ಆವೃತ್ತಿಗಳು
Kannada

ಗ್ರೇ ಮತ್ತು ಬ್ಲೂ ಕಾಲರ್ ಕೆಲಸಗಳಿಗೆ ಮಾರುಕಟ್ಟೆ ಒದಗಿಸುತ್ತಿರುವ ನ್ಯಾನೋ ಜಾಬ್ಸ್

ಟೀಮ್​​ ವೈ.ಎಸ್​​.

17th Oct 2015
Add to
Shares
2
Comments
Share This
Add to
Shares
2
Comments
Share

ಆನ್‌ಲೈನ್ ವೇದಿಕೆಯಲ್ಲಿ ವೈಟ್ ಕಾಲರ್ ಕೆಲಸ ಹುಡುಕುತ್ತಿರುವವರಿಗೆ ಸಹಾಯ ಮಾಡುವಂತಹ ಅನೇಕ ಕೆಲಸಗಳು ಇರುತ್ತವೆ. ಆದ್ರೆ ಪ್ಲಂಬಿಂಗ್,ಡ್ರೈವಿಂಗ್, ಕಾರ್ಪೆಂಟರಿ ಕೆಲಸ ಮಾಡುವ ಬ್ಲೂ ಮತ್ತು ಗ್ರೇ ಕಲರ್ ಜಾಬ್‌ಗಳಿಗೆ ಅವಕಾಶ ನೀಡುವ ಬಾಬಾಜಾಬ್, ಜ್ಯಾಕ್ ಆನ್‌ದಿ ಬ್ಲಾಕ್ ಸಂಸ್ಥೆಗಳು ಕೆಲವೇ ಕೆಲವಿದೆ. ಇಂತಹ ಸಂಸ್ಥೆಗಳೊಂದಿಗೆ ಈಗ ನ್ಯಾನೋ ಜಾಬ್ಸ್ ಎಂಬ ಮುಂಬೈ ಮೂಲದ ಹೊಸ ಸಂಸ್ಥೆಯೊಂದು ಸೇರಿಕೊಂಡಿದೆ. ಇದೊಂದು ಕೆಲಸ ಮತ್ತು ಉದ್ಯೋಗದ ಪೋರ್ಟಾಲ್ ಆಗಿದ್ದು, ಉದ್ಯೋಗ ಹುಡುಕುವವರು ಮತ್ತು ಉದ್ಯೋಗ ನೀಡುವವರ(ಸಣ್ಣ ಹಾಗೂ ಮಧ್ಯಮ ಮಟ್ಟದ ಕೆಲಸಗಾರರು) ಮಧ್ಯೆ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸುತ್ತದೆ. ಉದ್ಯೋಗ ಅರಸುವವರಿಗಾಗಿ 1000ಕ್ಕೂ ಹೆಚ್ಚು ವಿಭಾಗಗಳಲ್ಲಿ ಕೆಲಸ ದೊರಕಿಸಿಕೊಡುವ ಉದ್ಯಮವಿದು.

image


ನ್ಯಾನೋ ಜಾಬ್ಸ್ ಹಿಂದಿರುವ ತಂಡ

ಅನುಪಮ್ ಸಿನ್ಹಾಲ್ ಮತ್ತು ವಿಕಾಶ್ ಚೌಧರಿ ಈ ಸಂಸ್ಥೆಯ ಸಂಸ್ಥಾಪಕರು. ಸದ್ಯಕ್ಕೆ ಮಹಾರಾಷ್ಟ್ರದಲ್ಲಿ ಮಾತ್ರ ನ್ಯಾನೋ ಜಾಬ್ಸ್ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿನ ಪೆಸಿಟ್‌ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿಟೆಕ್ ಪದವಿ ಪಡೆದುಕೊಂಡಿದ್ದಾರೆ ಅನುಪಮ್. ವಿಕಾಶ್, ಆಸ್ಟ್ರೇಲಿಯಾದ ಕ್ವೀನ್ಸ್​​ಲೆಂಡ್​​ ವಿವಿಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಉದ್ಯಮ ಕ್ಷೇತ್ರಕ್ಕೆ ಬರುವ ಮೊದಲು ಅನುಪಮ್ ಐಬಿಎಂ ಮತ್ತು ಕಾಗ್ನಿಜೆಂಟ್ ಸಂಸ್ಥೆಗಳಲ್ಲೂ, ವಿಕಾಶ್ ರಾಜ್ ಕನ್ಸಲ್ಟೆನ್ಸಿ ಮೂಲಕ ತಮ್ಮ ಸ್ವಂತ ಉದ್ಯಮವನ್ನೂ ಆರಂಭಿಸಿದ್ದರು.

