ಆವೃತ್ತಿಗಳು
Kannada

ಶಿಕ್ಷಣದ ಬಗ್ಗೆ ತಿಳಿಸಿಕೊಡಲು ಆಯ್ಕೆಯಾದ 16ರ ಪೋರಿ- ಮಿಶೆಲ್ ಒಬಾಮ ಗಮನ ಸೆಳೆದ ಭಾರತೀಯ ಮೂಲದ ಹುಡಗಿ

ಟೀಮ್​ ವೈ.ಎಸ್​. ಕನ್ನಡ

8th Jan 2017
Add to
Shares
5
Comments
Share This
Add to
Shares
5
Comments
Share

ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ 16 ವರ್ಷದ ಬಾಲಕಿ ಶ್ವೇತಾ ಪ್ರಭಾಕರನ್ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಅಮೆರಿಕಾದ ಮೊದಲ ಮಹಿಳಾ ಪ್ರಜೆ, ಮಿಶೆಲ್ ಒಬಾಮ “ಸ್ಟೂಡೆಂಟ್ ಅಡ್ವೈಸರಿ ಬೋರ್ಡ್”ಗೆ ಶ್ವೇತಾ ಅವರನ್ನು ಆಯ್ಕೆ ಮಾಡಿದ್ದಾರೆ. ಮೊದಲ ಬಾರಿಗೆ ರಚನೆ ಆಗಿರುವ ಈ ಬೋರ್ಡ್ ಅಮೆರಿಕದ ಹದಿಹರೆಯದವರಿಗೆ ಶಿಕ್ಷಣದ ಅವಕಾಶಗಳ ಬಗ್ಗೆ ತಿಳಿಸಿಕೊಟ್ಟು ಸೇವೆ ಸಲ್ಲಿಸಲಿದೆ.

image


ಶ್ವೇತಾ ಅವರ ತಂದೆ ತಾಯಿ 1998ರಲ್ಲಿ ತಮಿಳುನಾಡಿನ ತಿರುನಲ್ವೇಲಿಯಿಂದ ವಲಸೆ ಹೋಗಿದ್ದರು. ಶ್ವೇತಾ ಈ ಹಿಂದೆ ಕಂಪ್ಯೂಟರ್ ಸೈನ್ಸ್​ನ ಬಗ್ಗೆ ಯುವ ಜನತೆ ತಿಳಿಸಲು “ಬೆಟರ್ ಮೇಕ್ ರೂಮ್” ಕ್ಯಾಂಪೇನ್​ನ ಸ್ಟೂಡೆಂಟ್ ಅಡ್ವೈಸರಿ ಬೊರ್ಡ್​ಗೆ ಆಯ್ಕೆ ಆಗಿದ್ದಳು. ಈಗ ಶ್ವೇತಾ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಶ್ವೇತಾ ವೈಟ್ ಹೌಸ್​ನಲ್ಲಿ ನಡೆದ ಕೌನ್ಸೆಲರ್ ಆಫ್ ಈಯರ್ ಸೆರಮನಿಯಲ್ಲೂ ಪಾಲ್ಗೊಳ್ಳುವ ಅವಕಾಶ ಪಡೆದುಕೊಂಡಿದ್ದಾರೆ. ಇಂಡಿಯಾಪೊಲಿಸ್​ನಲ್ಲಿ ಹುಟ್ಟಿದ ಶ್ವೇತಾ 17 ವಿದ್ಯಾರ್ಥಿಗಳ ಪೈಕಿ ಒಬ್ಬಳಾಗಿದ್ದಾಳೆ. ಚೊಚ್ಚಲ “ಸ್ಟೂಡೆಂಟ್ ಅಡ್ವೈಸರಿ ಬೋರ್ಡ್”ನಲ್ಲಿ 12 ಹೈಸ್ಕೂಲ್ ವಿದ್ಯಾರ್ಥಿಗಳು ಮತ್ತು 5 ಕಾಲೇಜು ವಿದ್ಯಾರ್ಥಿಗಳಿದ್ದಾರೆ.

