸಿಇಓ ಗೌರವ್.

ಪ್ರಸ್ತುತ ಸಂಸ್ಥೆಗೆ ಸಾಗರದಾಚೆಯ ಮಾರುಕಟ್ಟೆಗಳು ಅಂದರೆ ಯುಎಸ್‌ಎ, ಆಸ್ಟ್ರೇಲಿಯಾ, ಯುರೋಪ್ ಮತ್ತು ಸಿಂಗಾಪೂರ್‌ನಿಂದ ಶೇ.20ರಷ್ಟು ಆದಾಯ ಬರುತ್ತಿದ್ದು ಉಳಿದ ಶೇ.80ರಷ್ಟು ಆದಾಯ ಭಾರತದಿಂದ ಬರುತ್ತಿದೆ. 5 ವರ್ಷಗಳ ನಂತರ ವಿದೇಶಿ ಮಾರುಕಟ್ಟೆಯಲ್ಲಿ ಬೆಳವಣಿಗೆ ಸಾಧಿಸಲು ಹೂಡಿಕೆ ಪಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಾರುಕಟ್ಟೆಗೆ ಸಂಬಂಧಿಸಿದಂತೆ ನಮ್ಮ ಎಲ್ಲಾ ಪ್ರಯತ್ನಗಳು ಭಾರತದತ್ತ ಹೆಚ್ಚಿನ ಗಮನಹರಿಸಿವೆ. ಜಾಗತಿಕ ಮಟ್ಟದಲ್ಲಿ ಜಿಗ್‌ ಸಾ ಅಕಾಡೆಮಿಯ ಕುರಿತು ಜಾಗೃತಿ ಮೂಡಿಸುವುದು ಮತ್ತು ಮಾರ್ಕೆಟಿಂಗ್ ಮಾಡಿಕೊಳ್ಳುವುದು ನಮ್ಮ ಮುಂದಿರುವ ಗುರಿ ಎಂದಿದ್ದಾರೆ ಸಂಸ್ಥೆಯ ಸಹಸಂಸ್ಥಾಪಕಿ ಸರಿತಾ.

ಶೇ.80ರಷ್ಟು ಆದಾಯ ಬಿ2ಸಿ(ಬಿಸಿನೆಸ್ ಟು ಕಸ್ಟಮರ್) ಮೂಲಗಳಿಂದ ಬರುತ್ತಿದೆ. ಉಳಿದ ಆದಾಯ ಕಾರ್ಪೋರೇಟ್ ತರಬೇತಿ ಮತ್ತು ಶೈಕ್ಷಣಿಕ ಸಂಸ್ಥೆಗಳ ಸಹಯೋಗದಿಂದ ಬರುತ್ತಿದೆ. ಕಾರ್ಪೋರೇಟ್ ಸಂಸ್ಥೆಗಳಿಗೆ ಸಾಂಪ್ರದಾಯಿಕ ಸೇವೆಗಳನ್ನು ಒದಗಿಸುತ್ತಿದೆ. ಈ ತರಬೇತಿಯಂದ ಮಾರಾಟ ವ್ಯವಸ್ಥೆಯಲ್ಲಿ ಬೆಳವಣಿಗೆ ಸಾಧಿಸಬಹುದು.

ಈವರೆಗೆ ಜಿಗ್ ಸಾ ಅಕಾಡೆಮಿ 30 ದೇಶಗಳ 40,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದೆ. 100ಕ್ಕೂ ಹೆಚ್ಚು ಕಾರ್ಪೋರೇಟ್ ಮತ್ತು ಐಟಿ ಸಂಸ್ಥೆಗಳೂ ಸಹ ಕಳೆದ 5 ವರ್ಷಗಳಿಂದ ಈ ಕಲಿಕಾ ವೇದಿಕೆಯನ್ನು ಬಳಸಿಕೊಳ್ಳುತ್ತಿವೆ. ಸಂಸ್ಥೆಯಲ್ಲಿ 100ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳಿದ್ದಾರೆ. ಉದ್ಯಮ ಮತ್ತು ಕಾರ್ಯಕ್ಷೇತ್ರ, ಕಾರ್ಯವೈಖರಿ, ರೀಟೇಲ್, ಇ-ಕಾಮರ್ಸ್, ಆರ್ಥಿಕತೆ, ಮಾನವಸಂಪನ್ಮೂಲ ವಿಭಾಗ ಮತ್ತು ವಿತರಣಾ ವಿಭಾಗದಲ್ಲಿ ತರಬೇತಿ ನೀಡುತ್ತಿದೆ.

