ಆವೃತ್ತಿಗಳು
Kannada

ಕೇರಳದಲ್ಲಿ ಆನ್‌ಲೈನ್‌ ಮೂಲಕ ದಿನಬಳಕೆಯ ವಸ್ತುಗಳನ್ನು ಪೂರೈಸುವ ಸಂಸ್ಥೆ ಕಡಾ.ಇನ್

ಟೀಮ್​​ ವೈ.ಎಸ್​​.ಕನ್ನಡ

YourStory Kannada
27th Nov 2015
Add to
Shares
4
Comments
Share This
Add to
Shares
4
Comments
Share

ಕೇರಳದ ಜನ ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ಬಹಳವೇ ಹಿಂದುಳಿದಿದ್ದಾರೆ. ಆದರೆ ಕೇರಳೀಯರ ಈ ಮನಸ್ಥಿತಿಯನ್ನು ಈಗಿನ ಯುವಜನತೆ ನಿಧಾನವಾಗಿ ಬದಲಾಯಿಸುತ್ತಿದೆ. 2012ರಲ್ಲಿ ಭಾರತದ ಮೆಟ್ರೋ ಸಿಟಿಗಳಲ್ಲಿ ಆನ್‌ಲೈನ್ ಗ್ರಾಸರಿ ಮಾರುಕಟ್ಟೆ ತನ್ನ ಪುಟಾಣಿ ಹೆಜ್ಜೆಗಳನ್ನು ಇಡುತ್ತಿದ್ದ ಸಂದರ್ಭದಲ್ಲಿ ದೇವನಗರಿಯೆಂದೇ ಪ್ರಖ್ಯಾತವಾಗಿದ್ದ ಕೇರಳದಲ್ಲಿ ಈ ಕುರಿತು ಯಾರಿಗೂ ಮಾಹಿತಿಯೇ ಇರಲಿಲ್ಲ. ಆದರೆ ಶೀಘ್ರದಲ್ಲೇ ಈ ಪರಿಸ್ಥಿತಿ ಬದಲಾಗಿದೆ. ಆದರೆ ಆನ್‌ಲೈನ್ ಮಾರುಕಟ್ಟೆ ಸದ್ಯಕ್ಕೆ ತ್ರಿವೇಂಡ್ರಮ್‌ಗೆ ಮಾತ್ರ ಸೀಮಿತವಾಗಿದೆ. ಕಡಾ.ಇನ್ ಎಂಬುದು ಕೇರಳದ ಮೊದಲ ಹಾಗೂ ಏಕೈಕ ಆನ್‌ಲೈನ್ ಗ್ರಾಸರಿ ಮಳಿಗೆ ಎಂದರೆ ನೀವು ನಂಬಲೇಬೇಕು.

image


ಐವರು ಸ್ನೇಹಿತರು, ಒಂದು ಕನಸು..!

ತಮ್ಮ ಸ್ನೇಹಿತರೆಲ್ಲಾ ದೊಡ್ಡ ದೊಡ್ಡ ಐಟಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಲು ಚಿಂತಿಸುತ್ತಿದ್ದ ಸಮಯದಲ್ಲಿ ತ್ರಿವೇಂಡ್ರಮ್‌ನ ಶ್ರೀಚಿತ್ರ ತಿರುನಾಲ್ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ನಲ್ಲಿ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಾಗಿದ್ದ ಕೃಷ್ಣಪ್ರಸಾದ್, ಅನೂಪ್ ಜಿ.ಕುಮಾರ್, ಶಾನ್ ಎಂ.ಹನೀಫ್, ಶಿನೋಜ್ ಎಸ್ ಮತ್ತು ಜೇನು ಜೋಸೆಫ್ ಉದ್ಯಮಿಗಳಾಗುವ ಕನಸು ಕಂಡರು. ಈ ಐವರೂ ಸೇರಿ ತಮ್ಮ ಅಂತಿಮ ವರ್ಷದ ಬಿ.ಟೆಕ್ ಕೋರ್ಸ್ ಸಂಪೂರ್ಣವಾಗುವ ಮೊದಲೇ ನಿಯೋಲೋಜಿಕ್ಸ್ ಎಂಬ ಸಾಫ್ಟ್‌ ವೇರ್ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಇದು ಆರಂಭವಾದ ಒಂದು ದಶಕದ ನಂತರ ಇದೇ ತಂಡದವರಿಂದ ಆರಂಭವಾದ ಸಂಸ್ಥೆಯೇ ಕಡಾ.ಇನ್.