ಶ್ವೇತಾ ವರ್ಜಿನಿಯಾದ ಸೈಂಟ್ ಥಾಮಸ್ ಜಫರ್ಸನ್ ಹೈಸ್ಕೂಲ್​ನ ಸೈನ್ಸ್ ಅಂಡ್ ಟೆಕ್ನಾಲಜಿಯ ಹಳೆ ವಿದ್ಯಾರ್ಥಿ. ಪ್ರಸ್ತುತ ಶ್ವೇತಾ “ಕೋಡ್ ನೌ” ಅನ್ನುವ ಎಂಜಿನಿಯರ್, ವಿಜ್ಞಾನಿಗಳು ಮತ್ತು ಉದ್ಯಮಿಗಳಿಗೆ ಉತ್ತೇಜನ ನೀಡುವ ಸಂಸ್ಥೆಯ ಸಂಸ್ಥಾಪಕಿ ಮತ್ತು ಸಿಇಒ ಆಗಿದ್ದಾರೆ. ಅಚ್ಚರಿ ಅಂದ್ರೆ ಮಿಶೆಲ್ ಒಬಾಮರ “ಸ್ಟೂಡೆಂಟ್ ಅಡ್ವೈಸರಿ ಬೋರ್ಡ್”ನಲ್ಲಿರುವ ಏಕೈಕ ಭಾರತೀಯ ಮೂಲದ ವಿದ್ಯಾರ್ಥಿ ಆಗಿದ್ದಾರೆ.

ಇದನ್ನು ಓದಿ: ವಾರ್ಧಾದದಿಂದ ಕಂಗೆಟ್ಟವರಿಗೆ ಹಳೆ ವಿದ್ಯಾರ್ಥಿಗಳ ನೆರವು- ಚೆನ್ನೈ ನಗರವನ್ನು ಉಳಿಸಿಕೊಳ್ಳಲು ಹೋರಾಟ

ಅಮೆರಿಕಾದ ಮೊದಲ ಮಹಿಳಾ ಪ್ರಜೆ ಮಿಶೆಲ್ ಒಬಾರ “ಸ್ಟೂಡೆಂಟ್ ಅಡ್ವೈಸರಿ ಬೋರ್ಡ್”ನಲ್ಲಿ ಸ್ಥಾನ ಪಡೆದಿರುವುದಕ್ಕೆ ಶ್ವೇತಾ ಸಂತಸ ವ್ಯಕ್ತಪಡಿಸಿದ್ದಾರೆ. ನನ್ನಂತಹ ಹಲವು ವಿದ್ಯಾರ್ಥಿಗಳ ಜೊತೆಗೆ ನನಗೆ ಅನುಭವ ಹಂಚಿಕೊಳ್ಳಳು ಅದ್ಭುತ ಅವಕಾಶ ಸಿಕ್ಕಿದೆ ಅಂತ ಶ್ವೇತಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳು ಯಾಕೆ ಉನ್ನತ ಶಿಕ್ಷಣ ಪಡೆಯಬೇಕು ಅನ್ನುವ ಬಗ್ಗೆ ಎಲ್ಲರಿಗೂ ತಿಳಿಸಲ ಅವಕಾಶ ಸಿಗಲಿದೆ.

ಶ್ವೇತಾ ಭರತನಾಟ್ಯ ಪ್ರವೀಣೆ ಅನ್ನುವುದು ಮತ್ತೊಂದು ವಿಶೇಷ. 2015ರಲ್ಲಿ ಶ್ವೇತಾ “ ವೈಟ್ ಹೌಸ್ ಚಾಂಪಿಯನ್ ಆಫ್ ಚೇಂಜ್” ಗೌರವಕ್ಕೂ ಪಾತ್ರರಾಗಿದ್ದರು. ಒಟ್ಟಿನಲ್ಲಿ ಶ್ವೇತಾ ಸಾಧನೆ ಎಲ್ಲರಿಗೂ ಮಾದರಿ ಅನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನು ಓದಿ:

1. ಬದುಕು ಬದಲಿಸಿದ ಮೊಲ ಸಾಕಾಣಿಕೆ....ಉಪನ್ಯಾಸಕ ಮಾಡಿದ ಮೋಡಿ ಇದು

2. ಮಂಗಳ ಗ್ರಹದಲ್ಲಿ ಆಲೂ ಬೆಳೆ- ವಿಜ್ಞಾನಿಗಳ ಸಂಶೋಧನೆಯಿಂದ ಹುಟ್ಟಿಕೊಂಡ ಹೊಸ ಕನಸು

3. ಸುಖ ನಿದ್ದೆಗೆ ಸೂಪರ್ ಆ್ಯಪ್..!

Add to
Shares
5
Comments
Share This
Add to
Shares
5
Comments
Share
Report an issue
Authors

Related Tags