ಉದ್ಯಮ ಆರಂಭದ ಹಿಂದಿರುವ ಪ್ರೇರಣೆ

ತಾವು ವೈಟ್ ಕಾಲರ್ ಕೆಲಸಗಳಿಗಾಗಿ ಕನ್ಸಲ್ಟಿಂಗ್ ಉದ್ಯಮವನ್ನು ನಡೆಸುವಾಗ, ಒಮ್ಮೆ ವಿಕಾಶ್​ಗೆ ಮುಂಬೈಗಾಗಿ 4000 ಚಾಲಕರನ್ನು ನೇಮಿಸಿಕೊಳ್ಳಬೇಕಾದ ಕಾಂಟ್ರ್ಯಾಕ್ಟ್ ಲಭಿಸಿತ್ತು. ಆಫ್‌ಲೈನ್ ಮ್ಯಾನ್ ಪವರ್ ಬಳಸಿಕೊಂಡು ಚಾಲಕರನ್ನು ಹುಡುಕುವ ಕೆಲಸ ವಿಕಾಶ್​​ಗೆ ದೊಡ್ಡ ಸವಾಲಾಗಿ ಪರಿಣಮಿಸಿತು. ಅಲ್ಲದೇ, ಯಾವುದೇ ಆನ್‌ಲೈನ್ ಪೋರ್ಟಾಲ್​​ನಲ್ಲೂ ಇಂತಹ ಮಾಹಿತಿ ಲಭ್ಯವಿಲ್ಲ ಎಂಬುದು ಅವರಿಗೆ ಅತೀ ಆಶ್ಚರ್ಯಕರವಾದ ವಿಚಾರವಾಗಿತ್ತು. ಹೀಗಾಗಿ ಅವರು ತಮ್ಮ ಕಾಂಟ್ರಾಕ್ಟ್ ಪೂರೈಸುವುದು ಅತೀ ಕಷ್ಟಕರವಾಗಿತ್ತು. ಇದೇ ಸಂದರ್ಭದಲ್ಲಿ ಹೊಳೆದ ಯೋಜನೆಯೇ ನ್ಯಾನೋ ಜಾಬ್ಸ್. ಬ್ಲೂ ಮತ್ತು ಗ್ರೇ ಕಲರ್ ಕೆಲಸಗಾರರಿಗೆ ಕೆಲಸ ಒದಗಿಸುವ ಮೂಲಕ ವೇದಿಕೆ ಕಾರ್ಯನಿರ್ವಹಿಸುತ್ತಿದೆ. ಸಾಮಾಜಿಕವಾಗಿ ಪರಿಣಾಮ ಬೀರುವ ಒಂದು ಪರಿಹಾರವನ್ನು ಕಂಡುಹಿಡಿಯುವುದು ಸಂಸ್ಥಾಪಕರ ಮೂಲ ಉದ್ದೇಶವಾಗಿತ್ತು. ಆರಂಭದಿಂದಲೂ ಪ್ಲಂಬರ್, ಚಾಲಕರು, ಕಾರ್ಪೆಂಟರ್, ಮೋಟಾರ್ ಮೆಕ್ಯಾನಿಕ್‌ಗಳನ್ನು ಒಂದೇ ಸೂರಿನಡಿ ತಂದು ಮಾಹಿತಿ ನೀಡುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು ಎನ್ನುತ್ತಾರೆ ವಿಕಾಶ್. ಅಭ್ಯರ್ಥಿಗಳು ದಾಖಲಾಗುವಂತೆ ಮಾಡಲು, ನ್ಯಾನೋ ಜಾಬ್ಸ್ ಅನೇಕ ಆಫ್‌ಲೈನ್ ಮಳಿಗೆಗಳನ್ನು ಮತ್ತು ಅನೇಕ ಚಿಲ್ಲರೆ ವ್ಯಾಪಾರಿಗಳನ್ನೂ, ಮೊಬೈಲ್ ರಿಚಾರ್ಜ್ ಶಾಪ್‌ಗಳನ್ನು ಬಳಸಬೇಕಾಯಿತು.