ನಿಯೋಲಾಜಿಕ್ಸ್ ಒಂದು ಶಾಖೆ ಭಾರತದ ಅತೀ ದೊಡ್ಡ ಐಟಿ ಪಾರ್ಕ್ ತ್ರಿವೇಂಡ್ರಮ್‌ನ ಟೆಕ್ನೋಪಾರ್ಕ್‌ನಲ್ಲಿತ್ತು. ಇಲ್ಲಿದ್ದ ಟೆಕ್ಕಿಗಳಿಗೆ ಗ್ರಾಸರಿ ಶಾಪಿಂಗ್ ಮಾಡಲು ಸಮಯವೇ ದೊರಕುತ್ತಿರಲಿಲ್ಲ ಎಂಬುದು ಶಾನ್ ಮತ್ತವರ ತಂಡಕ್ಕೆ ಅರಿವಾಯಿತು. ಹೀಗಾಗಿ ಶಾನ್ ತಮ್ಮ ನಿಯೋಲಾಜಿಕ್ಸ್‌ ನ ಸಹ ಸಂಸ್ಥಾಪಕರೊಂದಿಗೆ ಸೇರಿ ಕಡಾ.ಇನ್‌ ಸಂಸ್ಥೆಯನ್ನು ಆರಂಭಿಸಿದರು.

image


ಕಡಾ.ಇನ್‌ಗೆ ಆರಂಭದಲ್ಲಿ ಬಹುತೇಕ ಗ್ರಾಹಕರು ಟೆಕ್ನೋಪಾರ್ಕ್‌ನಲ್ಲಿದ್ದ ಶಾನ್‌ ಅವರ ಸ್ನೇಹಿತರು ಮತ್ತು ಸಹೋದ್ಯೋಗಿಗಳು. 3 ವರ್ಷಗಳ ನಂತರ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆಯಾಯಿತು. ಎನ್‌ಆರ್​​ಐಗಳೂ ಸಹ ಕಡಾ.ಇನ್‌ ಅನ್ನು ಬಳಸಲಾರಂಭಿಸಿದರು. ವೃದ್ಧರೂ ಸಹ ಕಡಾ.ಇನ್‌ ಅನ್ನು ಬಳಸಲಾರಂಭಿಸಿದರು. ಹಣವನ್ನು ಆನ್‌ಲೈನ್ ಮುಖಾಂತರ ಪಾವತಿಸುತ್ತಿದ್ದರು.

ನಿಧಾನವಾಗಿ ಮತ್ತು ಆದರೆ ಸ್ಥಿರವಾಗಿ ಬೆಳೆದ ಉದ್ಯಮ

ಆದರೆ ಕಡಾ.ಇನ್‌ಗೆ 3ರಿಂದ 4ಲಕ್ಷ ಆದಾಯ ಗಳಿಸಲು ಸಾಕಷ್ಟು ಸಮಯವೇ ಹಿಡಿಯಿತು. ಒಂದು ವರ್ಷಕ್ಕಿಂತ ಹೆಚ್ಚು ಕಾಲಾವಕಾಶವೇ ಬೇಕಾಯಿತು. ಇಲ್ಲಿಯವರೆಗೆ ಕಡಾ.ಇನ್‌ಗೆ 1.25 ಕೋಟಿಯಷ್ಟು ಹೂಡಿಕೆ ಮಾಡಲಾಗಿದೆ. ಪ್ರತಿ ತಿಂಗಳು 15 ಲಕ್ಷದಷ್ಟು ಆದಾಯ ಬರುತ್ತಿದೆ. ಇದರಲ್ಲಿ ಶೇ.15ರಿಂದ 20ರಷ್ಟು ಆದಾಯ ಆ್ಯಪ್ ಮುಖಾಂತರ ಬರುತ್ತದೆ. ಪ್ರಸ್ತುತ 2,200ರಿಂದ 2,500ರಷ್ಟು ಬೇಡಿಕೆಗಳನ್ನು ಕಡಾ.ಇನ್ ಸ್ವೀಕರಿಸುತ್ತಿದೆ. ಕೆಲವು ಅರೆಕಾಲಿಕ ಉದ್ಯೋಗಿಗಳೂ ಸೇರಿದಂತೆ ಕಡಾ.ಇನ್‌ ಸಂಸ್ಥೆಯಲ್ಲಿ ಒಟ್ಟು 50 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ನಗರದ ಚಿಲ್ಲರೆ ವ್ಯಾಪಾರಿಗಳ ಸಹಭಾಗಿತ್ವದೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರ ಅನುಕೂಲ ನೋಡಿಕೊಂಡು ಬೇಡಿಕೆ ಪಡೆದ ದಿನವೇ ಆಫೀಸ್‌ಗಳಿಗಾಗಲಿ, ಮನೆಗಳಿಗಾಗಿ ಬೇಡಿಕೆಗಳನ್ನು ಪೂರೈಸುವತ್ತ ಸಂಸ್ಥೆ ಗಮನಹರಿಸಿದೆ.

