ಆವೃತ್ತಿಗಳು
Kannada

ಹೈ ಸ್ಪೀಡ್​ ರೈಲಿನ ಕನಸು- ಮುಂಬೈ-ಅಹಮದಾಬಾದ್​ ನಡುವೆ ವೇಗದ ಸಂಪರ್ಕ

ಟೀಮ್​ ವೈ.ಎಸ್​. ಕನ್ನಡ

17th Jun 2017
Add to
Shares
6
Comments
Share This
Add to
Shares
6
Comments
Share

ಭಾರತೀಯ ರೈಲ್ವೇ ಇತಿಹಾಸ ಸೃಷ್ಟಿಸುತ್ತಿದೆ. ಭಾರತೀಯ ಸಾರಿಯಗೆ ಬೆನ್ನೆಲುಬಾಗಿರುವ ರೈಲ್ವೇಗೆ ಈಗ ಹೈ ಟೆಕ್ ಸ್ಪರ್ಷ ನೀಡುವ ಕಾರ್ಯದ ಬಗ್ಗೆ ಯೋಚನೆ ನಡೆಯುತ್ತಿದೆ. ಈಗಿನ ಜನರ ಬೇಡಿಕೆ ಅನುಗುಣವಾಗಿ ರೈಲ್ವೇಯನ್ನು ಮೇಲ್ದರ್ಜೆಗೆ ಏರಿಸುವ ಪ್ಲಾನ್ ಕೂಡ ನಡೆಯುತ್ತಿದೆ. ಇದರ ಮೊದಲ ಹೆಜ್ಜೆಯೇ ಹೈ ಸ್ಪೀಡ್ ರೈಲು. ದೇಶದ ಮೊದಲ ಹೈ ಸ್ಪೀಡ್ ರೈಲು ಇನ್ನು 6 ವರ್ಷಗಳಲ್ಲಿ ಮುಂಬೈ ಮತ್ತು ಅಹ್ಮದಾಬಾದ್ ನಡುವೆ ಓಡಾಡೋದು ಬಹುತೇಕ ಖಚಿತ.

image


ಭಾರತದ ಚೊಚ್ಚಲ ಹೈ ಸ್ಪೀಡ್ ರೈಲು ಗಂಟೆಗೆ ಗರಿಷ್ಠ 350 ಕಿಲೋಮೀಟರ್ ವೇಗದಲ್ಲಿ ಓಡಾಟ ನಡೆಸಲಿದೆ ಅಂತ ಹೇಳಲಾಗುತ್ತಿದೆ. ಸರಾಸರಿ ಈ ರೈಲು ಗಂಟೆಗೆ 320 ಕಿಲೋಮೀಟರ್ ಚಲಿಸೋದು ಖಚಿತವಾಗಿದೆ. ಹೈ ಸ್ಪೀಡ್ ರೈಲು ಯೋಜನೆ ಜನರ ಬಳಕೆಗೆ ಸಿಕ್ಕಿದ್ರೆ ಅಹ್ಮದಾಬಾದ್ ಮತ್ತು ಮುಂಬೈ ನಡುವೆ ಇರುವ 508 ಕಿಲೋಮೀಟರ್​​ಗಳ ದೂರ ಕೇವಲ 2 ಗಂಟೆಗಳ ಜರ್ನಿಗೆ ಮೀಸಲಾಗಲಿದೆ. ಸದ್ಯದ ಮಟ್ಟಿಗೆ ದುರಂತೋ ಎಕ್ಸ್​ಪ್ರೆಸ್ ಈ ಎರಡು ಫೈನಾನ್ಸಿಯಲ್ ರಾಜಧಾನಿಗಳ ನಡುವೆ ಓಡಾಡಲು ಸರಾಸರಿಯಾಗಿ 7 ಗಂಟೆಗಳನ್ನು ತೆಗೆದುಕೊಳ್ಳುತ್ತಿದೆ.