ಸಂಸ್ಥೆ ಈಗಾಗಲೇ ಅನಾಲಿಟಿಕ್ಸ್ ಮತ್ತು ದೊಡ್ಡ ಡಾಟಾ ವಲಯದಲ್ಲಿ ಪ್ರಗತಿ ಸಾಧಿಸಿದೆ ಮತ್ತು ಸಮರ್ಪಕ ಹೂಡಿಕೆಯಿಂದ ವೇಗದ ಬೆಳವಣಿಗೆ ಸಾಧಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸರ್ವಿಸ್‌ನ ಎಂಡಿ ಮತ್ತು ಸಿಇಓ ಎಸ್.ವೈಥೇಸ್ವರನ್.

ಭವಿಷ್ಯದ ಯೋಜನೆಗಳು ಮತ್ತು ಉದ್ಯಮ ವಲಯದ ಮೇಲ್ನೋಟ

ಮೆಕ್ ಕಿನ್ಸೇ ಗ್ಲೋಬಲ್ ಇನ್ಸ್‌ ಟಿಟ್ಯೂಟ್‌ನ ಯೋಜಿಸಿರುವಂತೆ 2018ರ ವೇಳೆಗೆ ವಿತರಣೆಗಿಂತ ಹೆಚ್ಚು ಬೇಡಿಕೆ ಡಾಟಾ ಸೈಂಟಿಸ್ಟ್‌ ಗಳಿಗೆ ಇರಲಿವೆ. ಇತ್ತೀಚಿನ ವರ್ಷಗಳಲ್ಲಿ ಅನಾಲಿಟಿಕ್ಸ್ ಮತ್ತು ಡಾಟಾ ತರಬೇತಿಗಳು ವೇಗವಾಗಿ ಬೆಳೆಯುತ್ತಿವೆ ಮತ್ತು ಶೈಕ್ಷಣಿಕ ವಲಯವೂ ಸಹ ಇದಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳಲು ಮುಂದಾಗುತ್ತಿದೆ. ಈ ಮೂಲಕ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವನ್ನು ಹೋಗಲಾಡಿಸಲು ಯತ್ನಿಸುತ್ತಿದೆ.

ಜಾಗತಿಕವಾಗಿ ಈ ವಿಭಾಗದಲ್ಲಿ ಸಿಂಪ್ಲಿ ಲರ್ನ್ ಸಂಸ್ಥೆ ಸಾಕಷ್ಟು ಪ್ರಖ್ಯಾತವಾಗಿದೆ. ಏಪ್ರಿಲ್‌ನಲ್ಲಿ ಮೇಫೀಲ್ಡ್ ಫಂಡ್,ಕಲಾರಿ ಕ್ಯಾಪಿಟಲ್, ಹೆಲಿಯನ್ ವೆಂಚರ್ ಪಾರ್ಟ್‌ನರ್ಸ್‌ನಿಂದ ಸಿ ಸರಣಿಯ ಹೂಡಿಕೆಯಾಗಿ 15 ಮಿಲಿಯನ್ ಯುಎಸ್ ಡಾಲರ್ ಪಡೆದಿದೆ. ಜೂನ್‌ನಲ್ಲಿ ಸಿಲಿಕಾನ್ ವ್ಯಾಲಿ ಮೂಲದ ಮಾರ್ಕೆಟ್ ಮೋಟಿವ್ ಸಂಸ್ಥೆಯನ್ನು 10 ಮಿಲಿಯನ್ ಡಾಲರ್ ಡೀಲ್‌ನ ಮೂಲಕ ಸ್ವಾಧೀನಪಡಿಸಿಕೊಂಡಿದೆ.

ಶೀಘ್ರದಲ್ಲಿ ಜಿಗ್ ಸಾ ಅಕಾಡೆಮಿಯ ಸಲಹಾ ಸಮಿತಿಯ ಸದಸ್ಯರಾಗಲಿರುವ ಟಿ.ವಿ.ಮೋಹನ್ ದಾಸ್ ಪೈ ಹೇಳುವಂತೆ, ಅನಾಲಿಟಿಕ್ಸ್ ಅನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡಿರುವ ತರಬೇತಿ ಪಡೆದ ವೃತ್ತಿಪರರಿಂದ ಎಲ್ಲಾ ವರ್ಗದ ಕಂಪನಿಗಳ ಮುಖಾಂತರ ಉದ್ಯಮ ವಲಯದಲ್ಲಿ ಹೊಸ ಮೌಲ್ಯಗಳನ್ನು ಸೃಷ್ಟಿಸಲು ಸಾಧ್ಯ.