ಮೊದಲ ಹಾಗೂ ಎರಡನೇ ಶ್ರೇಣಿಯ ನಗರಗಳತ್ತ ಹೆಚ್ಚು ಗಮನ ಹರಿಸಿರುವ ಕಡಾ.ಇನ್ ಸಂಸ್ಥೆ ಶೀಘ್ರದಲ್ಲೇ ಕೇರಳದ ಕೊಲ್ಲಮ್, ಕೊಚಿನ್,ತ್ರಿಶೂರ್ ಮತ್ತು ಕ್ಯಾಲಿಕಟ್‌ಗಳಲ್ಲಿ ಸೇವೆಯನ್ನು ವಿಸ್ತರಿಸುವ ಯೋಜನೆ ರೂಪಿಸಿಕೊಂಡಿದೆ. ಇನ್ನು 18 ತಿಂಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನ ದ್ವಿತೀಯ ಶ್ರೇಣಿಯ ನಗರಗಳಲ್ಲಿ ತನ್ನ ಸೇವೆಯನ್ನು ಆರಂಭಿಸಲು ಕಡಾ.ಇನ್ ಸಂಸ್ಥೆ ನಿರ್ಧರಿಸಿದೆ. 2017-18ರ ಒಳಗೆ ಸುಮಾರು 40 ಕೋಟಿ ಆದಾಯವನ್ನು ಪಡೆಯುವುದು ಇದರ ಉದ್ದೇಶವಾಗಿದೆ.

ತನ್ನ ಕ್ರೆಡಿಟ್‌ಗಾಗಿ ಕಡಾ.ಇನ್ ಸಂಸ್ಥೆ ಕೆಲವು ವಿಭಿನ್ನ ಕ್ರಮಗಳನ್ನು ಅನುಸರಿಸುತ್ತಿದೆ.

ಹಳೆಯ ವಸ್ತುಗಳ ವಿನಿಮಯ- ಈ ಸಂಸ್ಥೆ ಗ್ರಾಹಕರಿಂದ 1 ಕೆಜಿಗೆ 10 ರೂಪಾಯಿಯಂತೆ ಹಳೆಯ ದಿನಪತ್ರಿಕೆಗಳನ್ನು ಪಡೆದು ಅದರ ಬದಲಿಗೆ ಗ್ರಾಹಕರಿಗೆ ದಿನಬಳಕೆಯ ವಸ್ತುಗಳನ್ನು ನೀಡುತ್ತಿದೆ.

• ಇದಲ್ಲದೇ ಕಡಾ.ಇನ್ ಸಂಸ್ಥೆ ಎಲ್ಲಾ ರೀತಿಯ ಗುಜರಿ ಸಾಮಗ್ರಿಗಳನ್ನು(ದಿನಪತ್ರಿಕೆಗಳು, ಹಳೆಯ ಪುಸ್ತಕಗಳು, ಅಲ್ಯುಮಿನಿಯಂ, ಸ್ಟೀಲ್, ಕಂಚು, ತಾಮ್ರದ ಪಾತ್ರೆಗಳು, ಹಳೆಯ ಟಿವಿ ಇತ್ಯಾದಿ) ಸಂಗ್ರಹಿಸುವ ಯೋಜನೆಯನ್ನೂ ಸಹ ರೂಪಿಸಿಕೊಂಡಿದೆ. ಇದಕ್ಕೆ ಬದಲಾಗಿ ಇದಕ್ಕೆ ಸಮವಾಗುವಂತೆ ಕೂಪನ್‌ಗಳನ್ನು ನೀಡಿ ಅದರ ಮೂಲಕ ಗ್ರಾಹಕರು ತಮಗೆ ಅಗತ್ಯವಿರುವ ದಿನಬಳಕೆಯ ವಸ್ತುಗಳನ್ನು ಪಡೆಯುವ ಅವಕಾಶ ಮಾಡಿಕೊಡುವುದು ಇದರ ಉದ್ದೇಶ.