ನ್ಯಾನೋ ಜಾಬ್ಸ್​​ಮ ಆರಂಭದ ದಿನಗಳು ಮತ್ತು ಪರಿಣಾಮ

ಮೊದ ಮೊದಲು ಹಿರಿಯ ಮಟ್ಟದ ಕಾರ್ಯನಿರ್ವಾಹಕ ಅಧಿಕಾರಿಗಳ್ಯಾರೂ ನ್ಯಾನೋ ಜಾಬ್‌ನ ಒಂದು ಭಾಗವಾಗಲು ಇಚ್ಛಿಸಲಿಲ್ಲ. ಉತ್ತಮ ಪ್ರತಿಭೆಗಳನ್ನು ಆಯ್ದು, ಕೆಲಸಕ್ಕೆ ನೇಮಿಸಿಕೊಳ್ಳುವುದು ಒಂದು ದೊಡ್ಡ ಸವಾಲಾಗಿತ್ತು. ಒಂದು ನಿರ್ದಿಷ್ಟ ಕಾಲಮಿತಿಯ ನಂತರ ಒಂದು ಒಳ್ಳೆಯ ತಂಡವನ್ನು ಕಟ್ಟಲು ಸಾಧ್ಯವಾಯಿತು. ಕೆಲವು ಕಿರಿಯ ಉದ್ಯೋಗಿಗಳಿಗೆ ತರಬೇತಿ ನೀಡಿ ನಿರ್ವಹಣೆಯ ಜವಾಬ್ದಾರಿ ನೀಡಲಾಯಿತು ಎನ್ನುತ್ತಾರೆ ವಿಕಾಶ್.

ಮೂಲಬಂಡವಾಳವಾಗಿ 2 ಕೋಟಿ ಹೂಡಿಕೆ ಮಾಡಲಾಗಿದೆ ಮತ್ತು ಮುಂದಿನ ವರ್ಷದೊಳಗೆ ತಮ್ಮ ಉದ್ಯಮದಲ್ಲಿ ನಿರೀಕ್ಷಿತ ಪ್ರಗತಿಯನ್ನು ಸಾಧಿಸುವ ಗುರಿ ಹೊಂದಿದೆ ಸಂಸ್ಥೆ. ಅನೇಕ ಹೂಡಿಕೆದಾರರು ತಮ್ಮ ಸಂಸ್ಥೆಗೆ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಿದ್ದು ಶೀಘ್ರದಲ್ಲೇ ಸಂಸ್ಥೆಯ ಬಂಡವಾಳ ಹೂಡಿಕೆ ಏರುವ ನಿರೀಕ್ಷೆ ಹೊಂದಿದ್ದಾರೆ ವಿಕಾಶ್.