ಈ ಹೈಸ್ಪೀಡ್ ರೈಲ್ವೇ ಯೋಜನೆಯನ್ನು ಜಪಾನ್ ಸರ್ಕಾರದ ಸಹಾಯೋಗದೊಂದಿಗೆ ಅನುಷ್ಠಾನಗೊಳಿಸಲಾಗಿದೆ. 508 ಕಿಲೋಮೀಟರ್ಗಳ ಈ ಪ್ರಾಜೆಕ್ಟ್ಗೆ ಸುಮಾರು 97,636 ಕೋಟಿ ರೂಪಾಯಿ ವೆಚ್ಚವಾಗಲಿದೆ. ಯೋಜನೆಯ ಪೂರ್ಣವೆಚ್ಚದ ಶೆಕಡಾ 81ರಷ್ಟು ಹಣಕಾಸಿನ ನೆರವನ್ನು ಜಪಾನ್ ಸರ್ಕಾರ ನೀಡಲಿದೆ. ಈ ಪ್ರಾಜೆಕ್ಟ್ನ ಸಾಲ ಯೋಜನೆಗೆ 50 ವರ್ಷಗಳ ಅವಧಿ ಮೀಸಲಿಡಲಾಗಿದೆ. ಹಣದ ಜೊತೆಗೆ ತಾಂತ್ರಿಕ ಅಂಶಗಳನ್ನು ಕೂಡ ಜಪಾನ್ ದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ.

ಈ ಮಧ್ಯೆ ದೇಶದ ವಿವಿಧ ನಗರಗಳಿಗೆ ಹೈ ಸ್ಪೀಡ್ ರೈಲು ಯೋಜನೆಯನ್ನು ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ದೆಹಲಿ- ಮುಂಬೈ,, ಮುಂಬೈ-ಚೆನ್ನೈ, ದೆಹಲಿ-ಕೊಲ್ಕತ್ತಾ, ದೆಹಲಿ-ನಾಗಪುರ ಮತ್ತು ಮುಂಬೈ-ನಾಗಪುರ ನಡುವೆ ಹೈ ಸ್ಪೀಡ್ ರೈಲು ಯೋಜನೆಯನ್ನು ವಿಸ್ತರಿಸುವ ಬಗ್ಗೆ ಯೋಜನೆಗಳನ್ನು ರೂಪಿಸಲಾಗುತ್ತಿದೆ.

ಈ ಮಧ್ಯೆ ಸೆಮಿ ಹೈಸ್ಪೀಡ್ ರೈಲ್ವೇ ಯೋಜನೆ ಬಗ್ಗೆಯೂ ಚರ್ಚೆ ಮಾಡಲಾಗುತ್ತಿದೆ. ದೆಹಲಿ- ಚಂಡೀಘಢ, ಚೆನ್ನೈ- ಬೆಂಗಳೂರು- ಮೈಸೂರು, ದೆಹಲಿ- ಕಾನ್ಪುರ, ನಾಗಪುರ- ಬಿಲಸ್ಪುರ, ಮುಂಬೈ-ಗೋವಾ, ಮುಂಬೈ- ಅಹ್ಮದಾಬಾದ್, ಚೆನ್ನೈ- ಹೈದ್ರಾಬಾದ್ ಮತ್ತು ನಾಗಪುರ- ಸಿಕರಂದರಾಬಾದ್ ನಡುವೆ ಸೆಮಿ ಹೈಸ್ಪೀಡ್ ರೈಲು ಯೋಜನೆ ಜಾರಿಗೆ ಬರುವುದು ಬಹುತೇಕ ಖಚಿತವಾಗಿದೆ. ಒಟ್ಟಿನಲ್ಲಿ ವಿಶ್ವವಿಖ್ಯಾತ ಭಾರತೀಯ ರೈಲ್ವೇಗೆ ಶೀಘ್ರದಲ್ಲೇ ವೇಗದ ಟಚ್ ಸಿಗಲಿದೆ.

Add to
Shares
6
Comments
Share This
Add to
Shares
6
Comments
Share
Report an issue
Authors

Related Tags