• ಸ್ವಉದ್ಯೋಗಿ ಸಮೂಹಗಳಿಗೆ, ನಿರಾಶ್ರಿತರ ತಾಣಗಳು ಸೇರಿದಂತೆ ಇನ್ನಿತರ ಸ್ವಯಂಸೇವಕ ಸಂಸ್ಥೆಗಳಿಗೆ ತಾವು ಗ್ರಾಹಕರಿಂದ ಸಂಗ್ರಹಿಸಿರುವ ದಿನಪತ್ರಿಕೆಗಳನ್ನು ನೀಡಿ ಅವರಿಂದ ಕಡಾ ಸಂಸ್ಥೆಗಾಗಿ ಪೇಪರ್ ಬ್ಯಾಗ್ ಗಳನ್ನು ಮಾಡಿಸಿಕೊಳ್ಳುವ ಮೂಲಕ ಅವರಿಗೂ ಸಹ ಉದ್ಯೋಗಾವಕಾಶ ನೀಡುವ ಕುರಿತೂ ಸಹ ಕಡಾ ಸಂಸ್ಥೆ ಚಿಂತಿಸುತ್ತಿದೆ.

• ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿಯೇ ಇರುವ ಯೋಜನೆ ‘ಕಡಾ.ಇನ್ ಸ್ಪೆಷಲ್ಸ್’. ಈ ಮೂಲಕ ಗೃಹಿಣಿಯರು ಉದ್ಯಮಿಗಳಾಗಿ ಪರಿವರ್ತನೆ ಹೊಂದಲು ಪ್ರೋತ್ಸಾಹ ನೀಡುತ್ತಿದೆ. ಅಂದರೆ ಉಪ್ಪಿನಕಾಯಿ, ಸ್ನ್ಯಾಕ್ಸ್ ಗಳನ್ನು ಗೃಹಿಣಿಯರು ಮಾಡಿಕೊಟ್ಟರೆ ಅದನ್ನು ಕಡಾ.ಇನ್ ವೇದಿಕೆಯ ಮೂಲಕ ಮಾರಾಟ ಮಾಡಲಾಗುವುದು. ಬ್ರಾಂಡ್‌ ನೇಮ್, ಲೈಸೆನ್ಸ್, ಉತ್ಪನ್ನ ದಿನಾಂಕ ಹೊಂದಿರುವ ಲೇಬಲ್‌ಗಳನ್ನು ಪಡೆಯಲು ಕೆಲವು ಕಾನೂನು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಮಹಿಳೆಯರು ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವಾಗ ಈ ಎಲ್ಲಾ ಕ್ರಮಗಳನ್ನು ಅನುಸರಿಸುವುದು ಅವರಿಗೆ ನಿಜಕ್ಕೂ ಕಷ್ಟವಾಗಬಹುದು. ಹೀಗಾಗಿ ಇದನ್ನು ಸುಲಭಗೊಳಿಸಲು ಈ ಯೋಜನೆಯನ್ನು ರೂಪಿಸಲಾಗಿದೆ.

ಉದ್ಯಮದಲ್ಲಿರುವ ಸವಾಲುಗಳು

ಕೇರಳದ ಮಾರುಕಟ್ಟೆಯಲ್ಲಿ ಕಡಾ.ಇನ್‌ ಉಳಿದುಕೊಳ್ಳಲು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಬೇರೆ ರಾಜ್ಯಗಳ ಮೆಟ್ರೋ ನಗರಗಳಿಗೆ ಹೋಲಿಸಿದರೆ ಕೇರಳೀಯರು ಆನ್‌ಲೈನ್ ಮೂಲಕ ತಮ್ಮ ದಿನನಿತ್ಯದ ವಸ್ತುಗಳನ್ನು ಖರೀದಿಸುವಂತೆ ಮಾಡುವುದು ನಿಜಕ್ಕೂ ಕಷ್ಟಕರವಾಗಿತ್ತು. ಅವರಿಗೆ ಸ್ಪರ್ಶಿಸಿ, ಅದರ ಅನುಭೂತಿಯನ್ನು ಅನುಭವಿಸಿದ ಬಳಿಕವಷ್ಟೇ ಒಂದು ವಸ್ತುವನ್ನು ಖರೀದಿಸುವುದು ಅಭ್ಯಾಸವಾಗಿ ಹೋಗಿತ್ತು. ಜನರನ್ನು ಈ ಮನಸ್ಥಿತಿಯಿಂದ ಹೊರತರುವ ಅವಶ್ಯಕತೆ ಇತ್ತು.