image


ಬಿಹಾರದಿಂದ ಮಹಾರಾಷ್ಟ್ರಕ್ಕೆ ವಲಸೆ ಬಂದಿರುವ 26 ವರ್ಷದ ರಮೇಶ್ ಸಿಂಗ್ ನ್ಯಾನೋ ಜಾಬ್ಸ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. “ಮುಂಬೈನ ಲಾಲ್‌ಬಾಗ್‌ನಲ್ಲಿ ನ್ಯಾನೋ ಜಾಬ್ಸ್ ಕುರಿತಾದ ಹೋರ್ಡಿಂಗ್‌ ಒಂದನ್ನು ನೋಡಿದೆ. ಅಲ್ಲಿ ಪ್ರಕಟಿಸಿದ್ದ ನಂಬರ್‌ಗೆ (07303440550) ಮಿಸ್ ಕಾಲ್ ಮಾಡಿದೆ. ನಂತರ ನ್ಯಾನೋ ಜಾಬ್ಸ್​​​ನ ಎಕ್ಸಿಕ್ಯುಟಿವ್ ಕರೆ ಮಾಡಿದರು ಮತ್ತು ಫೋನ್‌ನಲ್ಲೇ ನನ್ನ ವಿವರಗಳನ್ನು ಪಡೆದು ರೆಸ್ಯೂಮ್ ತಯಾರಿಸಿದರು”. ಎನ್ನುತ್ತಾರೆ ರಮೇಶ್. 8 ದಿನಗಳಲ್ಲೇ ರಮೇಶ್‌ ಅವರಿಗೆ ನ್ಯಾನೋ ಸಂಸ್ಥೆಯ ಮತ್ತೊಬ್ಬ ಉದ್ಯೋಗಿ ಕರೆ ಮಾಡಿದರು ಮತ್ತು ಅವರನ್ನು ಆಫೀಸ್ ಮತ್ತು ಡೆಲಿವರಿ ಬಾಯ್‌ ಆಗಿ ನೆಮಿಸಿಕೊಂಡರು.

ಸಮಸ್ಯೆಗಳು

ಪ್ರಸ್ತುತ, ಬಹುತೇಕ ಮ್ಯಾನ್ ಪವರ್ ಸಲಹೆಗಾರರು ಸಣ್ಣ ಮತ್ತು ಮಧ್ಯಮ ಮಟ್ಟದ ನೌಕರರ ಬಗ್ಗೆ ತುಂಬಾ ಕಡಿಮೆ ಗಮನ ಇಟ್ಟಿರುವ, ಈಗಾಗಲೇ ಅಸ್ತಿತ್ವದಲ್ಲಿರುವ ಜಾಬ್ ಪೋರ್ಟಾಲ್‌ಗಳನ್ನೇ ಬಳಸುತ್ತಾರೆ. ಸಾಮಾನ್ಯವಾಗಿ ಬಾಯಿಂದ ಬಾಯಿಗೆ ಹರಡಿರುವ ಅಥವಾ ದಿನಪತ್ರಿಕೆಗಳ ಜಾಹೀರಾತುಗಳನ್ನು ಗಮನಿಸಿಯೋ ಕೆಲಸಗಾರರನ್ನು ನೇಮಿಸಿಕೊಳ್ಳುತ್ತಾರೆ. ಅದು ಅವರದ್ದೇ ಆದ ವಿಧಾನ. ಬಾಯಿಂದ ಬಾಯಿಗೆ ಹರಡುವ ಮಾತುಗಳನ್ನು ನಂಬಲಾಗುವುದಿಲ್ಲ, ಇದೇ ರೀತಿ ದಿನಪತ್ರಿಕೆಯಲ್ಲಿ ಜಾಹೀರಾತು ನೀಡುವುದು ಸಹ ಅಷ್ಟೊಂದು ಕಡಿಮೆ ದರದಲ್ಲಿ ಎಟುಕುವಂಥದ್ದಲ್ಲ, ಅಲ್ಲದೇ ದಿನಪತ್ರಿಕೆ ಜಾಹೀರಾತಿನ ಆಯಸ್ಸು ಕೇವಲ ಒಂದು ದಿನ ಮಾತ್ರ. ಹೀಗಾಗಿ ಮನೆಯ ಪ್ರತಿ ಕೆಲಸಕ್ಕೂ ಅಗತ್ಯವಿರುವ ಅಥವಾ ಸಂಘಟನೆಗೆ ಅಗತ್ಯವಿರುವವರ ಪಟ್ಟಿಯನ್ನು ತಯಾರಿಸಿ ತಮ್ಮ ಪೋರ್ಟಾಲ್ ಆರಂಭಿಸಿದರು ಅನುಪಮ್ ಮತ್ತು ವಿಕಾಶ್.