ನಿಯಮಾವಳಿಗಳಿಗನುಸಾರವಾಗಿ ಮತ್ತು ಸಮರ್ಪಕವಾಗಿ ಡಾಟಾ ಸೌಲಭ್ಯಗಳನ್ನು ಬಳಸುವ ತರಬೇತಿಯಿಂದ ಉದ್ಯಮದಲ್ಲಿ ಬೆಳೆಯಲು ಮತ್ತು ತೀರ್ಮಾನ ತೆಗೆದುಕೊಳ್ಳುವ ರೀತಿಯಲ್ಲಿ ಸುಧಾರಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಯುವರ್ ಸ್ಟೋರಿ ನಿಲುವು

ಇತ್ತೀಚಿನ ವರ್ಷಗಳಲ್ಲಿ ಆನ್‌ಲೈನ್ ಶಿಕ್ಷಣ ವಿಭಾಗ ಭಾರತದಲ್ಲಿ ಸಾಕಷ್ಟು ಬೆಳವಣಿಗೆ ಸಾಧಿಸಿದೆ. ಒಟ್ಟಾರೆಯಾಗಿ ಶೈಕ್ಷಣಿಕ ವಲಯಕ್ಕೆ ಐಬಿಇಎಫ್ ಸಂಸ್ಥೆ 100 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ವಿವಿಧ ಪರೀಕ್ಷೆಗಳಿಗಾಗಿ ಆನ್‌ಲೈನ್ ಟ್ಯುಟೋರಿಯಲ್ ಮತ್ತು ಕೋಚಿಂಗ್ ಒದಗಿಸುವ ಅನೇಕ ವೇದಿಕೆಗಳಿವೆ. ತೀರ ಇತ್ತೀಚೆಗೆ ಖಾನ್ ಅಕಾಡೆಮಿ, ಟಾಟಾ ಸನ್ಸ್ ಸಂಸ್ಥೆಯೊಂದಿಗೆ ಪಾಲುದಾರಿಕೆ ಪಡೆದಿದ್ದು, ಭಾರತದಲ್ಲಿ ಕಟೆಂಟ್ ಡೆವಲಪರ್ ಕ್ಷೇತ್ರದಲ್ಲಿ ತರಬೇತಿ ನೀಡುತ್ತಿದೆ. ಇನ್ನು ಲಿಂಕ್‌ದಿನ್ ಸಂಸ್ಥೆ ಕೂಡ ಶೈಕ್ಷಣಿಕ ವಲಯಕ್ಕೆ ಕಾಲಿಟ್ಟಿದ್ದು, ಲಿಂಡಾ.ಕಾಮ್ ಸಂಸ್ಥೆಯನ್ನು ಏಪ್ರಿಲ್‌ನಲ್ಲಿ 1.5 ಬಿಲಿಯನ್ ಡಾಲರ್ ಮುಖಾಂತರ ಸ್ವಾಧೀನಪಡಿಸಿಕೊಂಡಿದೆ. ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಅನುಭವ ಹೊಂದಿರುವ ಎಂಎಜಿಇ ಬೆಂಬಲದೊಂದಿಗೆ ಮತ್ತು ಭಾರತ ಮತ್ತು ವಿದೇಶದಲ್ಲಿ ಉತ್ತಮ ಸಂಪರ್ಕ ಹೊಂದಿರುವುದರಿಂದ ಜಿಗ್ ಸಾ ಅಕಾಡೆಮಿ ಸಮರ್ಪಕವಾಗಿ ಬೆಳೆಯಲು ಮತ್ತು ಈ ವಲಯದ ಇತರ ಸಂಸ್ಥೆಗಳಿಗೆ ಪ್ರತಿಸ್ಪರ್ಧೆ ನೀಡಲು ಸಮರ್ಥವಾಗಿದೆ.

ಲೇಖಕರು: ಹರ್ಷಿತ್​​ ಮಲ್ಯ

ಅನುವಾದಕರು: ವಿಶ್ವಾಸ್​​​

Add to
Shares
0
Comments
Share This
Add to
Shares
0
Comments
Share
Report an issue
Authors

Related Tags