ಕಡಾ.ಇನ್ ಸಂಸ್ಥೆಯ ನಿರ್ದೇಶಕ ಅನೂಪ್ ಜಿ.ಕುಮಾರ್ ವಿವರಿಸುವಂತೆ, ತರಕಾರಿಗಳ ತಾಜಾತನವನ್ನು ಕಾಯ್ದುಕೊಳ್ಳುವುದು ನಿಜಕ್ಕೂ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಗ್ರಾಹಕರು ತಾಜಾತನ ಇಲ್ಲದಿರುವ ಬಗ್ಗೆ ಅನೇಕ ಬಾರಿ ದೂರಿದ್ದಾರೆ. ಹೀಗಾಗಿ ಗುಣಮಟ್ಟವನ್ನು ಕಾಯ್ದುಕೊಳ್ಳುವ ಸಲುವಾಗಿ ಶಾಖದ ಸುರಕ್ಷತೆ ಇರುವ ಮಾದರಿಯ ವಾಹನಗಳನ್ನು ಬಳಸಲಾರಂಭಿಸಿದೆವು. ಸರಿಯಾದ ಸಂಪನ್ಮೂಲಗಳನ್ನು ಪಡೆಯಲು ಆಗಾಗ್ಗೆ ನಗರಗಳಿಂದ ಹೊರಗೆ ಪ್ರಯಾಣ ಬೆಳೆಸುತ್ತಿದ್ದೆವು ಎನ್ನುತ್ತಾರೆ ಅನೂಪ್.

‘ಯಾವುದೇ ದೊಡ್ಡ ದೊಡ್ಡ ಆನ್‌ಲೈನ್ ಗ್ರಾಸರಿ ಮಾರುಕಟ್ಟೆಗಳು ಈವರೆಗೂ ಕೇರಳಕ್ಕೆ ಕಾಲಿಟ್ಟ. ಯಾರೂ ಸಹ ಜನರಿಗೆ ಈ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿಲ್ಲ. ಹೀಗೆ ಆನ್‌ಲೈನ್‌ ಗ್ರಾಸರಿ ಮಾರುಕಟ್ಟೆ ಪ್ರವೇಶಿಸಿ ಅದರಲ್ಲಿ ಇರುವ ಉತ್ತಮ ಅವಕಾಶಗಳನ್ನು ತಿಳಿದುಕೊಂಡವರಲ್ಲಿ ನಾವೇ ಮೊದಲಿಗರು. ಕಡಾ.ಇನ್‌ನ ಸೇವೆ ಆರಂಭಿಸುವಂತೆ ಅನೇಕ ಜಿಲ್ಲೆಗಳಿಂದಲೂ ಬೇಡಿಕೆ ಬಂದಿದೆ. ಸಣ್ಣ ನಗರಗಳಲ್ಲಿ ಆದಾಯ ಸ್ವಲ್ಪ ಕಡಿಮೆ ಬರಬಹುದು. ಆದರೆ ಇದಕ್ಕೆ ಕಡಿಮೆ ಹೂಡಿಕೆ ಸಾಕಾಗುತ್ತದೆ. ಅದರೊಂದಿಗೆ ಬ್ರಾಂಡ್‌ನೇಮ್‌ ಕೂಡ ಜನಪ್ರಿಯಗೊಳಿಸುವ ಅವಕಾಶ ದೊರಕುತ್ತದೆ’ ಎಂಬುದು ಶಾನ್ ಅವರ ಮಾತು. ಸದ್ಯಕ್ಕೆ ಸಂಸ್ಥೆಗೆ ಅಗತ್ಯವಿರುವ ಹೂಡಿಕೆಯನ್ನು ಪಡೆಯುವುದು ಇವರ ಗುರಿಯಾಗಿದೆ.