ವೈಶಿಷ್ಟ್ಯ ಮತ್ತು ಘೋಷವಾಕ್ಯ

ಕೆಲಸಗಾರರ ಪಟ್ಟಿ ಮಾಡುವುದಷ್ಟೇ ಅಲ್ಲದೇ ನ್ಯಾನೋ ಜಾಬ್ಸ್, ಫೋನ್ ಮೂಲಕ ಕೆಲಸಗಾರರಿಗಾಗಿ ರೆಸ್ಯೂಮ್ ಅನ್ನು ಸಹ ತಯಾರಿಸುತ್ತದೆ ಮತ್ತು ತಾಂತ್ರಿಕ ತಿಳುವಳಿಕೆ ಇಲ್ಲದ ಕೆಲಸಗಾರರಿಗೆ ಆಫ್‌ಲೈನ್ ಸೇವೆಯ ನೇಮಕಾತಿಗಾಗಿ ಕೆಲಸಕ್ಕಾಗಿ ಸಂದರ್ಶನಕ್ಕೂ ಬರುವ ಅವಕಾಶವನ್ನೂ ನೀಡುತ್ತಿದೆ. ತನ್ನ ಗ್ರಾಹಕರಿಂದ ಹೊಗಳಿಕೆಯನ್ನೂ, ಅದ್ಭುತ ಪ್ರತಿಕ್ರಿಯೆಯನ್ನೂ ನ್ಯಾನೋಜಾಬ್ಸ್ ಪಡೆಯುತ್ತಿದೆ. ಚಾಲಕರನ್ನು ಹುಡುಕಲು, ಮನೆಕೆಲಸದವರನ್ನು ಹುಡುಕಲು ಪರದಾಡುತ್ತಿದ್ದವರೆಲ್ಲಾ ಈಗ ನ್ಯಾನೋ ಜಾಬ್ಸ್ ಮುಖಾಂತರ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. 2013ರ ಸೆಪ್ಟೆಂಬರ್‌ನಲ್ಲಿ ಆರಂಭವಾದ ಈ ನ್ಯಾನೋ ಜಾಬ್ಸ್ ಸುಮಾರು 25 ಲಕ್ಷಕ್ಕೂ ಹೆಚ್ಚು ಬಿಸಿನೆಸ್ ನಡೆಸಿದೆ. ನಮ್ಮ ಯುಎಸ್‌ಪಿ ಮಾಹಿತಿಯ ಮೇಲೆ ಆಧಾರವಾಗಿದೆ ಮತ್ತು ಹಲವು ಸ್ತರಗಳಲ್ಲಿ ಸ್ವತಂತ್ರ ಉದ್ಯೋಗಿಗಳ ಪರಿಶೀಲನೆ ನಡೆಸಿ ನಂತರ ವೆಬ್‌ಸೈಟ್‌ನಲ್ಲಿ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎನ್ನುತ್ತಾರೆ ವಿಕಾಶ್.