ಟೆಕ್ನೋಪಾರ್ಕ್‌ನ ಸಲಹಾ ಸಂಸ್ಥೆಯೊಂದರ ವರದಿಯ ಪ್ರಕಾರ ಭಾರತದಲ್ಲಿ ಆಹಾರ ಮತ್ತು ಗ್ರಾಸರಿ ಉದ್ಯಮ ಈಗ 383 ಬಿಲಿಯನ್ ಡಾಲರ್‌ನಷ್ಟು ಮೌಲ್ಯ ಹೊಂದಿದೆ. ಇದು 2020ರ ವೇಳೆಗೆ ಸುಮಾರು 1 ಟ್ರಿಲಿಯನ್ ಗಡಿ ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಆನ್‌ಲೈನ್ ಗ್ರಾಸರಿ ಮಾರುಕಟ್ಟೆ ವ್ಯಾಪಕವಾಗಿ ಬೆಳೆಯುತ್ತಿದೆ. ಕಳೆದ 3 ವರ್ಷಗಳಲ್ಲಿ ಈ ವೇದಿಕೆಯಲ್ಲಿ ಬಹಳಷ್ಟು ಜನ ಸೋತರೂ ಗೆದ್ದವರ ಸಂಖ್ಯೆಯೇನೂ ಕಡಿಮೆ ಇಲ್ಲ. ಪ್ರಮುಖ ಸಂಸ್ಥೆಗಳಾದ ಬಿಗ್ ಬ್ಯಾಸ್ಕೆಟ್, ಝಾಪ್‌ನೌ, ಪೆಪ್ಪರ್ ಟ್ಯಾಪ್, ಗ್ರಾಫರ್ಸ್, ಲೋಕಲ್‌ಬನ್ಯಾ, ಜಗ್ನೂ ಸಂಸ್ಥೆಗಳು 120 ಮಿಲಿಯನ್‌ ಡಾಲರ್‌ಗೂ ಹೆಚ್ಚು ಹೂಡಿಕೆ ಪಡೆದಿವೆ. ಈ ಎಲ್ಲಾ ಸಂಸ್ಥೆಗಳು ದ್ವಿತೀಯ ಶ್ರೇಣಿ ನಗರಗಳಿಗೂ ತಮ್ಮ ಸೇವೆಯನ್ನು ವಿಸ್ತರಿಸುತ್ತಿವೆ. ಹೀಗಾಗಿ ಸ್ಪರ್ಧೆ ಹೆಚ್ಚಳವಾಗುತ್ತಿದೆ.

ಆದರೆ ಕೇರಳದಲ್ಲಿ ಕಡಾ.ಇನ್ ಸಂಸ್ಥೆ ಸದ್ಯಕ್ಕೆ ಇರುವ ಏಕೈಕ ಆನ್‌ಲೈನ್ ಗ್ರಾಸರಿ ಮಾರುಕಟ್ಟೆಯಾಗಿರುವ ಕಾರಣ ಇರುವ ಅವಕಾಶವನ್ನು ಅದು ಸಮರ್ಪಕವಾಗಿಯೇ ಬಳಸಿಕೊಳ್ಳುತ್ತಿದೆ. ಆದರೆ ಶೀಘ್ರದಲ್ಲೇ ಇತರ ದೊಡ್ಡ ಆನ್‌ಲೈನ್ ಗ್ರಾಸರಿ ಸಂಸ್ಥೆಗಳೂ ಸಹ ಕೇರಳಕ್ಕೆ ಪ್ರವೇಶ ಪಡೆಯುವ ಸಾಧ್ಯತೆ ಇದೆ. ಆನಂತರವಷ್ಟೇ ಕಡಾ.ಇನ್ ಸಂಸ್ಥೆ ಸ್ಪರ್ಧೆ ಎದುರಿಸಬೇಕಾದ ಸಂದರ್ಭ ಬರುತ್ತದೆ.

ಲೇಖಕರು: ಅಥಿರಾ ಎ ನಾಯರ್​​

ಅನುವಾದಕರು: ವಿಶ್ವಾಸ್​​​​

Add to
Shares
4
Comments
Share This
Add to
Shares
4
Comments
Share
Report an issue
Authors

Related Tags