ಸವಾಲುಗಳು ಹಾಗೂ ನ್ಯಾನೋಜಾಬ್ಸ್ ಅದನ್ನು ನಿಭಾಯಿಸುವ ಬಗೆ

ಕೆಲಸಗಾರರ ಕುರಿತು ಮಾಹಿತಿ ಸಂಗ್ರಹಿಸುವ ಕೆಲಸ ಮಾಡುವ ಮಾಡುವ ಸ್ವತಂತ್ರ ಉದ್ಯೋಗಿಗಳ ಮೇಲೆ ಸಂಸ್ಥೆ ಅವಲಂಬಿತವಾಗಿದೆ. ಪ್ರಸ್ತುತ 150ಕ್ಕೂ ಹೆಚ್ಚು ಫ್ರೀಲ್ಯಾನ್ಸರ್‌ಗಳು ಈ ಕಾರ್ಯದಲ್ಲಿ ತೊಡಗಿದ್ದಾರೆ ಮತ್ತು ಮುಂದಿನ ಎರಡು ತ್ರೈಮಾಸಿಕಗಳಲ್ಲಿ ಈ ಸಂಖ್ಯೆ ಅನೇಕ ಪಟ್ಟು ಹೆಚ್ಚುವ ನಿರೀಕ್ಷೆ ಹೊಂದಿದ್ದಾರೆ ಸಂಸ್ಥಾಪಕರು. ಕೆಲಸಗಾರರ ಬಗ್ಗೆ ಮಾಹಿತಿ ಸಂಗ್ರಹಿಸುವುದೇ ಅತೀ ದೊಡ್ಡ ಸವಾಲಾಗಿದೆ. “ನಾವು ಅವರು ಆನ್‌ಲೈನ್ ಬರಲಿ ಎಂದು ನಿರೀಕ್ಷಿಸಲಾಗುವುದಿಲ್ಲ. ನಾವೇ ಅವರ ಬಳಿ ಅರ್ಜಿ ತುಂಬಿಸಿಕೊಂಡು ಬರಬೇಕು. ಈ ಕಾರ್ಯಕ್ಕಾಗಿ ನಾವು ವಿವಿಧ ಮಾಧ್ಯಮಗಳನ್ನು ಬಳಸುತ್ತಿದ್ದೇವೆ” ಎನ್ನುತ್ತಾರೆ ವಿಕಾಶ್. ಆರಂಭದಲ್ಲಿ 07303440550 ನಂಬರ್‌ಗೆ ಮಿಸ್ ಕಾಲ್ ಕೊಡಿ ರಿಜಿಸ್ಟರ್ ಮಾಡಿಸಿ, ಇದಕ್ಕೆ ಯಾವುದೇ ದಾಖಲಾತಿ ಶುಲ್ಕ ಇಲ್ಲ ಎಂಬ ಸಣ್ಣ, ಆದರೆ ಜಾಣತನದ ಜಾಹೀರಾತು ನೀಡುವ ಮೂಲಕ ಈ ಮಟ್ಟಕ್ಕೆ ಬೆಳೆದಿದೆ ನ್ಯಾನೋ ಜಾಬ್ಸ್ ಸಂಸ್ಥೆ.

ಮುಂದಿನ ದಾರಿ

ಶೀಘ್ರದಲ್ಲೇ ತನ್ನ ಶಾಖೆಗಳನ್ನು ಬೆಂಗಳೂರು, ದೆಹಲಿ, ಕೋಲ್ಕತ್ತಾ, ಅಹಮದಾಬಾದ್, ಪುಣೆ ಮತ್ತು ಹೈದ್ರಾಬಾದ್‌ ಸೇರಿದಂತೆ ಇತರ ನಗರಗಳಲ್ಲಿ ತೆರೆಯುವ ಉದ್ದೇಶ ಹೊಂದಿದೆ ನ್ಯಾನೋ ಜಾಬ್ಸ್ ಸಂಸ್ಥೆ. 18 ತಿಂಗಳಲ್ಲಿ ಸುಮಾರು 5ಮಿಲಿಯನ್‌ಗೂ ಹೆಚ್ಚು ಕೆಲಸಗಾರರ ಬಗ್ಗೆ ಮಾಹಿತಿ ನೀಡುವುದು ಇವರ ಮುಂದಿನ ಗುರಿ.

Add to
Shares
2
Comments
Share This
Add to
Shares
2
Comments
Share
Report an issue
Authors

Related Tags